ಬೆಂಗಳೂರು: ಕ್ಯಾಸಿನೊಗಳಲ್ಲಿ ಹಣ ಹೂಡಿಕೆ ಹೆಸರಲ್ಲಿ ವಂಚನೆ ಎಸಗಿದ್ದಾರೆ ಎಂದು ಆರೋಪಿಸಿ ಆಪ್ತ ಸ್ನೇಹಿತನ ವಿರುದ್ಧ ಸ್ಯಾಂಡಲ್ವುಡ್ ಸ್ಟಾರ್ ನಟಿ ಸಂಜಾನಿ ಗಲ್ರಾನಿ ಕೋರ್ಟ್ ಮೆಟ್ಟಿಲೇರಿದ್ದಾರೆ. ಕೋರ್ಟ್ ಸೂಚನೆ ಮೇರೆಗೆ ನಗರದ ಇಂದಿರಾನಗರ ಠಾಣೆಯಲ್ಲಿ ಸಂಜನಾ ಆಪ್ತ ಸ್ನೇಹಿತ ರಾಹುಲ್ ತೋನ್ಸೆ ವಿರುದ್ಧ ಎಫ್ಐಆರ್ ದಾಖಲಾಗಿದೆ. ದೂರಿನಲ್ಲಿ ಏನಿದೆ? ನನ್ನ ಸ್ನೇಹಿತನಾದ ರಾಹುಲ್, ಆತ ಹೇಳಿದ ಕಡೆಯಲ್ಲಿ ಹಣ ಹೂಡಿಕೆ ಮಾಡಿದರೆ ಅಧಿಕ ಲಾಭ ಗಳಿಸಬಹುದು ಎಂದು ನಂಬಿಸಿ, ರಾಮಕೃಷ್ಣ …
Read More »Yearly Archives: 2021
ಡ್ರಗ್ಸ್ ಪ್ರಕರಣದಲ್ಲಿ ಶಾರೂಕ್ ಪುತ್ರ ಆರ್ಯನ್ ಖಾನ್ ಜಾಮೀನು ಅರ್ಜಿ ವಜಾ
ಮುಂಬೈ, ಅಕ್ಟೋಬರ್ 20: ಕ್ರೂಸ್ ಹಡಗು ಡ್ರಗ್ಸ್ ಪ್ರಕರಣದಲ್ಲಿ ಬಾಲಿವುಡ್ ಸ್ಟಾರ್ ನಟ ಶಾರೂಕ್ ಖಾನ್ ಪುತ್ರ ಆರ್ಯನ್ ಖಾನ್ ಜಾಮೀನು ಅರ್ಜಿಯನ್ನು ಮುಂಬೈನ ವಿಶೇಷ NDPS ಕೋರ್ಟ್ ತಿರಸ್ಕರಿಸಿದೆ. ಆರ್ಯನ್ ಖಾನೆ ಜೊತೆಗೆ ಅರ್ಬಾಜ್ ಮರ್ಚೆಂಟ್ ಮತ್ತು ಮುನ್ಮುನ್ ಧಮೇಚಾ ಅವರ ಜಾಮೀನು ಅರ್ಜಿಗಳನ್ನೂ ಕೋರ್ಟ್ ತಿರಸ್ಕರಿಸಿದೆ. “ಮುಂಬೈ NDPS ಕೋರ್ಟ್ ನೀಡಿದ ಆದೇಶ ಪ್ರತಿಗಾಗಿ ಅರ್ಜಿ ಸಲ್ಲಿಸಿದ್ದು, ಇಂದೇ ಹೈಕೋರ್ಟ್ ಮೊರೆ ಹೋಗಲಾಗುವುದು. ಒಂದು ವೇಳೆ ಇಂದು …
Read More »‘ಕರ್ನಾಟಕದಿಂದ ಗೋವಾಗೆ ಪ್ರತಿದಿನ 2 ಟನ್ ದನದ ಮಾಂಸ’
ಪಣಜಿ: ಕರ್ನಾಟಕದಿಂದ ಪ್ರತಿದಿನ 2,000 ಕೆಜಿಗೂ ಹೆಚ್ಚು ದನ ಮತ್ತು ಎಮ್ಮೆಯ ಮಾಂಸ ಗೋವಾಗೆ ಬರುತ್ತದೆ ಎಂದು ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಅವರು ಹೇಳಿದ್ದಾರೆ. ಗೋವಾ ವಿಧಾನಸಭೆಗೆ ನೀಡಿರುವ ಲಿಖಿತ ಉತ್ತರದಲ್ಲಿ ಅವರು ಈ ಮಾಹಿತಿ ನೀಡಿದ್ದಾರೆ. ‘ಕಳೆದ ಆರು ತಿಂಗಳಲ್ಲಿ ಕರ್ನಾಟಕದಿಂದ ಗೋವಾಗೆ 388 ಟನ್‌ಗಳಷ್ಟು ದನ ಮತ್ತು ಎಮ್ಮೆಯ ಮಾಂಸವನ್ನು ತರಿಸಿಕೊಳ್ಳಲಾಗಿದೆ. ಕರ್ನಾಟಕದಲ್ಲಿನ ವ್ಯಾಪಾರಿಗಳು ಪ್ರತಿದಿನ ಗೋವಾಗೆ ದನದ ಮಾಂಸ ಕಳುಹಿಸುತ್ತಾರೆ’ ಎಂದು ಅವರು ವಿಧಾನಸಭೆಗೆ …
