ಕಲಬುರಗಿ: ಬಿಜೆಪಿ ಮುಖಂಡ ಮಣಿಕಂಠ ರಾಠೋಡ್ರನ್ನು ಹೈದ್ರಾಬಾದ್ನಲ್ಲಿ ಕಲಬುರಗಿಯ ಬ್ರಹ್ಮಪುರ ಪೊಲೀಸರು ಬಂಧಿಸಿದ್ದು, ನಿನ್ನೆ(ಭಾನುವಾರ) ತಡ ರಾತ್ರಿಯೇ ಕಲಬುರಗಿಗೆ ಕರೆತಂದಿದ್ದಾರೆ. ಚಿತ್ತಾಪುರ ಶಾಸಕ ಪ್ರಿಯಾಂಕ್ ಖರ್ಗೆ ಅವರನ್ನು ಶೂಟ್ ಮಾಡುವುದಾಗಿ ಮಣಿಕಂಠ ರಾಠೋಡ್ ಹೇಳಿಕೆ ನೀಡಿದ್ದರು. ಈ ಕುರಿತು ಬ್ರಹ್ಮಪುರ ಪೊಲೀಸ್ ಠಾಣೆಯಲ್ಲಿ ಐಪಿಸಿ 506 ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು. ಬಿಜೆಪಿ ಮುಖಂಡನ ಬಂಧನಕ್ಕೆ ಆಗ್ರಹಿಸಿ ಕಲಬುರಗಿ ಎಸ್ಪಿ ಕಚೇರಿ ಮುಂಭಾಗ ಕಾಂಗ್ರೆಸ್ ಬೃಹತ್ ಪ್ರತಿಭಟನೆ ಕೂಡ ನಡೆಸಿತ್ತು. ಇಂದು(ಸೋಮವಾರ) ಕಲಬುರಗಿಗೆ …
Read More »Daily Archives: ನವೆಂಬರ್ 14, 2022
ಯಂತ್ರಕ್ಕೆ ಸೀರೆ ಸಿಲುಕಿ ಪ್ರಾಣ ಕಳ್ಕೊಂಡ ಮಹಿಳೆ; ಗೋವಿನಜೋಳ ರಾಶಿ ಮಷಿನ್ಗೆ ಸಿಕ್ಕಿ ದೇಹ ಛಿದ್ರ..
ಬಾಗಲಕೋಟೆ: ಕೃಷಿ ಸಂಬಂಧಿತ ಚಟುವಟಿಕೆಗಳ ಸಂದರ್ಭ ಸಣ್ಣ ಎಡವಟ್ಟಿನಿಂದಾಗಿ ಅಂಥ ಕೆಲಸಗಾರರು ಪ್ರಾಣ ಕಳೆದುಕೊಂಡ ಪ್ರಕರಣಗಳು ಸಾಕಷ್ಟು ಸಂಭವಿಸಿವೆ. ಇಂದು ಅಂಥದ್ದೇ ಇನ್ನೊಂದು ಪ್ರಕರಣ ಸಂಭವಿಸಿದ್ದು, ಕೃಷಿ ಚಟುವಟಿಕೆ ವೇಳೆ ಮಹಿಳೆಯೊಬ್ಬರು ಸಾವಿಗೀಡಾಗಿದ್ದಾರೆ. ಬಾಗಲಕೋಟೆ ತಾಲೂಕಿನ ಶಿರೂರು ಗ್ರಾಮದಲ್ಲಿ ಈ ಪ್ರಕರಣ ನಡೆದಿದೆ. ಈ ದುರಂತದಲ್ಲಿ ರೇಣುಕಾ ಮಾದರ (45) ಎಂಬಾಕೆ ಸಾವಿಗೀಡಾಗಿದ್ದಾರೆ. ಈಕೆ ಕೂಲಿ ಕೆಲಸಕ್ಕಾಗಿ ಬೇರೆ ಕಡೆಯಿಂದ ಬಂದಿದ್ದರು. ಕೆಲಸದ ವೇಳೆ ಇವರು ಗೋವಿನಜೋಳ ರಾಶಿ …
Read More »ಸಿದ್ದರಾಮಯ್ಯಗೆ ಸಡ್ಡು ಹೊಡೆದ ವರ್ತೂರು ಪ್ರಕಾಶ್
