Breaking News

Yearly Archives: 2021

25 ವಿಧಾನ ಪರಿಷತ್ ಸದಸ್ಯ ಕಾಲಾವಧಿ ಮುಕ್ತಾಯ, ಮುಂದಿನ ವರ್ಷ ಚುನಾವಣೆ: ಯಾರ್ ಯಾರ್ ಅವಧಿ ಮುಕ್ತಾಯಗೊತ್ತಾ.? ಇಲ್ಲಿದೆ ಪಟ್ಟಿ

ಬೆಂಗಳೂರು: ರಾಜ್ಯದ ವಿಧಾನಪರಿಷತ್ತಿಗೆ ವಿವಿಧ ಕ್ಷೇತ್ರಗಳಿಂದ ಆಯ್ಕೆಯಾಗಿದ್ದಂತ 25 ಸದಸ್ಯರ ಕಾಲಾವಧಿ 2022ಕ್ಕೆ ಮುಕ್ತಾಯಗೊಳ್ಳಲಿದೆ. ಆ ಸ್ಥಾನಗಳಿಗೆ ತಮ್ಮದೇ ಪಕ್ಷದ ಸದಸ್ಯರನ್ನು ಆಯ್ಕೆ ಮಾಡಿ, ತುಂಬಿಕೊಳ್ಳಲು ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳು ತೆರೆ ಮರೆಯಲ್ಲಿ ಕಸರತ್ತು ನಡೆಸಿವೆ. ಹಾಗಾದ್ರೇ.. 2022ಕ್ಕೆ ಮುಕ್ತಾಯಗೊಳ್ಳಲಿರುವಂತ 25 ಪರಿಷತ್ ಸದಸ್ಯರು ( Vidhan Parishat Member ) ಯಾರು ಯಾರು.? ಎನ್ನುವ ಮಾಹಿತಿ ಮುಂದೆ ಓದಿ. ವಿಧಾನ ಪರಿಷತ್ ನಲ್ಲಿ 75 ಸದಸ್ಯರ …

Read More »

ಶಾಲಾ ಮಕ್ಕಳಿಗೆ ಮುಖ್ಯ ಮಾಹಿತಿ: ಈ ವರ್ಷ ಒಂದೇ ಜತೆ ಸಮವಸ್ತ್ರ.?

ಬೆಂಗಳೂರು: ರಾಜ್ಯದಲ್ಲಿ ಶಾಲೆಗಳು ಆರಂಭವಾಗಿ ಮಕ್ಕಳ ಸಂಖ್ಯೆಯಲ್ಲಿ ಕೂಡ ಏರಿಕೆ ಕಂಡಿದೆ. ನವೆಂಬರ್ 8 ರಿಂದ ಪೂರ್ಣಪ್ರಮಾಣದಲ್ಲಿ ಶಾಲೆಗಳು ನಡೆಯಲಿದೆ. ಪ್ರಾಥಮಿಕ, ಪ್ರೌಢಶಾಲೆ ಸೋಮವಾರದಿಂದ ಪೂರ್ಣ ಪ್ರಮಾಣದಲ್ಲಿ ನಡೆಯಲಿದ್ದು, ವಿದ್ಯಾರ್ಥಿಗಳು ಶೈಕ್ಷಣಿಕ ಸಾಲಿನಲ್ಲಿ ಒಂದೇ ಜತೆ ಸಮವಸ್ತ್ರದಲ್ಲಿ ವರ್ಷವನ್ನು ಕಳೆಯುವ ಪರಿಸ್ಥಿತಿ ಎದುರಾಗಿದೆ.   ಎರಡನೇ ಜೊತೆ ಸಮವಸ್ತ್ರ ನೀಡಲು ಅನುದಾನ ಬಿಡುಗಡೆಯಾಗದ ಕಾರಣ ವಿದ್ಯಾರ್ಥಿಗಳಿಗೆ ಒಂದೇ ಜೊತೆ ಸಮವಸ್ತ್ರವೇ ಗತಿಯಾಗಿದೆ. ಸಮವಸ್ತ್ರ ಖರೀದಿಗೆ ಕೇಂದ್ರ ಸರ್ಕಾರ ಶೇಕಡ 60 ಮತ್ತು …

Read More »

ಕಳಕಳಿ ಇರುವವರು ಎಲ್ಲರೂ ಶಾರುಖ್‌ ಮಗನ ಬಗ್ಗೆ ಗರಂ ಆದವರೇ.

