Breaking News

Monthly Archives: ಜನವರಿ 2023

ಸಿದ್ದು ಮಾಡಿದ ಪಾಪದಿಂದ ನಾನು ಕಾಂಗ್ರೆಸ್‌ ಬಿಟ್ಟೆ: ಸುಧಾಕರ್‌

ಚಿಕ್ಕಬಳ್ಳಾಪುರ: ಮಾಜಿ ಸಿಎಂ ಸಿದ್ದರಾಮಯ್ಯ ಅವರು ಹುಟ್ಟಿದಾಗಲೇ ಕಾಂಗ್ರೆಸ್‌ನಲ್ಲಿರಲಿಲ್ಲ. ಜನತಾ ದಳದಲ್ಲಿದ್ದು ಎಲ್ಲ ಬಗೆಯ ಅಧಿಕಾರ ಅನುಭವಿಸಿ, ಅಧಿಕಾರದ ಆಸೆಗಾಗಿಯೇ ಕಾಂಗ್ರೆಸ್‌ಗೆ ಬಂದರು. ಇವರು ಮಾಡಿದ ಪಾಪದ ಕೆಲಸದಿಂದಾಗಿಯೇ ನಾನು ಕಾಂಗ್ರೆಸ್‌ ಬಿಟ್ಟು ಬಿಜೆಪಿಗೆ ಬಂದೆ ಎಂದು ಆರೋಗ್ಯ ಸಚಿವ ಡಾ| ಕೆ. ಸುಧಾಕರ್‌ ಹೇಳಿದರು. ತಾಲೂಕಿನ ಅಜ್ಜವಾರದಲ್ಲಿ ಗ್ರಾಮ ಸಭೆಯಲ್ಲಿ ಭಾಗವಹಿಸಿ ಮಾತನಾಡಿ, ಕಾಂಗ್ರೆಸ್‌ನವರು ಪ್ರಜಾಧ್ವನಿ ಯಾತ್ರೆ ಹೆಸರಿನಲ್ಲಿ ನನ್ನ ವಿರುದ್ಧ ಪ್ರಚಾರ ಸಭೆ ಮಾಡಿದ್ದಾರೆ. ಆದರೆ ನಾನು ಮಾಡಿದ …

Read More »

74ನೇ ಗಣರಾಜ್ಯೋತ್ಸವದ ಅದ್ದೂರಿ ಆಚರಣೆಗೆ ದೇಶ ಸಿದ್ಧ

74ನೇ ಗಣರಾಜ್ಯೋತ್ಸವದ ಅದ್ದೂರಿ ಆಚರಣೆಗೆ ದೇಶ ಸಿದ್ಧಗೊಳ್ಳುತ್ತಿದೆ. ಈ ಬಾರಿ ಹಲವು ಪ್ರಥಮಗಳು ಇರಲಿವೆ. ಗನ್‌ ಸೆಲ್ಯೂಟ್‌ಗೆ ಬ್ರಿಟಿಷರ ಕಾಲದ ಗನ್‌ ಬದಲಾಗಿ ದೇಶೀಯವಾಗಿ ನಿರ್ಮಾಣಗೊಂಡ ಇಂಡಿಯನ್‌ ಫೀಲ್ಡ್‌ ಗನ್‌ಗಳನ್ನು ಬಳಕೆ ಮಾಡಲಾಗುತ್ತದೆ. ಇದೆಲ್ಲಾ ಮೊದಲು * ಗಣರಾಜ್ಯೋತ್ಸವ ಪರೇಡ್‌ನ‌ಲ್ಲಿ ಅಗ್ನಿವೀರರ ಮೊದಲ ತಂಡ * ಒಂಟೆಗಳ ತುಕಡಿಯ ಭಾಗವಾಗಿ ಮಹಿಳಾ ಯೋಧರು * ನೌಕಾ ತುಕಡಿಗೆ ಮಂಗಳೂರಿನ ದಿಶಾ ಅಮೃತ್‌ ನೇತೃತ್ವ ಮೊದಲ ಮತ್ತು ಕೊನೆಯ ಹಾರಾಟ ! …

Read More »

