Breaking News

Yearly Archives: 2021

ರಾಜ್ಯದ ಚಿತ್ರಮಂದಿರಗಳಲ್ಲಿ ನಾಳೆ `ಪುನೀತ್ ರಾಜ್ ಕುಮಾರ್’ಗೆ ಶ್ರದ್ಧಾಂಜಲಿ ಕಾರ್ಯಕ್ರಮ

ಬೆಂಗಳೂರು : ಇತ್ತೀಚೆಗೆ ನಿಧನರಾದ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರಿಗೆ ನಾಳೆ ರಾಜ್ಯದ ಚಿತ್ರಮಂದಿರಗಳಲ್ಲಿ ಶ್ರದ್ಧಾಂಜಲಿ ಸಲ್ಲಿಸಲು ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.ರಾಜ್ಯಾದ್ಯಂತ 550 ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ನಾಳೆ ಸಂಜೆ 6 ಗಂಟೆಗೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.   ಚಿತ್ರ ಪ್ರದರ್ಶಕರರು ನಟ ಪುನೀತ್ ರಾಜ್ ಕುಮಾರ್ ಶ್ರದ್ಧಾಂಜಲಿ ಕಾರ್ಯಕ್ರಮ ಆಯೋಜಿಸಲಾಗಿದೆ. ಗೀತಾಂಜಲಿ, ಪುಷ್ಪಾಂಜಲಿ, ದೀಪಾಂಜಲಿ ಮೂಲಕ ನಮನ ಸಲ್ಲಿಸಲಾಗಿದೆ.ಚಿತ್ರ ಸಾಹಿತಿ ನಾಗೇಂದ್ರ ಪ್ರಸಾದ್ ರಚಿಸಿದ ಹಾಡಿನ ಮೂಲಕ ನಟ …

Read More »

ಟೂರಿಸ್ಟ್ ಸೀಸನ್ ಚಾರ್ಟರ್ಡ್ ವಿಮಾನವನ್ನು ಡಿಸೆಂಬರ್ 13 ಗೆ ಗೋವಾ ಸ್ವಾಗತಿಸಲು ತಯಾರಿ

ಗೋವಾ: ಸುಮಾರು ಒಂದು ವರ್ಷದ ನಂತರ, ಈ ಋತುವಿನ ಮೊದಲ ಚಾರ್ಟರ್ಡ್ ಫ್ಲೈಟ್ ಡಿಸೆಂಬರ್ 13 ರಂದು ಯುಕೆ ನಿಂದ ಗೋವಾಕ್ಕೆ ಆಗಮಿಸಲಿದೆ, ಇದು ಕೋವಿಡ್ -19 ಏಕಾಏಕಿ ನಂತರ ಅಂತರಾಷ್ಟ್ರೀಯ ಪ್ರವಾಸೋದ್ಯಮ ವಲಯದಲ್ಲಿ ವಿರಾಮವನ್ನು ಕೊನೆಗೊಳಿಸುತ್ತದೆ ಎಂದು ಹಿರಿಯ ಅಧಿಕಾರಿಯೊಬ್ಬರು ಶನಿವಾರ ತಿಳಿಸಿದ್ದಾರೆ.   ಡಿಸೆಂಬರ್‌ನಿಂದ ಯುಕೆಯಿಂದ ಪ್ರತಿ ವಾರ ನಾಲ್ಕು ಚಾರ್ಟರ್ಡ್ ವಿಮಾನಗಳು, ಗ್ಯಾಟ್‌ವಿಕ್ ಮತ್ತು ಮ್ಯಾಂಚೆಸ್ಟರ್ ಏರ್‌ಪೋರ್ಟ್‌ಗಳಿಂದ ತಲಾ ಎರಡು ವಿಮಾನಗಳು ಗೋವಾಕ್ಕೆ ಹಾರಲಿವೆ ಎಂದು ಗೋವಾದ …

Read More »

