ಬೆಂಗಳೂರು: ರಾಜ್ಯದಲ್ಲಿ ಸ್ವಂತ ಶಕ್ತಿಯ ಮೇಲೆ ಅಧಿಕಾರ ಹಿಡಿಯಲು ಹಳೇ ಮೈಸೂರು ಒಳಗೊಂಡ ಮಧ್ಯ ಕರ್ನಾಟಕ ಹಾಗೂ ಕಿತ್ತೂರು ಕರ್ನಾಟಕ ಭಾಗದಲ್ಲಿ ಅತಿ ಹೆಚ್ಚು ಸ್ಥಾನ ಗೆಲ್ಲಲು ಬಿಜೆಪಿ ಕಾರ್ಯತಂತ್ರ ರೂಪಿಸಿದೆ. ಮಧ್ಯ ಕರ್ನಾಟಕ ಭಾಗದಲ್ಲಿ ಒಕ್ಕಲಿಗ ನಾಯಕರಿಗೆ ಕಿತ್ತೂರು ಕರ್ನಾಟಕ ಭಾಗದಲ್ಲಿ ಲಿಂಗಾಯಿತ ನಾಯಕರಿಗೆ ಹೆಚ್ಚು ಸ್ಥಾನ ಗೆಲ್ಲುವ ಗುರಿ ನೀಡಿದ್ದು, ತತ್‌ಕ್ಷಣದಿಂದ ಕಾರ್ಯಪ್ರವೃತ್ತರಾಗಲು ಸೂಚಿಸಲಾಗಿದೆ. ಮಧ್ಯ ಕರ್ನಾಟಕ ಭಾಗದಲ್ಲಿ ಒಕ್ಕಲಿಗ ನಾಯಕರಿಗೆ ಕಿತ್ತೂರು ಕರ್ನಾಟಕ ಭಾಗದಲ್ಲಿ …
Read More »Monthly Archives: ಜನವರಿ 2023
2.95 ಲಕ್ಷ ಜನ್-ಧನ್ ಖಾತೆ ಸ್ತಬ್ಧ:
ಮಂಗಳೂರು: ಬಹುನಿರೀಕ್ಷಿತ ಪ್ರಧಾನಮಂತ್ರಿ ಜನ್-ಧನ್ ಯೋಜನೆ (ಪಿಎಂಜೆಡಿವೈ)ಯಲ್ಲಿ ಕರಾವಳಿಯಲ್ಲಿ ತೆರೆದ ಖಾತೆಗಳ ಪೈಕಿ 2.95 ಲಕ್ಷ ಖಾತೆಗಳು ಸ್ತಬ್ಧವಾಗಿವೆ. ದಕ್ಷಿಣ ಕನ್ನಡ ಜಿಲ್ಲೆಯ 5,18,496 ಖಾತೆ ಗಳಲ್ಲಿ 2,08,602 ಹಾಗೂ ಉಡುಪಿ ಜಿಲ್ಲೆಯ 2,64,704ರಲ್ಲಿ 86,487 ಬಳಕೆ ಯಾಗದೇ ನಿಷ್ಕ್ರಿಯವಾಗಿವೆ. ಈ ಖಾತೆ ಆರಂಭಿಸಿ 18 ತಿಂಗಳ ವರೆಗೆ ಬಳಸದಿದ್ದರೆ ಅದು ನಿಷ್ಕ್ರಿಯವಾಗುತ್ತದೆ. ಬಹುತೇಕರು ಖಾತೆ ತೆರೆದ ಬಳಿಕ ಸಕ್ರಿಯಗೊಳಿಸಿಲ್ಲ. ಅಲ್ಲದೆ ಸರಕಾರದ ವಿವಿಧ ಯೋಜನೆಗಳ ಹಣ ಪಡೆಯಲು ಬಹುತೇಕರು ಪ್ರತ್ಯೇಕ …
Read More »ಆರೋಗ್ಯ ಕವಚಕ್ಕೆ ಹುಸಿ ಕರೆಯೇ ಸವಾಲು: ಅರ್ಧಕ್ಕರ್ಧ ನಿರುಪಯೋಗಿ
