ನಮ್ಮ ದೇಶ, ರಾಜ್ಯದಲ್ಲಿ ಹವಾಮಾನ ಸರಿಯಿಲ್ಲ. ಚಳಿಗಾಲದ ಋತುವಿನಲ್ಲೂ ಮಳೆಗಾಲದಂತೆ ಆಗಿದೆ. ಹೀಗಾಗಿ ಇಂತಹ ವಾತಾವರಣದಿಂದ ಆರೋಗ್ಯ ಹದಗೆಡುತ್ತಿರುತ್ತದೆ. ಅದಕ್ಕಾಗಿ ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಬಹಳ ಮುಖ್ಯವಾಗಿದೆ. ಆಹಾರದಲ್ಲಿ ಬೆಳ್ಳುಳ್ಳಿಯನ್ನು ಉಪಯೋಗಿಸಿದ್ರೆ, ರೋಗನಿರೋಧಕ ಶಕ್ತಿ ಬಲಪಡಿಸುವಲ್ಲಿ ಇದು ಸಹಾಯ ಮಾಡುತ್ತದೆ. ಪ್ರತಿಯೊಂದು ಭಾರತೀಯ ಅಡುಗೆ ಮನೆಯಲ್ಲಿ ಬೆಳ್ಳುಳ್ಳಿ ಕಂಡು ಬರುತ್ತದೆ. ಅದರಲ್ಲೂ ನಾನ್ ವೆಜ್ ಪದಾರ್ಥ ತಯಾರಿಸಲಂತೂ ಬೆಳ್ಳುಳ್ಳಿ ಇಲ್ಲದಿದ್ರೆ ಅಡುಗೆಯೇ ಅಪೂರ್ಣ. ಅಂದ ಹಾಗೆ, ನೀವು ನಿಯಮಿತವಾಗಿ ಅಡುಗೆ …
Read More »Yearly Archives: 2021
ಧಾರವಾಡದ ಎಸ್‌ಡಿಎಂ ವೈದ್ಯಕೀಯ ಕಾಲೇಜಿನ 66 ವಿದ್ಯಾರ್ಥಿಗಳಿಗೆ ಕೊರೊನಾ
ಧಾರವಾಡ: ಮಹಾಮಾರಿ ಕೊರೊನಾ(Coronavirus) ಮತ್ತೆ ತನ್ನ ಆಟ ಶುರು ಮಾಡಿದಂತಿದೆ. ಧಾರವಾಡದ ಸತ್ತೂರು ಬಡಾಣೆಯಲ್ಲಿರೋ ಎಸ್‌ಡಿಎಂ ವೈದ್ಯಕೀಯ ಕಾಲೇಜಿನ(SDM Medical College) 66 ವಿದ್ಯಾರ್ಥಿಗಳಿಗೆ ಕೊರೊನಾ ಸೋಂಕು ತಗುಲಿದೆ. ಕೊಂಚ ವಿರಾಮ ಕೊಟ್ಟಿದ್ದ ಕೊರೊನಾ ರಾಜ್ಯದಲ್ಲಿ ಮತ್ತೆ ಮೂರಂಕಿ ಸಂಖ್ಯೆಯಲ್ಲಿ ಪತ್ತೆಯಾಗುತ್ತಿದೆ. ಆರಂಭದಲ್ಲಿ ನಾಲ್ವರು ವಿದ್ಯಾರ್ಥಿಗಳಿಗೆ ಕೊರೊನಾ ದೃಢಪಟ್ಟಿತ್ತು. ಹೀಗಾಗಿ 300 ವಿದ್ಯಾರ್ಥಿಗಳಿಗೆ ಕೊವಿಡ್ ಟೆಸ್ಟ್ ಮಾಡಿಸಲಾಗಿತ್ತು. ತಪಾಸಣೆ ವೇಳೆ 66 ವಿದ್ಯಾರ್ಥಿಗಳಿಗೆ ಸೋಂಕು ಇರುವುದು ದೃಢಪಟ್ಟಿದೆ. ಇನ್ನೂ 200 …
Read More »ಇಬ್ಬರನ್ನು ಬಲಿ ಪಡೆದ ದುಬಾರಿ ಟೊಮ್ಯಾಟೊ: ತೋಟದ ಮಾಲೀಕನ ಮೇಲೆ ಹತ್ಯೆ!
