ವಿಜಯಪುರ: ಜ್ಞಾನಯೋಗಾಶ್ರಮದ ಸಿದ್ದೇಶ್ವರ ಶ್ರೀಗಳು ಲಿಂಗೈಕ್ಯರಾದ ಹಿನ್ನೆಲೆ ಶ್ರೀಸಿದ್ದೇಶ್ವರ ಸಂಸ್ಥೆಯಿಂದ ನಗರ ದೇವತೆ ಸಿದ್ದೇಶ್ವರನ ಪ್ರಸಕ್ತ ಸಾಲಿನ ಸಂಕ್ರಮಣದ ನಮ್ಮೂರ ಜಾತ್ರೆಯನ್ನು ಸರಳವಾಗಿ ಅಚರಿಸಲು ನಿರ್ಧರಿಸಿದೆ. ಆದರೆ ಧಾರ್ಮಿಕ ಕಾರ್ಯಕ್ರಮಗಳಿಗೆ ಸೀಮಿತಗೊಳಿಸಿ, ಜಾತ್ರೆ ಆಚರಿಸಲು ಯೋಜಿಸಿದೆ. ಮಂಗಳವಾರ ನಗರದಲ್ಲಿ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಶ್ರೀಸಿದ್ದೇಶ್ವರ ಸಂಸ್ಥೆಯ ಅಧ್ಯಕ್ಷರಾದ ಶಾಸಕ ಬಸನಗೌಡ ಪಾಟೀಲ ಯತ್ನಾಳ, ಚೇರ್ಮನ್ ಬಸಯ್ಯ ಹಿರೇಮಠ, ಸಿದ್ದೇಶ್ವರ ಶ್ರೀಗಳ ನಿಧನ ಹಿನ್ನೆಲೆಯಲ್ಲಿ ಸಿದ್ದೇಶ್ವರ ಜಾತ್ರಾ ಮಹೋತ್ಸದಲ್ಲಿ ಜಾನುವಾರು …
Read More »Daily Archives: ಜನವರಿ 10, 2023
ಭ್ರಷ್ಟ ಬಿಜೆಪಿ ಸರ್ಕಾರ ತೊಲಗಿಸಲು ಪ್ರಜಾಧ್ವನಿ ಯಾತ್ರೆ: ಡಿಕೆ ಶಿವಕುಮಾರ್
ಬೆಂಗಳೂರು: ಹೊಸ ವರ್ಷ, ಹೊಸ ಪರ್ವ. ಬದಲಾವಣೆ ಹಾಗೂ ಕಾಂಗ್ರೆಸ್ ಪಕ್ಷದ ವಿಜಯ ಪರ್ವ ಆರಂಭವಾಗಿದೆ. ಈ ಪವಿತ್ರವಾದ ಗಳಿಗೆಯಲ್ಲಿ ಜನರಿಗಾಗಿ ಪ್ರಜಾಧ್ವನಿ ಯಾತ್ರೆ ವಿಚಾರ ತಿಳಿಸುತ್ತಿದ್ದೇವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. ವಿಪಕ್ಷ ನಾಯಕ ಸಿದ್ದರಾಮಯ್ಯ ಜತೆಗೆ ಜಂಟಿ ಪತ್ರಿಕಾಗೋಷ್ಠಿ ನಡೆಸಿದ ಅವರು, ಜನರ ಭಾವನೆ ತಿಳಿಸಲು ಕಳೆದ ಎರಡು ಮೂರು ವರ್ಷಗಳಿಂದ ಕಾಂಗ್ರೆಸ್ ಪಕ್ಷ ಸತತವಾಗಿ ಪ್ರಯತ್ನಿಸಿದೆ. ಈ ಪ್ರಜಾಧ್ವನಿ ಯಾತ್ರೆ ಪ್ರಜೆಗಳ ಧ್ವನಿ, …
Read More »ಸ್ಯಾಂಟ್ರೋ ರವಿ ವಿಚಾರಕ್ಕೆ ಹೆಚ್ಚು ಮಹತ್ವ ಕೊಡುವುದು ಬೇಡ: ಸಿಎಂ ಬೊಮ್ಮಾಯಿ