ಒಂದೇ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಅರ್ಧ ಗಂಟೆಯೊಳಗೆ ಮೂವರನ್ನು ಬೆದರಿಸಿ ಹಣ, ಮೊಬೈಲ್, ಚಿನ್ನದ ಚೈನ್ ಕಿತ್ತುಕೊಂಡು ಪರಾರಿ

ಶಿವಮೊಗ್ಗ, ನವೆಂಬರ್ 6: ಶನಿವಾರ ಬೆಳಗಿನ ಜಾವ ಬೈಕ್‌ನಲ್ಲಿ ಬಂದ ಮೂವರು ದುಷ್ಕರ್ಮಿಗಳು ಚಾಕು ತೋರಿಸಿ ಬೆದರಿಕೆಯೊಡ್ಡಿ ಮೂರು ಕಡೆ ದರೋಡೆ ಮಾಡಿದ್ದಾರೆ. ಒಂದೇ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಅರ್ಧ ಗಂಟೆಯೊಳಗೆ ಮೂವರನ್ನು ಬೆದರಿಸಿ ಹಣ, ಮೊಬೈಲ್, ಚಿನ್ನದ ಚೈನ್ ಕಿತ್ತುಕೊಂಡು ಪರಾರಿಯಾಗಿರುವ ಘಟನೆ ಭದ್ರಾವತಿ ನಗರದಲ್ಲಿ ನಡೆದಿದೆ.   ಘಟನೆ 1: ಬಸ್ ಇಳಿದವರ ಮೇಲೆ ದಾಳಿ ಬೆಂಗಳೂರಿನಿಂದ ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಆಗಮಿಸಿದ ಪರಶುರಾಮ ಎಂಬುವವರು ಬೆಳಗ್ಗೆ 4 …

Read More »

ಜಸ್ಟಿಸ್ ಕೆ ಚಂದ್ರು: ‘ಜೈ ಭೀಮ್’ ಚಿತ್ರದ ಅಸಲಿ ಹೀರೋ

ಕಾಲಿವುಡ್ ನಟ ಸೂರ್ಯ ವಿಭಿನ್ನ ಆಯಾಮದ ಸಿನಿಮಾಗಳನ್ನು ಮಾಡುವುದರಲ್ಲಿ ಸದಾ ಮುಂದಿರುತ್ತಾರೆ. ಕಳೆದ ವರ್ಷ ‘ಸೂರರೈ ಪೋಟ್ರು’ ಕ್ಯಾಪ್ಟನ್ ಗೋಪಿನಾಥ್ ಅವರ ಜೀವನ ಆಧಾರಿತ ಬಯೋಪಿಕ್ ಮೂಲಕ ಗಮನ ಸೆಳೆದಿದ್ದರು. ಇನ್ನು ಈ ವರ್ಷ ‘ಜೈ ಭೀಮ್’ ಚಿತ್ರದ ಮೂಲಕ ಮತ್ತೊಮ್ಮೆ ತಾನು ವಿಭಿನ್ನ ಆಯಾಮದ ಚಿತ್ರಗಳ ನಾಯಕ ನಟ ಅಂತ ಸಾಬೀತುಪಡಿಸಿಕೊಂಡಿದ್ದಾರೆ. ನವೆಂಬರ್ 2ರಂದು ಅಮೆಜಾನ್ ಪ್ರೈಮ್ ನಲ್ಲಿ ಬಿಡುಗಡೆ ಆಗಿರುವ ‘ಜೈ ಭೀಮ್’ ಈಗಾಗಲೇ ನೋಡುಗರ ವ್ಯಾಪಕ …

Read More »

