Breaking News

Daily Archives: ಡಿಸೆಂಬರ್ 8, 2022

ಬೆಳಗಾವಿಯಿಂದ ಎಲ್ಲಾ ವಿಮಾನ ರದ್ದುಗೊಳಿಸಿದ ಸ್ಪೈಸ್‌ಜೆಟ್

ಬೆಳಗಾವಿ, ಡಿಸೆಂಬರ್ 07; ಸ್ಪೈಸ್‌ಜೆಟ್‌ಬೆಳಗಾವಿವಿಮಾನ ನಿಲ್ದಾಣದಿಂದ ಎಲ್ಲಾ ವಿಮಾನ ಸೇವೆಗಳನ್ನು ರದ್ದುಗೊಳಿಸಿದೆ. ಡಿಸೆಂಬರ್ 10ರಿಂದ ಯಾವುದೇ ವಿಮಾನಗಳು ಸಂಚಾರ ನಡೆಸುವುದಿಲ್ಲ. ಕಡಿಮೆ ಖರ್ಚಿನಲ್ಲಿ ವಿಮಾನ ಸೇವೆ ಒದಗಿಸುವ ಸ್ಪೈಸ್‌ ಜೆಟ್ ಬೆಳಗಾವಿಯಿಂದ ಎಲ್ಲಾ ವಿಮಾನಗಳನ್ನು ರದ್ದುಗೊಳಿಸುತ್ತಿದೆ. ಇದರಿಂದಾಗಿ ಪ್ರಮುಖ ನಗರಗಳಿಗೆ ಬೆಳಗಾವಿಯಿಂದ ವಿಮಾನ ಸಂಪರ್ಕ ಕಡಿತಗೊಳ್ಳಲಿದೆ.   ಸ್ಪೈಸ್‌ಜೆಟ್‌ ಬೆಳಗಾವಿ-ನವದೆಹಲಿ ನಡುವೆ ಸಹ ನೇರ ವಿಮಾನ ಸೇವೆ ಒದಗಿಸುತ್ತಿತ್ತು. ಈ ವಿಮಾನ ಸಹ ಡಿಸೆಂಬರ್ 10ರ ಬಳಿಕ ಸ್ಥಗಿತಗೊಳ್ಳಲಿದೆ. ಆದ್ದರಿಂದ …

Read More »

ಸರ್ಕಾರಿ ನೌಕರರು, ಕುಟುಂಬದವರ ಆಸ್ತಿ ವಿವರ ಸಲ್ಲಿಕೆಗೆ ಮಾರ್ಚ್ 31 ಗಡುವು

ಬೆಂಗಳೂರು: ರಾಜ್ಯ ಸರ್ಕಾರಿ ನೌಕರರು ಧರ್ಮ, ಜನಾಂಗ, ಪ್ರದೇಶ, ಭಾಷೆ ಕೋಮು ಭಾವನೆ ಕೆರಳಿಸುವ ಸಂಸ್ಥೆ ಮತ್ತು ಸಂಘಟನೆಗಳೊಂದಿಗೆ ಸೇರದಂತೆ ನಿರ್ಬಂಧ ವಿಧಿಸಲು ಸರ್ಕಾರ ನಿರ್ಧರಿಸಿದೆ. ಆಸ್ತಿ ವಿವರ ಸಲ್ಲಿಕೆ ಅವಧಿ ಮಾರ್ಚ್ 31 ಕ್ಕೆ ನಿಗದಿ ಮಾಡಲು ಕ್ರಮಕೈಗೊಳ್ಳಲಾಗಿದೆ.   ಸರ್ಕಾರಿ ನೌಕರರು ತಮ್ಮ ಮತ್ತು ಕುಟುಂಬದ ಆಸ್ತಿ ಮತ್ತು ಹೊಣೆಗಾರಿಕೆಗಳ ವಾರ್ಷಿಕ ಮಾಹಿತಿಯನ್ನು ಪ್ರತಿ ವರ್ಷ ಡಿಸೆಂಬರ್ 31ರೊಳಗೆ ಸರ್ಕಾರಕ್ಕೆ ಸಲ್ಲಿಸಬೇಕಿದೆ. ಪ್ರಸ್ತುತ ಇರುವ ಸೇವಾ ನಿಯಮದ ಪ್ರಕಾರ …

Read More »

ಫೆಬ್ರವರಿಯಲ್ಲಿ ಏರ್ ಶೋ – ಪ್ರಧಾನಿ ಮೋದಿಯವರಿಂದ ಉದ್ಘಾಟನೆ:

ಬೆಂಗಳೂರು, ಡಿಸೆಂಬರ್ 7 : 2023ರ ಫೆಬ್ರವರಿ ತಿಂಗಳಲ್ಲಿ ಬೆಂಗಳೂರಿನಲ್ಲಿ ಏರ್ ಶೋ ಆಯೋಜಿಸಲಾಗಿದ್ದು, ಪ್ರಧಾನಿ‌ ಮೋದಿಯವರು ಏರ್ ಶೋಗೆ ಚಾಲನೆ ನೀಡಲಿದ್ದಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ಬುಧವಾರ ಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇಂದು ಕಾಲಿನ್ಸ್ ಏರೋಸ್ಪೇಸ್ ಗ್ಲೋಬಲ್ ಇಂಜಿನಿಯರಿಂಗ್ ಅಂಡ್ ಟೆಕ್ನಾಲಜಿ ಸೆಂಟರ್ ನ್ನು ಉದ್ಘಾಟಿಸಿ ಮಾತನಾಡಿದ ಅವರು, ಈ ಏರ್ ಶೋ ಕಾರ್ಯಕ್ರಮದಲ್ಲಿ ರಾಜ್ಯದಲ್ಲಿರುವ ಏರೋಸ್ಪೇಸ್ ಸಂಶೋಧನಾ ಕೇಂದ್ರದ ಬಗ್ಗೆ, ವಿಮಾನಯಾನ, ವಿಮಾನ …

Read More »

ತುಮಕೂರು ಜಿಲ್ಲೆಯಲ್ಲಿ ‘ಅಂತರರಾಷ್ಟ್ರೀಯ ವಿಮಾನ ನಿಲ್ದಾಣ’:C.M.

ತುಮಕೂರು : ಮುಂದಿನ ದಿನಗಳಲ್ಲಿ ತುಮಕೂರು ಜಿಲ್ಲೆಯಲ್ಲಿ ಮತ್ತೊಂದು ಅಂತರ ರಾಷ್ಟ್ರೀಯ ವಿಮಾನ ನಿಲ್ದಾಣ ಮಾಡಲಾಗುತ್ತದೆ ಎಂದು ಸಿಎಂ ಬೊಮ್ಮಾಯಿ ಘೋಷಿಸಿದ್ದಾರೆ. ಇಂದು ಕುಣಿಗಲ್ ನಲ್ಲಿ ನಡೆದ ಜನಸಂಕಲ್ಪ ಯಾತ್ರೆಯಲ್ಲಿ ಸಿಎಂ ಬೊಮ್ಮಾಯಿ ಮಾತನಾಡಿದ್ದು, ತುಮಕೂರು ಜಿಲ್ಲೆಯ ಅಭಿವೃದ್ದಿ ದೃಷ್ಟಿ ಹಿನ್ನೆಲೆ ತುಮಕೂರು ಜಿಲ್ಲೆಯಲ್ಲಿ ಮತ್ತೊಂದು ಅಂತರ್ ರಾಷ್ಟ್ರೀಯ ವಿಮಾನ ನಿಲ್ದಾಣ ಮಾಡಲಾಗುತ್ತದೆ ಎಂದು ಬೊಮ್ಮಾಯಿ ಹೇಳಿದರು. ಇದರ ಜೊತೆ ಒಂದು ಸಾವಿರ ಎಕರೆಯಲ್ಲಿ ಟೌನ್ ಶಿಪ್ ನಿರ್ಮಾಣ ಮಾಡಲಾಗುತ್ತದೆ, …

Read More »

SSLC’ ವಿದ್ಯಾರ್ಥಿನಿಗೆ ‘ಹನಿಮೂನ್’ ಹೇಗಿರುತ್ತೆ..? ಎಂದು ಶಿಕ್ಷಕನ ಪ್ರಶ್ನೆ :

ಕೋಲಾರ : ಶಿಕ್ಷಕನೋರ್ವ ವಿದ್ಯಾರ್ಥಿನಿಯರ ಜೊತೆ ಅನುಚಿತವಾಗಿ ವರ್ತಿಸಿದ ಆರೋಪ ಕೋಲಾರ ಸಮೀಪದ ನರಸಾಪುರ ಗ್ರಾಮದ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಕೇಳಿಬಂದಿದ್ದು, ಪೋಷಕರ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಶಾಲೆಯ ಕನ್ನಡ ಶಿಕ್ಷಕ ಪ್ರಕಾಶ್ ಎಸ್ ಎಸ್ ಎಲ್ ಸಿ ವಿದ್ಯಾರ್ಥಿನಿಗೆ ಹನಿಮೂನ್ ಹೇಗಿರುತ್ತದೆ ಎಂದು ಪ್ರಶ್ನಿಸಿ ಮುಜುಗರ ತರುವ ರೀತಿಯಲ್ಲಿ ವರ್ತಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ.   ಶಿಕ್ಷಕ ಪ್ರಕಾಶ್ ವಿದ್ಯಾರ್ಥಿನಿಯರ ಜೊತೆ ಕೆಟ್ಟದಾಗಿ ಮಾತನಾಡಿ, ವಿದ್ಯಾರ್ಥಿನಿಯರ ಮೈ ಕೈ …

Read More »