Breaking News

Daily Archives: ಡಿಸೆಂಬರ್ 1, 2022

ಮಂಜುನಾಥ ನಾಯಕ್ ಖಾನಾಪೂರದ ನೂತನ ಪೊಲೀಸ್ ಇನ್ಸ್ಪೆಕ್ಟರ್ ಆಗಿ ಅಧಿಕಾರಿ ಸ್ವೀಕಾರ

ಖಾನಾಪೂರದ ನೂತನ ಪೊಲೀಸ್ ಇನ್ಸ್ಪೆಕ್ಟರ್ ಆಗಿ ಮಂಜುನಾಥ ನಾಯ್ಕ ಅಧಿಕಾರಿ ಸ್ವೀಕಾರಹೌದು ಖಾನಾಪೂರ ಪೊಲೀಸ್ ಠಾಣೆಯ ಪೊಲೀಸ್ ಇನ್ನ್ಪಕ್ಟರ್ ಗಳಾದ ಸುರೇಶ್ ಶಿಂಗಿ ಅವರ ವರ್ಗಾವಣೆಕೊಂಡಿದ್ದು, ಅವರ ಸ್ಥಾನಕ್ಕೆ ಮಂಜುನಾಥ ನಾಯ್ಕ ಅವರು ಅಧಿಕಾರ ಸ್ವೀಕರಿಸಿದರು. ಮಂಜುನಾಥ ನಾಯ್ಕ್ ಅವರು ಕಾರವಾರ ಜಿಲ್ಲೆಯವರು ಎಂದು ತಿಳಿದು ಬಂದಿದೆ.

Read More »

ಸುಪ್ರೀಂಕೋರ್ಟ್ ನಲ್ಲಿ ಗಡಿ ವಿವಾದದ ಪ್ರಕರಣ ವಿಚಾರಣೆಗೆ ಕರ್ನಾಟಕದ ನಿಲುವು ಸ್ಪಷ್ಟ:C.M.ಬೊಮ್ಮಾಯಿ

ಸುಪ್ರೀಂಕೋರ್ಟ್ ನಲ್ಲಿ ಗಡಿ ವಿವಾದದ ಪ್ರಕರಣ ವಿಚಾರಣೆಗೆ ಬರಲಿದ್ದು, ಕರ್ನಾಟಕದ ನಿಲುವು ಸ್ಪಷ್ಟವಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ಅವರು ಇಂದು ಮಾಜಿ ಮುಖ್ಯಮಂತ್ರಿ ಕೆಂಗಲ್ ಹನುಮಂತ ಯ್ಯನವರ ಪುಣ್ಯತಿಥಿಯ ಅಂಗವಾಗಿ ವಿಧಾನ ಸೌಧದ ಆವರಣದಲ್ಲಿರುವ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದರು. ಮಹಾರಾಷ್ಟ್ರದ ಅರ್ಜಿ ಮೈಂಟೆನಬಲ್ ಅಲ್ಲ ಎನ್ನುವುದು ನಮ್ಮ ನಿಲುವು. ಅದನ್ನೇ ನಮ್ಮ ವಕೀಲರು ವಾದ ಮಂಡಿಸಿದ್ದಾರೆ. ನಮ್ಮ ನಿಲುವು …

Read More »

ಬಾವುಟ ಹಿಡಿದ ವಿದ್ಯಾರ್ಥಿಗಳಿಗೆ ರಕ್ಷಣೆ ನೀಡಬೇಕಿದ್ದ ಪೋಲಿಸರೇ ಕಪಾಳಕ್ಕೆ ಹೊಡೆದ್ದು ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿದ್ದಾರೆ: ಕರವೇ

