Breaking News

Daily Archives: ಅಕ್ಟೋಬರ್ 8, 2022

ಧಗಧಗನೆ ಉರಿದ ಖಾಸಗಿ ಬಸ್​.. ಮಕ್ಕಳು ಸೇರಿ 14 ಮಂದಿ ಸಜೀವ ದಹನ

ನಾಸಿಕ್​(ಮಹಾರಾಷ್ಟ್ರ): ನಾಸಿಕ್​ಗೆ ಸಂಚರಿಸುತ್ತಿದ್ದ ಖಾಸಗಿ ಬಸ್​ಗೆ ಬೆಂಕಿ ಹೊತ್ತಿಕೊಂಡು ಮಕ್ಕಳು ಸೇರಿದಂತೆ 14 ಜನರು ಸಜೀವ ದಹನವಾದ ದಾರುಣ ಘಟನೆ ಇಂದು ಬೆಳಗಿನ ಜಾವ 4.30 ರ ಸುಮಾರಿಗೆ ಸಂಭವಿಸಿದೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ದುರ್ಘಟನೆಗೀಡಾದ ಖಾಸಗಿ ಬಸ್​ ನಾಸಿಕ್​ಗೆ ಪಯಣಿಸುತ್ತಿತ್ತು. ಈ ವೇಳೆ ಬಸ್​ಗೆ ಬೆಂಕಿ ಹೊತ್ತಿಕೊಂಡಿದೆ. ಪ್ರಯಾಣಿಕರು ನಿದ್ರೆಯಯಲ್ಲಿದ್ದ ಕಾರಣ ಬಸ್​​ಗೆ ಬೆಂಕಿ ಹೊತ್ತಿಕೊಂಡಿದ್ದು, ಯಾರೂ ಗಮನಿಸಿಲ್ಲ. ಬೆಂಕಿ ಇಡೀ ಬಸ್​ಗೆ ಹೊತ್ತಿಕೊಂಡಿದ್ದು, ಜನರು ಹೊರಬರಲಾಗದೇ ಜ್ವಾಲೆಗೆ ಸಿಲುಕಿ …

Read More »

10 ಲಕ್ಷದ ಸೂಟು ಬೂಟು ಧರಿಸುವ ಮೋದಿ ಬಡವರಾ, ಪ್ಯಾಂಟ್​ ಟೀಶರ್ಟ್​ ಧರಿಸುವ ರಾಹುಲ್​ ಗಾಂಧಿ ಬಡವರಾ?’

ಗಂಗಾವತಿ(ಕೊಪ್ಪಳ): ಮೋದಿ ಯಾವ ಊರಲ್ಲಿ, ಯಾವ ಹೋಟೆಲ್​​, ಯಾವ ರೈಲ್ವೆ ನಿಲ್ದಾಣದಲ್ಲಿ ಚಹಾ ಮಾರಿದ್ದರು ಎಂಬುದನ್ನು ಬಿಜೆಪಿಗರು ಬಹಿರಂಗ ಪಡಿಸುತ್ತಿಲ್ಲ. ಸುಳ್ಳಿನ ಕಂತೆ ಹೆಣೆಯುವುದರಲ್ಲಿ ಬಿಜೆಪಿಗರು ನಿಸ್ಸೀಮರು. ಸುಳ್ಳಿನಿಂದಲೇ ಜನರಿಗೆ ಮಂಕುಬೂದಿ ಎರಚುತ್ತಿದ್ದಾರೆ ಎಂದು ಮಾಜಿ ಸಚಿವ ಶಿವರಾಜ ತಂಗಡಗಿ ಆರೋಪಿಸಿದರು. ನಗರದಲ್ಲಿ ಭಾರತ್​ ಜೋಡೋ ಯಾತ್ರೆಯ ಅಂಗವಾಗಿ ಹಮ್ಮಿಕೊಂಡಿದ್ದ ಕಾರ್ಯಕರ್ತರ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, 10 ಲಕ್ಷ ರೂ. ಮೌಲ್ಯದ ಸೂಟು-ಬೂಟು ಧರಿಸುವವರು ಬಡವರೋ ಅಥವಾ ಅಗರ್ಭ ಶ್ರೀಮಂತರಾಗಿದ್ದರೂ …

Read More »

ಸುಳೇಭಾವಿ ಗ್ರಾಮದಲ್ಲಿ ಡಬಲ್ ಮರ್ಡರ್: ಆರು ಜನ ವಶಕ್ಕೆ

ಬೆಳಗಾವಿ: ಸುಳೇಭಾವಿ ಗ್ರಾಮದಲ್ಲಿ ಡಬಲ್ ಮರ್ಡರ್ ಪ್ರಕರಣಕ್ಕೆ ಸಂಬಂಧಿಸಿದಂತೆ ಆರು ಜನರನ್ನು‌ ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸಲಾಗುತ್ತಿದೆ ಎಂದು ನಗರ ಪೊಲೀಸ್ ಆಯುಕ್ತ ಡಾ. ಎಂ. ಬಿ ಬೋರಲಿಂಗಯ್ಯ ಹೇಳಿದ್ದಾರೆ. ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಿನ್ನೆ ರಾತ್ರಿ 6 ರಿಂದ 7 ಜನರ ತಂಡದಿಂದ ಇಬ್ಬರ ಹತ್ಯೆ ಮಾಡಲಾಗಿತ್ತು. ನಾನು ಸಹ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಬೆಳಗಾವಿ ಗ್ರಾಮೀಣ ಎಸಿಪಿ ಗಿರೀಶ್, ಮಾರಿಹಾಳ ಸಿಪಿಐ ನೇತೃತ್ವದಲ್ಲಿ …

Read More »

ಬೊಮ್ಮಾಯಿಯವರೇ ಬಿಎಸ್‌ವೈ ಜೊತೆ ತಿರುಗಾಡಿದ್ರೆ ನೀವೂ ಲಾಗ ಹೊಡಿಯುತ್ತೀರಿ: ಯತ್ನಾಳ್​

ಬೆಳಗಾವಿ: ಬೊಮ್ಮಾಯಿಯವರೇ ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ನೀಡಿ. ಇಲ್ಲವಾದ್ರೆ ನೀವು ಪರ್ಮನೆಂಟ್ ಆಗಿ ಮಾಜಿ ಮುಖ್ಯಮಂತ್ರಿ ಆಗ್ತೀರಿ ಎಂದು ವಿಜಯಪುರದ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಹೇಳಿದರು. ಮೂಡಲಗಿ ತಾಲೂಕಿನ ಕಲ್ಲೋಳಿ ಗ್ರಾಮದಲ್ಲಿ ಪಂಚಮಸಾಲಿ ಲಿಂಗಾಯತ ‌ಸಮುದಾಯಕ್ಕೆ 2ಎ ಮೀಸಲಾತಿ ಸಂಬಂಧ ಹಮ್ಮಿಕೊಂಡಿದ್ದ ಸಮಾವೇಶದಲ್ಲಿ ಮಾತನಾಡಿದ ಅವರು, ಮಾಜಿ ಸಿಎಂ ಯಡಿಯೂರಪ್ಪ ವಿರುದ್ಧ ಮತ್ತೆ ಗುಡುಗಿದರು. ಬೊಮ್ಮಾಯಿಯವರೇ ಬಿಎಸ್‌ವೈ ಜೊತೆ ತಿರುಗಾಡಿದ್ರೆ ನೀವು ಲಾಗ ಹೊಡೆಯುತ್ತೀರಿ. …

Read More »