Breaking News

Daily Archives: ಜನವರಿ 22, 2023

ಬೆಳಗಾವಿ: ಗೋ ಶಾಲೆಗೆ ಭೂಮಿಪೂಜೆ

ಬೆಳಗಾವಿ: ‘ಗೋಗಳ‎ ರಕ್ಷಣೆ ಹಾಗೂ ಪಾಲನೆ ಮಾಡುವುದು‎ ಪುಣ್ಯದ‎ ಕೆಲಸ. ಇದಕ್ಕಾಗ ಗೋ ಶಾಲೆ ತೆರೆದ ಆಸರೆ ಫೌಂಡೇಷನ್ ಕಾರ್ಯ‎ ಶ್ಲಾಘನೀಯ ಈ‎ ಕಾರ್ಯಕ್ಕೆ ಬೇಕಾದ‎ ಸಹಾಯ, ಸಹಕಾರ ಒದಗಿಸಲು ಸದಾ‎ ಸಿದ್ಧ’ ಎಂದು ಸಂಸದೆ ಮಂಗಲಾ ಅಂಗಡಿ ಹೇಳಿದರು.   ಇಲ್ಲಿನ ಆಸರೆ ಫೌಂಡೇಷನ್ ವತಿಯಿಂದ ತಾಲ್ಲೂಕಿನ ಕೆ.ಕೆ.ಕೊಪ್ಪ ಗ್ರಾಮದಲ್ಲಿ ತೆರೆದ ಗೋಶಾಲೆಗೆ ಈಚೆಗೆ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು. ಚಲನ‎ಚಿತ್ರ ನಟ‎, ನಿರ್ಮಾಪಕ ಅಕ್ಷಯ್ ಚಂದ್ರಶೇಖರ್‎ ಮಾತನಾಡಿದರು. ಫೌಂಡೇಷನ್‌ …

Read More »

ಅಂಬೇಡ್ಕರ್‌ ಅಭಿವೃದ್ಧಿ ನಿಗಮದ ಎಂ.ಡಿ ಅಮಾನತು

ಬೆಂಗಳೂರು: ಭ್ರಷ್ಟಾಚಾರ, ಗಂಭೀರ ಸ್ವರೂಪದ ದುರ್ನಡತೆ ಮತ್ತು ಕರ್ತವ್ಯಲೋಪ ಆರೋಪದಲ್ಲಿ ಇಲಾಖಾ ವಿಚಾರಣೆ ಬಾಕಿ ಇರಿಸಿ ಕೆಎಎಸ್‌ (ಆಯ್ಕೆ ಶ್ರೇಣಿ) ಅಧಿಕಾರಿ, ಡಾ.ಬಿ.ಆರ್‌. ಅಂಬೇಡ್ಕರ್‌ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಕೆ.ಎಂ. ಸುರೇಶ್‌ ಕುಮಾರ್‌ ಅವರನ್ನು ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ (ಡಿಪಿಎಆರ್‌) ಅಮಾನತುಗೊಳಿಸಿದೆ.   ‘ ಬಳಿಕ ಅರ್ಜಿಯನ್ನೇ ಸಲ್ಲಿಸದ 92 ಫಲಾನುಪೇಕ್ಷಿಗಳಿಗೆ ಸೌಲಭ್ಯ ನೀಡಿರುವುದು, 2019-20ನೇ ಸಾಲಿನಲ್ಲಿ ಬಿಡುಗಡೆಯಾದ ಅನುದಾನದಲ್ಲಿ ಐರಾವತ ಮತ್ತು ಸಮೃದ್ಧಿ ಯೋಜನೆ ಅನುಷ್ಠಾನ …

Read More »

ಚುನಾವಣೆ ನೀತಿ ಸಂಹಿತೆಗೂ ಮೊದಲೇ ವರದಿ; ನೌಕರರ ಸಂಘ ಕೋರಿಕೆ

ಬೆಂಗಳೂರು: ವಿಧಾನಸಭಾ ಚುನಾವಣೆಯ ನೀತಿಸಂಹಿತೆ ಜಾರಿಗೊಳ್ಳುವ ಮೊದಲು ಸರ್ಕಾರಕ್ಕೆ ವರದಿ ಸಲ್ಲಿಸುವಂತೆ ರಾಜ್ಯ ಸರ್ಕಾರಿ ನೌಕರರ ಸಂಘ 7ನೇ ವೇತನ ಆಯೋಗಕ್ಕೆ ಮನವಿ ಸಲ್ಲಿಸಿದೆ. ನೌಕರರ ವೇತನ ಹಾಗೂ ಭತ್ಯೆಗಳ ಹೆಚ್ಚಳಕ್ಕೆ ಹಿಂದಿನ ವೇತನ ಆಯೋಗಗಳು ಎರಡು ಹಂತಗಳಲ್ಲಿ ವರದಿ ನೀಡಿವೆ. ಅದರಂತೆ 7ನೇ ವೇತನ ಆಯೋಗವೂ ಫೆಬ್ರುವರಿ ಅಂತ್ಯದ ಒಳಗೆ ವೇತನ ನಿಗದಿ ಸೌಲಭ್ಯದ (ಫಿಟ್‌ಮೆಂಟ್‌) ಪ್ರಥಮ ಹಂತದ ವರದಿ ಸಲ್ಲಿಸಬೇಕು. ರಾಜ್ಯ ಸರ್ಕಾರಿ ನೌಕರರು ಹಾಲಿ ಪಡೆಯುತ್ತಿರುವ …

Read More »

ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧೆಗೆ ಪಿಎಸ್‌ಐ ಹಗರಣದ ಆರೋಪಿ ಒಲವು

