Breaking News

Monthly Archives: ಸೆಪ್ಟೆಂಬರ್ 2022

ಬೆಳಗಾವಿ: ಭಾರೀ ಮಳೆಯಿಂದ ಆರು ಸೇತುವೆಗಳು ಜಲಾವೃತ, ಸಂಪರ್ಕ ಕಡಿತ

ಬೆಳಗಾವಿ: ಗಡಿ ಜಿಲ್ಲೆ ಬೆಳಗಾವಿಯಲ್ಲಿ ಭಾರೀ ಮಳೆ ಮುಂದುವರೆದಿದ್ದು, ಕೃಷ್ಣಾ ನದಿ ಮತ್ತು ಅದರ ಉಪನದಿಗಳ ಮೇಲಿನ ಆರು ಸೇತುವೆಗಳು ಜಲಾವೃತಗೊಂಡಿವೆ. ನೀರಿನ ಒಳಹರಿವು ಹೆಚ್ಚಾದಂತೆ ನದಿ ದಡದಲ್ಲಿರುವ ಗ್ರಾಮಗಳಿಗೆ ಎಚ್ಚರಿಕೆ ನೀಡಲಾಗಿದೆ.   ಘಟಪ್ರಭಾ ನದಿಯ ಹಿಡಕಲ್ ಜಲಾಶಯ ಮತ್ತು ಬೆಳಗಾವಿ ಜಿಲ್ಲೆಯ ನವಿಲತೀರ್ಥ ಜಲಾಶಯಗಳು ಬಹುತೇಕ ಪೂರ್ಣ ಸಾಮರ್ಥ್ಯವನ್ನು ತಲುಪಿವೆ. ಭಾನುವಾರ ಸುಮಾರು 20 ಸಾವಿರ ಕ್ಯೂಸೆಕ್ ನೀರನ್ನು ಘಟಪ್ರಭಾ ನದಿಗೆ ಹರಿಯ ಬಿಡಲಾಗಿದೆ. ಮಳೆ ಮುಂದುವರಿದರೆ ನೀರಿನ …

Read More »

ಕೆರೆ ಬಳಿ ರೀಲ್ಸ್​ ಮಾಡಲು ಹೋಗಿ ಪ್ರಾಣ ಕಳೆದುಕೊಂಡ ಯುವತಿ!

ಚಿಕ್ಕಬಳ್ಳಾಪುರ: ಸಾಮಾಜಿಕ ಜಾಲತಾಣದಲ್ಲಿ ಹಾಕಿಕೊಳ್ಳುವ ಸಲುವಾಗಿ ರೀಲ್ಸ್​ ಮಾಡುವ ಒಂದೇ ಕಾರಣಕ್ಕೆ ಏನೇನೋ ಸಾಹಸಕ್ಕೆ ಮುಂದಾಗಿ ಅನಾಹುತ ಮಾಡಿಕೊಂಡ ಪ್ರಕರಣಗಳು ಬೇಕಾದಷ್ಟು ಇವೆ. ಇನ್ನು ಕೆಲವರು ಹಾಗೆ ಮಾಡಲು ಹೋಗಿ ಪ್ರಾಣ ಕಳೆದುಕೊಂಡಿದ್ದೂ ಇದೆ. ಅಂಥದ್ದೇ ಒಂದು ಪ್ರಕರಣವಿದು. ಇಲ್ಲೊಬ್ಬಳು ಯುವತಿ ರೀಲ್ಸ್ ಮಾಡಲು ಹೋಗಿ ಎಡವಟ್ಟು ಮಾಡಿಕೊಂಡು ಪ್ರಾಣ ಕಳೆದುಕೊಂಡಿದ್ದಾಳೆ. ಚಿಕ್ಕಬಳ್ಳಾಪುರ ಜಿಲ್ಲೆಯ ಗಂಗಾನಹಳ್ಳಿ ಗ್ರಾಮದ ಬಳಿ ಈ ಅವಘಡ ನಡೆದಿದೆ. ಅಮೃತ (22) ಸಾವಿಗೀಡಾದ ಯುವತಿ. ಈಕೆ ಮೂಲತಃ …

