Breaking News

Daily Archives: ಡಿಸೆಂಬರ್ 27, 2022

ಮಾಳಿ ಸಮುದಾಯದ ರಾಜ್ಯಮಟ್ಟದ ಸಮಾವೇಶಕ್ಕೆ ಚಾಲನೆ

ಮುಗಳಖೋಡ: ‘ಮಾಳಿ/ ಮಾಲಗಾರದಂತಹ ಸಣ್ಣ ವೃತ್ತಿಪರ ಸಮುದಾಯಗಳ ಅಭಿವೃದ್ಧಿಗೆ ಬಜೆಟ್‌ನಲ್ಲಿ ₹400 ಕೋಟಿ ಅನುದಾನ ಮೀಸಲಿಡಲಾಗಿದೆ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು. ಪಟ್ಟಣದಲ್ಲಿ ಸೋಮವಾರ ನಡೆದ ಅಖಿಲ ಕರ್ನಾಟಕ ಮಾಳಿ/ಮಾಲಗಾರ ಸಮುದಾಯದ ರಾಜ್ಯಮಟ್ಟದ ದ್ವಿತೀಯ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.   ‘ಕಂಬಾರ, ಕುಂಬಾರ, ಪತ್ತಾರ, ಕ್ಷೌರಿಕ, ನೇಕಾರ ಸೇರಿದಂತೆ ಹಲವು ಸಣ್ಣ ಸಮಯದಾಯಗಳು ಕ್ರಿಯಾಶೀಲವಾಗಿ ಕೆಲಸ ಮಾಡುತ್ತಿವೆ. ಸರ್ಕಾರ ಸದಾ ನಿಮ್ಮೊಂದಿಗೆ ಇರುತ್ತದೆ. ಮುಂದಿನ ದಿನಗಳಲ್ಲಿ ನಿಮ್ಮ …

Read More »

ಕೆಪಿಟಿಸಿಎಲ್‌ ಮಾದರಿ ಪಿಎಸ್‌ಐಗೆ ಏಕಿಲ್ಲ? PSI ನೇಮಕಾತಿ ‍ಪರೀಕ್ಷೆ ಪಾಸಾದವರ ಅಳಲು

ಬೆಳಗಾವಿ: ಕೆಪಿಟಿಸಿಎಲ್‌ ನೇಮಕಾತಿ ಪರೀಕ್ಷೆಯಲ್ಲಿ ಅಕ್ರಮ ಎಸಗಿದ ಆರೋಪಿಗಳನ್ನು ಬಿಟ್ಟು, ಉಳಿದವರಿಗೆ ನೇಮಕಾತಿ ಆದೇಶ ನೀಡಲು ರಾಜ್ಯ ಸಾರ್ಕಾರ ನಿರ್ಧರಿಸಿದೆ. ಇದೇ ರೀತಿಯ ನಿಲುವನ್ನು 545 ಪಿಎಸ್‌ಐ ನೇಮಕಾತಿ ‍ಪರೀಕ್ಷೆ ಬರೆದವರ ಬಗ್ಗೆ ಏಕೆ ತಾಳುತ್ತಿಲ್ಲ ಎಂದು ಅಭ್ಯರ್ಥಿಗಳು ಪ್ರಶ್ನೆ ಎತ್ತಿದ್ದಾರೆ.   ಪಿಎಸ್‌ಐ ನೇಮಕಾತಿ ಪರೀಕ್ಷೆಯಲ್ಲಿ ಬ್ಲೂಟೂತ್‌ ಬಳಸಿ, ಒಎಂಆರ್‌ ಶೀಟ್‌ ತಿದ್ದುವ ಮೂಲಕ ಅಕ್ರಮ ಎಸಗಲಾಗಿದೆ. ಇದೇ ಮಾದರಿಯ ಅಕ್ರಮಗಳು ಕೆಪಿಟಿಸಿಎಲ್‌ ಕಿರಿಯ ಸಹಾಯಕರ ನೇಮಕಾತಿಯಲ್ಲೂ ನಡೆದಿವೆ. …

Read More »

ಮತ್ತೆ ವಿದೇಶದತ್ತ ಉಕ್ರೇನ್‌ ಸಂತ್ರಸ್ತ ವೈದ್ಯಕೀಯ ವಿದ್ಯಾರ್ಥಿಗಳು

ವಿಜಯಪುರ: ಉಕ್ರೇನ್‌-ರಷ್ಯಾ ಯುದ್ಧದ ಪರಿಣಾಮ ಜೀವ ಉಳಿಸಿಕೊಂಡು ಭಾರತಕ್ಕೆ ಮರಳಿದ್ದ ನಿರಾಶ್ರಿತ ವೈದ್ಯಕೀಯ ವಿದ್ಯಾರ್ಥಿಗಳಿಗೆ ಕೇಂದ್ರ ಸರ್ಕಾರ ವೈದ್ಯಕೀಯ ಶಿಕ್ಷಣ ಮುಂದುವರಿಸಲು ಅವಕಾಶ ಕಲ್ಪಿಸದ ಕಾರಣಕ್ಕೆ ನಿರಾಶರಾದ ವಿದ್ಯಾರ್ಥಿಗಳು ಇದೀಗ ವಿದೇಶದತ್ತ ಮುಖ ಮಾಡತೊಡಗಿದ್ದಾರೆ.   ಉಕ್ರೇನ್‌ನಿಂದ ರಾಜ್ಯದ ವಿವಿಧ ಜಿಲ್ಲೆಗಳಿಗೆ ಮರಳಿದ್ದ ಸುಮಾರು 700 ವೈದ್ಯಕೀಯ ವಿದ್ಯಾರ್ಥಿಗಳು ಸೇರಿದಂತೆ ದೇಶದ ವಿವಿಧ ರಾಜ್ಯಗಳ ಸಾವಿರಾರು ವೈದ್ಯಕೀಯ ವಿದ್ಯಾರ್ಥಿಗಳಿಗೆ ಭಾರತದಲ್ಲಿ ವೈದ್ಯಕೀಯ ಶಿಕ್ಷಣ ಮುಂದುವರಿಸಲು ರಾಷ್ಟ್ರೀಯ ವೈದ್ಯಕೀಯ ಆಯೋಗ(ಎನ್‌ಎಂಸಿ) ನಿರಾಕರಿಸಿದೆ. …

Read More »