ವೇಮಗಲ್/ಕೋಲಾರ: ಕೋಲಾರದಲ್ಲಿ ಬಿಜೆಪಿಯಿಂದ ಸ್ಪರ್ಧಿಸುವ ನನ್ನ ವಿರುದ್ಧ ಸಿದ್ದರಾಮಯ್ಯ ಕಣಕ್ಕಿಳಿಯುವ ದುಸ್ಸಾಹಸ ಮಾಡುವುದಿಲ್ಲ. ನಾನೂ ಕುರುಬ ಸಮಾಜದವನೇ. ಇಲ್ಲಿಗೆ ಬಂದರೆ ಇಡೀ ಕುರುಬ ಸಮಾಜ ಅವರಿಗೆ ಛೀಮಾರಿ ಹಾಕುತ್ತದೆ ಎಂದು ಮಾಜಿ ಸಚಿವ ವರ್ತೂರು ಪ್ರಕಾಶ್ ಎಚ್ಚರಿಸಿದರು. ಸಿದ್ದರಾಮಯ್ಯ ಕೋಲಾರ ಭೇಟಿ ಸಂದರ್ಭದಲ್ಲೇ ಮಾಜಿ ಸಿಎಂ ಸಂಚರಿಸುವ ಮಾರ್ಗದಲ್ಲೇ ವೇಮಗಲ್ ಮೂಲಕ ಸೀತಿ -ಮದ್ದೇರಿ-ರಾಜಕಲ್ಲಹಳ್ಳಿವರೆಗೂ ಬೃಹತ್ ಬೈಕ್ ರ್‍ಯಾಲಿ ಮೂಲಕ ಶಕ್ತಿ ಪ್ರದರ್ಶನ ನಡೆಸಿ, ಸಿದ್ದರಾಮಯ್ಯ ಅವರಿಗೆ ಸಡ್ಡು ಹೊಡೆದು …
Read More »ಕುರಿಗಾಹಿಗಳಿಗೆ ಸಿಹಿ ಸುದ್ದಿ: ಅಮೃತ ಸ್ವಾಭಿಮಾನಿ ಕುರಿಗಾಹಿ ಯೋಜನೆ ಜಾರಿ
ಬೆಂಗಳೂರು: ಮುಂದಿನ ಚುನಾವಣೆಯಲ್ಲಿ 150 ಸ್ಥಾನದ ಗುರಿಯೊಂದಿಗೆ ಮತ್ತೊಮ್ಮೆ ಅಧಿಕಾರಕ್ಕೇರುವ ನಿಟ್ಟಿನಲ್ಲಿ ರಣತಂತ್ರ ರೂಪಿಸಿರುವ ಬಿಜೆಪಿ ಸರ್ಕಾರ ಕುರಿಗಾಹಿಗಳನ್ನು ವಿಶ್ವಾಸಕ್ಕೆ ಪಡೆಯಲು ಮುಂದಾಗಿದೆ. ಕುರಿಗಾಹಿಗಳಿಗೆ ಸ್ವಾಭಿಮಾನದ ಬದುಕು ಕಟ್ಟಿಕೊಟ್ಟು ಆರ್ಥಿಕವಾಗಿ ಬಲವರ್ಧನೆ ಮಾಡುವ ಅಮೃತ ಸ್ವಾಭಿಮಾನಿ ಕುರಿಗಾಹಿ ಯೋಜನೆ ಜಾರಿಗೊಳಿಸಲಾಗಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕುರಿದೊಡ್ಡಿಗೆ ಶೆಡ್ ನಿರ್ಮಿಸಿಕೊಳ್ಳಲು ಆರ್ಥಿಕ ನೆರವು ನೀಡುವುದಾಗಿ ಭರವಸೆ ನೀಡಿದ್ದಾರೆ. ಕುರಿ ಮಾಂಸಕ್ಕೆ ಬೇಡಿಕೆ ಹೆಚ್ಚಾಗಿದೆ. ಮಾರುಕಟ್ಟೆ ಮೇಲಿನ ಮಾಫಿಯಾದ ಹಿಡಿತ ತಪ್ಪಿಸಲು ಕುರಿ …
Read More »ತಂದೆಯ ಪ್ರಾಣ ಉಳಿಸಿದ್ದ ಮಗಳಿಗೆ ಶೌರ್ಯ ಪ್ರಶಸ್ತಿ..