ಬೆಳಗಾವಿ: 26, 27ರಂದು ಸಿರಿಧಾನ್ಯ-ಸಾವಯವ ಮೇಳ

ಬೆಳಗಾವಿ: 2023ನೇ ವರ್ಷವನ್ನು ಅಂತಾರಾಷ್ಟ್ರೀಯ ಸಿರಿಧಾನ್ಯ ವರ್ಷ ಎಂದು ಘೋಷಿಸಿರುವ ಹಿನ್ನೆಲೆಯಲ್ಲಿ ಬೆಳಗಾವಿ ನಗರದಲ್ಲಿ ಜ. 26 ಹಾಗೂ 27ರಂದು ಸಿರಿಧಾನ್ಯ ಮತ್ತು ಸಾವಯುವ ಮೇಳ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಡಾ| ನಿತೇಶ ಪಾಟೀಲ ತಿಳಿಸಿದರು.   ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ನಗರದ ಸರದಾರ ಹೈಸ್ಕೂಲ್‌ ಮೈದಾನದಲ್ಲಿ ಜ.26 ಹಾಗೂ 27 ರಂದು ಸಿರಿಧಾನ್ಯ ಮೇಳ ನಡೆಯಲಿದೆ. ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಜ.26ರಂದು …

Read More »

ಬೆಳಗಾವಿಯಲ್ಲಿ ಅತಿ ಹೆಚ್ಚುಯುವ ಮತದಾರರು ಇದ್ದಾರೆ. 54,820

: ಚುನಾವಣೆಯಲ್ಲಿ ಯುವ ಮತದಾರರನ್ನು ಗಮನದಲ್ಲಿಟ್ಟುಕೊಂಡು ಭಾರತದ ಚುನಾವಣ ಆಯೋಗ ಈ ವರ್ಷದ ರಾಷ್ಟ್ರೀಯ ಮತದಾರರ ದಿನಾಚರಣೆಗೆ “ಮತದಾನಕ್ಕಿಂತ ಇನ್ನೊಂದಿಲ್ಲ; ನಾನು ಖಚಿತವಾಗಿ ಮತದಾನ ಮಾಡುವೆ’ ಎಂದು ಘೋಷಣೆ ನೀಡಿದೆ.   ರಾಜ್ಯದಲ್ಲಿ ಯುವ ಮತದಾರರ ಸಂಖ್ಯೆ 7.07 ಲಕ್ಷ ಇದ್ದು, ಆ ಪ್ರಕಾರ ಮುಂದಿನ ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಯುವ ಮತದಾರರು ನಿರ್ಣಾಯಕ ಪಾತ್ರ ವಹಿಸಿಲಿದ್ದಾರೆ ಎಂಬುದನ್ನು ಅಲ್ಲಗಳೆಯುವಂತಿಲ್ಲ. ರಾಜ್ಯ ಮುಖ್ಯ ಚುನಾವಣಾಧಿಕಾರಿಗಳ ಕಚೇರಿಯ ಮಾಹಿತಿಯಂತೆ 2023ರ ಮತದಾರರ ಅಂತಿಮ …

Read More »

ರಾಯಬಾಗ ತಾಲೂಕಿನ ಸವಸುದ್ದಿ ಗ್ರಾಮದಲ್ಲಿ ಗುಂಡಿನ ದಾಳಿ

ಬೆಳಗಾವಿ: ರಾಯಬಾಗ ತಾಲೂಕಿನ ಹಾರೂಗೇರಿ ಪೊಲೀಸ್ ಠಾಣೆ ವ್ಯಾಪ್ತಿಯ ಸವಸುದ್ದಿ ಗ್ರಾಮದಲ್ಲಿ ಗುಂಡಿನ ದಾಳಿ ನಡೆದಿದೆ.   ಸಂಬಂಧಿಕರ ನಡುವಿನ ವ್ಯಾಜ್ಯದ ಹಿನ್ನೆಲೆಯಲ್ಲಿ ಈ ಘಟನೆ ನಡೆದಿದೆ.  ಶ್ರೀಶೈಲ್ ಬಾಳಪ್ಪ ಪಾಟೀಲ್ ತನ್ನ ಪರವಾನಗಿ ಪಡೆದ ರಿವಾಲ್ವರ್‌ನಿಂದ 2 ಸುತ್ತು ಗುಂಡು ಹಾರಿಸಿದ್ದಾನೆ. ಗುಂಡಿನ ದಾಳಿಯಲ್ಲಿ ಯಾರಿಗೂ  ಅಪಾಯವಾಗಿಲ್ಗಾಲ. ಆದರೆ  ಈ ವೇಳೆ ನಡೆದ ಹೊಡೆದಾಟದಲ್ಲಿ, ಗುಂಡು ಹಾರಿಸಿದ ಆರೋಪಿ ಶ್ರೀಶೈಲ ಪಾಟೀಲ ಗಾಯಗೊಂಡಿದ್ದಾನೆ. ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಪೊಲೀಸರು …

Read More »