Read More »

ನಾರಾಯಣ ಗುರುಗಳಿಗೆ ಸಿಎಂ ಅಪಮಾನ: ಬೇಸರ ಹೊರ ಹಾಕುತ್ತಲೇ ಎಚ್ಚರಿಕೆ ಸಂದೇಶ ರವಾನಿಸಿದ ಪ್ರಣವಾನಂದ ಸ್ವಾಮೀಜಿ

ದಾವಣಗೆರೆ: ಶ್ರೀ ನಾರಾಯಣ ಗುರುಗಳ ಜಯಂತಿ ದಿನದಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ನಡೆ ವಿರುದ್ಧ ಡಾ. ಪ್ರಣವಾನಂದ ಸ್ವಾಮೀಜಿ ಅಸಮಾಧಾನ ಹೊರಹಾಕಿದ್ದಾರೆ. ವಿಶ್ವಕ್ಕೆ ಸಮಾನತೆ ಸಾರಿರುವ ವಿಶ್ವಗುರು ಬ್ರಹ್ಮಶ್ರೀ ನಾರಾಯಣ ಗುರುಗಳ ಜಯಂತಿ ದಿನದಂದು ನಾರಾಯಣ ಗುರುಗಳ ಭಾವಚಿತ್ರಕ್ಕೆ ಮುಖ್ಯಮಂತ್ರಿಗಳು ಪೂಜೆ ಸಲ್ಲಿಸಲಿಲ್ಲ. ವಿಧಾನಸಭೆಯಲ್ಲಿ ಎಲ್ಲ ಶರಣರ ಭಾವಚಿತ್ರಕ್ಕೆ ಅವರ ಜಯಂತಿ ದಿನದಂದು ಪುಷ್ಪ ನಮನ ಸಲ್ಲಿಸಿ ಪೂಜೆ ಸಲ್ಲಿಸುವ ಪದ್ಧತಿ ನಡೆದು ಬಂದಿದೆ. ಆದರೆ, ವಿಧಾನಸೌಧದ ಬ್ಯಾಂಕ್ವೆಟ್​ ಹಾಲ್​ನಲ್ಲಿ …

Read More »

ಬೆಳಗಾವಿ, ಧಾರವಾಡ ಮತ್ತು ಹಾವೇರಿಯಲ್ಲಿ ಸೆ.12ರಂದು ಜೋರು ಮಳೆ ?ಇಲ್ಲಿದೆ ಅಲರ್ಟ್ ವಿವರ..

ಬೆಂಗಳೂರು: ರಾಜ್ಯದ ಹಲವೆಡೆ ಸುರಿಯುತ್ತಿರುವ ಮಳೆ ತಗ್ಗಿದೆ. ಭಾನುವಾರ ಕೆಲವೆಡೆ ಮಾತ್ರ ಮಳೆಯಾಗಿದ್ದು, ಚಿಕ್ಕಮಗಳೂರಿನ ಕೊಟ್ಟಿಗೆಹಾರ 11, ಕೊಡಗಿನ ಭಾಗಮಂಡಲದಲ್ಲಿ 7 ಸೆಂ.ಮೀ. ಮಳೆ ಬಿದ್ದಿದೆ. ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ, ಬೆಳಗಾವಿ, ಧಾರವಾಡ ಮತ್ತು ಹಾವೇರಿಯಲ್ಲಿ ಸೆ.12ರಂದು ಜೋರು ಮಳೆ ಬೀಳುವ ಹಿನ್ನೆಲೆಯಲ್ಲಿ ಹವಾಮಾನ ಇಲಾಖೆ ಯೆಲ್ಲೋ ಅಲರ್ಟ್ ಕೊಟ್ಟಿದೆ. ಸೆ.13ರಿಂದ ಕರಾವಳಿ ಮತ್ತು ಉತ್ತರ ಒಳನಾಡಿನಲ್ಲಿ ಮಳೆ ಇಳಿಕೆಯಾಗಲಿದೆ. ಮಲೆನಾಡು ಮತ್ತು ದಕ್ಷಿಣ ಒಳನಾಡಿನಲ್ಲಿ ನಾಲ್ಕೈದು ದಿನಗಳಿಂದ …