ಬೆಂಗಳೂರು: ಸುಮ್ಮನೆ ಫೋನ್ ಮಾಡಿ ಉಪದ್ರವ ನೀಡುವುದು, ಹುಸಿ ಮತ್ತು ಸೈಲೆಂಟ್ ಕರೆಗಳು, ಮಕ್ಕಳು ಆಟ ಆಡುತ್ತ ಮಾಡುವ ಫೋನ್ ಕರೆಗಳು…! -ಇವು ‘ಆರೋಗ್ಯ ಕವಚ- 108′ ಕಾಲ್‌ಸೆಂಟರ್‌ಗೆ ಬರುವ ಕರೆಗಳು. ತುರ್ತು ಆರೋಗ್ಯ ಸೇವೆಗಾಗಿ ರಾಜ್ಯದ ನಾನಾ ಭಾಗಗಳಿಂದ ‘108′ ಆಯಂಬುಲೆನ್ಸ್ ಗೆ ನಿತ್ಯವೂ ಬರುವ ಕರೆಗಳಲ್ಲಿ ಇಂತಹ ಅನುಪಯುಕ್ತ ಕರೆಗಳ ಕಿರಿಕಿರಿ ತಲೆನೋವಾಗಿದೆ. ಪ್ರತಿದಿನ ಬರುವ ನೂರಾರು ಕರೆಗಳ ಪೈಕಿ ಅರ್ಧಕ್ಕರ್ಧ ಕರೆಗಳು ತುರ್ತು ಅಲ್ಲದ ಅಥವಾ ನಿರುಪ ಯೋಗಿ …
Read More »ಕರ್ನಾಟಕದ ಒಬ್ಬರು ಸೇರಿ ಐವರಲ್ಲಿ ಎಕ್ಸ್‌ಬಿಬಿ.1.5 ತಳಿ ದೃಢ
ಹೊಸದಿಲ್ಲಿ: ಅಮೆರಿಕದಲ್ಲಿ ಕೊರೊನಾ ಪ್ರಕರಣಗಳ ಹೆಚ್ಚಳಕ್ಕೆ ಕಾರಣವಾಗಿರುವ ಕೊರೊನಾ ರೂಪಾಂತರಿ ಎಕ್ಸ್‌ಬಿಬಿ.1.5 ತಳಿಯು ಭಾರತದ 5 ಮಂದಿಯಲ್ಲಿ ದೃಢಪಟ್ಟಿದ್ದು, ಈ ಪೈಕಿ ಕರ್ನಾಟಕದ ಒಬ್ಬ ವ್ಯಕ್ತಿಯೂ ಸೇರಿದ್ದಾರೆ ಎಂದು ಇಂಡಿಯನ್ ಸಾರ್ಸ್ ಕೋವ್-2 ಜಿನೋಮಿಕ್ಸ್ ಕನ್ಸೋರ್ಟಿಯಮ್ ತಿಳಿಸಿದೆ. ಸೋಂಕು ದೃಢಪಟ್ಟಿರುವ ಐವರಲ್ಲಿ ಮೂವರು ಗುಜರಾತ್ ಮೂಲದವರಾಗಿದ್ದು, ಕರ್ನಾಟಕ ಹಾಗೂ ರಾಜಸ್ಥಾನದ ತಲಾ ಒಬ್ಬ ವ್ಯಕ್ತಿಗೆ ಸೋಂಕು ದೃಢಪಟ್ಟಿದೆ. ಎಕ್ಸ್‌ಬಿಬಿ.1.5 ತಳಿಯು ಒಮಿಕ್ರಾನ್ ರೂಪಾಂತರಿಯ ಉಪ ತಳಿಗಳಾದ ಬಿಎ.2.10.1 ಹಾಗೂ ಬಿಎ.2.75 …
Read More »ಮಹದಾಯಿ ನಮಗೆ ತಾಯಿಯಷ್ಟೇ ಮುಖ್ಯ. ರಾಜಿ ಮಾಡಿಕೊಳ್ಳಲ್ಲ: ಗೋವಾ ಸಿಎಂ
