Breaking News

Daily Archives: ಸೆಪ್ಟೆಂಬರ್ 1, 2022

ನವೆಂಬರ್ 2ರಂದು ಕೆಂಪೇಗೌಡರ ಪ್ರತಿಮೆ ಉದ್ಘಾಟನೆಗೆ ಮೋದಿ ಆಗಮನ: ಸಿಎಂ ಬೊಮ್ಮಾಯಿ ಮಾಹಿತಿ

ಬೆಂಗಳೂರು: ನಗರದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಿರ್ಮಾಣ ಹಂತದಲ್ಲಿರುವ ನಾಡಪ್ರಭು ಕೆಂಪೇಗೌಡರ ಪ್ರತಿಮೆಯನ್ನು ನವೆಂಬರ್ 2 ರಂದು ಪ್ರಧಾನಿ ಮೋದಿ ಉದ್ಘಾಟನೆ ಮಾಡಲಿದ್ದಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು. ನಾಡಪ್ರಭು ಕೆಂಪೇಗೌಡ ಥೀಮ್ ಪಾರ್ಕ್ ಅಭಿವೃದ್ಧಿ ಭೂಮಿ ಪೂಜೆಗೆ ತೆರಳಿದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರೋಮ್‌ನಲ್ಲಿ ಅಲೆಗ್ಸಾಂಡರ್‌ ಗೆ ಅರಿಸ್ಟಾಟಲ್‌ ಪಾಠ ಹೇಳಿದ ಜಾಗವೆಂದು ಒಂದು ಕಲ್ಲಿಟ್ಟು ಇತಿಹಾಸ ಹೇಳುತ್ತಾರೆ. ಆದರೆ ನಮ್ಮಲ್ಲಿ ಅದಕ್ಕಿಂದ ದೊಡ್ಡ ಇತಿಹಾಸವಿದೆ. …

Read More »

ರಾಜ್ಯಕ್ಕೆ ಉತ್ತರ ಪ್ರದೇಶ ಸಿಎಂ ಯೋಗಿ

ಬೆಂಗಳೂರು: ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​ ಅವರು ಒಂದು ದಿನದ ಕರ್ನಾಟಕ ಪ್ರವಾಸ ಕೈಗೊಂಡಿದ್ದಾರೆ. ನೆಲಮಂಗಲ ಬಳಿ ಇರುವ ಧರ್ಮಸ್ಥಳದ ಮಂಜುನಾಥೇಶ್ವರ ಪ್ರಕೃತಿ ಚಿಕಿತ್ಸೆ ಮತ್ತು ಯೋಗ ವಿಜ್ಞಾನ ಕೇಂದ್ರಕ್ಕೆ ಭೇಟಿ ನೀಡಿರುವ ಅವರು, ಕ್ಷೇಮವನ ಉದ್ಘಾಟನೆ ಮಾಡಿದ್ದಾರೆ. ರಾಜ್ಯಸಭಾ ಸದಸ್ಯರಾಗಿ ಹೊಸದಾಗಿ ನೇಮಕಗೊಂಡಿರುವ ಧರ್ಮಸ್ಥಳದ ಧರ್ಮಾಧಿಕಾರಿ ಡಾ ವೀರೇಂದ್ರ ಹೆಗ್ಗಡೆ ಅವರ ಮನವಿ ಮೇರೆಗೆ ಯುಪಿ ಸಿಎಂ ರಾಜ್ಯಕ್ಕೆ ಆಗಮಿಸಿದ್ದಾರೆ. ಬೆಳಗ್ಗೆ ಉತ್ತರ ಪ್ರದೇಶದಿಂದ ಹೊರಟು 11.30ಕ್ಕೆ ಬೆಂಗಳೂರಿನ …

Read More »