ನವದೆಹಲಿ: ನಟ ಶಾರುಖ್‌ ಖಾನ್‌ ಪುತ್ರ ಆರ್ಯನ್‌ ಖಾನ್ ಡ್ರಗ್ಸ್‌ ಕೇಸ್‌ನಲ್ಲಿ ಅರೆಸ್ಟ್‌ ಆಗುತ್ತಿದ್ದಂತೆಯೇ ಡ್ರಗ್ಸ್‌ ವಿರೋಧಿಗಳು, ಯುವಜನರು ಹಾದಿ ತಪ್ಪುತ್ತಿರುವ ಬಗ್ಗೆ ಕಳಕಳಿ ಇರುವವರು ಎಲ್ಲರೂ ಶಾರುಖ್‌ ಮಗನ ಬಗ್ಗೆ ಗರಂ ಆದವರೇ. ಚಿತ್ರರಂಗದ ಕೆಲವರು ಹಾಗೂ ಕೆಲವೇ ಕೆಲವು ಕಾಂಗ್ರೆಸ್‌ ನಾಯಕರು ಶಾರುಖ್‌ ಖಾನ್‌ ಬೆಂಬಲಕ್ಕೆ ನಿಂತಿದ್ದರು. ಆರ್ಯನ್‌ ಖಾನ್‌ನನ್ನು ಬಂಧಿಸಿದ್ದು ತಪ್ಪು ಎಂಬ ಬಗ್ಗೆ ಮಾತನಾಡಿದ್ದರು. ಇದೀಗ ಕಾಂಗ್ರೆಸ್‌ ನಾಯಕ, ಸಂಸದ ರಾಹುಲ್‌ ಗಾಂಧಿ ಈ ಸಮಯದಲ್ಲಿ …

Read More »

ಬಳ್ಳಾರಿ ಮಹಾನಗರ ಪಾಲಿಕೆ ಮೇಯರ್-ಉಪಮೇಯರ್ ಚುನಾವಣೆಗೆ ದಿನಾಂಕ ನಿಗದಿ

ಬಳ್ಳಾರಿ : ನವೆಂಬರ್ 18 ರಂದು ಬಳ್ಳಾರಿ ಮಹಾನಗರ ಪಾಲಿಕೆಯ ಮೇಯರ್ ಮತ್ತು ಉಪಮೇಯರ್ ಚುನಾವಣೆ ನಡೆಯಲಿದೆ ಎಂದು ಪ್ರಾದೇಶಿಕ ಆಯುಕ್ತರು ಘೋಷಿಸಿದ್ದಾರೆ. ಕಳೆದ 6 ತಿಂಗಳಿಂದ ಬಳ್ಳಾರಿ ಮಹಾನಗರ ಪಾಲಿಕೆಯ ಮೇಯರ್-ಉಪಮೇಯರ್ ಚುನಾವಣೆಯ ನಡೆದಿರಲಿಲ್ಲ. ಸದ್ಯ ಇದೀಗ ಚುನಾವಣೆ ದಿನಾಂಕ ಘೋಷಣೆಯಾಗಿದ್ದು, ನವೆಂಬರ್ 18 ರಂದು ಮೇಯರ್-ಉಪಮೇಯರ್ ಚುನಾವಣೆ ನಡೆಯಲಿದೆ. ಬಳ್ಳಾರಿ ಮಹಾನಗರ ಪಾಲಿಕೆಯಲ್ಲಿ ಒಟ್ಟು 39 ವಾರ್ಡ್ ಗಳ ಪೈಕಿ ಕಾಂಗ್ರೆಸ್ 21 ಸ್ಥಾನಗಳನ್ನು ಗೆದ್ದಿದ್ದು, ನಾಲ್ವರು …