ಹುಬ್ಬಳ್ಳಿ: ಸ್ಯಾಂಟ್ರೋ ರವಿ ವಿಚಾರದಲ್ಲಿ ಈಗಾಗಲೇ ಸೂಕ್ತ ತನಿಖೆ ಮಾಡಲಾಗಿದ್ದು, ಆತನ ಎಲ್ಲಾ ಆಸ್ತಿಪಾಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ. ಅವನಿಗೆ 20 ವರ್ಷದ ಇತಿಹಾಸವಿದೆ. ಈ ಹಿಂದೆ ಆತನೊಂದಿಗೆ ಹಲವರು ಸಂಪರ್ಕದಲ್ಲಿದ್ದರು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು. ಇಲ್ಲಿನ ಆದರ್ಶ ನಗರದ ತಮ್ಮ ನಿವಾಸದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸ್ಯಾಂಟ್ರೋ ರವಿ ವಿಚಾರದಲ್ಲಿ ಹೆಚ್ಚು ಮಹತ್ವ ಕೊಡುವುದು ಬೇಡ. ಪೊಲೀಸರು ವಿಚಾರಣೆ ಮಾಡುತ್ತಿದ್ದಾರೆ ಎಂದರು. ಸ್ಯಾಂಟ್ರೋ ರವಿ …
Read More »ಜಲಜೀವನ್ ಮೀಷನ್ ಕಾಮಗಾರಿ ಆರಂಭವಾಗುವುದು ಯಾವಾಗ..? ರಸ್ತೆ ಅಗೆದು ವರ್ಷವಾದರೂ ಕಾಮಗಾರಿ ಆರಂಭವಿಲ್ಲ
ದೋಟಿಹಾಳ: ಕಳೆದ ವರ್ಷ ಜಾತ್ರೆಗಳು ಆರಂಭಕ್ಕೆ ಒಂದು ತಿಂಗಳ ಇರುವಾಗ ಜೆಜೆಎಂ ಕಾಮಗಾರಿಯ ಕುಡಿಯುವ ನೀರಿ ಪೈಪ್ಲೆöÊನ್ ಹಾಕಲು ಗ್ರಾಮದ ಬಹುತ್ತೇಕ ರಸ್ತೆಗಳು ಸಿಸಿ ರಸ್ತೆಯನ್ನು ಅಗೆದು ಪೈಪುಗಳನ್ನು ಹಾಕದೆ ವರ್ಷವಾದರೂ ಆಗೆ ಬಿಟ್ಟಿದ್ದಾರೆ. ಇದರಿಂದ ರಸ್ತೆಯಲ್ಲಿ ಬೈಕ್ ಸವಾರರು ಮತ್ತು ಸಾರ್ವಜನಿಕರು ಎಡವಿ ಬಿದ್ದಿರುವ ಘಟನೆ ನಡೆದಿದ್ದರೂ ಇದನ್ನು ಸರಿಪಡಿಸಬೇಕಾದ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಮಾತ್ರ ಮೂಕಪೆಕ್ಷಕರಾಗಿದ್ದಾರೆ ಎಂಬುವುದು ಸಾರ್ವಜನಿಕರ ಆರೋಪವಾಗಿದೆ. ಗ್ರಾಮದಲ್ಲಿ ಕಳೆದ ಒಂದು ವರ್ಷದ ಹಿಂದೇ ಜಲಜೀವನ್ …
Read More »ಮೆಟ್ರೋ ಪಿಲ್ಲರ್ ಕುಸಿತ ಪ್ರಕರಣ: ಮೃತರ ಕುಟುಂಬಕ್ಕೆ 10 ಲಕ್ಷ ರೂ.ಪರಿಹಾರ ಘೋಷಣೆ
ಧಾರವಾಡ: ಬೆಂಗಳೂರಿನಲ್ಲಿ ಮೆಟ್ರೊ ಮೇಲ್ಸೆತುವೆ ಪಿಲ್ಲರ್ ಕುಸಿತದಿಂದ ಮೃತಪಟ್ಟ ಇಬ್ಬರು ವ್ಯಕ್ತಿಗಳ ಕುಟುಂಬಕ್ಕೆ ತಲಾ 10 ಲಕ್ಷ ರೂ. ಪರಿಹಾರ ನೀಡುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೋಷಣೆ ಮಾಡಿದರು. ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿ, ಮೃತಪಟ್ಟವರು ಧಾರವಾಡ ಮತ್ತು ಗದಗ ಮೂಲದವರೆಂದು ತಿಳಿದಿದೆ. ಬೆಳಿಗ್ಗೆ ದ್ವಿಚಕ್ರ ವಾಹನದಲ್ಲಿ ತೆರಳುವ ವೇಳೆ ಈ ದುರ್ಘಟನೆ ನಡೆದಿದೆ ಎಂದು ಬೇಸರ ವ್ಯಕ್ತ ಪಡಿಸಿದರು. ಮೃತರ ಕುಟುಂಬಕ್ಕೆ ಮೆಟ್ರೋ ಸಂಸ್ಥೆಯೂ ಸಹ ಪರಿಹಾರ ನೀಡಲಿದೆ. ಜೊತೆಗೆ …
Read More »ರಾಜ್ಯದಲ್ಲಿ ದಿಢೀರ್ ತಾಪಮಾನ ಕುಸಿತ: ಹಲವು ಜಿಲ್ಲೆಗಳಲ್ಲಿ ಮೈಕೊರೆಯುವ ಚಳಿ
ಬೆಂಗಳೂರು: ರಾಜ್ಯದಲ್ಲಿ ದಿಢೀರ್ ಆಗಿ ತಾಪಮಾನ ಕುಸಿದಿದ್ದು, ಕೆಲವು ಜಿಲ್ಲೆಗಳಲ್ಲಿ ಮೈಕೊರೆಯುವ ಚಳಿ ಅನುಭವ ಉಂಟಾಗುತ್ತಿದೆ. ‘ಮುಂದಿನ 48 ಗಂಟೆಯಲ್ಲಿ ಉತ್ತರ ಒಳನಾಡಿನ ಕೆಲವು ಸ್ಥಳಗಳಲ್ಲಿ ಶೀತಗಾಳಿ ಬೀಸುವ ಸಾಧ್ಯತೆಯಿದೆ. ಉತ್ತರ ಹಾಗೂ ದಕ್ಷಿಣ ಒಳನಾಡಿನ ಕೆಲವು ಸ್ಥಳಗಳಲ್ಲಿ ಉಷ್ಣಾಂಶ ಸಾಮಾನ್ಯಕ್ಕಿಂತ 5ರಿಂದ 6 ಡಿಗ್ರಿ ಸೆಲ್ಸಿಯಸ್ ಕಡಿಮೆ ಆಗಲಿದೆ’ ಎಂದು ಹವಾಮಾನ ಇಲಾಖೆ ತಿಳಿಸಿದೆ. ಸೋಮವಾರ ರಾಜಧಾನಿ ಬೆಂಗ ಳೂರಿನಲ್ಲೂ ತಾಪಮಾನ ಕುಸಿದಿತ್ತು. ಹೊರವಲಯದ ಜನರಿಗೆ ಚಳಿಯ ತೀವ್ರತೆ ಹೆಚ್ಚೇ …
Read More »ವಿಷನ್ 2047: ಅಯೋಧ್ಯೆಗೆ ಹೊಸ ಸ್ಪರ್ಶ; ಇಲ್ಲಿದೆ ಮಾಹಿತಿ.
ಎಲ್ಲವೂ ಅಂದುಕೊಂಡಂತೆ ನಡೆದರೆ ಮುಂದಿನ ವರ್ಷ ಜ. 1ರಂದು ಅಯೋಧ್ಯೆಯಲ್ಲಿ ಭವ್ಯ ರಾಮಮಂದಿರ ಸಾರ್ವಜನಿಕರ ದರ್ಶನಕ್ಕೆ ಮುಕ್ತವಾಗಲಿದೆ. ನಂತರದಲ್ಲಿ ದಿನಕ್ಕೆ ಕನಿಷ್ಠ 1 ಲಕ್ಷ ಮಂದಿಯಾ ದರೂ ಶ್ರೀರಾಮನ ದರ್ಶನ ಪಡೆಯಲಿದ್ದಾರೆ. ಇದನ್ನು ಗಮನದಲ್ಲಿಟ್ಟು ಕೊಂಡು, ಅಯೋಧ್ಯೆಯನ್ನು ಜಾಗತಿಕ ಪ್ರವಾಸೋದ್ಯಮ ಮತ್ತು ಆಧ್ಯಾತ್ಮಿಕ ಕೇಂದ್ರವನ್ನಾಗಿ ಮಾರ್ಪಾಡು ಮಾಡುವ ಉದ್ದೇಶದಿಂದ ಉತ್ತರಪ್ರದೇಶ ಸರಕಾರವು ಬರೊಬ್ಬರಿ 32 ಸಾವಿರ ಕೋಟಿ ರೂ.ಗಳ ಮೆಗಾ ಯೋಜನೆಯನ್ನು ರೂಪಿಸಿದೆ. ಆ ಯೋಜನೆ ಕುರಿತು ಒಂದಿಷ್ಟು ಮಾಹಿತಿ …
Read More »ಸ್ಯಾಂಟ್ರೋ ರವಿ ಹಣ ಲೆಕ್ಕ ಮಾಡಿದ್ದು ಆರಗ ಮನೆಯಲ್ಲೇ: H.D.K.