ಸತೀಶ್ ಜಾರಕಿಹೊಳಿ ಯಾವ ಕ್ಷೇತ್ರ ದಿಂದ ಸ್ಪರ್ಧೆ ಮಾಡ್ತಾರೆ ಪ್ರಶ್ನೆಗೆ ಉತ್ತರ ಇಲ್ಲಿದೆ ನೋಡಿ

ಕಾಂಗ್ರೆಸ್ ಟಿಕೆಟ್ ಪಡೆಯಲು ಅಭ್ಯರ್ಥಿ ಆಯಾ ಕ್ಷೇತ್ರದಲ್ಲಿ ಜನಪ್ರಿಯತೆ, ಆಕರ್ಷಣಿಯ ವ್ಯಕ್ತಿತ್ವ ಹೊಂದಿರಬೇಕು. ಒಳ್ಳೆಯ ಕೆಲಸ ಮಾಡಿರಬೇಕು. ಎಲ್ಲಾ ಪಕ್ಷಗಳ ಟಿಕೆಟ್ ಅಂತಿಮವಾದ ಮೇಲೆ ಕೊನೆಯ ಸರ್ವೇ ಮಾಡಿ ನಮ್ಮ ಅಭ್ಯರ್ಥಿಯನ್ನು ಫೈನಲ್ ಮಾಡುತ್ತೇವೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಹೇಳಿದರು. ಎರಡು ಕ್ಷೇತ್ರಗಳಿಂದ ಸತೀಶ ಜಾರಕಿಹೊಳಿ ಸ್ಪರ್ಧಿಸಬೇಕು ಎಂಬ ಬೆಂಬಲಿಗರ ಒತ್ತಾಯದ ಬಗ್ಗೆ ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಗೋಕಾಕ್‍ನಲ್ಲಿ ಉತ್ತರಿಸಿದ ಸತೀಶ ಜಾರಕಿಹೊಳಿ ಆ ರೀತಿ ಇರಬಹುದು, …

Read More »

ಏಕಾಏಕಿ ಸಾವರ್ಕರ್ ಪೋಟೋ ಫ್ಲೆಕ್ಸ್ ತೆರವು…!: ಹು-ಧಾ ಮಹಾನಗರ ಪಾಲಿಕೆ

ಈದ್ಗಾ ಮೈದಾನ ಗಣೇಶೋತ್ಸವದಲ್ಲಿ ಸಾವರ್ಕರ್ ಫೋಟೋ ವಿವಾದಕ್ಕೆ ಹು-ಧಾ ಮಹಾನಗರ ಪಾಲಿಕೆ ತೆರೆ ಎಳೆದಿದ್ದು, ಸಾವರ್ಕರ್ ಫೋಟೊ ಇರುವ ಫ್ಲೆಕ್ಸ್ ತೆರವುಗೊಳಿಸುವ ಮೂಲಕ ವಿವಾದಕ್ಕೆ ಬ್ರೇಕ್ ಹಾಕಿದೆ. ಹೌದು.. ಪಾಲಿಕೆ ಆಯುಕ್ತರ ಸೂಚನೆ ಮೇರೆಗೆ ಗಣೇಶ ಮೂರ್ತಿ ಹಿಂದುಗಡೆ ಹಾಕಿದ್ದ ಫ್ಲೆಕ್ಸ್ ತೆರವು ಮಾಡಿದ್ದು, ಮುಂದಿನ ದಿನಗಳಲ್ಲಿ ಅನುಮತಿಗೆ ತೊಂದರೆ ಆಗಬಹುದು ಎನ್ನುವ ಲೆಕ್ಕಾಚಾರದ ಹಿನ್ನೆಲೆಯಲ್ಲಿ ಕೊನೆಗೂ ಗಣೇಶ ಪೆಂಡಾಲ್ ನಲ್ಲಿದ್ದ ಸಾವರ್ಕರ್ ಫೋಟೋ ತೆರವು ಮಾಡಿದ್ದಾರೆ. ಹೌದು.. ಪಾಲಿಕೆ …

Read More »

