ಹೈದರಾಬಾದ್: ಆಗಸ್ಟ್ 27 ರಂದು ವಿವಾಹವಾಗಿದ್ದ ವ್ಯಕ್ತಿಯೊಬ್ಬರು ಪತ್ನಿಯನ್ನು ಕೊಂದು ತಾನೂ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಪ್ರಗತಿನಗರದಲ್ಲಿ ಶನಿವಾರ ನಡೆದಿದೆ. ಮೃತ ಸುಧಾರಾಣಿ ಮೂಲತಃ ಕಾಮರೆಡ್ಡಿ ಜಿಲ್ಲೆಯವರಾಗಿದ್ದು, ಒಂದು ವಾರದಿಂದ ಬಾಚುಪಲ್ಲಿಯಲ್ಲಿ ಪತಿಯೊಂದಿಗೆ ನೆಲೆಸಿದ್ದರು. ಕಿರಣ್ ತನ್ನ ಹೆಂಡತಿ ಅಕ್ರಮ ವಿವಾಹೇತರ ಸಂಬಂಧ ಹೊಂದಿದ್ದು, ಆಕೆಯೊಂದಿಗೆ ನಿತ್ಯ ಜಗಳವಾಡುತ್ತಿದ್ದ ಎನ್ನಲಾಗಿದೆ. ಇತ್ತೀಚೆಗಷ್ಟೇ ಕುಟುಂಬದ ಹಿರಿಯರು ಇಬ್ಬರ ಜಗಳವನ್ನು ಬಗೆಹರಿಸಿ ಹೈದರಾಬಾದ್‌ಗೆ ಕಳುಹಿಸಿದ್ದಾರೆ. ಕಿರಣ್ ಕೋರಿಕೆಯ ಮೇರೆಗೆ ಸುಧಾರಾಣಿ ಅವರ ಪೋಷಕರು …
Read More »Yearly Archives: 2021
ವಿಧಾನಪರಿಷತ್ ಚುನಾವಣೆಗೆ ಶನಿವಾರ ಮೊದಲ ನಾಮಪತ್ರ ಸಲ್ಲಿಕೆಯಾಗಿದೆ.
– ಡಿಸೆಂಬರ್ 10ರಂದು ನಡೆಯಲಿರುವ ವಿಧಾನಪರಿಷತ್ ಚುನಾವಣೆಗೆ ಶನಿವಾರ ಮೊದಲ ನಾಮಪತ್ರ ಸಲ್ಲಿಕೆಯಾಗಿದೆ. 5ನೇ ದಿನ ಪಕ್ಷೇತರ ಅಭ್ಯರ್ಥಿಯಾಗಿ ರಾಮದುರ್ಗ ತಾಲೂಕಿನ ಲಖನಾಯಕನಕೊಪ್ಪದ ಸಂಗಮೇಶ ನಾಗಪ್ಪ ಚಿಕ್ಕನರಗುಂದ ಎನ್ನುವವರ ನಾಮಪತ್ರ ಸಲ್ಲಿಸಿದ್ದಾರೆ. ಈವರೆಗೂ ಯಾವುದೇ ಪಕ್ಷದ ಅಭ್ಯರ್ಥಿಗಳಿಂದ ನಾಮಪತ್ರ ಸಲ್ಲಿಕೆಯಾಗಿಲ್ಲ. ನ.23 ನಾಮಪತ್ರ ಸಲ್ಲಿಕೆಗೆ ಅಂತಿಮ ದಿನ. ಬಿಜೆಪಿಯಿಂದ ಮಹಾಂತೇಶ ಕವಟಗಿಮಠ, ಕಾಂಗ್ರೆಸ್ ನಿಂದ ಚನ್ನರಾಜ ಹಟ್ಟಿಹೊಳಿ ಸ್ಪರ್ಧೆ ಖಚಿತವಾಗಿದ್ದು, ಪಕ್ಷೇತರ ಅಭ್ಯರ್ಥಿಯಾಗಿ ಲಖನ್ ಜಾರಕಿಹೊಳಿ ನಾಮಪತ್ರ ಸಲ್ಲಿಸುವ ಸಾಧ್ಯತೆ ಇದೆ.
