Breaking News

Yearly Archives: 2021

ಅನಿವಾರ್ಯವಾಗಿ ಲಖನ್ ಜಾರಕಿಹೋಳಿ ಅವರನ್ನು ಸ್ಪರ್ದೆಗೆ ನಿಲ್ಲಿಸಬೇಕಾಯಿತು. ರೊಕ್ಕದ ದರ್ಪ ಮತ್ತು ಗುಂಡಾಗಿರಿ ರಾಜಕಾರಣದ ಡಿಕೆಶಿವಕುಮಾರ್ ಇಂದ ನಮಗೆ ಅನ್ಯಾಯ

ಬೆಳಗಾವಿ ಜಿಲ್ಲೆಯ ಅಥಣಿಯಲ್ಲಿ ಲಖನ್ ಜಾರಕಿಹೋಳಿ ಪರ ರಮೇಶ್ ಜಾರಕಿಹೋಳಿ ಪ್ರಚಾರ ಮಾಡುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.ಅಥಣಿ ಪಟ್ಟಣದಲ್ಲಿ ಜನಪ್ರತಿನಿಧಿಗಳ ಸಭೆ ನಡೆಸಿ ಮಾತನಾಡಿದ ಅವರು ಈ ಚುನಾವಣೆಯ ಬಳಿಕ ನಾನು ಮಂತ್ರಿ ಆಗುತ್ತೇನೆ ಎಂದು ಬಹಳಷ್ಟು ಜನರು ಹೇಳುತ್ತಿದ್ದಾರೆ ಆದರೆ ನಾನು ಮಂತ್ರಿ ಆಗಲಿ ಬಿಡಲಿ ಈ ಭಾಗದ ನೀರಾವರಿ ಕೆಲಸಗಳನ್ನು ಪೂರ್ಣ ಮಾಡುತ್ತೆನೆ. ಸಿ ಎಮ್ ಬಸವರಾಜ ಬೊಮ್ಮಾಯಿ ಮೂವತ್ತು ವರ್ಷಗಳಿಂದ ನನ್ನ ಸ್ನೇಹಿತರಾಗಿದ್ದಾರೆ ಆದ್ದರಿಂದ ಕೂಡ …

Read More »

ಭಾರೀ ಮಳೆಗೆ ಬೆಳಗಾವಿಯಲ್ಲಿ ನೆಲಕ್ಕುರುಳಿದ ಭಾರೀ ಮರ, ಕೆಲಕಾಲ ಟ್ರ್ಯಾಫಿಕ್ ಜ್ಯಾಮ್

ಬೆಳಗಾವಿ ನಗರದಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಮಿಲಿಟರಿ ಮಹಾದೇವ ಮಂದಿರದ ಹಿಂದಿನ ಕ್ಯಾಂಪ್‍ನ ಸ್ಯಾಪಲ್ ರಸ್ತೆಯಲ್ಲಿ ಗುಲ್‍ಮೋಹರ್ ರಸ್ತೆಯಲ್ಲಿ ಇಂದು 1.20ರ ಸುಮಾರಿಗೆ ನೆಲಕ್ಕುರುಳಿದೆ. ಇದರ ಪರಿಣಾಮ ಕೆಲ ಗಂಟೆಗಳ ಕಾಲ ಟ್ರಾಫಿಕ್ ಜ್ಯಾಮ್ ಉಂಟಾಗಿತ್ತು.ಇನ್ನು ಮರವು ವಿದ್ಯುತ್ ತಂತಿಗಳ ಮೇಲೆ ಬಿದ್ದಿದ್ದರಿಂದ ವಿದ್ಯುತ್ ವ್ಯತ್ಯಯ ಉಂಟಾಗಿತ್ತು. ಇನ್ನು ಕಾರೊಂದು ಇದೇ ಮಾರ್ಗವಾಗಿ ಹೋಗುತ್ತಿರುವಾಗ ಅದೃಷ್ಟವಶಾತ್ ಅಪಾಯದಿಂದ ಪಾರಾಗಿದೆ. ಇನ್ನು ಕೂಡಲೇ ಸ್ಥಳಕ್ಕೆ ಆಗಮಿಸಿದ ಟ್ರ್ಯಾಫಿಕ್ ಎಎಸ್‍ಐ ಅಶೋಕ್ ಹಾಗೂ …