Read More »ಸಿದ್ದರಾಮಯ್ಯ “ಭಯೋತ್ಪಾದಕ”, ರಾಹುಲ್ ಗಾಂಧಿ ಒಬ್ಬ ‘ಡ್ರಗ್ ಪೆಡ್ಲರ್, ಎಂದಕಟೀಲ್ ಕ್ಷಮೆ ಯಾಚಿಸಬೇಕು ಮತ್ತು ಅವರನ್ನು ಪಕ್ಷದಿಂದ ಉಚ್ಚಾಟಿಸಲು ಕಾಂಗ್ರೆಸ್ ನಾಯಕರು ಒತ್ತಾಯ
ಬೆಂಗಳೂರು : ಕಾಂಗ್ರೆಸ್ ಪಕ್ಷದ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಒಬ್ಬ ‘ಡ್ರಗ್ ಪೆಡ್ಲರ್ ಮತ್ತು ವ್ಯಸನಿ’ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಕರೆಯುವ ಮೂಲಕ ಹೊಸ ವಿವಾದಕ್ಕೆ ಕಾರಣರಾಗಿದ್ದಾರೆ. ಮಂಗಳವಾರ ಹುಬ್ಬಳ್ಳಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್( Nalin Kumar Kateel), ಇದು ನಿಮ್ಮ (ಕಾಂಗ್ರೆಸ್) ಕಥೆ. ನಿಮ್ಮ ರಾಷ್ಟ್ರೀಯ ಅಧ್ಯಕ್ಷರು ಜಾಮೀನಿನ ಮೇಲೆ ಹೊರಗಿದ್ದಾರೆ, ನಿಮ್ಮ ರಾಷ್ಟ್ರೀಯ …
Read More »ನಳಿನ್‌ಕುಮಾರ್ ಕಟೀಲ್ ಒಬ್ಬ ಅವಿವೇಕಿ: ಕೆಪಿಸಿಸಿ ವಕ್ತಾರ ಲಕ್ಷ್ಮಣ ಕಿಡಿ
ಮೈಸೂರು: ‘ರಾಹುಲ್ ಗಾಂಧಿ ವಿರುದ್ಧ ಕೀಳುಮಟ್ಟದ ಮಾತುಗಳನ್ನಾಡಿರುವ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್‌ಕುಮಾರ್ ಕಟೀಲ್ ಒಬ್ಬ ಅಯೋಗ್ಯ, ಅವಿವೇಕಿ, ಹುಚ್ಚರ ಬ್ರಾಂಡ್ ಅಂಬಾಸಿಡರ್’ ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ ಕಿಡಿಕಾರಿದರು. ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ‘ಬಿಜೆಪಿ ಮುಖಂಡರು ವಿಷಯಾಧಾರಿತ ಚರ್ಚೆ ಬಿಟ್ಟು ವೈಯಕ್ತಿಕ ಟೀಕೆ ಮೂಲಕ ಹೊಸ ಇತಿಹಾಸ ಸೃಷ್ಟಿಸಿದ್ದಾರೆ. ಸಭ್ಯ ರಾಜಕಾರಣಕ್ಕೆ ತಿಲಾಂಜಲಿಯನ್ನಿಟ್ಟಿದ್ದಾರೆ. ಕಟೀಲ್ ಹಿನ್ನೆಲೆ ಏನು ಎಂಬುದು ಇಡೀ ರಾಜ್ಯದ ಜನರಿಗೆ ಗೊತ್ತು. ಊಹೆಯ ಆಧಾರದಲ್ಲಿ …