Read More »ಗೋಲ್ಡನ್ ಟೆಂಪಲ್‌ನ ಅದ್ಭುತ ವೈಮಾನಿಕ ಫೋಟೋ ಹಂಚಿಕೊಂಡ ಉದ್ಯಮಿ ಮಹೀಂದ್ರಾ
ಅಮೃತಸರದ ಗೋಲ್ಡನ್ ಟೆಂಪಲ್‌ನ ಅದ್ಭುತ ವೈಮಾನಿಕ ಚಿತ್ರಣವನ್ನು ಶುಕ್ರವಾರ ಟ್ವಿಟ್ಟರ್ ನಲ್ಲಿ ಕೈಗಾರಿಕೋದ್ಯಮಿ ಆನಂದ್ ಮಹೀಂದ್ರಾ ಹಂಚಿಕೊಂಡಿದ್ದು, ಗುರುಪುರಬ್ ಸಂದರ್ಭದಲ್ಲಿ ಜನರಿಗೆ ಶುಭ ಹಾರೈಸಿದ್ದಾರೆ.ವಿದ್ಯುತ್ ದೀಪಗಳಿಂದ ಸುಂದರವಾಗಿ ಬೆಳಗಿರುವ ಗೋಲ್ಡನ್ ಟೆಂಪಲ್, ಅಕಾಲ್ ತಖ್ತ್ ಮತ್ತು ಸರೋವರದ ಅದ್ಭುತ ವೈಮಾನಿಕ ಚಿತ್ರವನ್ನು ಅವರು ಹಂಚಿಕೊಂಡಿದ್ದಾರೆ. ಈ ವೇಳೆ ಎಲ್ಲರಿಗೂ ಟ್ವೀಟ್ ಮುಖಾಂತರ ಉದ್ಯಮಿ ಆನಂದ್ ಮಹೀಂದ್ರಾ ಅವರು ಗುರುಪುರಬ್‍ನ ಶುಭಾಶಯಗಳನ್ನು ತಿಳಿಸಿದ್ದಾರೆ. ಆನಂದ್ ಮಹೀಂದ್ರಾ ಅವರ ಟ್ವೀಟ್ ಗೆ ಪ್ರತಿಕ್ರಿಯಿಸಿದ …
Read More »ಹಿಟ್ಲರ್ ಆಡಳಿತ ಅಂತ್ಯ – ರಾಜ್ಯದಲ್ಲೂ ಕೃಷಿ ಕಾಯ್ದೆ ಹಿಂಪಡೆಯಲು ಮಾಜಿ ಸಚಿವ ಜಯಚಂದ್ರ ಆಗ್ರಹ
ರೈತರ ಹೋರಾಟಕ್ಕೆ ಪ್ರಧಾನಿ ನರೇಂದ್ರ ಮೋದಿ ತಲೆಬಾಗಿದ್ದು ಹಿಟ್ಲರ್ ಆಡಳಿತ ಕೊನೆಗೊಳ್ಳುವ ಸಾಧ್ಯತೆ ಇದೆ. ಆದ್ದರಿಂದ ಕೃಷಿ ಕಾಯ್ದೆಗಳನ್ನು ರಾಜ್ಯದಲ್ಲೂ ಹಿಂಪಡೆಯಬೇಕು ಎಂದು ಮಾಜಿ ಸಚಿವ ಟಿ.ಬಿ.ಜಯಂದ್ರ ಆಗ್ರಹಿಸಿದರು. ಬೆಂಗಳೂರಿನಲ್ಲಿ ಮಾತನಾಡಿದ ಅವರು, ವಿವಾದಾತ್ಮಕ ಕೃಷಿ ಕಾಯ್ದೆಗಳ ವಿರುದ್ಧ ನಡೆದ ಹೋರಾಟದಲ್ಲಿ 700 ರೈತರು ಪ್ರಾಣ ಕಳೆದುಕೊಂಡರು. ಆದರೂ ಕೃಷಿ ಕಾಯ್ದೆ ರದ್ದುಪಡಿಸದ ಕೇಂದ್ರ ಸರ್ಕಾರ ಮುಂದಿನ ಚುನಾವಣಾ ದೃಷ್ಟಿಯಲ್ಲಿಟ್ಟುಕೊಂಡು ಈಗ ಹಿಂಪಡೆಯುವ ತೀರ್ಮಾನಕ್ಕೆ ಬಂದಿದ್ದು ಬಿಜೆಪಿಗೆ ಜ್ಞಾನೋದಯವಾಗಿದೆ ಎಂದು …
Read More »ಬೆಳಗಾವಿ ಅಧಿವೇಶನದಲ್ಲಿ ಮತಾಂತರ ನಿಷೇಧ ಕಾನೂನು ಜಾರಿಯಾಗಲಿ
ಯಾದಗಿರಿ: ಮತಾಂತರ ನಿಷೇಧ ಕಾನೂನು ಬೆಳಗಾವಿ ಚಳಿಗಾಲದ ಅಧಿವೇಶನದಲ್ಲಿ ಜಾರಿ ಮಾಡಬೇಕು. ಇಲ್ಲವಾದಲ್ಲಿ ಉಗ್ರ ಹೋರಾಟ ನಡೆಸುವುದಾಗಿ ಶ್ರೀರಾಮಸೇನೆ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಎಚ್ಚರಿಕೆ ನೀಡಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಮತಾಂತರ ನಿಷೇಧ ಕಾನೂನು ಜಾರಿಯಾಗಬೇಕು. ಈ ಬಗ್ಗೆ ಬೆಳಗವೈ ಅಧಿವೇಶನದಲ್ಲಿ ಸರ್ಕಾರ ಘೋಷಣೆ ಮಾಡಬೇಕು. ಇಲ್ಲವಾದಲ್ಲಿ ಜಾವರಿ 1ರಿಂದ ರಾಜ್ಯದಲ್ಲಿ ಉಗ್ರ ಹೋರಾಟ ನಡೆಯಲಿದೆ ಎಂದರು. ಸ್ವಾತಂತ್ರ್ಯದ ಬಳಿಕ ದೇಶದಲ್ಲಿ ಈ ಕಾಯ್ದೆ ಜಾರಿಯಾಗಬೇಕಿತ್ತು. ಕಾಂಗ್ರೆಸ್ ವೋಟ್ ಬ್ಯಾಂಕ್ …
Read More »ಸುವರ್ಣ ವಿಧಾನಸೌಧದಲ್ಲಿ ಡಿ.13ರಿಂದ ಚಳಿಗಾಲದ ಅಧಿವೇಶನ
ಬೆಂಗಳೂರು,ನ.20- ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ಡಿಸೆಂಬರ್ 13ರಿಂದ ಚಳಿಗಾಲದ ಅಧಿವೇಶನ ನಡೆಯಲಿದೆ. ಅಂದು ಬೆಳಗ್ಗೆ 11 ಗಂಟೆಗೆ ಸುವರ್ಣವಿಧಾನಸೌಧದಲ್ಲಿ ಉಭಯ ಸದನಗಳು ಸಮಾವೇಶಗೊಳ್ಳುವಂತೆ ಅಧಿಸೂಚನೆ ಹೊರಡಿಸಲಾಗಿದೆ. ರಾಜ್ಯಪಾಲ ತಾವರ್‍ಚಂದ್ ಗೆಲ್ಹೋಟ್ ಅವರು ನಿನ್ನೆ ಈ ಸಂಬಂಧ ಅಧಿಸೂಚನೆ ಹೊರಡಿಸಿದ್ದು, ಕರ್ನಾಟಕ ವಿಧಾನಸಭೆ ಮತ್ತು ವಿಧಾನಪರಿಷತ್‍ನ ಅಧಿವೇಶನಗಳನ್ನು ಕರೆದಿದ್ದಾರೆ. ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರದಲ್ಲಿ ಹೆಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗ ಒಂದು ಅಧಿವೇಶನವನ್ನು ಸುವರ್ಣ ವಿಧಾನಸೌಧದಲ್ಲಿ ನಡೆಸಲಾಗಿತ್ತು. ಆನಂತರ ಈವರೆಗೂ ಅಧಿವೇಶನ ನಡೆಸಿಲ್ಲ. ಕಳೆದೆರಡು ವರ್ಷಗಳಿಂದ …
