ನಮ್ಮ ಪಕ್ಷದಲ್ಲಿ ಯಾವುದೇ ಭಿನ್ನಾಭಿಪ್ರಾಯ ಇಲ್ಲ. ನಾವೆಲ್ಲಾ ಒಗ್ಗಟ್ಟಾಗಿದ್ದೇವೆ. ಆದರೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸಂಬಂಧ ಹಳಸಿಕೊಂಡು ಬಿಟ್ಟಿದೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಲೇವಡಿ ಮಾಡಿದರು. ಸೋಮವಾರ ಬೆಳಗಾವಿ ವಿಮಾನ ನಿಲ್ದಾಣದಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಮಾಜಿ ಸಿಎಂ ಸಿದ್ದರಾಮಯ್ಯ ನಾನ್ನ ಮತ್ತು ಡಿ.ಕೆ.ಶಿವಕುಮಾರ ಸಂಬಂದ ಚೆನ್ನಾಗಿಯೇ ಇದೆ. ಆದರೆ ಬಿಜೆಪಿಯವರು ಸರಿ ಇಲ್ಲ ಎಂದು ಹೇಳಿಕೊಂಡು ತಿರುಗಾಡುತ್ತಿದ್ದಾರೆ. ಬಿಜೆಪಿಯಲ್ಲಿ ಬಸವರಾಜ ಬೊಮ್ಮಾಯಿ …
Read More »Daily Archives: ನವೆಂಬರ್ 7, 2022
ನಾಳೆ ವರ್ಷದ ಎರಡನೆ ಹಾಗೂ ಕೊನೆಯ ಚಂದ್ರಗ್ರಹಣ: ಸ್ಪರ್ಶ ಕಾಲ, ಮೋಕ್ಷ ಕಾಲ ವಿವರ ಇಲ್ಲಿದೆ…
ನಾಳೆ ನವೆಂಬರ್ 8ರಂದು ಸಂಪೂರ್ಣ ಚಂದ್ರಗ್ರಹಣ(Lunar eclipse) ಸಂಭವಿಸಲಿದೆ. ಭಾರತದ ಪ್ರಮುಖ ಸ್ಥಳಗಳಲ್ಲಿ ಸಂಪೂರ್ಣ ಚಂದ್ರಗ್ರಹಣ ಗೋಚರಿಸಲಿದೆ. ಬೆಂಗಳೂರು: ನಾಳೆ ನವೆಂಬರ್ 8ರಂದು ಸಂಪೂರ್ಣ ಚಂದ್ರಗ್ರಹಣ(Lunar eclipse) ಸಂಭವಿಸಲಿದೆ. ಭಾರತದ ಪ್ರಮುಖ ಸ್ಥಳಗಳಲ್ಲಿ ಸಂಪೂರ್ಣ ಚಂದ್ರಗ್ರಹಣ ಗೋಚರಿಸಲಿದೆ. ಗ್ರಹಣವು ಮಧ್ಯಾಹ್ನ 2.39ಕ್ಕೆ ಸ್ಪರ್ಶಿಸಿ ಅಪರಾಹ್ನ 4.29ಕ್ಕೆ ಉಚ್ಛ್ರಾಯ ಮಧ್ಯ ಸ್ಥಿತಿ ಗೆ ತಲುಪಿ ಸಂಜೆ 6.19ಕ್ಕೆ ಮೋಕ್ಷವಾಗಲಿದೆ. ಚಂದ್ರೋದಯ ಆಗುವುದು ಸಂಜೆ 5.59ಕ್ಕೆ. ಆ ನಂತರ ಕಾಣಿಸುತ್ತದೆ. ಆದರೆ ಮೋಕ್ಷ …
Read More »ಮುರುಘಾ ಶ್ರೀ ಲೈಂಗಿಕ ಕಿರುಕುಳ ಪ್ರಕರಣ ಕುರಿತಂತೆ ಸ್ಪೋಟಕ ಮಾಹಿತಿ ಬಹಿರಂಗ; ಚಾರ್ಜ್ ಶೀಟ್ ನಲ್ಲಿದೆಯಂತೆ ಬೆಚ್ಚಿ ಬೀಳಿಸುವ ಸಂಗತಿ.!