Read More »ಬ್ರಹ್ಮಾವರ : ಈಜಲು ತೆರಳಿ ನೀರುಪಾಲಾಗಿದ್ದ ಇಬ್ಬರ ಶವಗಳು ಪತ್ತೆ
ಬ್ರಹ್ಮಾವರ : ತಾಲೂಕಿನ ಉಗ್ಗೇಲ್ ಬೆಟ್ಟು ಎಂಬಲ್ಲಿ ಮಡಿಸಾಲು ಹೊಳೆಯಲ್ಲಿ ಈಜಲು ತೆರಳಿದ್ದ ಗೆಳೆಯರಿಬ್ಬರು ಮಂಗಳವಾರ ನೀರುಪಾಲಾಗಿದ್ದು, ಶವಗಳು ಬುಧವಾರ ಪತ್ತೆಯಾಗಿದೆ. ಮೃತ ದುರ್ದೈವಿಗಳು ಶ್ರೇಯಸ್ (18) ಮತ್ತು ಅನಾಸ್ (16)ಎಂದು ತಿಳಿದು ಬಂದಿದೆ. ಈಜಲು ತೆರಳಿದ್ದ ಮೂವರ ಪೈಕಿ ಇಬ್ಬರು ನೀರುಪಾಲಾಗಿದ್ದು, ಪಾರಾಗಿದ್ದ ಓರ್ವ ವಿಚಾರವನ್ನು ಯಾರಿಗೂ ಹೇಳದೆ ಗುಟ್ಟು ಮಾಡಿದ್ದ. ನಾಪತ್ತೆಯಾದ ಇಬ್ಬರ ಮನೆಯವರು ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಮಂಗಳವಾರ ಸಂಜೆಯೇ ಬಾಲಕರು ನೀರುಪಾಲಾಗಿರುವ ವಿಚಾರವನ್ನು …
Read More »ಬೆಳಗ್ಗೆ ಎದ್ದು ದೇವರಿಗೆ ಕೈ ಮುಗಿವ ಮೊದಲು ಗ್ಯಾಸ್ ಸಿಲಿಂಡರ್, ಬೈಕಿಗೆ ಪೂಜೆ ಮಾಡಿ ಇನ್ನೊಂದು ಸ್ವಲ್ಪ ಹೆಚ್ಚು ಮೈಲೇಜ್ ಬರಲಿ ಎನ್ನುವ ಪರಿಸ್ಥಿತಿ ಬಂದಿದೆ : ರಣದೀಪ್ ಸಿಂಗ್ ಸುರ್ಜೇವಾಲಾ
ಹಾವೇರಿ: ಬೆಳಗ್ಗೆ ಎದ್ದು ದೇವರಿಗೆ ಕೈ ಮುಗಿವ ಮೊದಲು ಗ್ಯಾಸ್ ಸಿಲಿಂಡರ್, ಬೈಕಿಗೆ ಪೂಜೆ ಮಾಡಿ ಇನ್ನೊಂದು ಸ್ವಲ್ಪ ಹೆಚ್ಚು ಮೈಲೇಜ್ ಬರಲಿ ಎನ್ನುವ ಪರಿಸ್ಥಿತಿ ಬಂದಿದೆ ಎಂದು ಕಾಂಗ್ರೆಸ್ ರಾಜ್ಯ ಉಸ್ತುವಾರಿ,ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲಾ ಟೀಕಿಸಿದರು. ಹಾನಗಲ್ ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೋದಿ, ಬೊಮ್ಮಾಯಿ ಕಾರಣದಿಂದ ಬೆಲೆಯೇರಿಕೆಯಿಂದಾಗಿ ದೇಶದ, ರಾಜ್ಯದ ಯುವಜನತೆ ಇಂದು ತೊಂದರೆ ಅನುಭವಿಸುತ್ತಿದ್ದಾರೆ.ಮೋದಿ, ಮೆಹೆಂಗಾಯಿ ಎರಡೂ ದೇಶಕ್ಕೆ ಹಾನಿಕಾರಕವಾಗಿದೆ ಎಂದು …
Read More »ಏಕಾಏಕಿ ಉಸಿರು ಚೆಲ್ಲಿದ ಕಂದಮ್ಮ, ತಂದೆ-ತಾಯಿ ಮಧ್ಯೆ ಆರೋಪ-ಪ್ರತ್ಯಾರೋಪ
