Breaking News

Daily Archives: ನವೆಂಬರ್ 10, 2022

ಮಹೇಶ ಫೌಂಡೇಶನ್ ಕಾರ್ಯ ನಿಜಕ್ಕೂ ಶ್ಲಾಘನೀಯ: ಹೇಮೇಂದ್ರ ಪೋರವಾಲ್

ಇಂತಹ ಅತ್ಯುತ್ತಮ ಶಾಲಾ ಸೌಲಭ್ಯವನ್ನು ನಾನು ಎಲ್ಲಿಯೂ ನೋಡಿಲ್ಲ ಮತ್ತು ಇದಕ್ಕೆ ಪ್ರತಿಯಾಗಿ ಯಾವುದೇ ಶುಲ್ಕವನ್ನು ನಿರೀಕ್ಷಿಸದೆ. ಈ ಸೌಲಭ್ಯಗಳನ್ನು ಒದಗಿಸಲಾಗಿದೆ ಎಂದು ತಿಳಿದು ಹೆಮ್ಮೆಪಡುತ್ತೇನೆ ಮಹೇಶ ಫೌಂಡೇಶನ್ ಕಾರ್ಯ ನಿಜಕ್ಕೂ ಶ್ಲಾಘನೀಯ ಎಂದು ಬೆಳಗಾವಿಯ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ ಅಧ್ಯಕ್ಷ ಹೇಮೇಂದ್ರ ಪೋರವಾಲ್ ಅವರು ಹೇಳಿದರು. ಮಹೇಶ ಫೌಂಡೇಶನ್‍ನಲ್ಲಿ ಸೌಲಭ್ಯ ವಂಚಿತ ಮಕ್ಕಳಿಗಾಗಿ ನಿರ್ಮಿಸಲಾದ ಹೊಸ ಕೌಶಲ್ಯ ಆಧಾರಿತ ತರಗತಿಯ ಉದ್ಘಾಟನಾ ಸಮಾರಂಭ ಮತ್ತು ಬಿಸಿಸಿಐ ಆಡಳಿತ …

Read More »

ನಾಳೆ ನಮೋ ಆಗಮನ ಹಿನ್ನೆಲೆ ಸಿದ್ಧತೆ ಪರಿಶೀಲಿಸಿದ C.M

ನಾಡಪ್ರಭು ಕೆಂಪೇಗೌಡರ 108 ಅಡಿ ಎತ್ತರದ ಕಂಚಿನ ಪ್ರತಿಮೆ ಲೋಕಾರ್ಪಣೆ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರ ಸಾರ್ವಜನಿಕ ಸಭೆಗೆ ನಡೆದಿರುವ ಸಿದ್ಧತೆ ಮತ್ತು ವ್ಯವಸ್ಥೆಯನ್ನು ಸಿಎಂ ಬೊಮ್ಮಾಯಿ ಅವರು ಪರಿಶೀಲಿಸಿದರು. ಹೌದು ನಾಳೆ ಈ ಬೃಹತ್ ಕೆಂಪೇಗೌಡರ 108 ಅಡಿ ಎತ್ತರ ಕಂಚಿನ ಪ್ರತಿಮೆಯನ್ನು ಪ್ರಧಾನಿ ಮೋದಿ ಅವರು ಉದ್ಘಾಟಿಸಲು ಆಗಮಿಸುತ್ತಿದ್ದಾರೆ. ಹೀಗಾಗಿ ಕಾರ್ಯಕ್ರಮಕ್ಕೆ ಯಾವ ರೀತಿ ತಯಾರಿ ಆಗಿದೆ ಎಂದು ಖುದ್ದು ಸಿಎಂ ಬೊಮ್ಮಾಯಿ ಸ್ಥಳಕ್ಕೆ ಭೇಟಿ …

Read More »