ಅಪ್ರಾಪ್ತ ಬಾಲಕಿಯರಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಚಿತ್ರದುರ್ಗ ಮುರುಘಾ ಮಠದ ಶಿವಮೂರ್ತಿ ಶರಣರು ಈಗಾಗಲೇ ಜೈಲು ಪಾಲಾಗಿದ್ದಾರೆ. ಅವರ ವಿರುದ್ಧ ಈಗ ಮತ್ತೊಂದು ಲೈಂಗಿಕ ಕಿರುಕುಳ ಪ್ರಕರಣ ದಾಖಲಾಗಿರುವ ಹಿನ್ನೆಲೆಯಲ್ಲಿ ಪೊಲೀಸರು ಮತ್ತೆ ತಮ್ಮ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಇದರ ಮಧ್ಯೆ ವಿಚಾರಣೆ ವೇಳೆ ಲೈಂಗಿಕ ಕಿರುಕುಳಕ್ಕೊಳಗಾದ ಬಾಲಕಿಯರು ಪೊಲೀಸರ ಮುಂದೆ ಬೆಚ್ಚಿ ಬೀಳಿಸುವ ಸಂಗತಿ ಬಿಚ್ಚಿಟ್ಟಿದ್ದಾರೆ ಎನ್ನಲಾಗಿದ್ದು, ಇದೆಲ್ಲವೂ ಚಾರ್ಜ್ ಶೀಟ್ ನಲ್ಲಿ …
Read More »ರಾಜ್ಯ ಸರ್ಕಾರಿ ನೌಕರರಿಗೆ ಭರ್ಜರಿ ಗುಡ್ ನ್ಯೂಸ್ : ಇಂದು ಬಹುನಿರೀಕ್ಷಿತ 7 ನೇ ವೇತನ ಆಯೋಗ ರಚನೆ
ಬೆಂಗಳೂರು : ರಾಜ್ಯ ಸರ್ಕಾರವು ಸರ್ಕಾರಿ ನೌಕರರಿಗೆ ಇಂದು ಭರ್ಜರಿ ಸಿಹಿಸುದ್ದಿ ನೀಡುವ ಸಾಧ್ಯತೆ ಇದ್ದು, ಏಳನೇ ವೇತನ ಆಯೋಗ ರಚಿಸಬೇಕೆಂಬ ಸರ್ಕಾರಿ ನೌಕರರ ಬಹಳ ದಿನಗಳ ಬೇಡಿಕೆಯಂತೆ ರಾಜ್ಯ ಸರ್ಕಾರ ಇಂದು ಆಯೋಗ ರಚಿಸಿ ಆದೇಶ ಹೊರಡಿಸುವ ಸಾಧ್ಯತೆ ಇದೆ. ಸಿಎಂ ಬಸವರಾಜ ಬೊಮ್ಮಾಯಿ ಅವರು ಈ ಹಿಂದೆ ಸರ್ಕಾರಿ ನೌಕರರಿಗೆ 7 ನೇ ವೇತನ ಆಯೋಗ ರಚಿಸುವುದಾಗಿ ಪ್ರಕಟಿಸಿದ್ದರು. ಈಗ ಆಯೋಗ ರಚಿಸುವ ಸಂಬಂಧ ಭಾನುವಾರ …
Read More »ಅಂಬೇಡ್ಕರ್ ಪ್ರತಿಮೆ ಧ್ವಂಸ – ಮಹಿಳೆಯರ ಮೇಲೆ ಪೊಲೀಸರಿಂದ ಲಾಠಿ ಚಾರ್ಜ್
ಲಕ್ನೋ: ಉತ್ತರ ಪ್ರದೇಶದಲ್ಲಿ (Uttar Pradesh) ಮಹಿಳೆಯರ ಮೇಲೆ ಪೊಲೀಸರು ಲಾಠಿ ಪ್ರಹಾರ ನಡೆಸಿ, ನಿಂದಿಸಿ ಕಿರುಚಾಡಿರುವ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಪೊಲೀಸರ ವಾಹನದ ಮೇಲೆ ಮಹಿಳೆಯರು ಕಲ್ಲು ತೂರಾಟ ನಡೆಸಲು ಪ್ರಾರಂಭಿಸಿದ ಬಳಿಕ ಪರಿಸ್ಥಿತಿ ಅತೀರೇಕಕ್ಕೆ ತಲುಪಿ ಪೊಲೀಸರು ಲಾಠಿ ಚಾರ್ಜ್ ಮಾಡಬೇಕಾಯಿತು. ವೈರಲ್ ಆಗುತ್ತಿರುವ ವೀಡಿಯೋ ಉತ್ತರ ಪ್ರದೇಶದ ಅಂಬೇಡ್ಕರ್ ನಗರ ಜಿಲ್ಲೆಯ (Ambedkar Nagar district) ಜಲಾಲ್‍ಪುರದಾಗಿದ್ದು (Jalalpur), ಇತ್ತೀಚೆಗಷ್ಟೇ ಬಿ.ಆರ್. ಅಂಬೇಡ್ಕರ್ ಪ್ರತಿಮೆ …