Read More »

ಮೂರು ಕೆ.ಜಿ. ಚಿನ್ನದ ಸರ ಧರಿಸಿ ಮಿರಮಿರ ಮಿಂಚಿದ ‘ಬಾಹುಬಲಿ’: ಸರದ್‌ ಉತ್ಸವದಲ್ಲಿ ಗಮನ ಸೆಳೆದ ಕೋಣ

ಹೈದರಾಬಾದ್ (ತೆಲಂಗಾಣ): ದೀಪಾವಳಿ ಸಮಯದಲ್ಲಿ ಹೈದರಾಬಾದ್‌ನಲ್ಲಿ ಕೋಣಗಳ ಉತ್ಸವ ನಡೆಯುತ್ತದೆ. ಇದಕ್ಕೆ ಸದರ್‌ ಉತ್ಸವ ಎನ್ನುತ್ತಾರೆ. ಇದಕ್ಕಾಗಿ ಕೋಣಗಳಿಗೆ ಶೃಂಗಾರ ಮಾಡುವುದು, ಅವುಗಳನ್ನು ಉತ್ಸವಕ್ಕೆ ಸಜ್ಜುಗೊಳಿಸಲಾಗುವುದು, ಮಿರಮಿರ ಮಿಂಚುಗ ಕೋಣಗಳನ್ನು ನೋಡುವುದೇ ಒಂದು ಅಂದ. ಇವುಗಳಿಂದ ಹಲವಾರು ರೀತಿಯ ಸಾಹಸಗಳನ್ನೂ ಈ ಸಮಯದಲ್ಲಿ ಮಾಡಿಸಲಾಗುವುದು. ಇನ್ನು ನಿಜಾಮರ ಕಾಲದಿಂದಲೂ ಸದರ್ ಉತ್ಸವ ಪ್ರತಿ ವರ್ಷ ನಡೆಯುತ್ತಿದ್ದು, ಹಸುಗಳು, ಎಮ್ಮೆ, ಎತ್ತು ಕೋಣಗಳನ್ನು ಈ ಉತ್ಸವದಲ್ಲಿ ಪ್ರದರ್ಶಿಸಲಾಗುತ್ತದೆ. ಈ ಉತ್ಸವದಲ್ಲಿ ಪಾಲ್ಗೊಳ್ಳಲು ಬೇರೆ …

Read More »

ಆರ್ಯನ್ ಖಾನ್ ಡ್ರಗ್ಸ್‌ ಕೇಸ್: ದೆಹಲಿ ಎನ್‌ಸಿಬಿಗೆ ಹಸ್ತಾಂತರ

ಮುಂಬೈ, ನವೆಂಬರ್ 06: ಹಡಗಿನಲ್ಲಿ ಡ್ರಗ್ಸ್‌ ಪತ್ತೆ ಪ್ರಕರಣವನ್ನು ದೆಹಲಿ ಎನ್‌ಸಿಬಿಗೆ ವರ್ಗಾವಣೆ ಮಾಡಲಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (ಎನ್‌ಸಿಬಿ) ಶುಕ್ರವಾರ ಮುಂಬೈ ಘಟಕದ ಉಸ್ತುವಾರಿ ಸಮೀರ್ ವಾಂಖೆಡೆ ಅವರನ್ನು ಕಾರ್ಡೆಲಿಯಾ ಕ್ರೂಸ್ ಶಿಪ್ ಮಾದಕ ದ್ರವ್ಯ ಪತ್ತೆ ಪ್ರಕರಣದಿಂದ ಸ್ಥಳಾಂತರಿಸಿದೆ. ಆದಾಗ್ಯೂ, ‘ತೆಗೆದುಹಾಕಲಾಗಿದೆ’ ಎಂಬುದು ಬಲವಾದ ಪದವಾಗಿದೆ ಎಂದು ವಾಂಖೆಡೆ ಹೇಳಿದ್ದಾರೆ ಮತ್ತು ಎನ್‌ಸಿಬಿಯ ಮುಂಬೈ ಘಟಕದ ವಲಯ ನಿರ್ದೇಶಕರಾಗಿ ತಾವು ಮುಂದುವರಿದಿರುವುದಾಗಿ ಅವರು …