ತೊಗರಿ ಬೆಳೆಗಾರರಿಗೆ ಇಂದು ಪರಿಹಾರ ಘೋಷಣೆ: ಸಿಎಂ

ಕಲಬುರಗಿ: ಸಂಕಷ್ಟದಲ್ಲಿರುವ ತೊಗರಿ ಬೆಳಗಾರರಿಗೆ ಪರಿಹಾರ ನೀಡಲು ಸರಕಾರ ತೀರ್ಮಾನಿಸಿದ್ದು, ಇಂದು ಸಂಜೆ 4 ಗಂಟೆಗೆ ಸಭೆ ಕರೆಯಲಾಗಿದೆ.  ಕೃಷಿ, ಆರ್ಥಿಕ ಇಲಾಖೆ ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಲಿದ್ದು ಪರಿಹಾರದ ಮೊತ್ತ ನಿಗದಿಪಡಿಸಿ ಸಭೆಯ ನಂತರ ಘೋಷಿಸಲಾಗುವುದು ಎಂದು ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ. ಅವರು ಇಲ್ಲಿನ ಏರ್ ಪೋರ್ಟ್ ನಲ್ಲಿ ಇಂದು  ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿ ಈ ವಿಷಯ ತಿಳಿಸಿದರು. ಈ ಭಾಗದಲ್ಲಿ ತೊಗರಿ ಬೆಳೆದವರು ಸಮಸ್ಯೆಯಲ್ಲಿ …

Read More »

ಗೋವಾದ ಹರ್ಮಲ್ ಕಡಲತೀರದಲ್ಲಿ ಡಾಲ್ಫಿನ್ ಮೃತದೇಹ ಪತ್ತೆ

ಪಣಜಿ: ಗೋವಾದ ಹರ್ಮಲ್ ಕಡಲತೀರದಲ್ಲಿ ಡಾಲ್ಫಿನ್ ಮೃತಪಟ್ಟಿರುವುದು ಬೆಳಕಿಗೆ ಬಂದಿದೆ. ಪಣಜಿ ವೈಲ್ಡ್ ಅನಿಮಲ್ ಟೆಂಪರರಿ ಶೆಲ್ಟರ್ ಸೆಂಟರ್ ಸಿಬ್ಬಂದಿ ಹಾಗೂ ದ್ರಷ್ಟಿ ಲೈಫ್ ಸೇವರ್ ಸಂಸ್ಥೆಯ ಸಿಬ್ಬಂದಿ ಮೀನಿನ ಅಂತ್ಯಸಂಸ್ಕಾರ ನೆರವೇರಿಸಿದರು. 12 ಅಡಿ ಉದ್ದದ ಡಾಲ್ಫಿನ್ ಮೃತಪಡಲು ಕಾರಣವೇನು ಎಂಬುದು ಇದುವರೆಗೂ ಸ್ಪಷ್ಟವಾಗಿಲ್ಲ.   ವನ್ಯಜೀವಿ ತಾತ್ಕಾಲಿಕ ಆಶ್ರಯ ಕೇಂದ್ರದ ಸಿಬ್ಬಂದಿ ದ್ಯಾನೇಶ್ವರ್ ಟಕ್ಕರ್ ಮತ್ತು ಮೆಲ್ವಿನ್ ಡಿಸಿಲ್ವಾ ಅವರು ಡಾಲ್ಫಿನ್ ಕನಿಷ್ಠ ನಾಲ್ಕು ದಿನಗಳ ಹಿಂದೆ …

Read More »

ವಿಜಯಪುರ: ಯುವತಿಯ ಅತ್ಯಾಚಾರ ಪ್ರಕರಣ. ಪೊಲೀಸರಿಂದ ಮೂವರ ಬಂಧನ

ವಿಜಯಪುರ: ನಗರದ ಸ್ಯಾಟ್‍ಲೈಟ್ ಬಸ್ ನಿಲ್ದಾಣದಲ್ಲಿ ನಿಂತಿದ್ದ ಯುವತಿಯನ್ನು ಕರೆದೊಯ್ದು ಅತ್ಯಾಚಾರ ಎಸಗಿದ ಆರೋಪದಲ್ಲಿ ಪೊಲೀಸರು ಮೂವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತರನ್ನು ಅಯಾಜ ಅಹಮದ್ ಜಮಾದಾರ, ಉಮರ ಫಾರೂಕ ಹಾಗೂ ರಾಹಿಲ್ ಬಂಧಿತ ಆರೋಪಿಗಳು ಎಂದು ಎಸ್ಪಿ ಆನಂದಕುಮಾರ ತಿಳಿಸಿದ್ದಾರೆ.   ಜ.17 ರಂದು ರಾತ್ರಿ ವೇಳೆ ನಗರದ ಸ್ಯಾಟ್‍ಲೈಟ್ ಬಸ್ ನಿಲ್ದಾಣದಲ್ಲಿ ನಿಂತಿದ್ದ ಮಾನಸಿಕ ಅಸ್ವಸ್ತೆಯಿಂದ ಬಳಸುತ್ತಿದ್ದ ಯುವತಿಯನ್ನು ಪುಸಲಾಯಿಸಿ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಅತ್ಯಾಚಾರ ಎಸಗಿ ಪರಾರಿಯಾಗಿದ್ದರು. ಈ …