ಡಾ.ರಾಜ್ ಕುಟುಂಬದ ವೈದ್ಯ ಡಾ.ರಮಣರಾವ್ ನಿವಾಸಕ್ಕೆ ಬಿಗಿ ಪೊಲೀಸ್ ಬಂದೋಬಸ್ತ್

ಬೆಂಗಳೂರು, ನ.6- ಪುನೀತ್ ರಾಜ್‍ಕುಮಾರ್ ಅವರ ಸಾವಿಗೆ ವೈದ್ಯರ ಎಡವಟ್ಟೇ ಕಾರಣ ಎಂದು ಕೆಲವರು ಪೊಲೀಸರಿಗೆ ದೂರು ನೀಡಿರುವ ಹಿನ್ನೆಲೆಯಲ್ಲಿ ಡಾ.ರಾಜ್ ಕುಟುಂಬದ ವೈದ್ಯ ಡಾ.ರಮಣರಾವ್ ಅವರ ನಿವಾಸಕ್ಕೆ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಸದಾಶಿವನಗರದಲ್ಲಿರುವ ಅವರ ನಿವಾಸದ ಬಳಿ ಇರುವ ವೈದ್ಯ ರಮಣರಾವ್ ಅವರ ಮನೆ ಮತ್ತು ಕ್ಲಿನಿಕ್ ಬಳಿ ಹೆಚ್ಚಿನ ಭದ್ರತೆಯನ್ನು ಕಲ್ಪಿಸಲಾಗಿದೆ. ಈಗಾಗಲೇ ಕೆಲ ಅಭಿಮಾನಿಗಳು ವೈದ್ಯರನ್ನು ಬಂಸಬೇಕು ಎಂದು ಒತ್ತಡ ಹೇರುತ್ತಿದ್ದಾರೆ. ಪ್ರತಿಭಟನೆಗಳು ಕೂಡ …

Read More »

ಹಾನಗಲ್ ಉಪ ಚುನಾವಣೆ ಫಲಿತಾಂಶದ ಹಿನ್ನೆಲೆ ತಾಲೂಕು ಮತ್ತು ಜಿಲ್ಲಾ ಪಂಚಾಯಿತಿ ಚುನಾವಣೆಯನ್ನು ಇನ್ನೂ ಆರು ತಿಂಗಳ ಕಾಲ ಮುಂದೂಡಲು ಯತ್ನ

ಬೆಂಗಳೂರು: ಹಾನಗಲ್ ಮತ್ತು ಸಿಂದಗಿ ಉಪ ಚುನಾವಣೆ ಫಲಿತಾಂಶದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಯಾವುದೇ ಚುನಾವಣೆ ನಡೆಸಲು ಆಸಕ್ತಿ ತೋರುತ್ತಿಲ್ಲ. ತಾಲೂಕು ಮತ್ತು ಜಿಲ್ಲಾ ಪಂಚಾಯಿತಿ ಚುನಾವಣೆಯನ್ನು ಇನ್ನೂ ಆರು ತಿಂಗಳ ಕಾಲ ಮುಂದೂಡಲು ಯತ್ನಿಸುತ್ತಿದೆ. ಆಡಳಿತಾಧಿಕಾರಿಗಳ ಅವಧಿಯನ್ನು ಇನ್ನೂ ಆರು ತಿಂಗಳಿಗೆ ವಿಸ್ತರಿಸಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಆದೇಶ ಹೊರಡಿಸಿದೆ. ಉಪ ಚುನಾವಣೆ ಫಲಿತಾಂಶ ಹೊರಬಿದ್ದ ನಂತರ ಸರ್ಕಾರ ಚುನಾವಣೆ ನಡೆಸಲು ಆಸಕ್ತಿ ತೋರಿಸುತ್ತಿಲ್ಲ ಎಂದು …

Read More »