ಎಸ್. ಟಿ ಮೀಸಲಾತಿ ಸೌಲಭ್ಯದ ಸದುಪಯೋಗ ಪಡೆದುಕೊಳ್ಳಬೇಕು ಎಂದ ಮಹೇಶ ಕುಮಠಳ್ಳಿ

ತಳವಾರ ಮತ್ತು ಪರಿವಾರ ಸಮುದಾಯ ಬಾಂಧವರಿಗೆ ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕಲ್ಪಿಸಿದ ಎಸ್. ಟಿ ಮೀಸಲಾತಿ ಸೌಲಭ್ಯದ ಸದುಪಯೋಗ ಪಡೆದುಕೊಳ್ಳಬೇಕು ಎಂದು ಕೊಳಗೇರಿ ನಿಗಮದ ಅಧ್ಯಕ್ಷ ಹಾಗೂ ಶಾಸಕ ಮಹೇಶ ಕುಮಠಳ್ಳಿ ಹೇಳಿದರು. ಅವರು ಅಥಣಿ ಪಟ್ಟಣದ ನಿರೀಕ್ಷಣಾ ಮಂದಿರದಲ್ಲಿ ತಳವಾರ ಮತ್ತು ಪರಿವಾರ ಸಮಾಜ ಬಾಂಧವರಿಗೆ ಸಾಂಕೇತಿಕವಾಗಿ ಜಾತಿ ಪ್ರಮಾಣ ಪತ್ರ‌ ವಿತರಿಸಿ ಮಾತನಾಡುತ್ತಿದ್ದರು. ಎಸ್.ಟಿ. ಮೀಸಲಾತಿ ಸೌಲಭ್ಯ ತಳವಾರ ಹಾಗೂ ಪರಿವಾರ ಸಮಾಜ ಬಾಂಧವರು ಶೈಕ್ಷಣಿಕವಾಗಿ, …

Read More »

ಹಿಂದೂ’ ಪದ ಹೇಳಿಕೆ ವಿವಾದ : ‘ಸತೀಶ್ ಜಾರಕಿಹೊಳಿ’ ಪರ ನಟ ‘ಚೇತನ್’ ಬ್ಯಾಟ್..ಹೇಳಿದ್ದೇನು ಗೊತ್ತಾ..?

ಬೆಂಗಳೂರು : ಇತ್ತೀಚೆಗೆ ಕಾಂತಾರ ಸಿನಿಮಾ ವಿವಾದ ಎಬ್ಬಿಸಿದ ನಟ ಚೇತನ್ ಇದೀಗ ಸತೀಶ್ ಜಾರಕಿಹೊಳಿ ಪರ ಬ್ಯಾಟ್ ಬೀಸಿದ್ದಾರೆ. ಹಿಂದೂ ಪದದ ಕುರಿತು ವಿವಾದಾತ್ಮಕ ಹೇಳಿಕೆ ನೀಡಿದ್ದ ಸತೀಶ್ ಜಾರಕಿಹೊಳಿ ಪರ ನಟ ಚೇತನ್ ಬ್ಯಾಟ್ ಮಾಡಿದ್ದು, ಹಿಂದೂ ಪದದ ಅಧ್ಯಯನದ ಅಗತ್ಯವಿದೆ ಎಂದು ಹೇಳಿದ್ದಾರೆ.   ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕಿರುವ ಚೇತನ್, ಶಾಸಕ ಸತೀಶ್ ಜಾರಕಿಹೊಳಿ ಅವರ ಹೇಳಿಕೆಯು ಆರ್ಟಿಕಲ್-19 ರ ಅಭಿವ್ಯಕ್ತಿ ಸ್ವಾತಂರ್ತ್ಯಕ್ಕನುಗುಣವಾಗಿದೆ. ಪರ್ಷಿಯನ್ …

Read More »

ರೆಡ್ ಹ್ಯಾಂಡಾಗಿ ಸಿಕ್ಕಿಬಿದ್ದ FDA: 50 ಸಾವಿರ ರೂ. ಲಂಚ ಸ್ವೀಕರಿಸುವಾಗಲೇ ಬಲೆಗೆ

ಬೆಂಗಳೂರು: ಲಂಚ ಸ್ವೀಕರಿಸುತ್ತಿದ್ದಾಗಲೇ ಪ್ರಥಮ ದರ್ಜೆ ಸಹಾಯಕರೊಬ್ಬರು ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಆರೋಗ್ಯ ಭವನದ ಎಫ್‌ಡಿಎ ಸುಮಂತ್ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಕಡತ ವಿಲೇವಾರಿ ಮಾಡಲು ಒಂದು ಲಕ್ಷ ರೂಪಾಯಿ ಲಂಚಕ್ಕೆ ಎಫ್.ಡಿ.ಎ. ಸುಮಂತ್ ಬೇಡಿಕೆ ಇಟ್ಟಿದ್ದರು. ಈ ಹಣದಲ್ಲಿ 50,000 ರೂ. ಲಂಚ ಸ್ವೀಕರಿಸುವಾಗ ಸುಮಂತ್ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಲೋಕಾಯುಕ್ತ ಡಿ.ವೈ.ಎಸ್.ಪಿ. ಸತೀಶ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಗಿದೆ.