ಕಾರವಾರ: ಆಕೆಗೆ ಕೇವಲ 11 ವರ್ಷ ಮಾತ್ರ. ಆದರೆ ಆಕೆ ಮಾಡಿರುವ ಕೆಲಸ ಇಡೀ ಜಗತ್ತು ಮೆಚ್ಚಿಸುವಂತದ್ದು. ತಂದೆಯ ಜೀವವನ್ನು ಕಾಪಾಡುವ ಮೂಲಕ ಅನೇಕರಿಗೆ ಮಾದರಿಯಾಗಿದ್ದಾಳೆ. ಅಂದ ಹಾಗೆ ಇವಳ ಹೆಸರು ಕೌಸಲ್ಯ. ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಕಾನಸೂರಿನವಳು. ಇದೀಗ ರಾಜ್ಯ ಸಮಾಜ ಕಲ್ಯಾಣ ಇಲಾಖೆಯಿಂದ ಕೊಡುವ ಶೌರ್ಯ ಪ್ರಶಸ್ತಿಗೆ ಆಯ್ಕೆಯಾಗಿದ್ದಾಳೆ. ಹೌದು, ಈಕೆಯ ತಂದೆ ಕಾರ್ಯಕ್ರಮದಲ್ಲಿ ಅಡುಗೆ ಮಾಡುವವರು. 2021ರ ಮಾರ್ಚ್ 15ರಂದು ಮಾವಿನಗುಂಡಿ ಸಮೀಪದ ಹಳ್ಳಿಯೊಂದಕ್ಕೆ …
Read More »ಅಸಂಘಟಿತ ಕಾರ್ಮಿಕರಿಗೆ ಗುಡ್ ನ್ಯೂಸ್: ವಿವಿಧ ಸೌಲಭ್ಯ ಯೋಜನೆಗಳ ಜಾರಿಗೆ ಹೊಸ ನೀತಿ
ಬೆಂಗಳೂರು: ಅಸಂಘಟಿತ ಕಾರ್ಮಿಕರಿಗೆ ವಿವಿಧ ಸೌಲಭ್ಯ ಕಲ್ಪಿಸಲು ಯೋಜನೆಗಳ ಜಾರಿಗೆ ಹೊಸ ನೀತಿ ಜಾರಿಗೆ ತರಲಾಗುವುದು. ಕನಿಷ್ಠ ಸೌಲಭ್ಯಗಳನ್ನು ನೀಡದೆ ಅಸಂಘಟಿತ ಕಾರ್ಮಿಕರನ್ನು ದುಡಿಸಿಕೊಳ್ಳಲಾಗುತ್ತಿದೆ. ಹೀಗಾಗಿ ಸಂಕಷ್ಟದಲ್ಲಿರುವ ಅಸಂಘಟಿತ ಕಾರ್ಮಿಕರಿಗೆ ವಿವಿಧ ಯೋಜನೆಗಳ ಸೌಲಭ್ಯ ದೊರಕಿಸಿಕೊಡಲು ಹೊಸ ನೀತಿ ಜಾರಿಗೊಳಿಸಲಾಗುವುದು ಎಂದು ಹೇಳಲಾಗಿದೆ. ರೆಡಿಮೇಡ್ ಗಾರ್ಮೆಂಟ್ಸ್, ಆಪ್ ಆಧಾರಿತ ವಾಹನಗಳ ಚಾಲಕರು, ಆಹಾರ ಹಾಗೂ ಇತರೆ ವಸ್ತುಗಳ ಡೆಲಿವರಿ ನೀಡುವವರು, ನಿರ್ಮಾಣ ಕ್ಷೇತ್ರ ಮೊದಲಾದ ವಲಯಗಳ ಕೆಲಸ ಮಾಡುತ್ತಿರುವ ಅಸಂಘಟಿತ …
Read More »