ಬಾಡಿಗೆ ಹಣ ಖರ್ಚು ಮಾಡಿದ್ದಕ್ಕೆ ಪತ್ನಿಯ ಕೊಲೆ ಮಾಡಿದ ಪತಿ

ಪತ್ನಿ ಬಾಡಿಗೆ ನೀಡಲು ಎತ್ತಿಟ್ಟಿದ್ದ ಹಣ ಖರ್ಚು ಮಾಡಿದ್ದಾಳೆಂದು ಪತಿರಾಯ ತನ್ನ ಪತ್ನಿಯನ್ನೇ ಕೊಲೆಮಾಡಿದ್ದಾನೆ. ಘಟನೆ ಬೆಂಗಳೂರಿನ ದಯಾನಂದ ನಗರದಲ್ಲಿ ನಡೆದಿದೆ. ಪತಿ ಫಾರೂಕ್ ಆಗಿದ್ದು, ಪತ್ನಿ ನಾಜೀಯ ಕೊಲೆಯಾಗಿರುವ ದುರ್ದೈವಿಯಾಗಿದ್ದಾರೆ. ಪತ್ನಿ 6500ರೂ ಹಣದಲ್ಲಿ ಡ್ಯೂಪ್ಲಿಕೇಟ್ ಜ್ಯುವೆಲರಿ ಖರೀದಿಸಿದ್ದು, ಬಾಡಿಗೆಗೆ ಎಂದು ನೀಡಿದ್ದ ಹಣ ಖರ್ಚು ಮಾಡಿಕೊಂಡಿದ್ದಾಳೆ. ಬಳಿಕ ಬಾಡಿಗೆ ಹಣ ನೀಡುವಂತೆ ಪತಿ ತಿಳಿಸಿದಾಗ ವಿಚಾರ ಬಯಲಾಗಿದೆ. ನಂತರ ಕೋಪಗೊಂಡ ಫಾರೂಕ್ ಪತ್ನಿ ಮೇಲೆ ಹಲ್ಲೆ ನಡೆಸಿದ್ದಾನೆ, …

Read More »

SBI ಗ್ರಾಹಕರಿಗೆ ಗುಡ್ ನ್ಯೂಸ್! ಉಚಿತವಾಗಿ ಸಿಗಲಿದೆ 2 ಲಕ್ಷ ರೂ., ಕೂಡಲೇ ಈ ಕೆಲಸ ಮಾಡಿ

ನವದೆಹಲಿ : ಅತಿದೊಡ್ಡ ಸಾರ್ವಜನಿಕ ವಲಯದ ಬ್ಯಾಂಕ್ ಎಸ್‌ಬಿಐ (SBI) ಗ್ರಾಹಕರಿಗೆ ಸಿಹಿ ಸುದ್ದಿ ಇದೆ. ಎಸ್‌ಬಿಐ ತನ್ನ ಗ್ರಾಹಕರಿಗೆ 2 ಲಕ್ಷ ರೂಪಾಯಿಗಳ ಉಚಿತ ಪ್ರಯೋಜನವನ್ನು ನೀಡುತ್ತಿದೆ. ರುಪೇ ಡೆಬಿಟ್ ಕಾರ್ಡ್‌ಗಳನ್ನು ಬಳಸುವ ಎಲ್ಲಾ ಜನ್-ಧನ್ ಖಾತೆದಾರರಿಗೆ ರೂ 2 ಲಕ್ಷದವರೆಗೆ ಉಚಿತ ಆಕ್ಸಿಡೆಂಟಲ್ ಕವರ್ ಅನ್ನು ನೀಡುತ್ತಿದೆ.   ಈ ರೀತಿ ನಿಮಗೆ 2 ಲಕ್ಷ ಕವರ್ ಸಿಗುತ್ತದೆ ಗ್ರಾಹಕರಿಗೆ ಅವರ ಜನ್ ಧನ್ ಖಾತೆಯನ್ನು ತೆರೆಯುವ ಅವಧಿಗೆ …

Read More »

ಬೆಳಗಾವಿ ಉತ್ತರ ಕ್ಷೇತ್ರದ ಶಾಸಕ ಅನಿಲ ಬೆನಕೆ ಮರಾಠಿ ಪ್ರೇಮಕ್ಕೆ ತೀವ್ರ ಟೀಕೆ ವ್ಯಕ್ತವಾಗುತ್ತಿದೆ.