Read More »

ಸ್ಯಾಂಡಲ್​ವುಡ್ ಹಿರಿಯ ನಟ ಮತ್ತು ನಿರ್ದೇಶಕ ಶಿವರಾಮ್ ಆಸ್ಪತ್ರೆಗೆ ದಾಖಲ

ಬೆಂಗಳೂರು: ಸ್ಯಾಂಡಲ್​ವುಡ್ ಹಿರಿಯ ನಟ ಮತ್ತು ನಿರ್ದೇಶಕ ಶಿವರಾಮ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ‘ಮನೆಯಲ್ಲಿ ಪೂಜೆ ಮಾಡುವ ಸಂದರ್ಭದಲ್ಲಿ ಅವರು ತಲೆ ಸುತ್ತಿ ಬಿದ್ದಿದ್ದು, ತಲೆಗೆ ಗಾಯವಾಗಿದೆ. ಕೂಡಲೇ ವಿದ್ಯಾಪೀಠ ಸರ್ಕಲ್​​ನಲ್ಲಿರುವ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಬಂದು ಸ್ಕ್ಯಾನಿಂಗ್ ಮಾಡಿಸಿದ್ದೇವೆ. ಸ್ಕ್ಯಾನಿಂಗ್ ರಿಪೋರ್ಟ್​​​ನಲ್ಲಿ ಮೆದುಳಿನಲ್ಲಿ ರಕ್ತಸ್ರಾವ ಆಗಿರೋದು ಗೊತ್ತಾಗಿದೆ. ವೈದ್ಯರು ಹೇಳುವ ಸರ್ಜರಿ ಮಾಡಬೇಕು. ಆದರೆ ನಮ್ಮ ತಂದೆಗೆ ವಯಸ್ಸಾದ ಹಿನ್ನೆಲೆಯಲ್ಲಿ ಸರ್ಜರಿ ಮಾಡಲು ಆಗಲ್ಲ ಎಂದು ಹೇಳಿದ್ದಾರೆ’ ಎಂದು ಪುತ್ರ ಲಕ್ಷ್ಮೀಶ …

Read More »

ಬೆಳಗಾವಿಯಿಂದ ಗೋವಾಕ್ಕೆ ಸಂಪರ್ಕಿಸುವ ರಸ್ತೆಗಳನ್ನು ತುರ್ತಾಗಿ ಮೇಲ್ದರ್ಜೆಗೇರಿಸಬೇಕು :ಸೋನಾಲಿ ಸರ್ನೋಬತ್

ಬೆಳಗಾವಿ – ಕರ್ನಾಟಕ – ಗೋವಾ- ಮಹಾರಾಷ್ಟ್ರ ರಾಜ್ಯಗಳ ಪ್ರಮುಖ ವಾಣಿಜ್ಯ ವ್ಯವಹಾರ ಕೇಂದ್ರವಾಗಿರುವ ಬೆಳಗಾವಿಯಿಂದ ಗೋವಾಕ್ಕೆ ಸಂಪರ್ಕಿಸುವ ರಸ್ತೆಗಳನ್ನು ತುರ್ತಾಗಿ ಮೇಲ್ದರ್ಜೆಗೇರಿಸಬೇಕು ಎಂದು ಭಾರತೀಯ ಜನತಾ ಪಾರ್ಟಿಯ ಗ್ರಾಮೀಣ ಮಹಿಳಾ ಘಟಕದ ಉಪಾಧ್ಯಕ್ಷೆ ಡಾ.ಸೋನಾಲಿ ಸರ್ನೋಬತ್ ಕೇಂದ್ರ ಹೆದ್ದಾರಿ ಅಭಿವೃದ್ಧಿ ಖಾತೆ ಸಚಿವ ನಿತಿನ್ ಗಡ್ಕರಿ ಅವರಿಗೆ ಪತ್ರ ಬರೆದಿದ್ದಾರೆ. ಬೆಳಗಾವಿಯು ಕರ್ನಾಟಕ, ಗೋವಾ, ಮಹಾರಾಷ್ಟ್ರದ ಕೇಂದ್ರ ಜಿಲ್ಲೆಯಾಗಿದೆ ಮತ್ತು ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯವಾಗಿ ರೈಲು ಮತ್ತು ವಾಯು ಸಂಪರ್ಕವನ್ನು ಹೊಂದಿರುವ …