Read More »

2 ವರ್ಷಗಳಿಂದ ಸ್ಥಗಿತಗೊಂಡಿದ್ದ ಕ್ಯಾಮನಹಳ್ಳಿ ಶ್ರೀ ಆಂಜನೇಯ ಸ್ವಾಮಿ ದನಗಳ ಜಾತ್ರೆಗೆ ಮತ್ತೆ ಕಳೆ

ಕೊರಟಗೆರೆ : ಇತಿಹಾಸ ಪ್ರಸಿದ್ಧ ಕ್ಯಾಮನಹಳ್ಳಿ ಶ್ರೀ ಆಂಜನೇಯ ಸ್ವಾಮಿ ದನಗಳ ಜಾತ್ರೆ ಕಳೆದ 2 ವರ್ಷಗಳಿಂದ ಕೊರೋನಾ ನಂತರ ಚರ್ಮ ಗಂಟು ರೋಗದಿಂದ ಕಲೆಗೊಂಡಿದ್ದ‌ ದನಗಳ ಜಾತ್ರೆ ಈಗ ಸಾವಿರಾರು ರಾಸುಗಳು ಸೇರುವ ಮುಖಾಂತರ ಪ್ರತಿ ವರ್ಷದಂತೆ ಸಾಂಪ್ರದಾಯಿಕ ಮುಂದುವರೆಯುವ ಮೂಲಕ ಕ್ಯಾಮೇನಹಳ್ಳಿ ದನದ ಜಾತ್ರೆಗೆ ಕಳೆ ಬಂದಿದೆ.   ತುಮಕೂರು ಜಿಲ್ಲೆ ಕೊರಟಗೆರೆ ತಾಲೂಕಿನ ರಾಜ್ಯದ ಪ್ರಸಿದ್ಧ ಧಾರ್ಮಿಕ ಕ್ಷೇತ್ರದಲ್ಲೂಂದಾದ ಕ್ಯಾಮೇನಹಳ್ಳಿ ಶ್ರೀ ಆಂಜನೇಯ ಸ್ವಾಮಿ ಧನಗಳ ಜಾತ್ರೆ …

Read More »

ಹದಿನಾರು ಚುನಾವಣೆ ಕಂಡ ಶತಾಯುಷಿ ಅಜ್ಜಿ

ಕೊಪ್ಪಳ: ದೇಶಸ್ವಾತಂತ್ರ್ಯದ ಅಮೃತ ಮಹೋತ್ಸವ ಕಾಲದಲ್ಲಿರುವ ಹೊತ್ತಲ್ಲಿ ಕಳೆದ 75 ವರ್ಷಗಳಲ್ಲಿ ನಡೆದ ಚುನಾವಣೆಗಳಲ್ಲಿ ತಪ್ಪದೇ ಮತದಾನ ಮಾಡಿದವರು ಕಾಣಸಿಗೋದು ಬಹಳ ಅಪರೂಪ. ಆದರೆ ಕೊಪ್ಪಳ ಜಿಲ್ಲೆಯ ಶತಾಯುಷಿಯೊಬ್ಬರು 1952ರಿಂದ ನಡೆದ ಎಲ್ಲ ಚುನಾವಣೆಗಳಲ್ಲೂ ಮತದಾನ ಮಾಡಿದ್ದಾರೆ.   ಕೊಪ್ಪಳ ತಾಲೂಕಿನ ಅಗಳಕೇರಾ ಗ್ರಾಮದ ಬಸಮ್ಮ ಮಡಿವಾಳಯ್ಯ ಭೂಸನೂರಮಠ ಮೊದಲ ಚುನಾವಣೆ ಯಿಂದ ಹಿಡಿದು ಈವರೆಗಿನ ಲೋಕಸಭೆ, ವಿಧಾನಸಭೆ, ಸ್ಥಳೀಯ ಸಂಸ್ಥೆ ಹೀಗೆ ಎಲ್ಲ ಚುನಾವಣೆಗಳಲ್ಲೂ ಮತದಾನದ ಹಕ್ಕು ಚಲಾಯಿಸಿ ದಾಖಲೆ …

Read More »