Breaking News

Daily Archives: ಸೆಪ್ಟೆಂಬರ್ 12, 2022

ಕೆರೆ ಬಳಿ ರೀಲ್ಸ್​ ಮಾಡಲು ಹೋಗಿ ಪ್ರಾಣ ಕಳೆದುಕೊಂಡ ಯುವತಿ!

ಚಿಕ್ಕಬಳ್ಳಾಪುರ: ಸಾಮಾಜಿಕ ಜಾಲತಾಣದಲ್ಲಿ ಹಾಕಿಕೊಳ್ಳುವ ಸಲುವಾಗಿ ರೀಲ್ಸ್​ ಮಾಡುವ ಒಂದೇ ಕಾರಣಕ್ಕೆ ಏನೇನೋ ಸಾಹಸಕ್ಕೆ ಮುಂದಾಗಿ ಅನಾಹುತ ಮಾಡಿಕೊಂಡ ಪ್ರಕರಣಗಳು ಬೇಕಾದಷ್ಟು ಇವೆ. ಇನ್ನು ಕೆಲವರು ಹಾಗೆ ಮಾಡಲು ಹೋಗಿ ಪ್ರಾಣ ಕಳೆದುಕೊಂಡಿದ್ದೂ ಇದೆ. ಅಂಥದ್ದೇ ಒಂದು ಪ್ರಕರಣವಿದು. ಇಲ್ಲೊಬ್ಬಳು ಯುವತಿ ರೀಲ್ಸ್ ಮಾಡಲು ಹೋಗಿ ಎಡವಟ್ಟು ಮಾಡಿಕೊಂಡು ಪ್ರಾಣ ಕಳೆದುಕೊಂಡಿದ್ದಾಳೆ. ಚಿಕ್ಕಬಳ್ಳಾಪುರ ಜಿಲ್ಲೆಯ ಗಂಗಾನಹಳ್ಳಿ ಗ್ರಾಮದ ಬಳಿ ಈ ಅವಘಡ ನಡೆದಿದೆ. ಅಮೃತ (22) ಸಾವಿಗೀಡಾದ ಯುವತಿ. ಈಕೆ ಮೂಲತಃ …

Read More »

ನಾರಾಯಣ ಗುರುಗಳಿಗೆ ಸಿಎಂ ಅಪಮಾನ: ಬೇಸರ ಹೊರ ಹಾಕುತ್ತಲೇ ಎಚ್ಚರಿಕೆ ಸಂದೇಶ ರವಾನಿಸಿದ ಪ್ರಣವಾನಂದ ಸ್ವಾಮೀಜಿ

ದಾವಣಗೆರೆ: ಶ್ರೀ ನಾರಾಯಣ ಗುರುಗಳ ಜಯಂತಿ ದಿನದಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ನಡೆ ವಿರುದ್ಧ ಡಾ. ಪ್ರಣವಾನಂದ ಸ್ವಾಮೀಜಿ ಅಸಮಾಧಾನ ಹೊರಹಾಕಿದ್ದಾರೆ. ವಿಶ್ವಕ್ಕೆ ಸಮಾನತೆ ಸಾರಿರುವ ವಿಶ್ವಗುರು ಬ್ರಹ್ಮಶ್ರೀ ನಾರಾಯಣ ಗುರುಗಳ ಜಯಂತಿ ದಿನದಂದು ನಾರಾಯಣ ಗುರುಗಳ ಭಾವಚಿತ್ರಕ್ಕೆ ಮುಖ್ಯಮಂತ್ರಿಗಳು ಪೂಜೆ ಸಲ್ಲಿಸಲಿಲ್ಲ. ವಿಧಾನಸಭೆಯಲ್ಲಿ ಎಲ್ಲ ಶರಣರ ಭಾವಚಿತ್ರಕ್ಕೆ ಅವರ ಜಯಂತಿ ದಿನದಂದು ಪುಷ್ಪ ನಮನ ಸಲ್ಲಿಸಿ ಪೂಜೆ ಸಲ್ಲಿಸುವ ಪದ್ಧತಿ ನಡೆದು ಬಂದಿದೆ. ಆದರೆ, ವಿಧಾನಸೌಧದ ಬ್ಯಾಂಕ್ವೆಟ್​ ಹಾಲ್​ನಲ್ಲಿ …

Read More »

ಬೆಳಗಾವಿ, ಧಾರವಾಡ ಮತ್ತು ಹಾವೇರಿಯಲ್ಲಿ ಸೆ.12ರಂದು ಜೋರು ಮಳೆ ?ಇಲ್ಲಿದೆ ಅಲರ್ಟ್ ವಿವರ..

