Breaking News

Daily Archives: ನವೆಂಬರ್ 23, 2022

ಅಂತರ್​ ರಾಜ್ಯ ವಂಚಕರನ್ನು ಬಂಧಿಸಿದ ಕರ್ನಾಟಕ ಪೊಲೀಸರು.

ಬೆಂಗಳೂರು: ಹೋಲ್‌ಸೇಲ್ ದರದಲ್ಲಿ ಕೋಟ್ಯಂತರ ರೂ. ಮೌಲ್ಯದ ಬಟ್ಟೆಗಳನ್ನು ಖರೀದಿಸಿ ಪೋಸ್ಟ್ ಡೇಟೆಡ್ ಚೆಕ್ ನೀಡಿ ವಂಚಿಸುತ್ತಿದ್ದ ಇಬ್ಬರು ಅಂತರಾಜ್ಯ ವಂಚಕರನ್ನು ಜಯನಗರ ಪೊಲೀಸರು ಬಂಧಿಸಿದ್ದಾರೆ. ಉತ್ತರ ಭಾರತ ಮೂಲದ ಪದಮ್ ಸಿಂಗ್, ವಿಮಲ್ ಬಂಧಿತರು. ಆರೋಪಿಗಳಿಂದ ೩೦ ಲಕ್ಷ ರೂ. ಮೌಲ್ಯದ ಬಟ್ಟೆಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ೨೦೨೧ ಮಾರ್ಚ್ ೬ ರಂದು ಜಯನಗರದ ಐಕಾನ್ ಫ್ಯಾಷನ್ ಗಾರ್ಮೆಂಟ್ಸ್‌ಗೆ ತೆರಳಿ ತಮ್ಮನ್ನು ಸಿದ್ಧಿ ವಿನಾಯಕ ಟ್ರೇಡರ್ಸ್ ಮಾಲೀಕರೆಂದು ಪರಿಚಯಿಸಿಕೊಂಡಿದ್ದರು. …

Read More »

ಲೋಕಾಯುಕ್ತ ಬಲೆಗೆ ಬಿದ್ದ ಗೃಹರಕ್ಷಕ; ನಿವೃತ್ತ ಇನ್‌ಸ್ಪೆಕ್ಟರ್​​​ಗೆ ವೈದ್ಯಕೀಯ ವೆಚ್ಚ ಕೊಡಿಸಲು ಲಂಚ ಪಡೆಯುವಾಗ ಬಂಧನ

ಬೆಂಗಳೂರು: ನಿವೃತ್ತ ಇನ್‌ಸ್ಪೆಕ್ಟರ್ ಅವರ ವೈದ್ಯಕೀಯ ಬಿಲ್ ಕೊಡಿಸುವುದಾಗಿ ನಂಬಿಸಿ 20 ಸಾವಿರ ರೂ. ಲಂಚ ಪಡೆಯುತ್ತಿದ್ದ ಗೃಹ ರಕ್ಷಕನನ್ನು ಲೋಕಾಯುಕ್ತ ಪೊಲೀಸರು ರೆಡ್‌ಹ್ಯಾಂಡೆಡ್​ ಆಗಿ ಬಂಧಿಸಿದ್ದಾರೆ. ಗೃಹ ಇಲಾಖೆ ಸಚಿವಾಲಯದಲ್ಲಿ ನಿಯೋಜಿತ ಗೃಹ ರಕ್ಷಕ ಸತೀಶ್ ಬಂಧಿತ. ನಿವೃತ್ತ ಇನ್‌ಸ್ಪೆಕ್ಟರ್ ಪಿ.ಎನ್. ಗಣೇಶ್ ಅವರು ತಮ್ಮ ವೈದ್ಯಕೀಯ ವೆಚ್ಚದ ಮರುಪಾವತಿಗಾಗಿ ಗೃಹ ಇಲಾಖೆಗೆ ಅರ್ಜಿ ಸಲ್ಲಿಸಿದ್ದರು. ವಿಷಯ ತಿಳಿದ ಗೃಹ ರಕ್ಷಕ ಸತೀಶ್, ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಮಾತನಾಡಿ ಬಿಲ್ ಮೊತ್ತ …

Read More »