ಬೆಳಗಾವಿಗೆ ಮಹಾ ನಾಯಕರ ಭೇಟಿಯೊಂದಿಗೆ ಕನ್ನಡ ವಿರೋಧಿ ಚಟುವಟಿಕೆಗಳು ಗರಿಗೆದರುತ್ತಿರುವ ಬೆನ್ನಲ್ಲೇ ಖಾಸಗಿ ಕಾಲೇಜಿನ ಸಮಾರಂಭದಲ್ಲಿ ಕನ್ನಡ ಬಾವುಟ ಪ್ರದರ್ಶಿಸಿದ ವಿದ್ಯಾರ್ಥಿಯನ್ನು ಥಳಿಸಿದ ಮತ್ತು ಹಲ್ಲೆಗೊಳಗಾದ ವಿದ್ಯಾರ್ಥಿಯ ಮೇಲೇ ಹಿರಿಯ ಪೊಲೀಸ್ ಅಧಿಕಾರಿಗಳು ದಬ್ಬಾಳಿಕೆ ನಡೆಸಿದ್ದಾರೆ ಎನ್ನುವ ಆರೋಪ‌ ಚರ್ಚೆಗೆ ಗ್ರಾಸವಾಗಿದೆ . ಬುಧವಾರದಂದು ನಗರದ ಖಾಸಗಿ ಕಾಲೇಜಿನಲ್ಲಿ ನಡೆಯುತ್ತಿದ್ದ ಸಮಾರಂಭದಲ್ಲಿ ಹಾಡಿಗೆ ಕುಣಿಯುತ್ತಿದ್ದ ವಿದ್ಯಾರ್ಥಿಯೊಬ್ಬ ಕನ್ನಡ ಬಾವುಟ ಹಿಡಿದು ಕುಣಿದ ಕಾರಣಕ್ಕಾಗಿ ಸಹಪಾಠಿಗಳಿಂದ ಹಲ್ಲೆಗೊಳಗಾಗಿದ್ದಾನೆ. ಈ ಸಂದರ್ಭದಲ್ಲಿ ಯುವಕರ …

Read More »

ಕೆಎಸ್‌ಆರ್‌ಟಿಸಿ: 1,013 ನೌಕರರ ವರ್ಗಾವಣೆ

ಬೆಂಗಳೂರು: ಅಂತರ್‌ ನಿಗಮ ವರ್ಗಾವಣೆಗೆ ಕೋರಿ ಅರ್ಜಿ ಸಲ್ಲಿಸಿದ್ದ 4,665 ಸಾರಿಗೆ ನಿಗಮಗಳ ನೌಕರರ ಪೈಕಿ 1,013 ನೌಕರರನ್ನು ವರ್ಗಾವಣೆ ಮಾಡಿ ಬುಧವಾರ ಕೆಎಸ್‌ಆರ್‌ಟಿಸಿ ಆದೇಶ ಹೊರಡಿಸಿದೆ. ದರ್ಜೆ-3 ಮೇಲ್ವಿಚಾರಕೇತರ ಮತ್ತು ದರ್ಜೆ 4ರ ನೌಕರರ ಅಂತರ ನಿಗಮ ವರ್ಗಾವಣೆ ಮಾಡಲಾಗಿದ್ದು, ಆದೇಶ ಪತ್ರಗಳನ್ನು ನಿಗಮದ ವೆಬ್‌ಸೈಟ್‌ https://ksrtc.karnataka.gov.in ನಲ್ಲಿ ಪ್ರಕಟಿಸಲಾಗಿದೆ. ಸೇವಾ ಜ್ಯೇಷ್ಠತೆ ಮತ್ತು ಹಾಲಿ ಹು¨ªೆಗಳಿಗೆ ಅನುಗುಣವಾಗಿ ಕೌನ್ಸೆಲಿಂಗ್‌ ಮೂಲಕ ವಿಭಾಗಗಳಿಗೆ ಹಂಚಿಕೆ ಮಾಡಲಾಗುವುದು. ಈ ಸಂಬಂಧದ ಕೌನ್ಸೆಲಿಂಗ್‌ …

Read More »