ಧಾರವಾಡ : ಏನು ಅರಿಯದ ಮುಗ್ದ ಕೂಸು, ಮನೆಯಂಗಳದಲ್ಲಿ ಆಟವಾಡಿಕೊಂಡಿದ್ದ ಆ ಮಗುವೀಗ ಅನುಮಾನಾಸ್ಪವಾಗಿ ಸಾವನ್ನಪ್ಪಿದೆ (Suspicious death ). ಮಗುವಿನ ಅಂತ್ಯ ಸಂಸ್ಕಾರ ಮಾಡಬೇಕಾದ ತಂದೆ-ತಾಯಿ ಪೊಲೀಸ್ ಠಾಣೆಯ ಮೇಟ್ಟಿಲೆರಿದ್ದಾರೆ. ಅಂತ್ಯಸಂಸ್ಕಾರ ಆಗದೇ ಆ ಮಗುವಿನ ಶವ ಜಿಲ್ಲಾ ಆಸ್ಪತ್ರೆಯ ಶವಾಗಾರ(marchary)ದಲ್ಲಿ ಇಡಲಾಗಿದೆ. ಧಾರವಾಡ (Dharwad ) ತಾಲೂಕಿನ ಗೊಂಗಡಿಕೊಪ್ಪ ಗ್ರಾಮದಲ್ಲಿ ನಡೆದ ಘಟನೆ ಇದು. ಈ ಗ್ರಾಮದ ಮಹ್ಮದ್ ಅಲಿ ಅಗಸಿಮನಿ ಹಾಗೂ ಸಮ್ರಿನ್ ಎಂಬ ದಂಪತಿಯ …
Read More »ಉಡುಪಿ: ಯುವತಿ ನಾಪತ್ತೆ; ಪೋಷಕರಿಂದ ದೂರು ದಾಖಲು –
ಉಡುಪಿ: ನಿಶಾ ಡಿ.ಎಸ್ (21) ಅವರ ಪೋಷಕರು ಮಣಿಪಾಲ ಪೊಲೀಸ್ ಠಾಣೆಯಲ್ಲಿ ನಾಪತ್ತೆ ದೂರು ದಾಖಲಿಸಿ, ತಮ್ಮ ಮಗಳನ್ನು ಪತ್ತೆ ಹಚ್ಚಿಕೊಂಡುವಂತೆ ಪೊಲೀಸರಿಗೆ ಮನವಿ ಮಾಡಿಕೊಂಡಿದ್ದಾರೆ. ಮಣಿಪಾಲ, ಶಿವಳ್ಳಿ ಗ್ರಾಮದ ನಿವಾಸಿಯಾಗಿರುವ ನಿಶಾ ಉಡುಪಿಯಲ್ಲಿರುವ ಪಿಜಿಗೆ ಹೋಗಿ ಬರುವುದಾಗಿ ಅಕ್ಟೋಬರ್ 11 ರಂದು ರಾತ್ರಿ 7.50 ಕ್ಕೆ ಮಣಿಪಾಲದಿಂದ ಹೊರಟಿದ್ದಾರೆ. ಆದರೆ ಆಕೆ ಪಿಜಿಗೂ ಹೋಗದೆ ಮನೆಗೂ ಹಿಂದಿರುಗಲಿಲ್ಲ. ಜೊತೆಗೆ ಆಕೆಯ ಮೊಬೈಲ್ ಫೋನ್ ಕೂಡ ಸ್ವಿಚ್ ಆಫ್ ಆಗಿರುವುದು …
Read More »ಸಿಂದಗಿ: ತಹಶೀಲ್ದಾರ್ ಕಚೇರಿ ಎದುರು ಶವವಿಟ್ಟು ಪ್ರತಿಭಟನೆ
ಸಿಂದಗಿ: ವ್ಯಕ್ತಿಯನ್ನು ಪೆಟ್ರೋಲ್ ಹಾಕಿ ಕೊಲೆ ಮಾಡಲು ಯತ್ನಿಸಿದ ಆರೋಪಿಗಳನ್ನು ಬಂಧಿಸಬೇಕು ಎಂದು ಆಗ್ರಹಿಸಿ ಮೃತನ ಕುಟುಂಬ ಸದಸ್ಯರು ಶವವನ್ನು ತಹಶೀಲ್ದಾರ್ ಕಚೇರಿ ಎದುರು ಇಟ್ಟು ಪ್ರತಿಭಟನೆ ನಡೆಸಿದ ಘಟನೆ ಪಟ್ಟಣದಲ್ಲಿ ಬುಧವಾರ ಬೆಳಿಗ್ಗೆ ನಡೆದಿದೆ. ರೇವಣಸಿದ್ದಪ್ಪ ಸಿದ್ರಾಮಪ್ಪ ಮಲಕಾಪುರ (45) ಮೃತ ಪಟ್ಟ ದುರ್ದೈವಿ. ರೇವಣಸಿದ್ದಪ್ಪ ಮೂಲತಃ ಯಾದಗಿರಿ ಜಿಲ್ಲೆಯ ಸುರಪೂರ ತಾಲೂಕಿನ ಮುನಿರಬಮ್ಮನಹಳ್ಳಿ ಗ್ರಾಮದ ವ್ಯಕ್ತಿ. ತಾಲೂಕಿನ ಕಲಕೇರಿ ಗ್ರಾಮದಲ್ಲಿ ಕಳೆದ 6-7 ವರ್ಷಗಳಿಂದ ಹಾಲಿನ ವ್ಯಾಪಾರ …
Read More »