ಬೆಂಗಳೂರು: ರಾಜ್ಯದ ಹಲವೆಡೆ ಸುರಿಯುತ್ತಿರುವ ಮಳೆ ತಗ್ಗಿದೆ. ಭಾನುವಾರ ಕೆಲವೆಡೆ ಮಾತ್ರ ಮಳೆಯಾಗಿದ್ದು, ಚಿಕ್ಕಮಗಳೂರಿನ ಕೊಟ್ಟಿಗೆಹಾರ 11, ಕೊಡಗಿನ ಭಾಗಮಂಡಲದಲ್ಲಿ 7 ಸೆಂ.ಮೀ. ಮಳೆ ಬಿದ್ದಿದೆ. ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ, ಬೆಳಗಾವಿ, ಧಾರವಾಡ ಮತ್ತು ಹಾವೇರಿಯಲ್ಲಿ ಸೆ.12ರಂದು ಜೋರು ಮಳೆ ಬೀಳುವ ಹಿನ್ನೆಲೆಯಲ್ಲಿ ಹವಾಮಾನ ಇಲಾಖೆ ಯೆಲ್ಲೋ ಅಲರ್ಟ್ ಕೊಟ್ಟಿದೆ. ಸೆ.13ರಿಂದ ಕರಾವಳಿ ಮತ್ತು ಉತ್ತರ ಒಳನಾಡಿನಲ್ಲಿ ಮಳೆ ಇಳಿಕೆಯಾಗಲಿದೆ. ಮಲೆನಾಡು ಮತ್ತು ದಕ್ಷಿಣ ಒಳನಾಡಿನಲ್ಲಿ ನಾಲ್ಕೈದು ದಿನಗಳಿಂದ …

Read More »

ಭ್ರಷ್ಟರ ಶಿಕಾರಿಗೆ ಲೋಕಾ ತಯಾರಿ: ಎಸಿಬಿ ಸಿಬ್ಬಂದಿ, ಕಡತಗಳ ಹಸ್ತಾಂತರ ಇಂದು ಪೂರ್ಣ

ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಸ್ಥಾಪನೆಯಿಂದ ಖದರ್ ಕಳೆದುಕೊಂಡು ಮಂಕಾಗಿದ್ದ ಲೋಕಾಯುಕ್ತಕ್ಕೀಗ ಹಳೇ ಖದರ್ ಮರಳಿದೆ. ಸೋಮವಾರದಿಂದ ಭ್ರಷ್ಟರ ಶಿಕಾರಿ ಮತ್ತೆ ಶುರುವಾಗಲಿದೆ. ಎಸಿಬಿಯಲ್ಲಿದ್ದ 141ಕ್ಕೂ ಹೆಚ್ಚು ಕಾನ್​ಸ್ಟೆಬಲ್ ಹಾಗೂ ಹೆಡ್ ಕಾನ್​ಸ್ಟೆಬಲ್​ಗಳು ಈಗಾಗಲೇ ಲೋಕಾಯುಕ್ತಕ್ಕೆ ವರ್ಗಾವಣೆಯಾಗಿದ್ದಾರೆ. ಸೋಮವಾರ ಸಂಜೆ ವೇಳೆಗೆ ಎಲ್ಲ ಪ್ರಕರಣಗಳ ಕಡತಗಳೂ ಲೋಕಾಯುಕ್ತ ಸುಪರ್ದಿಗೆ ಸೇರಿ ಎಸಿಬಿ ಸಂಪೂರ್ಣ ಇತಿಹಾಸ ಸೇರಲಿದೆ. ಏತನ್ಮಧ್ಯೆ ಎಸಿಬಿ ದಾಳಿಗೊಳಗಾದರೂ ನಿರಾಳರಾಗಿದ್ದ ಸರ್ಕಾರಿ ಅಧಿಕಾರಿಗಳು ಹಾಗೂ ರಾಜಕಾರಣಿಗಳಿಗೆ ಲೋಕಾಯುಕ್ತ ಭೀತಿ …

Read More »

ಇ.ಡಿ.ದಾಳಿ ಪ್ರಮಾಣ ಶೇ.27ರಷ್ಟು ಹೆಚ್ಚಳ; 2014ರಿಂದ 2022ರ ವರೆಗೆ 3,010 ದಾಳಿ

ನವದೆಹಲಿ: ದೇಶದಲ್ಲಿ ಆರ್ಥಿಕ ಅಪರಾಧಗಳ ಬಗ್ಗೆ ವಿಶೇಷವಾಗಿ ತನಿಖೆ ನಡೆಸುತ್ತಿರುವ ಜಾರಿ ನಿರ್ದೇಶನಾಲಯ (ಇ.ಡಿ.) ನಡೆಸುತ್ತಿರುವ ದಾಳಿಗಳ ಪ್ರಮಾಣ ಇತ್ತೀಚಿನ ವರ್ಷಗಳಲ್ಲಿ ಹೆಚ್ಚಾಗಿದೆ. ಜತೆಗೆ ಈ ದಾಳಿಗಳ ವೇಳೆ 1 ಲಕ್ಷ ಕೋಟಿ ರೂ.ಗಳನ್ನು ವಶಕ್ಕೆ ಪಡೆದುಕೊಂಡಿದೆ. 2004ರಿಂದ 2014ರ ವರೆಗೆ ಇ.ಡಿ. ಕೇವಲ 112 ದಾಳಿಗಳನ್ನು ನಡೆಸಿದ್ದರೆ, 2014ರಿಂದ 2022ರವರೆಗೆ 3,010 ದಾಳಿಗಳನ್ನು ನಡೆಸಲಾಗಿದೆ. ಶೇಕಡಾವಾರು ಲೆಕ್ಕಾಚಾರದಲ್ಲಿ ಹೇಳುವುದಿದ್ದರೆ 27ರಷ್ಟು ಹೆಚ್ಚಾಗಿದೆ. ಕೋಲ್ಕತಾದ ಮೊಬೈಲ್‌ ಗೇಮಿಂಗ್‌ ಆಯಪ್‌ ವ್ಯಾಪಾರಿಯ ನಿವಾಸ …

Read More »