Read More »ರೈಲು ಹಳಿಯ ಮೇಲೆ ಬಾಂಬ್ ಸ್ಫೋಟ
ನವದೆಹಲಿ,ನ.20- ಜಾರ್ಖಂಡ್‍ನ ಧನ್‍ಬಾದ್ ವಿಭಾಗದಲ್ಲಿ ರೈಲು ಹಳಿಯ ಮೇಲೆ ಸ್ಫೋಟ ಸಂಭವಿಸಿ ಒಂದು ಡೀಸೆಲ್ ಎಂಜಿನ್ ಹಳಿತಪ್ಪಿದ ಘಟನೆ ಇಂದು ಮುಂಜಾನೆ ಜರುಗಿದೆ. ಇದು ಒಂದು ಬಾಂಬ್ ಸ್ಫೋಟವಾಗಿದ್ದು ಧನಬಾದ್ ವಿಭಾಗದ ಗರ್ವಾ ರಸ್ತೆ ಮತ್ತು ಬರ್ಕಣದ ನಡುವೆ ಸೋಟಗೊಂಡಿದೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ. ಇದು ಒಂದು ನಕ್ಸಲ್ ಸಂಬಂತ ಘಟನೆಯಾಗಿದೆ ಎಂದು ಮೂಲಗಳು ಸೂಚಿಸಿವೆ. ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿದ್ದು ಹಳಿಯ ಮೇಲೆ ಸಂಚಾರ ಪುನರಾರಂಭವಾಗುವುದನ್ನು ಕಾಯಲಾಗುತ್ತಿದೆ …
Read More »ಪ್ರಸಂಗ ಬಂದರೆ ಬ್ರಾಹ್ಮಣರು ತಲವಾರ ಹಿಡಿಯಲೂ ಸಿದ್ಧ ಎಂದು ಬ್ರಾಹ್ಮಣ ಸಮಾಜದ ಮುಖಂಡ ಅನಿಲ ಪೋತದಾರ
ಬೆಳಗಾವಿ: ಪೇಜಾವರ ಶ್ರೀಗಳು ಮಾನವ ಧರ್ಮ ಸ್ವೀಕಾರ ಮಾಡಿದವರು. ದಲಿತರಿರುವಲ್ಲಿಗೆ ಸ್ವತಃ ಹೋಗಿ ಪ್ರವಚನ ಮಾಡಿದ್ದಾರೆ. ದಲಿತರನ್ನು ಉದ್ಧಾರ ಮಾಡುವಲ್ಲಿ ಶ್ರಮಿಸಿದ್ದಾರೆ. ಇಂತಹ ವ್ಯಕ್ತಿಯ ವಿರುದ್ಧ ಮಾತನಾಡುವ ಹಂಸಲೇಖ ಅವರಿಗೆ ನಾಚಿಕೆಯಾಗಬೇಕು. ಬ್ರಾಹ್ಮಣರಿಗೆ ಏನನ್ನಾದರೂ ಅನ್ನಬಹುದೆಂಬ ಕಾಲವೊಂದಿತ್ತು ಆದರೆ ಈಗ ಹಾಗಿಲ್ಲ. ಬ್ರಾಹ್ಮಣರ ಜನಿವಾರವನ್ನು ಮಾತ್ರ ನೀವು ನೋಡಿದ್ದೀರಿ. ಅವರ ಹೃದಯದಲ್ಲಿರುವ ತಲವಾರವನ್ನು ನೀವು ನೋಡಿಲ್ಲ. ಪ್ರಸಂಗ ಬಂದರೆ ಬ್ರಾಹ್ಮಣರು ತಲವಾರ ಹಿಡಿಯಲೂ ಸಿದ್ಧ ಎಂದು ಬ್ರಾಹ್ಮಣ ಸಮಾಜದ ಮುಖಂಡ ಅನಿಲ …
Read More »ಪ್ರಧಾನಿ ನರೇಂದ್ರ ಮೋದಿ ಕೃಷಿ ಕಾಯ್ದೆ ಹಿಂಪಡೆಯುವ ಮೂಲಕ ರೈತ ಸಮುದಾಯಕ್ಕೆ ದೊಡ್ಡ ಕೊಡುಗೆ:B.S.Y.