Read More »ಮದ್ಯದ ನಶೆ ಜೋರು: ಬಿಯರ್ ಪ್ರಿಯರ ಸಂಖ್ಯೆ ಏರಿಕೆ
ಬೆಂಗಳೂರು: ಕಳೆದ ಏಳು ತಿಂಗಳ ಅವಧಿಯಲ್ಲಿ ಮದ್ಯ ಪ್ರಿಯರು ನಶೆಯಲ್ಲಿ ತೇಲಿದ್ದು, ಸರ್ಕಾರಕ್ಕೆ ₹16,948 ಕೋಟಿ ವರಮಾನ ಸಂಗ್ರಹವಾಗಿದೆ. ವಿಸ್ಕಿ, ಬ್ರಾಂದಿ ಮತ್ತು ರಮ್‌ಗಿಂತ ಬಿಯರ್ ಪ್ರಿಯರೇ ಹೆಚ್ಚಿನ ವರಮಾನ ತಂದುಕೊಟ್ಟಿದ್ದಾರೆ. ಮದ್ಯ (ಐಎಂಎಲ್) ಮತ್ತು ಬಿಯರ್ ಮಾರಾಟದಲ್ಲಿ ಏರಿಕೆ ಕಂಡು ಬಂದಿದ್ದರೂ, ಬಿಯರ್ ಸೇವನೆ ಗಣನೀಯವಾಗಿ ಅಂದರೆ ಶೇ 59.66ರಷ್ಟು ಹೆಚ್ಚಾಗಿದೆ. ಏಪ್ರಿಲ್‌ನಿಂದ ಅಕ್ಟೋಬರ್ ಅಂತ್ಯದ ತನಕದ ಏಳು ತಿಂಗಳ ಅವಧಿಯಲ್ಲಿ ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ …
Read More »ಅಂಬೇಡ್ಕರ್ ಅಭಿವೃದ್ಧಿ ನಿಗಮ: ‘ಕುರ್ಚಿ’ಗಾಗಿ ಗುದ್ದಾಟ
ಬೆಂಗಳೂರು : ಭ್ರಷ್ಟಾಚಾರ ಆರೋಪ ಎದುರಿಸುತ್ತಿರುವ ಡಾ.ಬಿ. ಹೀಗಾಗಿ, ಆ ಹುದ್ದೆಗೆ ವರ್ಗಾವಣೆಗೊಂಡಿರುವ ಕೆ.ಎನ್. ಸುರೇಶ್ ನಾಯ್ಕ್ ಪರದಾಡುತ್ತಿದ್ದು, ಇಬ್ಬರ ಮಧ್ಯೆ ‘ಕುರ್ಚಿಗಾಗಿ ಗುದ್ದಾಟ’ ನಡೆದಿದೆ. ಸುರೇಶ್ ಕುಮಾರ್ ವಿರುದ್ಧ ಭ್ರಷ್ಟಚಾರದ ಆರೋಪ ಹೊರಿಸಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಮೇಲ್ವಿಚಾರಣೆ ಮತ್ತು ಬಲವರ್ಧನ ಸಮಿತಿ ಮುಖ್ಯಮಂತ್ರಿ ಮತ್ತು ಮುಖ್ಯ ಕಾರ್ಯದರ್ಶಿಗೆ ದೂರು ನೀಡಿತ್ತು. ಕೂಡಲೇ ಕ್ರಮ ವಹಿಸಬೇಕು ಎಂದು ಮುಖ್ಯಮಂತ್ರಿ ನಿರ್ದೇಶನ ನೀಡಿದರೆ, ತಕ್ಷಣವೇ ತನಿಖೆ ನಡೆಸುವಂತೆ ಸಮಾಜ ಕಲ್ಯಾಣ …
Read More »40% ಕಮಿಷನ್ ಸರ್ಕಾರದ ಆಡಳಿತದಿಂದ ಜನತೆ ರೋಸಿ ಹೋಗಿದ್ದಾರೆ: ಸಿದ್ದರಾಮಯ್ಯ