ಗಣೇಶೋತ್ಸವ ಆಚರಣೆ ಮಾಡದ ಶಾಲೆಯ ವಿರುದ್ಧ ವಿದ್ಯಾರ್ಥಿಗಳಿಂದ ಶಾಲೆಗೆ ಬೀಗ

ಸರಕಾರಿ ಶಾಲೆಯಲ್ಲಿ ಗಣೇಶ ಚತುರ್ಥಿ ಆಚರಣೆ ಮಾಡದ ಹಿನ್ನೆಲೆ ವಿದ್ಯಾರ್ಥಿಗಳು ಹಾಗೂ ಪಾಲಕರಿಂದ ಪ್ರತಿಭಟನೆ ನಡೆದಿರುವ ಘಟನೆ ವಿಜಯಪುರ ಜಿಲ್ಲೆ ನಿಡಗುಂದಿ ತಾಲೂಕಿನ ಯಲಗೂರ ಗ್ರಾಮದಲ್ಲಿ ನಡೆದಿದೆ. ಯಲಗೂರ ಗ್ರಾಮದ ಸರಕಾರಿ ಪ್ರೌಢ ಶಾಲೆಗೆ ಬೀಗ ಜಡಿದು ಪ್ರತಿಭಟನೆ ನಡೆಸಿ ಶಾಲಾ ಆವರಣದಲ್ಲಿನ ಮರದ ಕೆಳಗೆ ಕುಳಿತು ಮಕ್ಕಳು ಪಾಠ ಕಲಿಯುತ್ತಿದ್ದಾರೆ. ಪ್ರತಿವರ್ಷ ಗಣೇ ಮೂರ್ತಿ ತಂದು ಪ್ರತಿಷ್ಠಾಪಿಸ ಲಾಗುತ್ತಿತ್ತು ಈ ಬಾರಿ ಮುಖ್ಯ ಗುರುಗಳಿಂದ ಆಚರಣೆ ಆಗಿಲ್ಲ. ಶಾಲೆಯ …

Read More »

ಬೆಳಗಾವಿ ಗಣೇಶೋತ್ಸವದಲ್ಲಿ ವೀರ್ ಸಾವರ್ಕರ್ ಹವಾ ಜೋರು

ಶತಮಾನದ ಇತಿಹಾಸ ಹೊಂದಿರುವ ಬೆಳಗಾವಿ ಗಣೇಶೋತ್ಸವದಲ್ಲಿ ವೀರ್ ಸಾವರ್ಕರ್ ಹವಾ ಜೋರಾಗಿದ್ದು. ಬೆಳಗಾವಿಯ ಸಾರ್ವಜನಿಕ ಗಣೇಶೋತ್ಸವ ಮಂಟಪಗಳಲ್ಲಿ ಸಾವರ್ಕರ್ ಫೆÇೀಟೋ ಇಟ್ಟು ಪೂಜೆ ಮಾಡಲಾಗಿದೆ. ಹೌದು ಬೆಳಗಾವಿಯ ರಾಮತೀರ್ಥ ನಗರ, ಚನ್ನಬಸವೇಶ್ವರ ಬಡಾವಣೆಯ ಗಣೇಶೋತ್ಸವ ಮಂಡಳಿಗಳಿಂದ ವಿಘ್ನನಿವಾರಕನ ಜೊತೆಗೆ ಸಾವರ್ಕರ್‍ಗೂ ಪೂಜೆ ವಿಶೇಷ ಪೂಜೆ ಸಲ್ಲಿಸಲಾಗುತ್ತಿದೆ. ಗಣೇಶೋತ್ಸವ ಮಂಡಳಿಗಳಿಗೆ ಬೆಳಗಾವಿ ಮಹಾನಗರ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮುರುಘೇಂದ್ರಗೌಡ ಪಾಟೀಲ್ ಸಾವರ್ಕರ್ ಭಾವಚಿತ್ರ ವಿತರಿಸಿದ್ದರು. ಗಣೇಶೋತ್ಸವ ಮಂಟಪಗಳಲ್ಲಿ ವೀರ್ ಸಾವರ್ಕರ್ …

Read More »