ಕಲಬುರಗಿ: ಪಿಎಸ್‌ಐ ಅಕ್ರಮ ನೇಮಕಾತಿ ಹಗರಣದ ಪ್ರಮುಖ ಆರೋಪಿ, ಆರ್.ಡಿ.ಪಾಟೀಲ ಶುಕ್ರವಾರ ಮಧ್ಯರಾತ್ರಿ ಅಜ್ಞಾತ ಸ್ಥಳದಿಂದ ವಿಡಿಯೊ ಮಾಡಿ, ಜಾಲತಾಣದಲ್ಲಿ ಹರಿಬಿಟ್ಟಿದ್ದಾನೆ. 7 ನಿಮಿಷ 14 ಸೆಕೆಂಡ್‌ಗಳ ವಿಡಿಯೊದಲ್ಲಿ ಪಾಟೀಲ, ‘8-9 ತಿಂಗಳು ಕೆಲ ರಾಜಕೀಯ ಮುಖಂಡರು ಕುತಂತ್ರದಿಂದ ನನ್ನನ್ನು ಹಾಗೂ ನನ್ನ ಸಹೋದರ ಮಹಾಂತೇಶ ಪಾಟೀಲ ಅವರನ್ನು ಪಿಎಸ್‌ಐ ಪ್ರಕರಣದಲ್ಲಿ ಉದ್ದೇಶ ಪೂರ್ವಕವಾಗಿ ಸಿಲುಕಿಸಿದ್ದಾರೆ. ಸಮಾಜ ಸೇವೆ, ಚುನಾವಣಾ ಸ್ಪರ್ಧೆಗೆ ಬರಬಹುದು ಎಂಬ ಭಯದಿಂದ ನಮ್ಮನ್ನು ಈ ಪ್ರಕರಣದಲ್ಲಿ ಸಿಲುಕಿಸಿದ್ದಾರೆ’ …

Read More »

ಡಂಭಾಚಾರದ ವಿರುದ್ಧ ಧ್ವನಿ ಎತ್ತಿದ ಚೌಡಯ್ಯ

ಬೆಳಗಾವಿ: ಅಂಬಿಗರ ಚೌಡಯ್ಯನವರಿಗೆ ಇನ್ನೊಂದು ಹೆಸರು ನಿಜಶರಣರು. ಆಗಿನ ಕಾಲದಲ್ಲಿ ಯಾವುದೇ ವಿಷಯಕ್ಕೆ ರಾಜಿಯಾಗದೇ ಸತ್ಯ ಮತ್ತು ನಿಷ್ಠುರತನದಿಂದ ತಮ್ಮ ವಿಚಾರಗಳನ್ನು ಸಮಾಜಕ್ಕೆ ತಿಳಿಸಿದವರು. ಸಮಾನತೆ ಪ್ರತಿಪಾದಿಸುವ ಮೂಲಕ ಎಲ್ಲರ ಗಮಸೆಳೆದರು ಎಂದು ಯಮಕನಮರಡಿ ಶಾಸಕ ಸತೀಶ ಜಾರಕಿಹೊಳಿ ಹೇಳಿದರು.   ನಗರದ ಕುಮಾರ ಗಂಧರ್ವ ಕಲಾಮಂದಿರದಲ್ಲಿ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಮಹಾನರ ಪಾಲಿಕೆ ವತಿಯಿಂದ ಶನಿವಾರ ನಡೆದ ನಿಜಶರಣ ಅಂಬಿಗರ ಚೌಡಯ್ಯನವರ ಜಯಂತಿ ಕಾರ್ಯಕ್ರಮಕ್ಕೆ ಚಾಲನೆ …

Read More »

ವಿವೇಕಾನಂದರು ನಮಗೆಲ್ಲ ಪ್ರೇರಣೆ; ಮಲ್ಲಿಕಾರ್ಜುನ ಬಾಳಿಕಾಯಿ

ಬೈಲಹೊಂಗಲ: ಭಾರತ ದೇಶದ ಸನಾತನ ಹಿಂದೂ ಸಂಸ್ಕೃತಿಯನ್ನು ದೇಶ ವಿದೇಶಗಳಲ್ಲಿ ಎತ್ತಿ ಹಿಡಿದ ವೀರ ಸನ್ಯಾಸಿ ಸ್ವಾಮಿ ವಿವೇಕಾನಂದರು ನಮಗೆಲ್ಲರಿಗೂ ಪ್ರೇರಣೆ. ಮಹಾನ್‌ ದೇಶ ಭಕ್ತರನ್ನು, ಸಾಧು-ಸಂತರನ್ನು ಸ್ಮರಿಸುವುದು ಕೇವಲ ಬಿಜೆಪಿ ಸಂಸ್ಕೃತಿಯಲ್ಲಿ ಮಾತ್ರ ಎಂದು ರಾಜ್ಯ ಬಿ.ಜೆ.ಪಿ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಬಾಳಿಕಾಯಿ ಹೇಳಿದರು.   ತಾಲೂಕಿನ ಸಂಪಗಾಂವ ಗ್ರಾಮದ ಬೆ„ಲಬಸವೇಶ್ವರ ದೇವಸಾನದಲ್ಲಿ ಬಿಜೆಪಿ ಯುವ ಮೋರ್ಚಾ ಕಿತ್ತೂರ ಮಂಡಳ ವತಿಯಿಂದ ಸ್ವಾಮಿ ವಿವೇಕಾನಂದ ಜಯಂತಿ ಪ್ರಯುಕ್ತ …

Read More »