Read More »

ಮೀನುಗಾರಿಕೆ ಬೋಟಿಗೆ ಬೆಂಕಿ

ಕಾರವಾರ: ಅರಬ್ಬಿ ಸಮುದ್ರದಲ್ಲಿ ಮೀನುಗಾರಿಕೆ ಬೋಟಿಗೆ ಬೆಂಕಿ ಹೊತ್ತಿಕೊಂಡು ಉರಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಕಾರವಾರದಲ್ಲಿ ನಡೆದಿದೆ. ಅರಬ್ಬಿ ಸಮುದ್ರದಲ್ಲಿ ಈ ಘಟನೆ‌ ನಡೆದಿದ್ದು, ಸದ್ಯ ಯಾವುದೇ ಪ್ರಾಣಾಪಾಯವಾಗಲಿಲ್ಲ. ಬೋಟಿನಲ್ಲಿದ್ದ ಏಳು ಮೀ‌ನುಗಾರರ ರಕ್ಷಣೆ ಮಾಡಲಾಗಿದೆ. ವರದ ವಿನಾಯಕ ಹೆಸರಿನ ಮೀನುಗಾರಿಕೆ ಬೋಟ್ ಇದಾಗಿದ್ದು, ಬೋಟಿನ ಎಂಜಿನ್‌ನಲ್ಲಿ ಆಗಿರುವ ಅನಾಹುತ ಇದಾಗಿದೆ. ಬ್ಯಾಟರಿ ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಉಂಟಾಗಿರುವ ಸಾಧ್ಯತೆ ಎಂದು ಹೇಳಲಾಗುತ್ತಿದೆ.

Read More »

ಉತ್ತಮ ಅರೋಗ್ಯ ಹೊಂದಿರಬೇಕಾದರೆ ನಮ್ಮ ಲೈಫ್ ಸ್ಟೈಲ್ ಹೇಗಿರಬೇಕು

ಡಿನ್ನರ್ ನಂತರ ಮಲಗುವ ಮುಂಚೆ ಹಸಿವು ಅನಿಸಿದರೆ, ಹಣ್ಣು-ಹಂಪಲು ತಿನ್ನಬೇಕೇ ಹೊರತು ಊಟ ಮಾತ್ರ ಮಾಡಬಾರದು ಅಂತ ಅವರು ಹೇಳುತ್ತಾರೆ.ಉತ್ತಮ ಅರೋಗ್ಯ ಹೊಂದಿರಬೇಕಾದರೆ ನಮ್ಮ ಲೈಫ್ ಸ್ಟೈಲ್ ಹೇಗಿರಬೇಕು ಅನ್ನೋದು ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಅಕಾಲಿಕ ಮರಣದ ನಂತರ ಅತಿಹೆಚ್ಚು ಚರ್ಚಿಸಲ್ಪಡುತ್ತಿರುವ ವಿಷಯವಾಗಿದೆ. ಡಾಕ್ಟರ್ ಗಳು ಸರಿಯಾದ ಸಮಯಕ್ಕೆ ಊಟ, ನಿಯಮಿತ ವ್ಯಾಯಾಮ ನಮ್ಮ ದೇಹ ಮತ್ತು ಮನಸನ್ನು ಆರೋಗ್ಯವಾಗಿಡುತ್ತವೆ ಎಂದು ಹೇಳುತ್ತಾರೆ.ಬೆಂಗಳೂರಿನ ಖ್ಯಾತ ಹೃದ್ರೋಗ ತಜ್ಞ …

Read More »

