ಗೋಕಾಕ: ಕೇಂದ್ರ, ರಾಜ್ಯ ಬಿಜೆಪಿ ಸರ್ಕಾರದ ಆಡಳಿತಕ್ಕೆ ಬೇಸತ್ತು ಯುವಕರು ಕಾಂಗ್ರೆಸ್ ಸೇರ್ಪಡೆಯಾಗುತ್ತಿದ್ದಾರೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ, ಶಾಸಕ ಸತೀಶ್ ಜಾರಕಿಹೊಳಿ ಅವರು ಹೇಳಿದರು. ನಗರದ ಹಿಲ್ ಗಾರ್ಡನ್ ಕಚೇರಿಯಲ್ಲಿ ಕಾಂಗ್ರೆಸ್ ಮುಖಂಡಾರದ ಸುಭಾಷ್ ಗಿರಗೌಡ, ಭರತೇಶ ವೀರಭದ್ರನವರ, ಮಲ್ಲಪ್ಪ ರುದ್ರಗೌಡ, ಸುನಿಲ್ ರಾಠೋಡ, ಟಿಪ್ಪುಸುಲ್ತಾನನ ಮುಲ್ಲಾ, ಶಿವಾನಂದ ಬಸಪ್ಪ ಮಾಳಗಿ, ಪರುಶುರಾಮ ಜಾಮುನಿ ಅವರ ನೇತೃತ್ವದಲ್ಲಿ ಯಮಕನಮರಡಿ ಮತಕ್ಷೇತ್ರದ ಉಳ್ಳಾಗಡ್ಡಿ ಖಾನಾಪುರ, ಕುರಣಿ, ಕಟಾಂಬಳೆ ಗ್ರಾಮದ …
Read More »Daily Archives: ಫೆಬ್ರವರಿ 7, 2023
ರಾಜಕೀಯದಲ್ಲಿ ಟೀಕೆ, ಟಿಪ್ಪಣಿಗಳು ಸಹಜ. ಎಲ್ಲದಕ್ಕೂ ಉತ್ತರ ನೀಡವ ಅವಶ್ಯಕತೆ ಇಲ್ಲ ಎಂದ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ
ಗೋಕಾಕ: 2023ರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಬಹುಮತ ಪಡೆಯುವುದು ಖಚಿತ. ಹೀಗಾಗಿ ಕಾಂಗ್ರೆಸ್ ಪಕ್ಷ ಕಳೆದ ಒಂದು ವರ್ಷದಿಂದಲೇ ಚುನಾವಣೆ ತಯಾರಿ ನಡೆಸಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ, ಶಾಸಕ ಸತೀಶ್ ಜಾರಕಿಹೊಳಿ ಅವರು ಹೇಳಿದರು. ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷದಿಂದ ಕಳೆದ ಒಂದು ವರ್ಷದಲ್ಲಿ ಭಾರತ ಜೋಡೋ ಯಾತ್ರೆ, ಪ್ರಜಾಧ್ವನಿ ಯಾತ್ರೆ ಸೇರಿದಂತೆ 3ರಿಂದ 5 ಕಾರ್ಯಕ್ರಮಗಳು ಹಮ್ಮಿಕೊಂಡಿದ್ದು, ಈಗ ಮತ್ತೆ ವಿಧಾನಸಭಾ …
Read More »ಹಾರೂಗೊಪ್ಪ: ಚನ್ನಬಸವೇಶ್ವರ ರಥೋತ್ಸವ
