Breaking News

Daily Archives: ಜನವರಿ 26, 2023

ಸವದತ್ತಿ ಬಳಿ ವ್ಯಕ್ತಿಯ ಮರ್ಡರ್…..

ಸವದತ್ತಿ: ಇಲ್ಲಿಯ ಹೂಲಿಯಲ್ಲಿ ವ್ಯಕ್ತಿಯೋರ್ವನನ್ನು ಮರ್ಡರ್ ಮಾಡಲಾಗಿದೆ. ಗುರುವಾರ ಮಧ್ಯಾಹ್ನ 3.30ರ ವೇಳೆಗೆ ಘಟನೆ ನಡೆದಿದೆ. ಮಲ್ಲಪ್ಪ ಗಂಗಪ್ಪ ನಂದೆಣ್ಣವರ್ ಎನ್ನುವ 62 ವರ್ಷದ ವ್ಯಕ್ತಿಯನ್ನು ಕೊಲೆ ಮಾಡಲಾಗಿದೆ. 30 ವರ್ಷದ ಉಮೇಶ ಫಕೀರಪ್ಪ ಹಾವುಕಡದ್ ಆರೋಪಿ. ಉಮೇಶ್ ಮಲ್ಲಪ್ಪನ ಸಹೋದರ ಸಂಬಂಧಿಯಾಗಿದ್ದಾನೆ. ಕೊಲೆಗೆ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ. ಪೊಲೀಸರು ತನಿಖೆ ನಡೆಸಿದ್ದಾರೆ.

Read More »

ಗೋಕಾಕ: ನಗರದ ಲಕ್ಷ್ಮೀ ಎಜ್ಯುಕೇಶನ್ ಟ್ರಸ್ಟನ ವಿವಿಧ ಅಂಗ ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ ಆಚರಸಿಲಾದ ಸನತ ಜಾರಕಿಹೊಳಿ

ಗೋಕಾಕ: ನಗರದ ಲಕ್ಷ್ಮೀ ಎಜ್ಯುಕೇಶನ್ ಟ್ರಸ್ಟನ ವಿವಿಧ ಅಂಗ ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ ಆಚರಸಿಲಾದ ಗಣರಾಜ್ಯೋತ್ಸವ ಧ್ವಜಾರೋಹಣವನ್ನು ಪಾಲಿಟೇಕ್ನಿಕನ ಪ್ರಾಚಾರ್ಯ ಎಚ್ ಎಸ್ ಅಡಿಬಟ್ಟಿ ನೆರವೇರಿಸಿದರು. ವ್ಯವಸ್ಥಾಪಕ ನಿರ್ದೇಶಕ ಸನತ ಜಾರಕಿಹೊಳಿ ಹಾಗೂ ವಿವಿಧ ಅಂಗ ಸಂಸ್ಥೆಗಳ ಮುಖ್ಯಸ್ಥರು ಇದ್ದರು.

Read More »

ಗೋಕಾಕ: ನಗರದ ಮಯೂರ ಶಾಲೆಯಲ್ಲಿ ಆಚರಿಸಲಾದ….

ಗೋಕಾಕ: ನಗರದ ಮಯೂರ ಶಾಲೆಯಲ್ಲಿ ಆಚರಿಸಲಾದ ಗಣರಾಜ್ಯೋತ್ಸವ ಧ್ವಜಾರೋಹಣವನ್ನು ಆಡಳಿತಾಧಿಕಾರಿ ಎಸ್ ಡಿ ಮುರಗೋಡ ನೆರವೇರಿಸಿದರು. ಮುಖ್ಯೋಪಾಧ್ಯಾಯಿನಿ ಸಿ ಬಿ ಪಾಗದ, ಶಿಕ್ಷಕ ಎನ್ ಕೆ ಮಕಾನದಾರ ಇದ್ದರು.

Read More »

ಕಾರ್ಮಿಕ ವರ್ಗದಿಂದ ಮಾತ್ರ ದೇಶದ ಅಭಿವೃದ್ಧಿ ಸಾಧ್ಯ-ಶಾಸಕ ಬಾಲಚಂದ್ರ ಜಾರಕಿಹೊಳಿ.

*ಮೂಡಲಗಿ*: ಕಾರ್ಮಿಕರ ವರ್ಗದಿಂದ ಮಾತ್ರ ಈ ದೇಶದ ಆರ್ಥಿಕ ಅಭಿವೃದ್ಧಿ ಸಾಧ್ಯವಾಗುತ್ತದೆ. ದೈಹಿಕ ಇಲ್ಲವೇ ಬೌದ್ಧಿಕ ಶ್ರಮವನ್ನು ಮಾಡುತ್ತಿರುವ ವ್ಯಕ್ತಿಯು ಕಾರ್ಮಿಕನಾಗಿದ್ದು, ಅಂತಹ ಕಾರ್ಮಿಕರ ಸಮಸ್ಯೆಗಳಿಗೆ ಸ್ಪಂದಿಸುವ ಕೆಲಸವನ್ನು ಮಾಡುತ್ತಿರುವುದಾಗಿ ಶಾಸಕ, ಕೆಎಮ್‌ಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಹೇಳಿದರು. ತಾಲೂಕಿನ ಯಾದವಾಡ (ಗಿರಿಸಾಗರ) ಗ್ರಾಮದಲ್ಲಿ ಇತ್ತಿಚೆಗೆ ಜೈ ಭವಾನಿ ಕಟ್ಟಡ ಮತ್ತು ಇತರೆ ನಿರ್ಮಾಣದ ಕಾರ್ಮಿಕರ ಸಂಘವನ್ನು ಉದ್ಘಾಟಿಸಿ ಮಾತನಾಡಿದ ಅವರು, ಕಾರ್ಮಿಕರ ಏಳ್ಗೆಗಾಗಿ ರಾಜ್ಯ ಹಾಗೂ ಕೇಂದ್ರ ಸರಕಾರ …