ರಾಜ್ಯದಲ್ಲಿ ಬಿಜೆಪಿ ಪಕ್ಷ ಹುಟ್ಟಿರೋದೇ ಭ್ರಷ್ಟಾಚಾರದಿಂದ.: ಭ್ರಷ್ಟಾಚಾರ ವಿರುದ್ಧ ಪ್ರಧಾನಿ ಮೋದಿ ಮಾತನಾಡುತ್ತಾರೆ: ಭಾಸ್ಕರ್‍ರಾವ್

ರಾಜ್ಯದಲ್ಲಿ ಬಿಜೆಪಿ ಪಕ್ಷ ಹುಟ್ಟಿರೋದೇ ಭ್ರಷ್ಟಾಚಾರದಿಂದ. ಬಾಂಬೆಯಲ್ಲಿ ಕಾಂಗ್ರೆಸ್, ಜೆಡಿಎಸ್ ಶಾಸಕರನ್ನು ಇರಿಸಿ, ಅವರ ವಿಡಿಯೋ ಮಾಡಿ ಬ್ಲಾಕ್‍ಮೇಲ್ ಮಾಡಿ ಇವರು ಅಧಿಕಾರಕ್ಕೆ ಬಂದಿದ್ದಾರೆ. ಕೆಂಪು ಕೋಟೆ ಮೇಲೆ ನಿಂತು ಭ್ರಷ್ಟಾಚಾರ ವಿರುದ್ಧ ಪ್ರಧಾನಿ ಮೋದಿ ಮಾತನಾಡುತ್ತಾರೆ. ನಾನು ಯಾವುದೇ ಕಾರಣಕ್ಕೂ ಭ್ರಷ್ಟಾಚಾರಕ್ಕೆ ಹೊಂದಾಣಿಕೆ ಮಾಡಿಕೊಳ್ಳುವುದಿಲ್ಲ. ಆದರೆ ಇಷ್ಟೆಲ್ಲಾ ಭ್ರಷ್ಟಾಚಾರ ನಡೆಯುತ್ತಿದ್ದರೂ ಕಣ್ಮುಚ್ಚಿ ಕುಳಿತಿದ್ದಾರೆ ಎಂದು ಆಮ್ ಆದ್ಮಿ ಪಕ್ಷದ ಮುಖಂಡ ಭಾಸ್ಕರ್‍ರಾವ್ ಆರೋಪಿಸಿದರು. ಬೆಳಗಾವಿಯಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ …

Read More »

ಮಕ್ಕಳ ಹಕ್ಕು ರಕ್ಷಣಾ ಆಯೋಗದಿಂದ ಸ್ವಾಮೀಜಿ ವಿರುದ್ಧ ಸುಮೋಟೋ ಕೇಸ್ ದಾಖಲ

ಚಿತ್ರದುರ್ಗ : ಮುರುಘಾಮಠದ ಶ್ರೀಗಳ ವಿರುದ್ಧ ಪೋಕ್ಸೋ ಪ್ರಕರಣ ಸಂಬಂಧ ರಾಷ್ಟ್ರೀಯ ಮಕ್ಕಳ ಹಕ್ಕು ರಕ್ಷಣಾ ಆಯೋಗದಿಂದ ಸ್ವಾಮೀಜಿ ವಿರುದ್ಧ ಸುಮೋಟೋ ಕೇಸ್ ದಾಖಲಿಸಲಾಗಿದೆ. ರಾಷ್ಟ್ರೀಯ ಮಕ್ಕಳ ಹಕ್ಕು ರಕ್ಷಣಾ ಆಯೋಗ ಚಿತ್ರದುರ್ಗದ ಎಸ್ ಪಿ ಅವರಿಗೆ ನೋಟಿಸ್ ನೀಡಲಾಗಿದ್ದು, ಮುರುಘಾಮಠದ ಶ್ರೀಗಳ ವಿರುದ್ಧ ಸುಮೋಟೋ ಕೇಸ್ ದಾಖಲಿಸಿದೆ. ಪ್ರಕರಣದ ಬಗ್ಗೆ ವರದಿ ನೀಡುವಂತೆ ಎಸ್ ಪಿ ಸೂಚನೆ ನೀಡಲಾಗಿದೆ. ಸ್ವಾಮೀಜಿ ವಿರುದ್ಧ ಸ್ವಯಂ ಪ್ರೇರಿತ ಕೇಸ್ ದಾಖಲಿಸಿಕೊಂಡ ರಾಷ್ಟ್ರೀಯ …