ಆಳಂದ: ಸ್ಯಾಂಟ್ರೋ ರವಿ ಜತೆಗೆ ಸಚಿವರು, ಬಿಜೆಪಿ ನಾಯಕರು ಇರುವ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ. ಅದರಲ್ಲೂ ಮುಖ್ಯವಾಗಿ ಕಂತೆಕಂತೆ ನೋಟುಗಳ ಜತೆ ಸ್ಯಾಂಟ್ರೋ ರವಿ ಫೋಟೋ ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡಿಸಿದ್ದು, ಆರಗ ಮನೆಯಲ್ಲಿ ಹಣ ಲೆಕ್ಕ ಮಾಡುತ್ತಿರುವ ಫೋಟೋ ವೈರಲ್ ಆಗಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಹೇಳಿದರು. ಖಜೂರಿಯಲ್ಲಿ ಸೋಮವಾರ ಜರಗಿದ ಜೆಡಿಎಸ್ ಪಂಚರತ್ನ ರಥಯಾತ್ರೆ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಚಿವ …
Read More »ಬಿಜೆಪಿಯವರದ್ದು ಬೆನ್ನು ಮೂಳೆ ಇಲ್ಲದ ರಾಜಕೀಯ: ಹಿಂದಿ ದಿವಸ್ ವಿರುದ್ಧ ಜೆಡಿಎಸ್ ಆಕ್ರೋಶ
ಬೆಂಗಳೂರು: ರಾಜ್ಯ ಸರ್ಕಾರದ ಹಿಂದಿ ದಿವಸ ಆಚರಣೆಯ ವಿರುದ್ಧ ಜೆಡಿಎಸ್ ಕಿಡಿಕಾರಿದ್ದು, ಒಕ್ಕೂಟ ಸರ್ಕಾರದ ಅಣತಿಯಂತೆ, ವಿಶ್ವ ಹಿಂದಿ ದಿವಸದ ಬಗ್ಗೆ ಉತ್ಸುಕರಾಗಿರುವ ರಾಜ್ಯ ಬಿಜೆಪಿಯವರೆ, ನಿಮ್ಮ ಗುಲಾಮಗಿರಿಗೆ ಕನ್ನಡಿಗರ ಒಕ್ಕೊರಲ ಧಿಕ್ಕಾರ. ಹಿಂದಿ ಹೇರಿಕೆಯ ಹುನ್ನಾರಕ್ಕೆ ನಮ್ಮ ಭಾಷೆಯನ್ನು ಬಲಿ ಕೊಡುವ ನಿಮ್ಮ ‘ಬೆನ್ನು ಮೂಳೆ’ ಇಲ್ಲದ ರಾಜಕೀಯವನ್ನು ಬಲವಾಗಿ ಖಂಡಿಸುತ್ತೇವೆ ಎಂದು ಟ್ವೀಟ್ ಮಾಡಿದೆ. ಬಹು ಭಾಷೆಯ, ಬಹುಸಂಸ್ಕ್ರತಿಯ ದೇಶ ನಮ್ಮ ಭಾರತ. ಕೇವಲ ಒಂದು ಭಾಷೆಯನ್ನು …
Read More »ಕಾಂತಾರʼ ಸಿನಿಮಾ ಆಸ್ಕರ್ ರೇಸ್ ನಲ್ಲಿ ಸ್ಥಾನ
ಬೆಂಗಳೂರು: ರಿಷಬ್ ಶೆಟ್ಟಿ ನಿರ್ದೇಶನ ʼಕಾಂತಾರʼ ಸಿನಿಮಾ ಆಸ್ಕರ್ ರೇಸ್ ನಲ್ಲಿ ಸ್ಥಾನ ಪಡೆದುಕೊಂಡಿದೆ. ಈ ಬಗ್ಗೆ ಹೊಂಬಾಳೆ ಫಿಲ್ಮ್ಸ್ ಅಧಿಕೃತವಾಗಿ ಟ್ವಿಟರ್ ನಲ್ಲಿ ಮಾಹಿತಿಯನ್ನು ಕೊಟ್ಟಿದೆ. ಇತ್ತೀಚೆಗೆ ʼಕಾಂತಾರʼ ಸಿನಿಮಾವನ್ನು ಆಸ್ಕರ್ ಗೆ ಕಳುಹಿಸಲು ಅರ್ಜಿ ಸಲ್ಲಿಸಿದ್ದೇವೆ ಎಂದು ನಿರ್ಮಾಪಕ ವಿಜಯ್ ಕಿರಂದೂರು ಅವರು ಹೇಳಿದ್ದರು. ಟ್ವಟರ್ ನಲ್ಲಿ ಕಾಂತಾರಕ್ಕೆ ಆಸ್ಕರ್ ಸಿಗಬೇಕೆಂದು ಹಲವು ಮಂದಿ ಆಗ್ರಹಿಸಿದ್ದರು. ಪ್ರೇಕ್ಷಕರ ಮನವಿಯಂತೆ ಚಿತ್ರ ತಂಡ ಆಸ್ಕರ್ ಗಾಗಿ ಕಾಂತಾರವನ್ನು ಪರಿಗಣಿಸುವಂತೆ ಅರ್ಜಿ …
Read More »