ಬೈಲಹೊಂಗಲ: ಸಮೀಪದ ಹಾರೂಗೊಪ್ಪ ಗ್ರಾಮದ ಉಳವಿ ಚನ್ನಬಸವೇಶ್ವರ ದೇವಸ್ಥಾನದ ಜಾತ್ರಾ ಮಹೋತ್ಸವದ ಅಂಗವಾಗಿ ಮಹಾರಥೋತ್ಸವ ಭಾನುವಾರ ಸಂಜೆ ವಿಜೃಂಭಣೆಯಿಂದ ನೆರವೇರಿತು. ನವಿಲಿನ ಕಳಶ ಹೊತ್ತು ಆಕರ್ಷಕ ರಥವನ್ನು ಭಕ್ತರು ಹುಮ್ಮಸ್ಸಿನಿಂದ ಎಳೆದರು. ಭಕ್ತರು ಹರಹರ ಮಹಾದೇವ, ಉಳವಿ ಚನ್ನಬಸವೇಶ್ವರ ಮಹರಾಜಕೀ ಜೈ ಎನ್ನುತ್ತ ರಥ ಎಳೆದರು. ಸುತ್ತಲಿನ ಗ್ರಾಮಗಳಿಂದ ಬಂದ ಜನ ಹೂವು, ಹಣ್ಣು, ಕಾರೀಕ್‌ಗಳನ್ನು ರಥಕ್ಕ ಎಸೆದರು. ದೇವಸ್ಥಾನದಲ್ಲಿ ಉಳವಿ ಚನ್ನಬಸವೇಶ್ವರ, ನಂದಿ ಮೂರ್ತಿಗಳಿಗೆ ವಿಶೇಷ ಪೂಜೆ, ಮಹಾಭಿಷೇಕ, …
Read More »ಸಂಭ್ರಮದ ಬಸವೇಶ್ವರ ರಥೋತ್ಸವ
ಕಡಬಿ: ಸಮೀಪದ, ಯರಗಟ್ಟಿ ತಾಲ್ಲೂಕಿನ ಸುಕ್ಷೇತ್ರ ಮುಗಳಿಹಾಳ ಬಸವೇಶ್ವರ ರಥೋತ್ಸವ ಭಾನುವಾರ ಸಂಭ್ರಮದಿಂದ ಜರುಗಿತು. ಭಾಗೋಜಕೊಪ್ಪದ ಶಿವಲಿಂಗ ಮುರುಘರಾಜೇಂದ್ರ ಶಿವಾಚಾರ್ಯ ಸ್ವಾಮಿಗಳು, ಮುಗಳಿಹಾಳದ ಶಿವಪುತ್ರ ಸ್ವಾಮಿಗಳು ಹಾಗೂ ಸಾಧು, ಸಂತರು ನೇತೃತ್ವ ವಹಿಸಿದ್ದರು. ಗ್ರಾಮದ ಮಹಿಳೆಯರು ಆರತಿ ಬೆಳಗಿ ಪೂಜೆ ಸಲ್ಲಿಸಿ, ರಥದ ಮುಂದೆ ಸಾಗಿದರು. ಅಪಾರ ಭಕ್ತರು ಸೇರಿ ಜಗಜ್ಯೋತಿ ಬಸವಣ್ಣನವರಿಗೆ ಜೈ ಎಂದು ಜೈಕಾರ ಹಾಕುತ್ತ ರಥ ಎಳೆದರು. ಹೂವು, ಹಣ್ಣು, ಕಾರೀಕ್ ಹಾರಿಸುತ್ತ ಭಕ್ತಿಗೆ ಮೆರೆದರು. ದಾರಿಯುದ್ದಕ್ಕೂ …
Read More »ರಸ್ತೆ ಕಾಮಗಾರಿ ವೇಳೆ ಹೊಂಡಕ್ಕೆ ಉರುಳಿದ ಟ್ರಕ್: ನಾಲ್ವರು ಕಾರ್ಮಿಕರಿಗೆ ಗಂಭೀರ ಗಾಯ
ಪಣಜಿ: ರಸ್ತೆಯ ಪಕ್ಕದ ಹೊಂಡದಲ್ಲಿ ಚಕ್ರ ಸಿಲುಕಿ ಇಟ್ಟಿಗೆಗಳನ್ನು ಸಾಗಿಸುತ್ತಿದ್ದ ಟ್ರಕ್ ಪಲ್ಟಿಯಾಗಿರುವ ಘಟಕೆ ಗೋವಾ ರಾಜಧಾನಿ ಪಣಜಿಯಲ್ಲಿ ನಡೆದಿದೆ. ಸೋಮವಾರ ಮಧ್ಯಾಹ್ನ 2 ಗಂಟೆ ಸುಮಾರಿಗೆ ಕಾಕುಲೋ ಮಾಲ್ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ಘಟನೆಯಲ್ಲಿ 4 ಕಾರ್ಮಿಕರು ಗಂಭೀರವಾಗಿ ಗಾಯಗೊಂಡಿದ್ದಾರೆ. ಕಳೆದ ಐದಾರು ತಿಂಗಳಿಂದ ಈ ರಸ್ತೆಯ ಕಾಮಗಾರಿ ನಡೆಯುತ್ತಿದೆ. ರಸ್ತೆಯ ಎರಡೂ ಬದಿಗಳನ್ನು ಅಗೆಯಲಾಗಿದೆ. ಇಟ್ಟಿಗೆಗಳನ್ನು ಹೇರಿಕೊಂಡು ಬಂದ ಟಿಪ್ಪರ್ ರಸ್ತೆಯಲ್ಲಿ ಅಗೆದ ಹೊಂಡಕ್ಕೆ ಬಿದ್ದಿದೆ …
Read More »ಬ್ರಾಹ್ಮಣರು ಮುಖ್ಯಮಂತ್ರಿಯಾಗಬಾರದೆ?: ಪೇಜಾವರ ಶ್ರೀ