ಲೋಕಾಯುಕ್ತ ಪೊಲೀಸ್‌ ವಿಭಾಗಕ್ಕೆ ಹೆಚ್ಚುವರಿಯಾಗಿ 258 ಹುದ್ದೆ

ಬೆಂಗಳೂರು: ಲೋಕಾಯುಕ್ತ ಪೊಲೀಸ್‌ ವಿಭಾಗಕ್ಕೆ ಹೆಚ್ಚುವರಿಯಾಗಿ 258 ಹುದ್ದೆ ಸೃಜಿಸಲು ಸರಕಾರ ಮುಂದಾಗಿದೆ. ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ)ಕ್ಕೆ ಮಂಜೂ ರಾಗಿದ್ದ 524ರ ಪೈಕಿ 266 ಸಿಬಂದಿಯನ್ನು ಲೋಕಾಯುಕ್ತ ಸಂಸ್ಥೆಗೆ ವರ್ಗಾಯಿಸಲು ಪ್ರಸ್ತಾವಿಸಲಾಗಿದೆ. ವರ್ಗಾವಣೆ ಬಳಿಕ ಬಾಕಿ ಉಳಿಯುವ 258 ಸಿಬಂದಿ ಪೈಕಿ ಗ್ರೂಪ್‌-ಎ ವೃಂದದ ಅಧಿಕಾರಿಗಳನ್ನು ಸರಕಾರದ ವಶಕ್ಕೆ ಹಾಗೂ ಗ್ರೂಪ್‌-ಬಿ, ಗ್ರೂಪ್‌-ಸಿ ವೃಂದದ ಅಧಿಕಾರಿ- ಸಿಬಂದಿಯನ್ನು ಪೊಲೀಸ್‌ ಇಲಾಖೆಯ ವಶಕ್ಕೆ ಮುಂದಿನ ಮರು ಸ್ಥಳ ನಿಯುಕ್ತಿ ಆದೇಶ ನೀಡುವ …

Read More »

ಸಿದ್ದು-ಡಿಕೆಶಿ ಮಾತ್ರ ಅಲ್ಲ ಇನ್ನೂ 25 ಜನ ಸಿಎಂ ಸ್ಥಾನಕ್ಕೆ ಅರ್ಹ: ಎಂ.ಬಿ.ಪಾಟೀಲ್

ವಿಜಯಪುರ: ಸ್ವಂತ ಬಲದ ಮೇಲೆ ಅಧಿಕಾರ ಹಿಡಿಯುವ ಶಕ್ತಿ ಬಂದ ಮೇಲೆ ಮುಖ್ಯಮಂತ್ರಿ ಯಾರಾಗಬೇಕು ಎಂದು ಶಾಸಕಾಂಗ ಸಭೆ ಹಾಗೂ ಹೈಕಮಾಂಡ್‌ ನಿರ್ಧರಿಸಲಿದೆ. ಕಾಂಗ್ರೆಸ್‌ನಲ್ಲಿ ಡಿ.ಕೆ.ಶಿವಕುಮಾರ, ಸಿದ್ದರಾಮಯ್ಯ ಅಷ್ಟೇ ಅಲ್ಲ ಆರ್‌.ವಿ.ದೇಶಪಾಂಡೆ, ಎಚ್‌.ಕೆ.ಪಾಟೀಲ, ಕೆ.ಎಚ್‌.ಮುನಿಯಪ್ಪ, ಪರಮೇಶ್ವರ, ರಾಮಲಿಂಗಾರೆಡ್ಡಿ ಸೇರಿದಂತೆ 25ಕ್ಕೂ ಹೆಚ್ಚು ಹಿರಿಯರು ಸಿಎಂ ಸ್ಥಾನಕ್ಕೇರುವ ಅರ್ಹತೆ ಹೊಂದಿದ್ದಾರೆ ಎಂದು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ.ಪಾಟೀಲ ಹೇಳಿದರು.   ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ರಾಜ್ಯದಲ್ಲಿ ಸರ್ಕಾರ ನಡೆಸಲು 113 ಶಾಸಕರ ಬಲ …

Read More »

ದೇವಳದ ಬಳಿ ಧರ್ಮ ಸಂಘರ್ಷ; ಹನುಮ ಜನ್ಮಭೂಮಿಯಲ್ಲೂ ಬಿಗುವಿನ ವಾತಾವರಣ..