Read More »

ಭ್ರಷ್ಟರ ಶಿಕಾರಿಗೆ ಲೋಕಾ ತಯಾರಿ: ಎಸಿಬಿ ಸಿಬ್ಬಂದಿ, ಕಡತಗಳ ಹಸ್ತಾಂತರ ಇಂದು ಪೂರ್ಣ

ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಸ್ಥಾಪನೆಯಿಂದ ಖದರ್ ಕಳೆದುಕೊಂಡು ಮಂಕಾಗಿದ್ದ ಲೋಕಾಯುಕ್ತಕ್ಕೀಗ ಹಳೇ ಖದರ್ ಮರಳಿದೆ. ಸೋಮವಾರದಿಂದ ಭ್ರಷ್ಟರ ಶಿಕಾರಿ ಮತ್ತೆ ಶುರುವಾಗಲಿದೆ. ಎಸಿಬಿಯಲ್ಲಿದ್ದ 141ಕ್ಕೂ ಹೆಚ್ಚು ಕಾನ್​ಸ್ಟೆಬಲ್ ಹಾಗೂ ಹೆಡ್ ಕಾನ್​ಸ್ಟೆಬಲ್​ಗಳು ಈಗಾಗಲೇ ಲೋಕಾಯುಕ್ತಕ್ಕೆ ವರ್ಗಾವಣೆಯಾಗಿದ್ದಾರೆ. ಸೋಮವಾರ ಸಂಜೆ ವೇಳೆಗೆ ಎಲ್ಲ ಪ್ರಕರಣಗಳ ಕಡತಗಳೂ ಲೋಕಾಯುಕ್ತ ಸುಪರ್ದಿಗೆ ಸೇರಿ ಎಸಿಬಿ ಸಂಪೂರ್ಣ ಇತಿಹಾಸ ಸೇರಲಿದೆ. ಏತನ್ಮಧ್ಯೆ ಎಸಿಬಿ ದಾಳಿಗೊಳಗಾದರೂ ನಿರಾಳರಾಗಿದ್ದ ಸರ್ಕಾರಿ ಅಧಿಕಾರಿಗಳು ಹಾಗೂ ರಾಜಕಾರಣಿಗಳಿಗೆ ಲೋಕಾಯುಕ್ತ ಭೀತಿ …

Read More »

ಇ.ಡಿ.ದಾಳಿ ಪ್ರಮಾಣ ಶೇ.27ರಷ್ಟು ಹೆಚ್ಚಳ; 2014ರಿಂದ 2022ರ ವರೆಗೆ 3,010 ದಾಳಿ

ನವದೆಹಲಿ: ದೇಶದಲ್ಲಿ ಆರ್ಥಿಕ ಅಪರಾಧಗಳ ಬಗ್ಗೆ ವಿಶೇಷವಾಗಿ ತನಿಖೆ ನಡೆಸುತ್ತಿರುವ ಜಾರಿ ನಿರ್ದೇಶನಾಲಯ (ಇ.ಡಿ.) ನಡೆಸುತ್ತಿರುವ ದಾಳಿಗಳ ಪ್ರಮಾಣ ಇತ್ತೀಚಿನ ವರ್ಷಗಳಲ್ಲಿ ಹೆಚ್ಚಾಗಿದೆ. ಜತೆಗೆ ಈ ದಾಳಿಗಳ ವೇಳೆ 1 ಲಕ್ಷ ಕೋಟಿ ರೂ.ಗಳನ್ನು ವಶಕ್ಕೆ ಪಡೆದುಕೊಂಡಿದೆ. 2004ರಿಂದ 2014ರ ವರೆಗೆ ಇ.ಡಿ. ಕೇವಲ 112 ದಾಳಿಗಳನ್ನು ನಡೆಸಿದ್ದರೆ, 2014ರಿಂದ 2022ರವರೆಗೆ 3,010 ದಾಳಿಗಳನ್ನು ನಡೆಸಲಾಗಿದೆ. ಶೇಕಡಾವಾರು ಲೆಕ್ಕಾಚಾರದಲ್ಲಿ ಹೇಳುವುದಿದ್ದರೆ 27ರಷ್ಟು ಹೆಚ್ಚಾಗಿದೆ. ಕೋಲ್ಕತಾದ ಮೊಬೈಲ್‌ ಗೇಮಿಂಗ್‌ ಆಯಪ್‌ ವ್ಯಾಪಾರಿಯ ನಿವಾಸ …