ಬೆಂಗಳೂರು: ಮುಂಬರುವ ಚುನಾವಣೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ಭ್ರಷ್ಟ ಬಿಜೆಪಿ ಸರ್ಕಾರ ಕಿತ್ತೂಗೆಯಲು ಜನರು ಈಗಾಗಲೇ ಸಂಕಲ್ಪ ಮಾಡಿದ್ದಾರೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಗುಡುಗಿದರು. ಅರಮನೆ ಮೈದಾನದಲ್ಲಿ ಭಾನುವಾರ ನಡೆದ ಸರ್ವೋದಯ ಸಂಕಲ್ಪ ಯಾತ್ರೆಯಲ್ಲಿ ಮಾತನಾಡಿದ ಅವರು, ಭ್ರಷ್ಟಾಚಾರದಿಂದ ಮುಳುಗಿ ಹೋಗಿರುವ ಬಿಜೆಪಿ ಇದೀಗ ಜನಸಂಕಲ್ಪ ಯಾತ್ರೆ ನಡೆಸುತ್ತಿದೆ. ಆದರೆ ಶೇ.40% ಕಮಿಷನ್ ಸರ್ಕಾರದ ಆಡಳಿತ ವೈಖರಿಯಿಂದ ನಾಡಿನ ಜನತೆ ರೋಸಿ ಹೋಗಿದ್ದು ಬಿಜೆಪಿಯನ್ನು ಕಿತ್ತೂಗೆಯಲು ಜನರು …
Read More »ಸಂಸತ್ತಿನಲ್ಲಿ ಕೆಂಪೇಗೌಡರ ಪುತ್ತಳಿ ಸ್ಥಾಪಿಸಲು ಪ್ರಧಾನಿ ಮೋದಿಗೆ ಪತ್ರ ಬರೆದ ಮಾಜಿ ಪ್ರಧಾನಿ
ಬೆಂಗಳೂರು: ನಾಡಪ್ರಭು ಕೆಂಪೇಗೌಡ ಅವರ ಕಂಚಿನ ಪುತ್ಥಳಿಯನ್ನು ಸಂಸತ್ತಿನ ಆವರಣದಲ್ಲಿ ಸ್ಥಾಪಿಸುವಂತೆ ಕೋರಿ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ಪತ್ರ ಬರೆದಿದ್ದಾರೆ. ಕೆಂಪೇಗೌಡರು 16ನೇ ಶತಮಾನದಲ್ಲಿ ಬೆಂಗಳೂರನ್ನು ಸ್ಥಾಪಿಸಿದರು. ಅಂದು ಅವರು ಬಿತ್ತಿದ ಬೀಜ ಇಂದು ಜಾಗತಿಕ ಮನ್ನಣೆ ಪಡೆದಿರುವ ನಾವೆಲ್ಲರೂ ಹೆಮ್ಮೆ ಪಡುವಂತಹ ಕಾಸ್ಮೋಪಾಲಿಟಿನ್ ನಗರವಾಗಿದೆ. ಕೆಂಪೇಗೌಡರು ರೂಪಿಸಿದ ಈ ಬೆಂಗಳೂರು ನೋಡಲು ತುಂಬಾ ಸುಂದರವಾಗಿದೆ. ಈ ನಗರ ತಂತ್ರಜ್ಞಾನದ ಲಾಂಛನವಾಗಿದೆ. ಇಲ್ಲಿರುವಷ್ಟು ಸಾರ್ವಜನಿಕ ಮತ್ತು …
Read More »ನಾಳೆಯಿಂದ – ಗುರುವಾರದವರೆಗೆ ಅಪ್ಪು ʼಗಂಧದ ಗುಡಿʼ ರಿಯಾಯಿತಿ ದರದಲ್ಲಿ ಪ್ರದರ್ಶನ
ಬೆಂಗಳೂರು: ಅಮೋಘ ವರ್ಷ ನಿರ್ದೇಶನದ ಅಪ್ಪು ಅಭಿನಯದ ʼಗಂಧದ ಗುಡಿʼ ಸಾಕ್ಷ್ಯ ಚಿತ್ರ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಸಿನಿರಂಗ, ಪ್ರೇಕ್ಷಕರು ಸಾಕ್ಷ್ಯ ಚಿತ್ರವನ್ನು ನೋಡಿ ಮೆಚ್ಚಿಕೊಂಡಿದ್ದಾರೆ. ನಮ್ಮ ನಾಡಿನ ಜೀವ ವೈವಿಧ್ಯತೆಯನ್ನು ಸಾರುವ ʼಗಂಧದ ಗುಡಿʼಯನ್ನು ಎಲ್ಲರೂ ನೋಡಬೇಕು ಮಕ್ಕಳಿಗೆ ಉಚಿತವಾಗಿ ಸಾಕ್ಷ್ಯ ಚಿತ್ರವನ್ನು ತೋರಿಸಬೇಕೆನ್ನುವ ಕೂಗು ಕೇಳಿ ಬಂದಿತ್ತು. ಈ ಮಾತಿಗೆ ಸ್ವತಃ ಅಪ್ಪು ಪತ್ನಿ ಅಶ್ವಿನಿ ಪುನೀತ್ ರಾಜ್ ಕುಮಾರ್ ಅವರು ಸ್ಪಂದಿಸಿದ್ದಾರೆ. ಈ ಬಗ್ಗೆ ಟ್ವೀಟ್ ನಲ್ಲಿ …
Read More »