ಟೊಮ್ಯಾಟೊ ಬೆಲೆ ದುಬಾರಿಯಾಗಿರುವ ಹಿನ್ನೆಲೆಯಲ್ಲಿ ತೋಟದಲ್ಲಿ ಬೆಳೆದಿದ್ದ ಟೋಮ್ಯಾಟೊ ಕದಿಯಲು ಹೋಗಿದ್ದ ಇಬ್ಬರು ಯುವಕರು ಬೇಲಿಗೆ ಹಾಕಿದ್ದ ವಿದ್ಯುತ್ ಪ್ರವಹಿಸಿ ಮೃತಪಟ್ಟ ದಾರುಣ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ತಾಲ್ಲೂಕಿನ ಚರಕಮಟ್ಟೇನಹಳ್ಳಿ ಬಳಿ ಸಂಭವಿಸಿದೆ. ಟೊಮ್ಯಾಟೊ ಬೆಳೆಗೆ ತೋಟದ ಮಾಲಿಕ ಅಶ್ವಥರಾವ್ ವಿದ್ಯುತ್ ಬೇಲಿ ಹಾಕಿದ್ದರು. ವಿದ್ಯುತ್ ಬೇಲಿ ತಗುಲಿ ವಸಂತರಾವ್ (28) ಸ್ಥಳದಲ್ಲೇ ಮೃತಪಟ್ಟರೆ, ಸಾವಿನ ಸುದ್ದಿ ತಿಳಿದು ಸ್ಥಳಕ್ಕೆ ಬಂದ ಸ್ಥಳೀಯರು ತೋಟದ ಮಾಲಿಕನನ್ನು ಮಾರಕಾಸ್ತ್ರಗಳಿಂದ …
Read More »ರಾಜ್ಯದ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆಯಲ್ಲಿ ಕಾಯಂಗೊಂಡ ಗುತ್ತಿಗೆ ನೌಕರರ ಬಡ್ತಿಗೆ ಶಿಫಾರಸು
ಬೆಂಗಳೂರು : ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆಯಲ್ಲಿ ಕಾಯಂಗೊಂಡ ಗುತ್ತಿಗೆ ನೌಕರರಿಗೆ ಭರ್ಜರಿ ಸಿಹಿಸುದ್ದಿ, ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆಯಲ್ಲಿ ಗುತ್ತಿಗೆಆಧಾರದಲ್ಲಿ ನೇಮಕಗೊಂಡು ನಂತರ ಕಾಯಂಗೊಂಡಿರುವ 1983 ಶಿಕ್ಷಕರು, ಉಪನ್ಯಾಸಕರು ಹಾಗೂ ಪ್ರಾಂಶುಪಾಲರಿಗೆ ನೇಮಕದ ದಿನದಿಂದ ನಿಗದಿಯಾಗಿರುವ ವೇತನವನ್ನು ಯಥಾವತ್ತಾಗಿ ಮುಂದುವರೆಸುವ ಕುರಿತಂತೆ ಶಿಫಾರಸು ಮಾಡಲಾಗಿದೆ. ಕಾಯಂಗೊಂಡ ಗುತ್ತಿಗೆ ನೌಕರರ ಕಾಲಮಿತಿ ಬಡ್ತಿ ಹಾಗೂ ಸ್ಥಗಿತ ವೇತನ ಬಡ್ತಿಯನ್ನು ಎಂದಿನಂತೆ ಮಂಜುರು ಮಾಡಬೇಕು ಎಂದು ಪರಿಶೀಲನಾ ಸಮಿತಿ …