ಬಾಗಲಕೋಟೆ: ಪ್ರಧಾನಿ ನರೇಂದ್ರ ಮೋದಿ ಕೃಷಿ ಕಾಯ್ದೆ ಹಿಂಪಡೆಯುವ ಮೂಲಕ ರೈತ ಸಮುದಾಯಕ್ಕೆ ದೊಡ್ಡ ಕೊಡುಗೆ ನೀಡಿದ್ದಾರೆ. ಸ್ವಲ್ಪ ತಡವಾದರೂ ಈ ದೃಢ ನಿರ್ಧಾರ ರೈತ ಸಮುದಾಯಕ್ಕೆ ದೊಡ್ಡ ಕೊಡುಗೆಯಾಗಿದೆ ಎಂದು ಬಾಗಲಕೋಟೆಯಲ್ಲಿ ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ ಹೇಳಿದ್ದಾರೆ. ಬಾಗಲಕೋಟೆಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿಯವರನ್ನು ಅಭಿನಂದಿಸುತ್ತೇನೆ. ಪ್ರತಿಷ್ಠೆ ಬದಿಗಿಟ್ಟುರೈತರ ಹೋರಾಟ ನೋಡಿದ ಮೇಲೆ ನರೇಂದ್ರ ಮೋದಿಯವರು ಮೂರು ಕಾಯ್ದೆ ಹಿಂಪಡೆದಿದ್ದು, ದೇಶದಲ್ಲಿ ರೈತರ ವಿಶ್ವಾಸ, …
Read More »ಹೊಸ ಕೃಷಿ ಕಾಯ್ದೆ ಬಗ್ಗೆ ರೈತರಿಗೆ ತಿಳಿ ಹೇಳುವಲ್ಲಿ ವಿಫಲರಾಗಿದ್ದೇವೆ: ಗೋವಿಂದ ಕಾರಜೋಳ
ಬಾಗಲಕೋಟೆ: ರೈತರ ಆದಾಯ ದ್ವಿಗುಣಗೊಳಿಸಬೇಕು. ರೈತರಿಗೆ ಅನುಕೂಲ ಆಗಬೇಕೆಂಬ ಕಾರಣಕ್ಕೆ ಪ್ರಧಾನಿ ನರೇಂದ್ರ ಮೋದಿಯವರು ಮೂರು ಕೃಷಿ ಕಾಯ್ದೆಗಳನ್ನು ತಂದಿದ್ರು. ಆದ್ರೆ ಎಲ್ಲೊ ಒಂದು ಕಡೆ ಹೊಸ ಕಾಯ್ದೆ ಬಗ್ಗೆ ರೈತರಿಗೆ ತಿಳಿ ಹೇಳುವಲ್ಲಿ ವಿಫಲ ಆಗಿದ್ದೇವೆ ಎಂದು ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ವಿಷಾದ ವ್ಯಕ್ತಪಡಿಸಿದರು. ಬಾಗಲಕೋಟೆಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮೂರು ಹೊಸ ಕೃಷಿ ಕಾಯ್ದೆಗಳ ಬಗ್ಗೆ ರೈತರಿಗೆ ತಿಳಿಸಿ ಹೇಳುವಲ್ಲಿ ನಾವು ವಿಫಲರಾಗಿದ್ದೇವೆ. ಕಾಂಗ್ರೆಸ್ …
Read More »