ಕೊಪ್ಪಳ: ದೇವಸ್ಥಾನಗಳ ಬಳಿ ವ್ಯಾಪಾರ ವಹಿವಾಟಿಗೆ ಸಂಬಂಧಿಸಿದಂತೆ ಉಂಟಾಗಿರುವ ಧರ್ಮ ಸಂಘರ್ಷ ರಾಜ್ಯದ ಹಲವೆಡೆಗೆ ವ್ಯಾಪಿಸಿದ್ದು, ಅದು ಹನುನ ಜನ್ಮಭೂಮಿಗೂ ತಲುಪಿ ಅಲ್ಲಿ ಬಿಗುವಿನ ವಾತಾವರಣ ಉಂಟಾಗಿದೆ. ನಿನ್ನೆಯಷ್ಟೇ ರಾಜಧಾನಿ ಬೆಂಗಳೂರಿನಲ್ಲಿ ಸದ್ದು ಮಾಡಿದ್ದ ಈ ಧರ್ಮ ಸಂಘರ್ಷ ಇಂದು ಅಂಜನಾದ್ರಿ ಬೆಟ್ಟಕ್ಕೂ ವ್ಯಾಪಿಸಿದೆ.   ಹಿಂದೂ ದೇವಸ್ಥಾನಗಳ ಆವರಣದಲ್ಲಿ ಅನ್ಯಧರ್ಮೀಯರಿಗೆ ವ್ಯಾಪಾರ-ವಹಿವಾಟು ನಡೆಸಲು ಅವಕಾಶ ಕೊಡಬಾರದು ಎಂದು ಹಿಂದೂ ಸಂಘಟನೆಗಳು ಅಭಿಯಾನ ನಡೆಸುತ್ತಿದ್ದ ನಿನ್ನೆ ಅದರ ವಿರುದ್ಧ ಬೆಂಗಳೂರಿನಲ್ಲಿ ಬಿಜೆಪಿ …

Read More »

ವೋಟರ್ ಐಡಿ ಪರಿಶೀಲನೆ, ಖಾಸಗಿ ವ್ಯಕ್ತಿ ನಡೆ ಮೇಲೆ ಅನುಮಾನ; ಕಾಂಗ್ರೆಸ್ ಮುಖಂಡರಿಂದ ತಗಾದೆ

ವಿಜಯಪುರ: ರಾಜ್ಯಾದ್ಯಂತ ವೋಟರ್ ಐಡಿ ವಿವಾದ ಭುಗಿಲೆದ್ದಿರುವಾಗಲೇ ವಿಜಯಪುರದಲ್ಲಿ ವೋಟರ್ ಐಡಿ ಪರಿಷ್ಕರಣೆಗೆ ಬಂದಿದ್ದ ಖಾಸಗಿ ವ್ಯಕ್ತಿಯನ್ನು ಕಾಂಗ್ರೆಸ್ ಮುಖಂಡರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಇಲ್ಲಿನ ಕಾಂಗ್ರೆಸ್ ಕಚೇರಿ ಬಳಿ ವೋಟರ್ ಐಡಿ ಪರಿಷ್ಕರಣೆ ನಡೆಸುತ್ತಿದ್ದ ಮಂಜುನಾಥ ಪೂಜಾರ ಎಂಬಾತನನ್ನು ವಶಕ್ಕೆ ಪಡೆದ ಕಾಂಗ್ರೆಸ್ ಮುಖಂಡ ಅಬ್ದುಲ್‌ಹಮೀದ್ ಮುಶ್ರೀಫ್ ಆತನ ಬಗ್ಗೆ ಮಾಹಿತಿ ಕಲೆ ಹಾಕಿದ್ದಾರೆ. ಆದರೆ, ಮಂಜುನಾಥ ತಾನು ಯಾವುದೇ ಸರ್ಕಾರಿ ಅಥವಾ ಅರೆ ಸರ್ಕಾರಿ ಸಂಸ್ಥೆಗಳ ನಿಯೋಜಿತ …

Read More »