ಲೈಂಗಿಕ ದೌರ್ಜನ್ಯ ಎಸಗಿದ್ದವನಿಗೆ 40 ವರ್ಷ ಕಠಿಣ ಶಿಕ್ಷೆ

ಮೈಸೂರು: ನಗರದಲ್ಲಿರುವ ಚಲನಚಿತ್ರ ನಟರೊಬ್ಬರ ಫಾರ್ಮ್​ಹೌಸ್​ನಲ್ಲಿ ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ್ದ ಬಿಹಾರ ಮೂಲದವನಿಗೆ ನಗರದ ಪೋಕ್ಸೋ ವಿಶೇಷ ನ್ಯಾಯಾಲಯದ ನ್ಯಾಯಾಧೀಶರಾದ ಶೈಮಾ ಖಮ್ರೋಜ್​ ಅವರು 40 ವರ್ಷಗಳ ಕಠಿಣ ಶಿಕ್ಷೆ ವಿಧಿಸಿ ಐತಿಹಾಸಿಕ ತೀರ್ಪು ನೀಡಿದ್ದಾರೆ.   ಬಿಹಾರ ಮೂಲದ ನಾಜೀಮ್​ ಶಿಕ್ಷೆಗೆ ಗುರಿಯಾದ ಅಪರಾಧಿ. ಶಿಕ್ಷೆ ಜತೆಗೆ 51 ಸಾವಿರ ರೂ. ದಂಡ ವಿಧಿಸಿದ್ದಾರೆ. ತಿ.ನರಸೀಪುರ ರಸ್ತೆಯ ಫಾರ್ಮ್​ಹೌಸ್​ನಲ್ಲಿ ನಾಜೀಮ್​ ಕುದುರೆಗಳಿಗೆ ಲಾಳ ಕಟ್ಟುವ ಕೆಲಸ ಮಾಡಿಕೊಂಡಿದ್ದ. ಕುಟುಂಬದೊಂದಿಗೆ …

Read More »

ಶಿಕ್ಷಕರ ಮಕ್ಕಳಿಗೆ ವಿದ್ಯಾರ್ಥಿವೇತನ: ಅರ್ಜಿ ಸಲ್ಲಿಸಲು ಜ.20 ಕೊನೇ ದಿನ

ಬೆಂಗಳೂರು: ರಾಜ್ಯದಲ್ಲಿ 2022-23ನೇ ಸಾಲಿನಲ್ಲಿ ವ್ಯಾಸಂಗ ಮಾಡುತ್ತಿರುವ ಶಿಕ್ಷಕರ ಮಕ್ಕಳಿಗೆ ‘ಪ್ರತಿಭಾವಂತ ವಿದ್ಯಾರ್ಥಿ ವೇತನ’ ಮಂಜೂರು ಮಾಡಲು ಆನ್​ಲೈನ್​ ಮೂಲಕ ಅರ್ಜಿ ಆಹ್ವಾನಿಸಿದೆ. ಶಿಕ್ಷಕರ ಕಲ್ಯಾಣ ನಿಧಿ ವತಿಯಿಂದ ವಿದ್ಯಾರ್ಥಿವೇತನ ನೀಡಲಾಗುತ್ತಿದೆ. ಎಸ್ಸೆಸ್ಸೆಲ್ಸಿಯಿಂದ ಸ್ನಾತಕೋತ್ತರ ಪದವಿವರೆಗೆ ಅತಿ ಹೆಚ್ಚು ಅಂಕ ಪಡೆದಿರುವ ಶಿಕ್ಷಕರ, ಉಪನ್ಯಾಸಕರ/ಪ್ರಾಂಶುಪಾಲರ, ನಿವೃತ್ತ ಶಿಕ್ಷಕರ ಮಕ್ಕಳಿಗೆ ವಿದ್ಯಾರ್ಥಿವೇತನ ನೀಡಲಾಗುತ್ತಿದೆ. 2021-22ನೇ ಸಾಲಿನಲ್ಲಿ ವ್ಯಾಸಂಗ ಮಾಡಿರುವ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ. ಸಿಬಿಎಸ್​ಇ/ ಐಸಿಎಸ್​ಇ ವ್ಯಾಸಂಗ ಮಾಡುತ್ತಿರುವ ಮಕ್ಕಳು ಅರ್ಹರಾಗಿರುವುದಿಲ್ಲ. …

Read More »