Read More »

ಬಿಎಸ್ ವೈಗೆ ಮಸಿ ಬಳಿಯಲು ಬಿಜೆಪಿಯೇ ಯತ್ನಾಳರನ್ನು ಮುಂದೆ ಬಿಟ್ಟಿದೆಯೇ?: ಕಾಂಗ್ರೆಸ್

ಬೆಂಗಳೂರು :“ಯತ್ನಾಳ್ ನಮ್ಮ ಪಕ್ಷದ ನಾಯಕರಲ್ಲ” ಎಂದಿದ್ದ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಅವರು ಯತ್ನಾಳ್‌ರ ಜತೆ ರಹಸ್ಯ ಮಾತುಕತೆ ಮಾಡಿದ್ದಾರೆ.ಇಂತಹ ಸದಾರಮೆ ನಾಟಕ ಬಿಜೆಪಿಗೆ ಮಾತ್ರ ಸಾಧ್ಯವೇನೋ! ಎಂದು ರಾಜ್ಯ ಕಾಂಗ್ರೆಸ್ ಸರಣಿ ಟ್ವೀಟ್ ಗಳನ್ನು ಮಾಡಿದೆ.   ಬಿ.ಯಸ್. ಯಡಿಯೂರಪ್ಪ ಅವರಿಗೆ ಮಸಿ ಬಳಿಯಲು ಬಿಜೆಪಿಯೇ ಯತ್ನಾಳರನ್ನು ಮುಂದೆ ಬಿಟ್ಟಿದೆಯೇ? ಇದು ತೊಟ್ಟಿಲನ್ನೂ ತೂಗುತ್ತಾ, ಮಗುವನ್ನೂ ಚಿವುಟುವ ಆಟವೇ? ಎಂದು ಬಿಜೆಪಿಯನ್ನು ಪ್ರಶ್ನಿಸಿದೆ. ಯತ್ನಾಳರನ್ನು ಗಂಭೀರವಾಗಿ ಪರಿಗಣಿಸಬೇಕಿಲ್ಲ, …

Read More »

ಮುಧೋಳ: ಸಿಮೆಂಟ್‌, ಕಬ್ಬಿಣ ಬಳಸದೇ ನಿರ್ಮಾಣವಾಗಿದೆ ಈ ದೇವಾಲಯ

ಬಾಗಲಕೋಟೆ, ನವೆಂಬರ್ 9: ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನ ಮುದ್ದಾಪುರ ಗ್ರಾಮ ವ್ಯಾಪ್ತಿಯಲ್ಲಿರುವ ಜೆ.ಕೆ. ಸಿಮೆಂಟ್ ಕಂಪನಿ ಆವರಣದಲ್ಲಿ ಪುರಾತನ ವಾಸ್ತುಶಿಲ್ಪ ಕಲೆಯ ಅನುಸಾರ ಯದುರೇಶ್ವರ ಶಿವ ಮಂದಿರವನ್ನು ಕಟ್ಟಲಾಗಿದೆ. ವಿಶೇಷವೆಂದರೆ ಈ ದೇವಾಲಯದ ನಿರ್ಮಾಣಕ್ಕೆ ಸಿಮೆಂಟ್‌, ಕಬ್ಬಿಣವನ್ನು ಬಳಸದೇ ಕಟ್ಟಲಾಗಿದ್ದು, ಪ್ರವಾಸಿ ಕೇಂದ್ರವಾಗಿ ಗಮನ ಸೆಳೆಯುತ್ತಿದೆ.   ಈ ಅತ್ಯಾಕರ್ಷಕ ಯದುರೇಶ್ವರ ಶಿವನ ದೇವಾಲಯ ಲೋಕಾರ್ಪಣೆಗೊಂಡು ಮೂರು ವರ್ಷಗಳಾಗಿವೆ. ಶಿವಭಕ್ತಾದಿಗಳಾದಿಯಾಗಿ ಮಕ್ಕಳು , ಕುಟುಂಬದವರು ಹೋಗಿ ಯದುರೇಶ್ವರ ಮಹದೇವ …

Read More »