Read More »

ಗಣೇಶ ವಿಸರ್ಜನೆಯಲ್ಲಿ ಗಲಾಟೆ- ಯುವಕನ ಕೊಲೆಯಲ್ಲಿ ಅಂತ್ಯ

ಬೆಳಗಾವಿ: ಗಣೇಶ ವಿಸರ್ಜನೆ ವೇಳೆ ಆರಂಭವಾದ ಗಲಾಟೆಯು ಯುವಕನ(Young Man) ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಯರಗಟ್ಟಿ ತಾಲೂಕಿನ ಮುಗಳಿಹಾಳ ಗ್ರಾಮದಲ್ಲಿ ನಡೆದಿದೆ. ಬೆಳಗಾವಿ(Belagavi) ಜಿಲ್ಲೆಯ ಯರಗಟ್ಟಿ ತಾಲೂಕಿನ ಮುಗಳಿಹಾಳ ಗ್ರಾಮದ ನಿವಾಸಿ ಅರ್ಜುನಗೌಡ ಪಾಟೀಲ್ (20) ಕೊಲೆಯಾದ ಯುವಕನಾಗಿದ್ದಾನೆ. ನಿನ್ನೆ ಸಂಜೆ ನಡೆದ ಗಣೇಶ ವಿಸರ್ಜನೆ ವೇಳೆ ಎರಡು ಗುಂಪುಗಳ ನಡುವೆ ಆರಂಭವಾದ ಗಲಾಟೆ ವಿಕೋಪಕ್ಕೆ ತಿರುಗಿದೆ. ಮತ್ತೊಂದು ಗುಂಪಿನ ಯುವಕನೊಬ್ಬ ಅರ್ಜುನಗೌಡನಿಗೆ ಚಾಕು ಇರಿದಿದ್ದಾರೆ. ಈ ವೇಳೆ ಅರ್ಜುನಗೌಡ ಕುಸಿದು …

Read More »

ಬೆಳಗಾವಿಯಲ್ಲಿ ಮಹಾಮಳೆಗೆ ಮಹಿಳೆ ಬಲಿ

ಬೆಳಗಾವಿ: ಜಿಲ್ಲೆಯಲ್ಲಿ ಕಳೆದ ಎರಡು ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಧಾರಕಾರ ಮಳೆಗೆ ಮನೆಯ ಗೋಡೆ ಕುಸಿದು ಬಿದ್ದು ಮಹಿಳೆಯೊಬ್ಬರು ಸಾವನ್ನಪ್ಪಿದ ಘಟನೆ ಹೂಲಿಕಟ್ಟಿ ಗ್ರಾಮದಲ್ಲಿ ನಡೆದಿದೆ. ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಹೂಲಿಕಟ್ಟಿ ಗ್ರಾಮದ ಗಂಗವ್ವ ರಾಮಣ್ಣ ಮೂಲಿಮನಿ (55) ಮೃತ ಮಹಿಳೆ. ಕಳೆದ ಎರಡು ದಿನಗಳಿಂದ ಬೆಳಗಾವಿ ನಗರ ಸೇರಿದಂತೆ ವಿವಿಧ ಕಡೆ ವರುಣನ ಆರ್ಭಟ ಜೋರಾಗಿಯೇ ಇದೆ. ಹೂಲಿಕಟ್ಟಿ ಗ್ರಾಮದಲ್ಲಿಯೂ ಸಹ ಮಳೆ ಸಾಕಷ್ಟು ಹಾನಿ ಮಾಡಿದೆ.  ಇಂದು …