ಪಣಜಿ: ಮಹದಾಯಿ ನಮಗೆ ತಾಯಿಯಷ್ಟೇ ಮುಖ್ಯ. ಗೋವಾದ ಅಸ್ಮಿತೆಯನ್ನು ಕಾಪಾಡಲು ಮತ್ತು ಅದನ್ನು ಎಲ್ಲಾ ರೀತಿಯಲ್ಲೂ ರಕ್ಷಿಸಲು, ದೇಶದ ಪರಿಣಿತ ಕಾನೂನು ತಜ್ಞರು ಮತ್ತು ಪರಿಸರವಾದಿಗಳ ಸಹಾಯದಿಂದ ಸುಪ್ರೀಂ ಕೋರ್ಟ್‍ನಲ್ಲಿ ಗೋವಾದ ಪರವನ್ನು ಬಲವಾಗಿ ಮಂಡಿಸಲಾಗುವುದು. ಇನ್ನೆರಡು ಮೂರು ದಿನಗಳಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ರಾಜ್ಯದ ನಿಯೋಗ ಭೇಟಿ ಮಾಡಲಿದೆ. ಮಹದಾಯಿ ವಿಚಾರದಲ್ಲಿ ಎಂದಿಗೂ ರಾಜಿ ಮಾಡಿಕೊಳ್ಳುವುದಿಲ್ಲ ಎಂದು ಮುಖ್ಯಮಂತ್ರಿ ಡಾ. ಪ್ರಮೋದ ಸಾವಂತ್ ತಮ್ಮ ನಿಲುವನ್ನು …
Read More »ಆರೋಗ್ಯದಲ್ಲಿ ಏರುಪೇರು: ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಆಸ್ಪತ್ರೆಗೆ ದಾಖಲು
ನವದೆಹಲಿ: ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರನ್ನು ದೆಹಲಿಯ ಗಂಗಾ ರಾಮ್ ಆಸ್ಪತ್ರೆಗೆ ದಾಖಲಿಸಲಾಗಿದ್ದು ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದರು ಎನ್ನಲಾಗಿದೆ. ಮಂಗಳವಾರ ಆರೋಗ್ಯದಲ್ಲಿ ಏರುಪೇರಾದ ಹಿನ್ನೆಲೆಯಲ್ಲಿ ಉತ್ತರ ಪ್ರದೇಶದಲ್ಲಿ ಭಾರತ್ ಜೋಡೋ ಯಾತ್ರೆಯಲ್ಲಿ ಪಾಲ್ಗೊಂಡಿದ್ದ ರಾಹುಲ್ ಹಾಗೂ ಪ್ರಿಯಾಂಕಾ ಯಾತ್ರೆ ಮೊಟಕುಗೊಳಿಸಿ ದೆಹಲಿಗೆ ಮರಳಿದ್ದಾರೆ ಎನ್ನಲಾಗಿದೆ. ಬುಧವಾರ ಮುಂಜಾನೆ ಸೋನಿಯಾ ಗಾಂಧಿ ಅವರನ್ನು ದೆಹಲಿಯ ಗಂಗಾ ರಾಮ್ ಆಸ್ಪತ್ರೆಗೆ ದಾಖಲಿಸಲಾಗಿದ್ದು. ಪುತ್ರಿ ಪ್ರಿಯಾಂಕಾ ಗಾಂಧಿ ಜೊತೆಗಿದ್ದಾರೆ ಎನ್ನಲಾಗಿದೆ.