Read More »ಕಾಲೇಜು ಯುವಕ ಯುವತಿಯರನ್ನು ಸೆಳೆಯುತ್ತಿರುವ ಲಕ್ಷ್ಯ ಚಲನಚಿತ್ರ ಸಾಮಜಿಕ ವಿಷಯವನ್ನು ಎತ್ತಿ ತೋರಿಸುವ ಉತ್ತಮ ಸಂದೇಶ ಸಾರುವ ಲಕ್ಷ್ಯ ದಿನೆ ದಿನೆ ಯಶಸ್ವಿ ಪ್ರದರ್ಶನ
ಕಾಲೇಜು ಯುವಕ ಯುವತಿಯರನ್ನು ಸೆಳೆಯುತ್ತಿರುವ ಲಕ್ಷ್ಯ ಚಲನಚಿತ್ರ ಸಾಮಜಿಕ ವಿಷಯವನ್ನು ಎತ್ತಿ ತೋರಿಸುವ ಉತ್ತಮ ಸಂದೇಶ ಸಾರುವ ಲಕ್ಷ್ಯ ದಿನೆ ದಿನೆ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಈಗಾಗಲೇ ಹಿರಿಯ ನಾಗರಿಗರಿಂದ ಮಹಿಳೆಯರಿಂದ ಪ್ರಶಂಸೆಗೆ ಪಾತ್ರವಾದ ಲಕ್ಷ್ಯ ಈಗ ಯುವಕ ಯುವತಿಯರಿಗೂ ಇಷ್ಡವಾಗುತ್ತಿದೆ. ಸಾಮಜಿಕ ಜೀವನದಲ್ಲಿ ದುಡ್ಡಿನ ದರ್ಪದಿಂದ ಮೇರೆಯುವ ದುರಹಂಕಾರಿಗಳು, ಮಕ್ಕಳ ನಿರ್ಲಕ್ಷ್ಯ ,ಬಡವರಿಗೆ ನ್ಯಾಯ ಅನ್ಯಾಯದ ಸೂಕ್ಷ್ಮ ವಿಚಾರಗಳನ್ನು ತೋರಿಸುವ ನಿಟ್ಟಿನಲ್ಲಿ ವಿಕ್ಷಕರ ಮನಸ್ಸು ಗೆಲ್ಲುತ್ತಿರು ಲಕ್ಷ್ಯ ಚಲನಚಿತ್ರ …
Read More »ಯಾರು, ಯಾರನ್ನೇ ಭೇಟಿಯಾದ್ರೂ ತಲೆ ಕೆಡಿಸಿಕೊಳ್ಳಬೇಡಿ, ನೀವು ಪಕ್ಷದ ಪರವಾಗಿ ಇರಬೇಕು : ಸತೀಶ್ ಜಾರಕಿಹೊಳಿ
ರಾಯಬಾಗ : ಕೊರೊನಾ, ಪ್ರವಾಹದಂತಹ ಸಂಕಷ್ಟದ ಸಂದರ್ಭದಲ್ಲಿ ಕಾಂಗ್ರೆಸ್ ನಿರಂತರ ಜನರ ಸೇವೆ ಮಾಡಿದೆ. ಆದರೆ ಆ ಸಮಯದಲ್ಲಿ ಜನರ ಬಳಿ ಬಾರದವರು ಈಗ ತಮ್ಮ ಸ್ವಾರ್ಥಕ್ಕಾಗಿ ಕಾಂಗ್ರೆಸ್ ಬಗ್ಗೆ ಅಪಪ್ರಚಾರದಲ್ಲಿ ತೊಡಗಿದ್ದಾರೆ. ಯಾರೂ ಸಹ ಆಮಿಷಕ್ಕೆ ಬಲಿಯಾಗಬಾರದು. ಯಾರು, ಯಾರನ್ನೇ ಭೇಟಿಯಾದ್ರೂ ತಲೆ ಕೆಡಿಸಿಕೊಳ್ಳಬೇಡಿ, ನೀವು ಪಕ್ಷದ ಪರವಾಗಿ ಇರಬೇಕು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಮನವಿ ಮಾಡಿದರು. ರಾಯಬಾಗ ಮತ್ತು ಕುಡಚಿ ಮತಕ್ಷೇತ್ರದಲ್ಲಿ ಗುರುವಾರ ನಡೆದ ಸ್ಥಳೀಯ …