Read More »

ವಿಡಿಯೋ: 20 ಸಾವಿರ ಪ್ಲಾಸ್ಟಿಕ್​ ಬಾಟಲ್‌​ಗಳಿಂದ ತಯಾರಾದ ಗಣೇಶ

ಬಾಗಲಕೋಟೆಯ ಇಳಕಲ್ಲು ಪಟ್ಟಣದ ವಿಜಯ ಚಿತ್ರಕಲಾ ಮಹಾವಿದ್ಯಾಲಯ ಕಾಲೇಜಿನಲ್ಲಿ ವಿಶೇಷವಾಗಿ ಪ್ಲಾಸ್ಟಿಕ್​ ಬಾಟಲ್​ಗಳಿಂದ ಗಣೇಶ ಮೂರ್ತಿ ತಯಾರಿಸಲಾಗಿದೆ. ​20 ಅಡಿ ಎತ್ತರದ ಮೂರ್ತಿಗೆ ಸುಮಾರು 20 ಸಾವಿರ ಬಾಟಲ್‌ಗಳನ್ನು ಬಳಸಲಾಗಿದೆ. ಕಳೆದ 30 ವರ್ಷಗಳಿಂದ ಕಾಲೇಜಿನಲ್ಲಿ ಗಣೇಶೋತ್ಸವ ಆಚರಿಸಲಾಗುತ್ತಿದ್ದು, ಈ ಬಾರಿ ನಿರುಪಯುಕ್ತ ವಸ್ತುಗಳಿಂದ ತಯಾರಿಸಿದ ಗಣೇಶ ಮೂರ್ತಿ ಗಮನ ಸೆಳೆದಿದೆ.

Read More »

ಎಲ್​​​ಪಿಜಿ ಸಿಲಿಂಡರ್​ ಬೆಲೆಯಲ್ಲಿ 91 ರೂ. ಇಳಿಕೆ

ನವದೆಹಲಿ: ಸೆಪ್ಟೆಂಬರ್ ತಿಂಗಳ ಮೊದಲ ದಿನವೇ ಗ್ರಾಹಕರಿಗೆ ಒಳ್ಳೆಯ ಸುದ್ದಿ ಸಿಕ್ಕಿದೆ. ಎಲ್​​​ಪಿಜಿ ಗ್ಯಾಸ್​ ಬೆಲೆಯಲ್ಲಿ ತುಸು ಇಳಿಕೆ ಕಂಡು ಬಂದಿದೆ. ತೈಲ ಮಾರುಕಟ್ಟೆ ಕಂಪನಿಗಳು ವಾಣಿಜ್ಯ ಬಳಕೆಯ 19 ಕೆಜಿ ಎಲ್​​ಪಿಜಿ ಸಿಲಿಂಡರ್​ ಬೆಲೆಯಲ್ಲಿ 91.50 ಪೈಸೆ ಇಳಿಕೆ ಮಾಡಿವೆ. ಇಂದಿನಿಂದ ನೂತನ ದರ ಜಾರಿಗೆ ಬರಲಿದೆ. 19 ಕೆಜಿ ವಾಣಿಜ್ಯ ಇಂಧನ ಗ್ಯಾಸ್​ ಬೆಲೆ ಇದೀಗ 1,976 ರೂಪಾಯಿ ಬದಲಿಗೆ 1,885 ಆಗಿರುತ್ತದೆ. ತೈಲ ಕಂಪನಿಗಳು ಪ್ರತಿ ತಿಂಗಳ …

Read More »