Breaking News

Daily Archives: ನವೆಂಬರ್ 13, 2022

ಅಕ್ರಮ ಗಾಂಜಾ ಗಿಡ ಬೆಳೆಸಿದ ಆರೋಪಿ ಅಂದರ್

ಕಿತ್ತೂರು ಪೊಲೀಸ್ ಸಬ್‌ಇನ್ಸಪೇಕ್ಟರ್ ಎಚ್‌ಎಲ್ ಧರ್ಮಟ್ಟಿ, ಬೈಲಹೊಂಗಲ ಡಿಎಸ್‌ಪಿ ಶಿವಾನಂದ ಕಟಗಿ ಮಾರ್ಗದರ್ಶನದಲ್ಲಿ ಖಾನಾಪೂರ ಸಿಬ್ಬಂದಿಗಳೊಂದಿಗೆ ದಾಳಿ ನಡೆಸಿ, ಶಿವಾನಂದ ಶಿವನೆಪ್ಪ ಕಾದ್ರೋಳ್ಳಿಯನ್ನು ಬಂಧಿಸಿ ಸುಮಾರು ೬೦ ಸಾವಿರ ರೂಪಾಯಿ ಮೌಲ್ಯದ ೬ ಕಿಲೋ ಗಾಂಜಾ ಗಿಡಗಳನ್ನು ಮತ್ತು ಗಾಂಜಾ ಮಾರಾಟದಿಂದ ಬಂದ ೧ ಸಾವಿರ ರೂಪಾಯಿ ನಗದನ್ನು ಜಪ್ತಿ ಮಾಡಲಾಗಿದೆ. ಆರೋಪಿಯನ್ನು ನ್ಯಾಯಾಲಯದಲ್ಲಿ ಹಾಜರುಪಡಿಸಲಾಗಿದೆ. ಕಿತ್ತೂರು ಮತ್ತು ಖಾನಾಪೂರ ಪೊಲೀಸರ ಕಾರ್ಯವನ್ನು ಬೆಳಗಾವಿ ಎಸ್ಪಿ ಸಂಜೀವ್ ಪಾಟೀಲ ಪ್ರಶಂಸಿಸಿದ್ದಾರೆ.

Read More »

ವೀರಶೈವ, ಲಿಂಗಾಯತ ಒಂದೇ ನಾಣ್ಯದ ಮುಖಗಳು: ಈಶ್ವರ ಖಂಡ್ರೆ

ತುಮಕೂರು: ಎಲ್ಲ ಧರ್ಮ, ಜಾತಿಗಳಿಗೂ ಪ್ರಪಂಚದ ಮೊದಲ ಸಂಸತ್ತು ಎನಿಸಿಕೊಂಡಿರುವ ಅನುಭವ ಮಂಟಪದಲ್ಲಿ ಅವಕಾಶ ಕಲ್ಪಿಸಿದವರು ಬಸವೇಶ್ವರರು. ಮೌಡ್ಯದಿಂದ ಸಮಾಜವನ್ನು ಹೊರತರಬೇಕೆಂಬುದು ಅವರ ಕನಸಾಗಿತ್ತು. ಇಂತಹ ಕನಸನ್ನು ನನಸು ಮಾಡಲು ನಾವೆಲ್ಲರೂ ಕಟಿಬದ್ಧರಾಗಬೇಕಿದೆ, ವೀರಶೈವ, ಲಿಂಗಾಯತ ಎಂಬುದು ಶರಣ ಸಮಾಜವೆಂಬ ಒಂದು ನಾಣ್ಯದ ಎರಡು ಮುಖಗಳು ಎಂದು ಅಖಿಲ ಭಾರತ ವೀರಶೈವ, ಲಿಂಗಾಯತ ಮಹಾಸಭಾ ರಾಜ್ಯ ಪ್ರಧಾನ ಕಾರ್ಯದರ್ಶಿ ಹಾಗೂ ಶಾಸಕ ಈಶ್ವರ ಖಂಡ್ರೆ ಹೇಳಿದರು.   ನಗರದ ಶ್ರೀ …

Read More »

ಮೋದಿ ರಾಜ್ಯಕ್ಕೆ ಬಂದಷ್ಟು ಜೆಡಿಎಸ್‌ಗೆ ಒಳಿತು: ಇಬ್ರಾಹಿಂ

ಕಲಬುರಗಿ: ಪ್ರಧಾನಿ ನರೇಂದ್ರ ಮೋದಿಯವರು ಎಷ್ಟು ಬಾರಿ ರಾಜ್ಯಕ್ಕೆ ಬಂದು ಹೋದರೂ ಅದರಿಂದ ಜೆಡಿಎಸ್‌ಗೆ ಒಳ್ಳೆಯದಾಗುತ್ತದೆ ಎಂದು ಜೆಡಿಎಸ್‌ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ ಹೇಳಿದರು. ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯನ್ನು ಒಳಗೊಳಗೆ ಕಟ್ಟಿ ಗಟ್ಟಿಗೊಳಿಸಬೇಕಾದ ಬೇಗುದಿಯಿಂದ ಪ್ರಧಾನಿಯವರು ರಾಜ್ಯಕ್ಕೆ ಪದೇಪದೆ ಭೇಟಿ ನೀಡುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.   ಕೆಂಪೇಗೌಡರ ಮೂರ್ತಿ ಪ್ರತಿಷ್ಠಾಪನೆ ಕಾರ್ಯಕ್ರಮ ಸಂಪೂರ್ಣ ಬಿಜೆಪಿಮಯವಾಗಿತ್ತು ಎಂದು ದೂರಿದ ಅವರು, ಜೆಡಿಎಸ್‌ನ ಸರ್ವೋಚ್ಚ ನಾಯಕರಾದ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ, ಮಾಜಿ ಮುಖ್ಯಮಂತ್ರಿ …

Read More »