ಮದ್ದೂರು: ಬ್ರಾಹ್ಮಣರು ಯಾಕೆ ಮುಖ್ಯಮಂತ್ರಿಯಾಗಬಾರದು? ಅವರು ಭಾರತದ ಪ್ರಜೆಗಳಲ್ಲವೇ? ಸಂಖ್ಯಾ ಬಲ ಇಲ್ಲ. ಅಲ್ಪಸಂಖ್ಯಾಕರಾಗಿದ್ದಾರೆ. ಆದ್ದರಿಂದ ಈ ರೀತಿಯಾಗಿ ಮಾತನಾಡುತ್ತಾರೆ ಎಂದು ಉಡುಪಿ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನತೀರ್ಥ ಸ್ವಾಮೀಜಿ ತಿಳಿಸಿದರು. ಪಟ್ಟಣದ ಐತಿಹಾಸಿಕ ಶ್ರೀಹೊಳೆ ಆಂಜನೇಯ ಸ್ವಾಮಿ ದೇವಾಲಯದಲ್ಲಿ ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಲವು ದಿನಗಳಿಂದಲೂ ಬ್ರಾಹ್ಮಣರ ವಿರುದ್ಧ ಹೇಳಿಕೆಗಳು ಕೇಳಿ ಬರುತ್ತಿದೆ. ಪ್ರತಿ ಚುನಾವಣೆ ಸಂದರ್ಭದಲ್ಲೂ ಹೆಚ್ಚಾಗಿ ಕೇಳಿ ಬರುತ್ತಿದ್ದು, ಬ್ರಾಹ್ಮಣರು …
Read More »ಬ್ರಾಹ್ಮಣ ಸಿಎಂ ಆಗಲಿ, ನನ್ನ ಬೆಂಬಲವಿದೆ: H.D.K.
ಬೆಂಗಳೂರು: ಬ್ರಾಹ್ಮಣರ ಕುರಿತ ತಮ್ಮ ಹೇಳಿಕೆಗೆ ಮತ್ತೊಮ್ಮೆ ಸ್ಪಷ್ಟೀಕರಣ ನೀಡಿರುವ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ, ಮರಾಠಿ ಪೇಶ್ವೆಗಳ ಡಿಎನ್‌ಎ ಇರುವ ವ್ಯಕ್ತಿಯನ್ನು ಕರ್ನಾಟಕಕ್ಕೆ ಮುಖ್ಯಮಂತ್ರಿ ಮಾಡಲು ಬಿಜೆಪಿ ಮತ್ತು ಆರೆಸ್ಸೆಸ್ ಹೊರಟಿವೆ ಎಂದು ಹೇಳಿದ್ದೇನೆಯೇ ಹೊರತು, ರಾಜ್ಯದ ಬ್ರಾಹ್ಮಣ ಸಮುದಾಯವನ್ನು ನಾನೆಲ್ಲೂ ನಿಂದಿಸಿಲ್ಲ ಎಂದು ಪುನರುಚ್ಚರಿಸಿದ್ದಾರೆ. ಬ್ರಾಹ್ಮಣ ಸಮುದಾಯವನ್ನು ನಾನೆಲ್ಲೂ ನಿಂದಿಸಿಲ್ಲ ಎಂದು ಹೇಳುತ್ತಲೇ ಪ್ರಹ್ಲಾದ ಜೋಷಿಯವರು “ಒಳ್ಳೆಯ ಬೆಳೆಯಲ್ಲಿ ಪಾರ್ಥೇನಿಯಂ ಇದ್ದಂತೆ’ ಅಂತಲೂ ಕುಟುಕಿದ್ದಾರೆ. ಜತೆಗೆ, ಈ …
Read More »ತಂಬಾಕು ಉತ್ಪನ್ನ ಮಾರಾಟಕ್ಕೆ ಪರವಾನಿಗೆ ಕಡ್ಡಾಯ
ಮಂಗಳೂರು: ಸಿಗರೇಟ್ ಸೇರಿದಂತೆ ತಂಬಾಕು ಉತ್ಪನ್ನಗಳ ಮಾರಾಟಕ್ಕೆ ಇನ್ನು ಪರವಾನಿಗೆ ಕಡ್ಡಾಯ ವಾಗಲಿದ್ದು, ಬೇಕಾಬಿಟ್ಟಿ ತಂಬಾಕು ಉತ್ಪನ್ನಗಳ ಮಾರಾಟಕ್ಕೆ ಕಡಿವಾಣ ಬೀಳಲಿದೆ. ತಂಬಾಕು ಉತ್ಪನ್ನಗಳು ಕ್ಯಾನ್ಸರ್‌ಗೆ ಕಾರಣವಾಗಿರುವುದರಿಂದ ಮತ್ತು ಇಂತಹ ಉತ್ಪನ್ನಗಳು ಯುವಜನತೆ ಸೇರಿದಂತೆ ಸಾರ್ವಜನಿಕರ ಕೈಗೆ ಸುಲಭ ವಾಗಿ ದೊರೆಯುತ್ತಿರು ವುದರಿಂದ ಇದರ ನಿಯಂತ್ರಣಕ್ಕೆ ಅಬಕಾರಿ ಮಾದರಿಯಲ್ಲಿ ಪರವಾನಿಗೆ ಕಡ್ಡಾಯ ನಿಯಮ ಜಾರಿಗೆ ತರಲು ನಿರ್ಧರಿಸಲಾಗಿದೆ. ಸ್ಥಳೀಯಾಡಳಿತ ಸಂಸ್ಥೆ ಮತ್ತು ಸಂಬಂಧಿಸಿದ ಎಲ್ಲ ಇಲಾಖೆಗಳಿಂದ ಪರವಾನಿಗೆ ಕಡ್ಡಾಯವಾಗಲಿದೆ. “ಕೋಟ್ಪಾ’ಕ್ಕಿಂತ …
Read More »ಕೇಂದ್ರ ಗೃಹ ಸಚಿವ ಅಮಿತ್ ಶಾ ಫೆ.21ರಂದು ಬಳ್ಳಾರಿಗೆ: ಸಚಿವ ಶ್ರೀರಾಮುಲು
ಬಳ್ಳಾರಿ: ಶೀಘ್ರದಲ್ಲೇ ನಡೆಯಲಿರುವ ರಾಜ್ಯ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಫೆ.21ರಂದು ಬಳ್ಳಾರಿಗೆ ಆಗಮಿಸಲಿದ್ದಾರೆ ಎಂದು ಸಾರಿಗೆ ಸಚಿವ ಬಿ.ಶ್ರೀರಾಮುಲು ಹೇಳಿದರು. ಸುದ್ದಿಗಾರರೊಂದಿಗೆ ಸೋಮವಾರ ಮಾತನಾಡಿ, ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ನಿರಂತರವಾಗಿ ರಾಜ್ಯಕ್ಕೆ ಭೇಟಿ ನೀಡಿ, ಪಕ್ಷವನ್ನು ಸಂಘಟಿಸುವ ಮೂಲಕ ರಾಜ್ಯದಲ್ಲಿ ಬಿಜೆಪಿ ಮತ್ತೂಮ್ಮೆ ಅ ಧಿಕಾರಕ್ಕೆ ತರುವ ಪ್ರಯತ್ನ ನಡೆಸಿದ್ದಾರೆ ಎಂದರು. ಕುಮಾರಸ್ವಾಮಿ ಜನರನ್ನು …
Read More »ಕಾಯಕ ನಿಷ್ಠೆಯುಳ್ಳವರ ಬದುಕು ಬೆಳಗುತ್ತೆ; ಡಾ| ವಿಜಯ ಸಂಕೇಶ್ವರ
ಮುಂಡರಗಿ: 12ನೇ ಶತಮಾನದ ಜಗಜ್ಯೋತಿ ಬಸವಣ್ಣನವರ ಕಾಯಕ ಹಾಗೂ ದಾಸೋಹ ಸೇವೆಯಲ್ಲಿ ನಿಷ್ಠೆ, ಪ್ರಾಮಾಣಿಕತೆ ಅಳವಡಿಸಿಕೊಂಡು ಬದುಕಿದವರು ಮಾತ್ರ ಎಲ್ಲ ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಬಹುದು. ಕಾಯಕದಲ್ಲಿ ನಿಷ್ಠೆಯುಳ್ಳವರು ಬದುಕಿನಲ್ಲಿ ಬೆಳೆಯಲು ಸಾಧ್ಯ ಎಂದು ವಿಆರ್‌ಎಲ್ ಸಮೂಹ ಸಂಸ್ಥೆ ಮುಖ್ಯಸ್ಥ ಡಾ| ವಿಜಯ ಸಂಕೇಶ್ವರ ಹೇಳಿದರು. ಪಟ್ಟಣದ ಜ| ಅನ್ನದಾನೀಶ್ವರ ಸಂಸ್ಥಾನಮಠ 153ನೇ ಜಾತ್ರಾ ಮಹೋತ್ಸವದಲ್ಲಿ ನಾಡೋಜ ಡಾ|ಅನ್ನದಾನೀಶ್ವರ ಮಹಾಶಿವಯೋಗಿಗಳವರಿಂದ “ಜಗದ್ಗುರು ಅನ್ನದಾನೀಶ್ವರ ಪ್ರತಿಷ್ಠಾನ ಪುರಸ್ಕಾರ’ ಹಾಗೂ ಚಿನ್ನದ ಉಂಗುರುವನ್ನು ಭಕ್ತಿಪೂರ್ವಕವಾಗಿ …
Read More »