Read More »

ನಂದಿನಿ” ಹಾಲು ಪ್ರತಿ ಲೀ.ಗೆ 3 ರೂ. ಹೆಚ್ಚಳ…?*

ಬೆಂಗಳೂರು : ಹೈನುಗಾರಿಕೆಗೆ ಹೆಚ್ಚಿನ ಒತ್ತು ನೀಡಲು ರೈತರ ಆರ್ಥಿಕಾಭಿವೃದ್ಧಿಗೆ ಪ್ರತಿ ಲೀಟರ್ ಹಾಲಿಗೆ 3 ರೂ. ಹೆಚ್ಚಳ ಮಾಡಲು ಕೆಎಂಎಫ್ ನಿರ್ಧರಿಸಿದೆ ಎಂದು ತಿಳಿದುಬಂದಿದೆ. ಕಳೆದ ಶುಕ್ರವಾರದಂದು ನಗರದ ಖಾಸಗಿ ಹೊಟೇಲ್‍ನಲ್ಲಿ ಜರುಗಿದ ಕೆಎಂಎಫ್‍ನ ವಾರ್ಷಿಕ ಸರ್ವ ಸಾಧಾರಣ ಸಭೆಯಲ್ಲಿ ಈ ಬಗ್ಗೆ ಸರ್ವಾನುಮತದ ನಿರ್ಣಯ ಕೈಗೊಂಡಿದ್ದು, ಕೆಎಂಎಫ್‍ನ ಎಲ್ಲ 14 ಜಿಲ್ಲಾ ಹಾಲು ಒಕ್ಕೂಟಗಳು ಹಾಲಿನ ದರ ಹೆಚ್ಚಳ ಮಾಡುವುದರ ಬಗ್ಗೆ ಒಲುವು ತೋರಿವೆ ಎಂದು ಹೇಳಲಾಗುತ್ತಿದೆ. …

Read More »

ವಿಜಯಪುರದಲ್ಲಿ ಭಾರಿ ಮಳೆ ವಸತಿ ಪ್ರದೇಶ ಜಲಾವೃತ

ವಿಜಯಪುರ: ಜಿಲ್ಲೆಯಲ್ಲಿ ಶನಿವಾರ ಸಂಜೆ ಸುರಿದ ಭಾರಿ ಮಳೆಗೆ ಜನಜೀವನ ಅಸ್ತವ್ಯಸ್ತವಾಗಿದೆ. ಆಲಮೇಲ ತಾಲೂಕಿನ ಬಗಲೂರು ಬಳಿ ಭೀಮಾ ನದಿಯ ಸೇತುವೆ ಮುಳುಗಡೆಯಾಗಿದ್ದು, ಗ್ರಾಮದ ಸಂಪರ್ಕ ಕಡಿತವಾಗಿದೆ. ನಗರದಲ್ಲಿ ಹಲವು ಕಡೆಗಳಲ್ಲಿ ಜನವಸತಿ ಪ್ರದೇಶಗಳಿಗೆ ಮಳೆ ನೀರು ನುಗ್ಗಿ ನಷ್ಟ ಸಂಭವಿಸಿದೆ.   ಭೀಮಾ ಜಲಾನಯನ ಪ್ರದೇಶದಲ್ಲಿ ಭಾರಿ ಮಳೆ ಸುರಿಯುತ್ತಿರುವ ಕಾರಣ, ವಿವಿಧ ಜಲಾಶಯ, ಬಾಂದಾರುಗಳಿಂದ ಭಾರಿ ಪ್ರಮಾಣದಲ್ಲಿ ನದಿಗೆ ನೀರು ಹೊರ ಬಿಡಲಾಗಿದೆ. ಪರಿಣಾಮ ಆಲಮೇಲ ತಾಲೂಕಿನ …

Read More »