Read More »8 ವಿಧಾನಸಭೆ ಕ್ಷೇತ್ರದಲ್ಲಿ ಕಾಂಗ್ರೆಸ್ ವಶದಲ್ಲಿ ಇರುವ ಕ್ಷೇತ್ರದಲ್ಲಿ ಬಿಜೆಪಿ ಬಾವುಟ ಹಾರಿಸಲು ರಣತಂತ್ರ : ಅಣ್ಣಾಸಾಹೇಬ ಜೊಲ್ಲೆ
ಚಿಕ್ಕೋಡಿ: ಲೋಕಸಭೆ ಕ್ಷೇತ್ರ ವ್ಯಾಪ್ತಿಯ ಎಂಟು ವಿಧಾನಸಭೆ ಕ್ಷೇತ್ರದಲ್ಲಿ ಕಾಂಗ್ರೆಸ್ ವಶದಲ್ಲಿ ಇರುವ ಕ್ಷೇತ್ರದಲ್ಲಿ ಬಿಜೆಪಿ ಬಾವುಟ ಹಾರಿಸಲು ರಣತಂತ್ರ ರೂಪಿಸಲಾಗಿದೆ. ಎಲ್ಲ ಬಿಜೆಪಿ ಕಾರ್ಯಕರ್ತರು ಒಗ್ಗಟ್ಟಾಗಿ ದುಡಿಯಬೇಕು. ಕೇಂದ್ರ ಮತ್ತು ರಾಜ್ಯ ಸರ್ಕಾರದ ಜನಪ್ರಿಯ ಯೋಜನೆಗಳ ಮಾಹಿತಿ ಜನರಿಗೆ ತಿಳಿಸುವ ಮೂಲಕ ಪಕ್ಷ ಸಂಘಟನೆಗೆ ಹೆಚ್ಚಿನ ಒತ್ತು ನೀಡಬೇಕು ಎಂದು ಸಂಸದ ಅಣ್ಣಾಸಾಹೇಬ ಜೊಲ್ಲೆ ಹೇಳಿದರು. ತಾಲೂಕಿನ ನನದಿ ಗ್ರಾಮದಲ್ಲಿ ನಡೆದ ಬೂತ್ ವಿಜಯ ಅಭಿಯಾನ ಕಾರ್ಯಕ್ರಮದಲ್ಲಿ ಮನೆ …
Read More »ಪಲ್ಸ ಪೊಲಿಯೋ ಮಾದರಿಯಲ್ಲಿ ಲಸಿಕಾ ಅಭಿಯಾನ ಯಶಸ್ಸಿಗೆ ಸೂಚನೆ:
ರಾಷ್ಟ್ರೀಯ ಜಾನುವಾರು ರೋಗ ನಿಯಂತ್ರಣದಡಿ ಜಿಲ್ಲೆಯಾದ್ಯಂತ ದಿನಾಂಕ: 05-01-2023 ರಿಂದ 31-01-2023ರವರೆಗೆ ಮೂರನೇ ಸುತ್ತಿನ ಕಾಲುಬಾಯಿ ರೋಗ ಲಸಿಕಾ ಅಭಿಯಾನವನ್ನು ಪಲ್ಸ್ ಪೋಲಿಯೋ ಮಾದರಿಯಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ದರ್ಶನ್ ಹೆಚ್.ವಿ ಅವರು ತಿಳಿಸಿದರು. ಜಿಲ್ಲಾ ಪಂಚಾಯತ ಸಭಾಂಗಣದಲ್ಲಿ ಬುಧವಾರ (ಜ.4) ನಡೆದ ಜಿಲ್ಲಾ ಮಟ್ಟದ ನಿರ್ವಹಣಾ ಸಮಿತಿ ಮೂರನೇ ಸುತ್ತಿನ ಕಾಲುಬಾಯಿ ರೋಗ ಲಸಿಕಾ ಅಭಿಯಾನದ ಪೂರ್ವಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಅವರು …
Read More »ಖಾನಾಪುರ ಗೊವಾ ಸಂಪಕ೯ ಕಲ್ಪಿಸುವ ರಸ್ತೆಜನಪ್ರತಿನಿಧಿಗಳಿಗೆ ಹಿಡಿಶಾಪ ಹಾಕಿ ಆಕ್ರೋಶ
ಬೆಳಗಾವಿ ಜಿಲ್ಲೆಯ ಕಿತ್ತೂರು ತಾಲೂಕಿನ ಎಂಕೆ ಹುಬ್ಬಳ್ಳಿಯಿಂದ ಪಾರಿಶ್ವಾಡ ಖಾನಾಪುರ ಗೊವಾ ಸಂಪಕ೯ ಕಲ್ಪಿಸುವ ಲೊಕೂಪಯೂಗಿ ಇಲಾಖೆಗೆ ಬರುವ ರಸ್ತೆ ಮಂಜೂರಾಗಿದ್ದು ಎಂಜಿನಿಯರ್ ಮತ್ತು ಗುತ್ತಿಗೆದಾರನ ಬೇಜವಾಬ್ದಾರಿಯಿಂದ ಯಾವುದೇ ಮುನ್ಸೂಚನೆ ಫಲಕ ಇಲ್ಲದೆ ತುಂಬಾ ತಗ್ಗು ಗುಂಡಿಗಳಿಂದ ತುಂಬಿದ್ದು ವಾಹನ ಸವಾರರು ಹಾಗೂ ರೈತರು ಕಾಖಾ೯ನೆಗೆ ಕಬ್ಬು ತುಂಬಿದ ವಾಹನಗಳನ್ನು ಸಾಗಿಸಲು ಕೈಯಲ್ಲಿ ಜೀವ ಹಿಡಿದು ಹರ ಸಾಹಸ ಪಡಬೇಕಾಗಿದೆ. ವಾಹನ ಸವಾರರು ಸಂಬಂಧಪಟ್ಟ ಇಲಾಖೆ ಹಾಗೂ ಜನಪ್ರತಿನಿಧಿಗಳಿಗೆ ಹಿಡಿಶಾಪ …
Read More »ಲಾಡ್ಜ್ ಒಂದರಲ್ಲಿ ವ್ಯಕ್ತಿಯೊಬ್ಬ ಕುತ್ತಿಗೆಗೆ ಬೇಡ ಶೀಟ್ ಕಟ್ಟಿಕೊಂಡು ನೇಣಿಗೆ ಶರಣಾದ
ಲಾಡ್ಜ್ ಒಂದರಲ್ಲಿ ವ್ಯಕ್ತಿಯೊಬ್ಬ ಕುತ್ತಿಗೆಗೆ ಬೇಡ ಶೀಟ್ ಕಟ್ಟಿಕೊಂಡು ನೇಣಿಗೆ ಶರಣಾದ ಘಟನೆ ಚನ್ನಮ್ಮಾ ವೃತ್ತದ ಹತ್ತಿರ ಇರುವ ಸಂಗಮ ಲಾಡ್ಜ್ ನಲ್ಲಿ ನಡೆದಿದೆ. ಮೃತ ಯುವಕನನ್ನು ಕಲಘಟಗಿ ತಾಲುಕಿನ ಕಂಪ್ಲಿಕೊಪ್ಪ ಗ್ರಾಮದ ನಿವಾಸಿ ಸಂತೋಷ ಯಲ್ಲಪ್ಪ ಹರಿಜನ ಎಂದು ಗುರುತಿಸಲಾಗಿದೆ. ಈತ ವೃತ್ತಿಯಲ್ಲಿ ಡ್ರೈವರ್ ಆಗಿದ್ದು ಡಿಸೆಂಬರ್ 19 ರಂದು ಸಂಗಮ ಲಾಡ್ಜನಲ್ಲಿ 302 ಕೊಠಡಿ ಬುಕ್ಕ ಮಾಡಿದ್ದು ತಿಳಿದು ಬಂದಿದೆ. ಇನ್ನು ಇತನ ಮೇಲೆ ನವನಗರ ಪೊಲೀಸ್ …
Read More »