Read More »

ಕಳೆದವಾರ ಎಸಿಬಿ ದಾಳಿಗೆ ಒಳಗಾಗಿದ್ದ ಸಕಾಲ ಸೇವೆ ಆಡಳಿತಾಧಿಕಾರಿ ಎಲ್.ಸಿ ನಾಗರಾಜು ಪತ್ನಿ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.

ಬೆಂಗಳೂರು: ಕಳೆದವಾರ ಎಸಿಬಿ ದಾಳಿಗೆ ಒಳಗಾಗಿದ್ದ ಸಕಾಲ ಸೇವೆ ಆಡಳಿತಾಧಿಕಾರಿ ಎಲ್.ಸಿ ನಾಗರಾಜು ಪತ್ನಿ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ತೀವ್ರ ಹೃದಯಾಘಾತಕ್ಕೀಡಾಗಿದ್ದ ನಾಗರಾಜು ಪತ್ನಿ ಅವರನ್ನು ಬೆಂಗಳೂರಿನ ಯಶವಂತಪುರದ ಕೊಲಬಿಯಾ ಏಷ್ಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ. ನವೆಂಬರ್ 24ರಂದು ನಾಗರಾಜು ಮನೆ ಮೇಲೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದರು. ಈ ವೇಳೆ ಅಪಾರಪ್ರಮಾಣದ ಚಿನ್ನಾಭರಣ, 43,00,000 ಲಕ್ಷ ನಗದು ಪತ್ತೆಯಾಗಿತ್ತು. ನೆಲಮಂಗಲದಲ್ಲಿ ಕೈಗಾರಿಕಾ ಕಟ್ಟಡ, 2 …

Read More »

ಹಲವು ಯೋಜನೆಗಳಿಗೆ ಅರ್ಜಿ ಆಹ್ವಾನ: ಸಾಲ, ಸಹಾಯಧನ ಇತ್ಯಾದಿ (ಅರ್ಜಿ ಸಲ್ಲಿಸಲು ಲಿಂಕ್ ಇಲ್ಲಿದೆ)

ಬೆಳಗಾವಿ : ವಿವಿಧ ಯೋಜನೆಗಳಲ್ಲಿ ಸಾಲ ನೀಡಲು, ಸಹಾಯಧನ ಒದಗಿಸಲು ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಈ ಸಂಬಂಧ ಇಲ್ಲೇ ಲಿಂಕ್ ಗಳನ್ನು ನೀಲಾಗಿದ್ದು ನೇರವಾಗಿ ಅರ್ಜಿ ಸಲ್ಲಿಸಲು, ವಿವರ ಮಾಹಿತ ಪಡೆಯಲು ಅವಕಾಶವಿದೆ. ಅಗತ್ಯವಾದವರು ಸುದ್ದಿಯಲ್ಲಿರುವ ಲಿಂಕ್ ಕ್ಲಿಕ್ ಮಾಡಿ   ಕಿರಿಯ ಮಹಿಳಾ ಆರೋಗ್ಯ ಸಹಾಯಕಿಯರ ತರಬೇತಿಗಾಗಿ ಅರ್ಜಿ ಆಹ್ವಾನ ೨೦೨೧-೨೨ ನೇ ಸಾಲಿನ ಬೆಳಗಾವಿ ಜಿಲ್ಲೆಯಲ್ಲಿರುವ ಸರ್ಕಾರಿ ಪ್ರಾಥಮಿಕ ಆರೋಗ್ಯ ಸುರಕ್ಷಣಾಧಿಕಾರಿಗಳ (ಕಿರಿಯ ಮಹಿಳಾ ಆರೋಗ್ಯ ಸಹಾಯಕಿಯರ) ತರಬೇತಿ ಕೇಂದ್ರಕ್ಕೆ …