ರಾಯಚೂರು: ಡಾಬಾಗೆ ಅನಧಿಕೃತ ವಿದ್ಯುತ್ ಕೊಡುತ್ತಿದ್ದ ಜೆಸ್ಕಾಂ ಎಂಜಿನಿಯರ್ ಅಮಾನತು

ಸಿರವಾರ (ರಾಯಚೂರು ಜಿಲ್ಲೆ): ಗುಲ್ಬರ್ಗಾ ವಿದ್ಯುತ್ ಸರಬರಾಜು ಕಂಪನಿ ನಿಯಮಿತ (ಜೆಸ್ಕಾಂ)‌ ವ್ಯಾಪ್ತಿಯ ಸಿರವಾರ ತಾಲ್ಲೂಕಿನ ಮಲ್ಲಟ ಉಪವಿಭಾಗದ ಶಾಖಾಧಿಕಾರಿ, ಕಿರಿಯ ಎಂಜಿನಿಯರ್ ಹಣಮಂತ್ರಾಯ ಡಿ. ಅವರನ್ನು ಇಲಾಖಾ ವಿಚಾರಣೆಯನ್ನು ಕಾಯ್ದಿರಿಸಿ ಅಮಾನತು ಮಾಡಲಾಗಿದೆ.   ಮಲ್ಲಟ ಗ್ರಾಮದ ಶಾಂಭವಿ ದಮ್ ಬಿರಿಯಾನಿ ದಾಬಾಗೆ ಲಿಂಗಸುಗೂರು ರಸ್ತೆಯ ಸ್ಥಾವರದಿಂದ ಅನಧಿಕೃತವಾಗಿ 25 ಕೆವಿಎ ವಿದ್ಯುತ್ ಪರಿವರ್ತಕ ಮತ್ತು ವಿದ್ಯುತ್ ಮಾಪಕ ಅಳವಡಿಸಿ ಕಂಪನಿಗೆ ₹1.46 ಲಕ್ಷ ಆರ್ಥಿಕ ನಷ್ಟವನ್ನುಂಟು ಮಾಡಿದ್ದಾರೆ ಎಂದು …

Read More »

ಹಿರಿಯರ ಸೂಚನೆಯಂತೆ ಪಕ್ಷದ ಒಳಗೆ ಯಾರನ್ನೂ ಬೈಯ್ಯುವುದಿಲ್ಲ; ಶಾಸಕ ಬಸನಗೌಡ ಪಾಟೀಲ್

ಬೆಂಗಳೂರು: ಹೌದು. ಹಿರಿಯರು ಸೂಚನೆ ನೀಡಿದ್ದಾರೆ. ಇನ್ನು ಮುಂದೆ ಪಕ್ಷದೊಳಗೆ ಯಾರನ್ನೂ ಬಯ್ಯುವುದಿಲ್ಲ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿಕೆ ನೀಡಿದ್ದಾರೆ. ಯಾರ ವಿರುದ್ಧವೂ ಮಾತಾಡದಂತೆ ವರಿಷ್ಠರು ಹೇಳಿದ್ದಾರಾ ಅನ್ನೋ ಪ್ರಶ್ನೆಗೆ ಉತ್ತರಿಸಿದ ಅವರು, ಹೌದು ಹಿರಿಯರು ಸೂಚನೆ ನೀಡಿದ್ದಾರೆ. ಪಕ್ಷದೊಳಗೆ ಯಾರನ್ನೂ ಬೈಯ್ಯದಂತೆ ಸೂಚಿಸಿದ್ದಾರೆ. ಇನ್ಮುಂದೆ ಕಾಂಗ್ರೆಸ್ ಪಕ್ಷದವರನ್ನು ಮಾತ್ರ ಬೈಯ್ಯುತ್ತೇನೆ. ಪಕ್ಷದ ಒಳಗೆ ಯಾರನ್ನೂ ಬೈಯ್ಯುವುದಿಲ್ಲ ಎಂದರು. ಇದು ಪಕ್ಷದ ಬೆಳವಣಿಗೆ ಹಾಗೂ ವೈಯಕ್ತಿಕ ಬೆಳವಣಿಗೆಗೂ …

Read More »

ಶ್ರೀ ರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ವಶಕ್ಕೆ ಪಡೆದ ಪೊಲೀಸರು

ಟಿಪ್ಪು ಸುಲ್ತಾನ್ ಜಯಂತಿ ಆಚರಣೆಗೆ ವಿರೋಧಿಸಿದ ಶ್ರೀ ರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಸೇರಿದಂತೆ ಹಲವು ಕಾರ್ಯಕರ್ತರನ್ನು ಪೊಲೀಸರು ನಗರದ ಚೆನ್ನಮ್ಮ ವೃತ್ತದಲ್ಲಿಂದು ವಶಕ್ಕೆ ಪಡೆದುಕೊಂಡರು. ಶ್ರೀರಾಮ ಸೇನಾ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಚೆನ್ನಮ್ಮ ವೃತ್ತಕ್ಕೆ ಆಗಮಿಸುತ್ತಿದ್ದಂತೆ ಮುತಾಲಿಕ್ ಸೇರಿದಂತೆ ಹಲವು ಕಾರ್ಯಕರ್ತರು ಟಿಪ್ಪು ವಿರುದ್ಧ ಘೋಷಣೆಗಳು ಕೂಗಿ ಆಕ್ರೋಶ ಹೊರಹಾಕಿದರು. ಇನ್ನೂ ಇದೇ ವೇಳೆ ಶ್ರೀರಾಮ ಸೇನಾ ಕಾರ್ಯಕರ್ತರು ಹಾಗೂ ಪೊಲೀಸರ ಜೊತೆಗೆ ಮಾತಿನ ಚಕಮಕಿ ನಡೆದು …

Read More »