ಏನು ಮಾಡಬೇಕಿತ್ತೋ ಅದನ್ನು ಮಾಡಿದ್ದೇವೆ.. ಇನ್ನೇನಿದ್ದರೂ ನ.7ರ ಪಂದ್ಯದ ಮೇಲೆ ಗಮನ: ವಿರಾಟ್ ಕೊಹ್ಲಿ

ದುಬೈ: ಟಿ20 ವಿಶ್ವಕಪ್ ಟೂರ್ನಿಯಲ್ಲಿ ಸೆಮೀಸ್ ಹಂತಕ್ಕೇರಲು ಹರಸಾಹಸ ಪಡುತ್ತಿರುವ ಟೀಂ ಇಂಡಿಯಾ ಇದೀಗ ನವೆಂಬರ್ ರಂದು ನಡೆಯಲಿರುವ ಆಫ್ಘಾನಿಸ್ತಾನ ಮತ್ತು ನ್ಯೂಜಿಲೆಂಡ್ ನಡುವಿನ ಪಂದ್ಯದ ಮೇಲೆ ಗಮನ ಕೇಂದ್ರೀಕರಿಸಿದೆ ಎಂದು ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಹೇಳಿದ್ದಾರೆ.   ಇದನ್ನೂ ಓದಿ: 8ನೇ ಬಾರಿಗೆ 100ಕ್ಕಿಂತ ಕಡಿಮೆ ರನ್ ಗೆ ಆಲೌಟ್, ಟಿ20 ವಿಶ್ವಕಪ್ ಇತಿಹಾಸದಲ್ಲಿ 2ನೇ ನಿದರ್ಶನ ಇಂದು ದುಬೈ ಅಂತಾರಾಷ್ಟ್ರೀಯ ಕ್ರಿಕೆಟ್ ಮೈದಾನದಲ್ಲಿ ನಡೆದ ಸ್ಕಾಟ್ಲೆಂಡ್ ವಿರುದ್ಧದ …

Read More »

ಮುಜರಾಯಿ ಇಲಾಖೆಯ ವತಿಯಿಂದ ಗೋಶಾಲೆಗಳನ್ನು ಆರಂಭಿಸುವ ಚಿಂತನೆ: ಶಶಿಕಲಾ ಜೊಲ್ಲೆ

ಬೆಳಗಾವಿ : ಮುಜರಾಯಿ ಇಲಾಖೆಯ ‘ಎ’ ಮತ್ತು ‘ಬಿ’ ಗ್ರೇಡ್ ದೇವಸ್ಥಾನದಲ್ಲಿ ಮುಜರಾಯಿ ಇಲಾಖೆಯ ವತಿಯಿಂದ ಗೋಶಾಲೆಗಳನ್ನು ಆರಂಭಿಸುವ ಚಿಂತನೆ ನಡೆಸಲಾಗಿದೆ ಎಂದು ಮುಜರಾಯಿ ಇಲಾಖೆಯ ಸಚಿವರಾದ ಶಶಿಕಲಾ ಜೊಲ್ಲೆ ( Shashikala Jolle ) ಹೇಳಿದರು. ಸುದ್ದಿಗಾರರ ಜೊತೆ ಮಾತನಾಡಿದ ಅವ, ರಾಜ್ಯದ 35 ಸಾವಿರಕ್ಕೂ ಅಧಿಕ ಅಧಿಸೂಚಿತ ದೇವಸ್ಥಾನಗಳಲ್ಲಿ ಗೋಪೂಜೆ ನಡೆಸಲಾಗುತ್ತಿದೆ. ಭಾರತ ಕೃಷಿ ಪ್ರಧಾನವಾದ ದೇಶವಾಗಿರುವುದರಿಂದ ಗೋರಕ್ಷಣೆ ಮಹತ್ವದ್ದಾಗಿದೆ. ಮುಜರಾಯಿ ಇಲಾಖೆಯ ‘ಎ’ ಮತ್ತು ‘ಬಿ’ …

Read More »