Read More »

ಟಿಪ್ಪರ್-ಬಸ್ ಮುಖಾಮುಖಿ ಡಿಕ್ಕಿ, 6 ಮಂದಿಗೆ ಗಾಯ

ಚಾಮರಾಜನಗರ: ಟಿಪ್ಪರ್ ಹಾಗೂ ಬಸ್ ಮುಖಾಮುಖಿ ಡಿಕ್ಕಿಯಾಗಿ 6 ಮಂದಿ ಗಾಯಗೊಂಡಿರುವ ಘಟನೆ ಮೈಸೂರು-ಊಟಿ ರಾಷ್ಟ್ರೀಯ ಹೆದ್ದಾರಿ ಹಾದು ಹೋಗುವ ಗುಂಡ್ಲುಪೇಟೆಯ ಎಪಿಎಂಸಿ ಸಮೀಪ ನಡೆದಿದೆ.ಬಸ್​ನಲ್ಲಿ ಪ್ರಯಾಣಿಸುತ್ತಿದ್ದ ಚಾಲಕ ಸೇರಿದಂತೆ 6 ಮಂದಿ ಗಾಯಗೊಂಡಿದ್ದು, ವಾಹನಗಳ ಮುಂಭಾಗ ಸಂಪೂರ್ಣ ಜಖಂಗೊಂಡಿದೆ. ಬಸ್​​ ಚಾಲಕನ ಸಮಯ ಪ್ರಜ್ಞೆಯಿಂದ ಸಂಭಾವ್ಯ ಅನಾಹುತ ತಪ್ಪಿದೆ. ಟಿಪ್ಪರ್ ಚಾಲಕನ ಅಜಾಗರೂಕ ಚಾಲನೆಯೇ ಈ ಅವಘಡಕ್ಕೆ ಕಾರಣ ಎನ್ನಲಾಗಿದೆ. ಬಸ್​ನಲ್ಲಿ ಪ್ರಯಾಣಿಸುತ್ತಿದ್ದ ಚಾಲಕ ಸೇರಿದಂತೆ 6 ಮಂದಿ …

Read More »

ಚಮಕ್ ಚಮಕ್ ಲೈಟ್ ಹಚ್ಚಿಕೊಂಡು ಹೊಸ ಬಸ್ ಬರುತ್ತಿವೆ : ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್​

ಅಥಣಿ : ಬೆಳಗಾವಿ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷ ಬೆಂಬಲಿತ 4 ಸಾವಿರಕ್ಕೂ ಅಧಿಕ ಮತಗಳಿವೆ. ಅವುಗಳನ್ನು ಹಿಡಿದಿಟ್ಟುಕೊಳ್ಳುವುದು ನಮ್ಮ ಜವಾಬ್ದಾರಿಯಾಗಿದೆ. ಇದರ ನಡುವೆ ಹೊಸ ಹೊಸ ಬಸ್​​ಗಳಲ್ಲಿ ಚಮಕ್ ಚಮಕ್ ಲೈಟು ಹಚ್ಚಿಕೊಂಡು ಬರುತ್ತಿದ್ದಾರೆ. ಹೊಸ ಬಸ್​​ಗಳು ಜಾತ್ರೆ ಮಾಡಿಕೊಂಡು ಹೋಗುತ್ತಾರೆ, ಹಳೆ ಬಸ್​​ಗಳೇ ರೆಗ್ಯುಲರಾಗಿ ಇರುತ್ತವೆ. ಇದರಿಂದ ಮತದಾರಿಗೆ ತಿಳುವಳಿಕೆ ನೀಡಲು ಎರಡನೇ ಬಾರಿ ಅಥಣಿ ಚುನಾವಣೆ ಪ್ರಚಾರಕ್ಕೆ ಬಂದಿದ್ದೇನೆ ಎಂದು ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್​ ಹೇಳಿದರು. ವಿಧಾನಪರಿಷತ್ ಚುನಾವಣೆ ಹಿನ್ನೆಲೆ ಕಾಂಗ್ರೆಸ್ …