Read More »ಬೊಮ್ಮಾಯಿಯವರೇ, ಖಾಲಿ ಡಬ್ಬ ಅಲ್ಲಾಡಿಸಿ ಸದ್ದು ಮಾಡಿದಿರಲ್ಲವೇ? -ಕಾಂಗ್ರೆಸ್ ಟೀಕೆ
ಬೆಂಗಳೂರು: ‘ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಅಬ್ಬರದೊಂದಿಗೆ ಘೋಷಿಸಿದ ರೈತ ವಿದ್ಯಾನಿಧಿ ಯೋಜನೆ ಅಡಿಯಲ್ಲಿ ವಿದ್ಯಾರ್ಥಿ ವೇತನಕ್ಕೆ ಪ್ರತ್ಯೇಕ ಅರ್ಜಿ ಹಾಕುವ ವ್ಯವಸ್ಥೆಯೇ ಇಲ್ಲ’ ಎಂದು ಕಾಂಗ್ರೆಸ್ ಕಿಡಿಕಾರಿದೆ. ಈ ವಿಚಾರವಾಗಿ ಟ್ವೀಟ್ ಮಾಡಿರುವ ಕಾಂಗ್ರೆಸ್, ‘ಸಿಎಂ ಅಬ್ಬರದೊಂದಿಗೆ ಘೋಷಿಸಿದ ರೈತ ವಿದ್ಯಾನಿಧಿ ಯೋಜನೆಯಡಿ ವಿದ್ಯಾರ್ಥಿ ವೇತನಕ್ಕೆ ಪ್ರತ್ಯೇಕ ಅರ್ಜಿ ಹಾಕುವ ವ್ಯವಸ್ಥೆಯೇ ಇಲ್ಲ. ಸಾಮಾನ್ಯ ವರ್ಗದ ಅರ್ಜಿಗಳನ್ನು ಮಾತ್ರ ಪರಿಗಣಿಸಲಾಗುತ್ತಿದೆ. ಹೀಗಾಗಿ ಇದುವರೆಗೂ ಕೇವಲ 16 ಸಾವಿರ ವಿದ್ಯಾರ್ಥಿಗಳಿಗೆ …
Read More »ದ್ವಿಶತಕ ಬಾರಿಸಿದ ನುಗ್ಗೆಕಾಯಿ, ಶತಕದತ್ತ ಟೊಮೆಟೊ
ಶಿವಮೊಗ್ಗ: ಪೆಟ್ರೋಲ್, ಡೀಸೆಲ್ ಬೆಲೆ ಶತಕ ಬಾರಿಸಿದ ಬೆನ್ನಲ್ಲೇ ತರಕಾರಿ ಬೆಲೆಯೂ ದುಬಾರಿಯಾಗುತ್ತಿದ್ದು, ನುಗ್ಗೆಕಾಯಿ ದ್ವಿಶತಕ ಬಾರಿಸಿದರೆ, ಟೊಮೆಟೊ ಶತಕದತ್ತ ಮುನ್ನುಗ್ಗುತ್ತಿದೆ. ಜಿಲ್ಲೆಯಲ್ಲಿ ಅಕಾಲಿಕ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಕೆಲ ತರಕಾರಿ ಬೆಳೆ ನಾಶವಾಗಿದೆ. ಇದರಿಂದ ತರಕಾರಿ ಬೆಲೆ ಹೆಚ್ಚಳವಾಗುತ್ತಿದೆ. ಪ್ರತಿದಿನ ಒಂದೊಂದು ತರಕಾರಿ ಬೆಲೆ ಏರಿಕೆಯಾಗುತ್ತಿದ್ದು, ಗ್ರಾಹಕರಿಗೆ ಬೆಲೆ ಏರಿಕೆಯ ಬಿಸಿ ತಟ್ಟಿದೆ. ಈಗಾಗಲೇ ಅಗತ್ಯ ವಸ್ತುಗಳ ಬೆಳೆ ಏರಿಕೆಯಿಂದ ಗ್ರಾಹಕರು ಕಂಗಾಲಾಗಿದ್ದಾರೆ. ಈಗ ತರಕಾರಿ ಬೆಲೆ ಏರಿಕೆಯಾಗಿದ್ದು, ಗ್ರಾಹರಿಗೆ …