Read More »

ಸಂವಿಧಾನದ ಆಶಯದಂತೆ ಸಹಬಾಳ್ವೆಯಿಂದ ಬದುಕುವಂತಾಗಲಿ: ಸಚಿವ ಗೋವಿಂದ ಕಾರಜೋಳ

ಬೆಳಗಾವಿ: ‘ಸರ್ವಜನಾಂಗದ ಶಾಂತಿಯ ತೋಟ’ವೆಂದು ರಾಷ್ಟಕವಿ ಕುವೆಂಪು ಅವರು ಕರ್ನಾಟಕವನ್ನು ವ್ಯಾಖ್ಯಾನಿಸಿದ್ದಾರೆ. ಇಂತಹ ತೋಟದಲ್ಲಿ ನಾವೆಲ್ಲಾ ಸಾಮರಸ್ಯದಿಂದ ಬೆಳೆದುನಿಂತ ಫಲಪುಷ್ಪಗಳು. ಈ ನೆಲದ ಮಣ್ಣಿನ ಗುಣ, ಗಣತಂತ್ರ ವ್ಯವಸ್ಥೆಯ ಮತ್ತು ಸಂವಿಧಾನದ ಮೂಲ ಆಶಯಗಳನ್ನಿಟ್ಟುಕೊಂಡು ಎಲ್ಲರೂ ಸಹಬಾಳ್ವೆಯಿಂದ ಬದುಕಬೇಕಿದೆ ಎಂದು ಜಿಲ್ಲಾ ಉಸ್ತುವಾರಿ ಹಾಗೂ ನೀರಾವರಿ ಸಚಿವ ಗೋವಿಂದ ಕಾರಜೋಳ ಹೇಳಿದರು. ಅವರು ನಗರದಲ್ಲಿ ಗಣರಾಜ್ಯೋತ್ಸವ ನಿಮಿತ್ತ ರಾಷ್ಟ್ರಧ್ವಜಾರೋಹಣ ನೆರವೇರಿಸಿ ಮಾತನಾಡಿದರು. ಗಣರಾಜ್ಯ ದಿನವು ದೇಶದ ನಾಗರಿಕರಿಗೆ ತನ್ನ ರಾಷ್ಟ್ರದ …

Read More »

ಬೆಳಗಾವಿ : ಧ್ವಜಾರೋಹಣದ ವೇಳೆ ಎಡವಟ್ಟು ಮಾಡಿಕೊಂಡ ಚಿಕ್ಕೋಡಿ ಉಪ ವಿಭಾಗಾಧಿಕಾರಿ.!

ಚಿಕ್ಕೋಡಿ : ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ಉಪ ವಿಭಾಗಾಧಿಕಾರಿ ಮಾಧವ ಗಿತ್ತೆ ಧ್ವಜಾರೋಹಣ ವೇಳೆ ಭಾರೀ ಎಡವಟ್ಟು ಮಾಡಿಕೊಂಡಿದ್ದಾರೆ.   ಧ್ವಜಾರೋಹಣ ಕಾರ್ಯಕ್ರಮಕ್ಕೆ ತಡವಾಗಿ ಬಂದಿದ್ದಲ್ಲದೆ, ತರಾತುರಿಯಲ್ಲಿ ಬೂಟು ಕಾಲಿನಲ್ಲೇ ಧ್ವಜಾರೋಹಣ ಮಾಡಿದ್ದಾರೆ. ಅಲ್ಲದೇ ಅಂಬೇಡ್ಕರ್ ಹಾಗೂ ಗಾಂಧೀಜಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಲು ಮುಂದಾಗಿದ್ದಾರೆ.   ಸಿಬ್ಬಂದಿಗಳು ಹೇಳಿದ ಬಳಿಕ ಉಪ ವಿಭಾಗಾಧಿಕಾರಿ ಮಾಧವ ಗಿತ್ತೆ ಶೂ ಬಿಚ್ಚಿದ್ದಾರೆ. ಶೂವನ್ನ ಸಿಬ್ಬಂದಿಗಳು ಕೈಯಿಂದ ತೆಗೆದು ಬೇರೆಡೆಗೆ ಇಟ್ಟಿದ್ದಾರೆ.   ಮಾಧವ …

Read More »