Read More »

ಉತ್ತರ ಕರ್ನಾಟಕ ಭಾಗದಲ್ಲಿ ಮಳೆ : ಹವಾಮಾನ ತಜ್ಞರ ಮಾಹಿತಿ

ಧಾರವಾಡ: ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತ ಹಿನ್ನೆಲೆಯಲ್ಲಿ ಸದ್ಯ ಉತ್ತರ ಕರ್ನಾಟಕಕ್ಕೆ ಮಳೆ ಆತಂಕ ಇಲ್ಲ ಎಂದು ಹವಾಮಾನ ತಜ್ಞ ಡಾ.‌ಆರ್.ಹೆಚ್. ಪಾಟೀಲ‌ ಮಾಹಿತಿ ನೀಡಿದ್ದಾರೆ. ಈ‌ ಕುರಿತು ಮಾತನಾಡಿರುವ ಅವರು, ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತ ಆಗಿತ್ತು. ಅದರ ಮಾರುತಗಳು ಉತ್ತರಮುಖ ಚಲನೆ ಹೊಂದಿದ್ದವು. ಅದರಿಂದ ರಾತ್ರಿ ಮತ್ತು ಬೆಳಗ್ಗೆ ಮಳೆಯಾಗಿತ್ತು. ಆದರೆ ನಾಳೆ (ಶುಕ್ರವಾರ) ಯಾವುದೇ ಮಳೆ ಲಕ್ಷಣ ಇಲ್ಲ. ಇಂದು ಮತ್ತು ನಾಳೆ ಮೋಡ ಕವಿದ ವಾತಾವರಣ …

Read More »

ಹಂಸಲೇಖ ವಿರುದ್ಧ ದಾಖಲಾಗಿದ್ದ ಪ್ರಕರಣಕ್ಕೆ ತಡೆ ನೀಡಿರುವುದು ನ್ಯಾಯಕ್ಕೆ ಸಂದ ಜಯ: ನಟ ಚೇತನ್

ಮೈಸೂರು: ಉಡುಪಿಯ ಪೇಜಾವರ ಶ್ರೀಗಳ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆಂಬ ಆರೋಪ ಸಂಬಂಧ ಬಸವನಗುಡಿ ಠಾಣೆಯಲ್ಲಿ ನಾದಬ್ರಹ್ಮ ಹಂಸಲೇಖ ವಿರುದ್ಧ ದಾಖಲಾಗಿದ್ದ ಪ್ರಕರಣಕ್ಕೆ ಹೈಕೋರ್ಟ್‌ ತಡೆ ನೀಡಿರುವುದು ನ್ಯಾಯಕ್ಕೆ ಸಂದ ಜಯ ಎಂದು ನಟ ಚೇತನ್ ಹೇಳಿದರು. ಜಿಲ್ಲಾಧಿಕಾರಿ ಕಚೇರಿಯಲ್ಲಿ ಬಳಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನ್ಯಾಯಕ್ಕೆ ಬಲವಿದೆ. ಪೊಲೀಸರು ನ್ಯಾಯದ ಪರವಾಗಿದ್ದಾರೆ. ಹಂಸಲೇಖ ಹೇಳಿಕೆ ಸಂವಿಧಾನ ಬದ್ಧವಾಗಿದೆ. ಕೋರ್ಟ್ ಅದಕ್ಕೆ ತಡೆಯಾಜ್ಞೆ ನೀಡಿದೆ ಎಂದರು. ಪಿರಿಯಾಪಟ್ಟಣ …

Read More »