Read More »ವಿಧಾನ ಪರಿಷತ್ ಚುನಾವಣೆ: ಹಿಂದೆ ಸರಿದ ಜೆಡಿಎಸ್
ಶಿವಮೊಗ್ಗ: ಅಚ್ಚರಿಯ ಅಭ್ಯರ್ಥಿಯನ್ನು ಕಣಕ್ಕೆ ಇಳಿಸುವುದಾಗಿ ಘೋಷಿಸಿದ್ದ ಜೆಡಿಎಸ್ ವಿಧಾನಪರಿಷತ್ ಚುನಾವಣೆಯಿಂದ ಹಿಂದೆ ಸರಿದಿದೆ. ಹಿಂದಿನ ಚುನಾವಣೆಯಲ್ಲಿ ಬಿಜೆಪಿಗಿಂತ ಹೆಚ್ಚು ಮತಗಳನ್ನು ಪಡೆದು ಅಚ್ಚರಿ ಮೂಡಿಸಿದ್ದ ಪಕ್ಷ ಈ ಬಾರಿ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಿಲ್ಲ. ಅನಿರೀಕ್ಷಿತ ಬೆಳವಣಿಗೆ ಯಲ್ಲಿ ಜೆಡಿಯು ಭದ್ರಾವತಿಯ ಬಿ.ಕೆ. ಶಶಿಕುಮಾರ್ ಅವರನ್ನು ಕಣಕ್ಕೆ ಇಳಿಸಿದೆ. ಕರ್ನಾಟಕ ರಾಷ್ಟ್ರ ಸಮಿತಿ ಹಾಗೂ ವಿವಿಧ ರೈತ ಸಂಘಟನೆಗಳು ಬೆಂಬಲ ನೀಡಿವೆ. ಈ ಬಾರಿ ಕಾಂಗ್ರೆಸ್-ಬಿಜೆಪಿ ಮಧ್ಯೆ ನೇರ ಸ್ಪರ್ಧೆ …
Read More »ಅಂಬಿ ಕಾಯಕ ಪ್ರಶಸ್ತಿ ಸ್ವೀಕರಿಸಬೇಕಿದ್ದ ‘ಭ್ರಷ್ಟ’ ಅಧಿಕಾರಿಗೆ ಎಸಿಬಿ ಶಾಕ್.. ಮುಂದುವರೆದ ಶೋಧ
ಮಂಡ್ಯ: ರಾಜ್ಯದ ಬೇರೆ ಬೇರೆ ಕಡೆಗಳಲ್ಲಿ ಎಸಿಬಿ ಟೀಮ್‌ಗಳು ದಾಳಿ ನಡೆಸಿ ಹಲವು ಭ್ರಷ್ಟ ಅಧಿಕಾರಿಗಳಿಗೆ ಶಾಕ್ ಕೊಟ್ಟಿದ್ರು. ಏಕಾಏಕಿ ದಾಳಿಮಾಡಿದ ಎಸಿಬಿ ಅಧಿಕಾರಿಗಳು ಮನೆಯಲ್ಲಿ ಬಚ್ಚಿಟ್ಟ ಹಣ, ಒಡವೆಗಳನ್ನ ಪತ್ತೆ ಹಚ್ಚಿದ್ದಾರೆ. ಕೆಲವರನ್ನ ವಶಕ್ಕೆ ಪಡೆದು ಹೆಚ್ಚಿನ ತನಿಖೆಯನ್ನ ಮುಂದುವರೆಸಿದ್ದಾರೆ. ಇದರಲ್ಲಿ ಕೆಆರ್‌ಪೇಟೆ HLBC ಎಕ್ಸಿಕ್ಯುಟಿವ್ ಇಂಜಿನಿಯರ್ ಶ್ರೀನಿವಾಸ್.ಕೆ ನಿವಾಸದ ಮೇಲೆ ಕೂಡ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದರು. ಈ ವೇಳೆ ನಗದು, ಚಿನ್ನ, ಬೆಳ್ಳಿ, ಜಮೀನು, ನಿವೇಶನದ …
Read More »