ಬೆಳಗಾವಿ ಉತ್ತರ ಕ್ಷೇತ್ರದ ಶಾಸಕ ಅನಿಲ ಬೆನಕೆ ಮರಾಠಿ ಪ್ರೇಮಕ್ಕೆ ತೀವ್ರ ಟೀಕೆ ವ್ಯಕ್ತವಾಗುತ್ತಿದೆ. ಬೆಳಗಾವಿಯ ಬಹುತೇಕ ರಾಜಕಾರಣಿಗಳು ಮರಾಠಿ ಭಾಷೆಯಲ್ಲಿ ಭಾಷಣ,ಪ್ರಚಾರಪತ್ರ, ಶುಭಾಶಯ ಪತ್ರ ಎಲ್ಲವನ್ನೂ ಮಾಡಿದರೂ ಅವರೆಲ್ಲ ಕನ್ನಡಕ್ಕೆ ಮೊದಲ ಆದ್ಯತೆ ನೀಡಿ ನಂತರದ ಸ್ಥಾನವನ್ನು ಮರಾಠಿಗೆ ನೀಡುತ್ತಾರೆ. ಆದರೆ ಅನಿಲ ಬೆನಕೆ ಅವರದ್ದು ಮಾತ್ರ ಮರಾಠಿಗೆ ಮೊದಲ ಆದ್ಯತೆ. ಕನ್ನಡಕ್ಕೆ ನಂತರದ ಸ್ಥಾನ, ಕೇವಲ ಕಾಟಾಚಾರಕ್ಕೆನ್ನುವಂತೆ. ದೀಪಾವಳಿ ಶುಭಾಶಯ ಪತ್ರದಲ್ಲೂ ಹಾಗೇ ಮಾಡಿದ್ದಾರೆ. ಮೇಲ್ಗಡೆ ದೊಡ್ಡದಾಗಿ …

Read More »

ಸಿದ್ದರಾಮಯ್ಯ ಹೇಳಿಕೆ ಖಂಡಿಸಿ ಬಿಜೆಪಿ ಎಸ್ ಸಿ ಮೋರ್ಚಾ ಪ್ರತಿಭಟನೆ

ಚಿಕ್ಕಮಗಳೂರು: ಕೆಲವು ದಲಿತ ನಾಯಕರು ಹೊಟ್ಟೆಪಾಡಿಗೆ ಬಿಜೆಪಿ ಸೇರಿದ್ದಾರೆ ಎಂದು ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಮೂದಲಿಸಿದ್ದಾರೆ ಎಂದು ಆರೋಪಿಸಿ ಬಿಜೆಪಿ ಎಸ್ ಸಿ ಮೋರ್ಚಾ ಜಿಲ್ಲಾ ಘಟಕದವರು ಪ್ರತಿಭಟನೆಯಲ್ಲಿ ತೊಡಗಿದ್ದಾರೆ. ನಗರದ ಆಜಾದ್ ಪಾರ್ಕ್ ವೃತ್ತದಲ್ಲಿ ಪ್ರತಿಭಟನಾಕಾರರು ಜಮಾಯಿಸಿದ್ದಾರೆ. ಸಿದ್ದರಾಮಯ್ಯ ವಿರುದ್ಧ ಪ್ರತಿಭಟನಾಕಾರರು ಘೋಷಣೆ ಕೂಗಿದರು. ಸಿದ್ದರಾಮಯ್ಯ ದಲಿತರಿಗೆ ಅಪಮಾನ ಮಾಡಿದ್ದಾರೆ ಎಂದು ದೂರಿದರು.ಮುಖಂಡರಾದ ದೀಪಕ್ ದೊಡ್ಡಯ್ಯ, ಈಶ್ವರಹಳ್ಳಿ ಮಹೇಶ್, ಪುಷ್ಪರಾಜ್, ಸುಧೀರ್ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದಾರೆ.

Read More »