ಅಶ್ವಥ್​ ನಾರಾಯಣರನ್ನು ಭಾವಿ ಸಿಎಂ ಎಂದು ಬಿಂಬಿಸಿದ ಅರುಣ ಶಹಾಪುರ

ಧಾರವಾಡ: ಚುನಾವಣೆ ಇನ್ನೇನು ಹತ್ತಿರದಲ್ಲಿ ಇರುವಾಗ ಕರ್ನಾಟಕದ ರಾಜಕೀಯ ಪಕ್ಷಗಳಲ್ಲಿ ಮುಂದಿನ ಸಿಎಂ ಅಭ್ಯರ್ಥಿ ಯಾರು ಎನ್ನುವ ಬಗ್ಗೆ ಚರ್ಚೆ ನಡೆಯುತ್ತಿದೆ. ಅನೇಕರು ಮುಖ್ಯಮಂತ್ರಿ ಆಕಾಂಕ್ಷಿಗಳೇ ಆಗಿರುತ್ತಾರೆ. ಧಾರವಾಡದಲ್ಲಿ ನಡೆದ ಸಮಾವೇಶ ಒಂದರಲ್ಲಿ ಭಾಷಣ ಮಾಡುವಾಗ ವಿಧಾನ ಪರಿಷದ್​ ಸದಸ್ಯ ಅರುಣ ಶಹಾಪುರ ‘ಕರ್ನಾಟಕದ ಭವಿಷ್ಯ ಅಶ್ವಥ್ ನಾರಾಯಣ ಕೈಯಲ್ಲಿದೆ. ಇವರ ನೇತೃತ್ವದಲ್ಲಿ ಕರ್ನಾಟಕ ಸುಭಿಕ್ಷ ಆಗುತ್ತದೆ. ಹನ್ನೊಂದು ಹೆಜ್ಜೆ ಆಗಿದೆ ಇನ್ನೊಂದೆ ಹೆಜ್ಜೆ ಇದೆ’ ಎಂದು ಧಾರವಾಡದಲ್ಲಿ ವಿಧಾನ ಪರಿಷತ್​ …

Read More »

ಮನೆಗೆ ಹೋಗಲು ಬಸ್ ಹತ್ತಿದ ಮಹಿಳೆ ಮೇಲೆ ಅತ್ಯಾಚಾರ

ಬೆಂಗಳೂರು: ಇತ್ತೀಚೆಗೆ ಲೈಂಗಿಕ ಕಿರುಕುಳ, ಅತ್ಯಾಚಾರದಂತಹ ಪ್ರಕರಣಗಳು ಹೆಚ್ಚಾಗುತ್ತಿದ್ದು ಈಗ ನಾಗರಭಾವಿಯ ಬಳಿ ನಡೆದ ಅತ್ಯಾಚಾರ ಪ್ರಕರಣ ಬೆಳಕಿಗೆ ಬಂದಿದೆ. ಸಂತ್ರಸ್ತ ಮಹಿಳೆ, ನಿನ್ನೆ (ಮಂಗಳವಾರ) ಸಂಜೆ ಸುಮಾರು 5.30ರ ಹೊತ್ತಿಗೆ ನಾಯಂಡಹಳ್ಳಿ ಜಂಕ್ಷನ್ ಬಳಿ ಬಸ್ ಹತ್ತಿದ್ದರು. ಬಸ್​ನಲ್ಲಿ ಯಾರೂ ಇರಲಿಲ್ಲ. ಆದರೆ ಚಾಲಕ ಪರಿಚಿತ ಆಗಿದ್ದ ಕಾರಣ ಮಹಿಳೆ ಬಸ್​ ಹತ್ತಿದ್ದರು. ಈ ವೇಳೆ ಬಸ್‌ಅನ್ನು ನಾಗರಭಾವಿ ಸರ್ವೀಸ್ ರಸ್ತೆಗೆ ಕಿರಾತಕ ತೆಗೆದುಕೊಂಡು ಹೋಗಿದ್ದಾನೆ. ಕೈಲಾಸಗಿರಿ ಬಳಿ ಇರುವ …

Read More »