Breaking News

Yearly Archives: 2021

ಕಾಂಗ್ರೆಸ್ ಆಯ್ತು ಈಗ ಬಿಜೆಪಿ ಸರದಿ; ಕೇಸರಿ ನಾಯಕರ ಗುಸು ಗುಸು ವಿಡಿಯೋ ವೈರಲ್

ಬೆಂಗಳೂರು: ಉಪಚುನಾವಣೆಯಲ್ಲಿ ಸಿಎಂ ಬಸವರಾಜ್ ಬೊಮ್ಮಾಯಿ ತವರು ಕ್ಷೇತ್ರ ಹಾನಗಲ್ ನಲ್ಲಿ ಸೋಲನಭವಿಸಿದ ನೋವಿನಲ್ಲಿರುವಾಗಲೇ ರಾಜ್ಯ ಬಿಜೆಪಿ ನಾಯಕರ ವಿರುದ್ಧ ಆಡಳಿತ ಪಕ್ಷದ ನಾಯಕರೇ ಅಸಮಾಧಾನ ವ್ಯಕ್ತಪಡಿಸಿರುವ ಗುಸು ಗುಸು ವಿಡಿಯೋ ವೈರಲ್ ಆಗಿದೆ.   ಹಾನಗಲ್ ಕ್ಷೇತ್ರ ನಮಗೆ ಕೊಟ್ಟಿದ್ದರೆ ಉಪಚುನಾವಣೆಯಲ್ಲಿ ಗೆಲ್ಲಿಸಬಹುದಿತ್ತು ಎಂದು ವಸತಿ ಸಚಿವ ವಿ.ಸೋಮಣ್ಣ ಹಾಗೂ ಶಾಸಕ ಬಸನ ಗೌಡ ಪಾಟೀಲ್ ಯತ್ನಾಳ್ ಇಬ್ಬರು ಮಾತನಾಡಿಕೊಳ್ಳುತ್ತಿರುವ ಸಂಭಾಷಣೆ ಜಗಜ್ಜಾಹೀರಾಗಿದೆ. ಸಚಿವ ಸೋಮಣ್ಣ, ನಿನಗೆ ಎಷ್ಟು ಶಕ್ತಿ …

Read More »

ಕೇರಳ – ಕರ್ನಾಟಕ ಗಡಿ ಪ್ರದೇಶಗಳಲ್ಲಿರುವ ಕರ್ನಾಟಕದ ಪೆಟ್ರೋಲ್‌ ಬಂಕ್‌ಗಳಲ್ಲಿ ವಾಹನಗಳ ದಟ್ಟಣೆ

ಉಳ್ಳಾಲ: ಕೇಂದ್ರ ಸರಕಾರ ಪೆಟ್ರೋಲ್‌, ಡೀಸೆಲ್‌ ಮೇಲಿನ ತೆರಿಗೆ ಇಳಿಕೆ ಮಾಡಿದ ಬೆನ್ನಲ್ಲೇ ಕರ್ನಾಟಕ ಸರಕಾರವೂ ತೈಲ ದರ ಇಳಿಕೆಗೆ ಕ್ರಮ ಕೈಗೊಂಡಿದ್ದರಿಂದ ತಲಪಾಡಿ, ಜಾಲ್ಸೂರು ಸೇರಿದಂತೆ ಕೇರಳ – ಕರ್ನಾಟಕ ಗಡಿ ಪ್ರದೇಶಗಳಲ್ಲಿರುವ ಕರ್ನಾಟಕದ ಪೆಟ್ರೋಲ್‌ ಬಂಕ್‌ಗಳಲ್ಲಿ ವಾಹನಗಳ ದಟ್ಟಣೆ ಕಾಣಿಸುತ್ತಿದೆ.   ಅತ್ತ ಕೇರಳ ಭಾಗದ ಬಂಕ್‌ಗಳು ಬಿಕೋ ಎನ್ನುತ್ತಿವೆ. ಕಾರಣ ಡೀಸೆಲ್‌ಗೆ 8.5 ರೂ. ಮತ್ತು ಪೆಟ್ರೋಲ್‌ಗೆ 5.5 ರೂ. ವ್ಯತ್ಯಾಸ ಇರುವುದು. ಮೇಲಿನ ತಲಪಾಡಿಯ ಕೇರಳ …

Read More »

ಅಪ್ಪು ನೋವಲ್ಲೇ ನೇತ್ರದಾನಕ್ಕೆ ಸಹಿ: ಅಣ್ಣಾವ್ರ ಕುಟುಂಬದೊಂದಿಗೆ ಜಮೀರ್ ನಂಟೇನು?

ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ಅಗಲಿದ ದಿನದಿಂದ ರಾಜ್ಯದಲ್ಲಿ ನೇತ್ರದಾನಕ್ಕೆ ಮನಸ್ಸು ಮಾಡುವವರ ಸಂಖ್ಯೆ ಹೆಚ್ಚಾಗಿದೆ. ಅಪ್ಪು ಕಣ್ಣುಗಳಿಂದ ನಾಲ್ಕು ಜಗತ್ತು ನೋಡುವಂತಾಗಿದೆ. ಇದರಿಂದ ಪ್ರೇರಣೆ ಹೊಂದಿದ ಪುನೀತ್ ಅಭಿಮಾನಿಗಳು ಹಾಗೂ ರಾಜ್ಯದ ಜನರು ಸ್ವಯಂ ಪ್ರೇರಿತರಾಗಿ ತಮ್ಮ ಕಣ್ಣುಗಳನ್ನು ದಾನ ಪತ್ರಕ್ಕೆ ಸಹಿ ಮಾಡುತ್ತಿದ್ದಾರೆ. ಇವರ ಸಾಲಿಗೆ ಚಾಮರಾಜಪೇಟೆಯ ಶಾಸಕ ಜಮೀರ್ ಅಹ್ಮದ್ ಖಾನ್ ಕೂಡ ಸೇರಿಕೊಂಡಿದ್ದಾರೆ. ಜಮೀರ್ ಅಹ್ಮದ್ ಖಾನ್ ಇಂದು ( ನವೆಂಬರ್ 10) ತಮ್ಮ ಬೆಂಬಲಿಗರೊಂದಿಗೆ …

Read More »

ಇಬ್ಬರ ಹೆಂಡಿರ ಮುದ್ದಿನ ಗಂಡನ ಮೋಸದಾಟ ಬಯಲು

ಬಳ್ಳಾರಿ: ಮೊದಲ ಪತ್ನಿಗೆ ಹೇಳದೇ ಎರಡನೇ ಮದುವೆಯಾದ ಭೂಪ ಈಗ ಎರಡನೇ ಪತ್ನಿ ಜೊತೆಗೂ ಕಳ್ಳಾಟ ಆಡುತ್ತಿದ್ದಾನೆ. ಇದೀಗ ಈ ಚಾಲಾಕಿ ಸಬ್​ ರಿಜಿಸ್ಟ್ರಾರ್ ಮದುವೆ ಮಹಾಭಾರತ ಪೊಲೀಸ್ ಠಾಣೆಯ ಮೆಟ್ಟಿಲೇರಿದೆ. ಉಮೇಶ್ ಎಂಬಾತನೇ ಎರಡು ಮದುವೆಯಾಗಿ ಮಾಸದಾಟವಾಡುತ್ತಿರುವ ಸಬ್ ರಿಜಿಸ್ಟ್ರಾರ್. ಈತ ಬಳ್ಳಾರಿಯಲ್ಲಿ ಸಬ್ ರಿಜಿಸ್ಟ್ರಾರ್ ಆಗಿ ಕೆಲಸ ಮಾಡುತ್ತಿದ್ದನೆ. ಮೊದಲ ಮದುವೆಯನ್ನು ಮುಚ್ಚಿಟ್ಟು ನಜ್ಮೀರ್ ಖಾನ್ ಎಂಬ ಮಹಿಳೆಯನ್ನು ಎರಡನೇ ಮದುವೆಯಾಗಿದ್ದು, ಇದೀಗ ವಿಚಾರ ತಿಳಿದು ದೂರು ನೀಡಿದ್ದಾಳೆ. …

Read More »

ಕೊಲ್ಹಾಪುರ ಶ್ರೀ ಮಹಾಲಕ್ಷ್ಮೀ ದೇವಾಲಯದಲ್ಲಿ ಕಿರಣೋತ್ಸವ !

ಕೊಲ್ಹಾಪುರ – ಮೂರುವರೆ ಶಕ್ತಿಪೀಠಗಳ ಪೈಕಿ ಒಂದಾಗಿರುವ ಕರವೀರ ನಿವಾಸಿನೀ ಶ್ರೀ ಮಹಾಲಕ್ಷ್ಮೀದೇವಿಯ ಕಿರಣೋತ್ಸವವು ನವೆಂಬರ್ ೯ರಿಂದ ಪ್ರಾರಂಭವಾಯಿತು. ಸಾಯಂಕಾಲ ೫ ಗಂಟೆಗೆ ಸೂರ್ಯಕಿರಣಗಳು ಮಹಾದ್ವಾರದ ಬಳಿಯಿತ್ತು. ಅನಂತರ ೫ ಗಂಟೆ ೨೫ ನಿಮಿಷಕ್ಕೆ ಗಣಪತಿ ಮಂದಿರ, ೫ ಗಂಟೆ ೩೫ ನಿಮಿಷಕ್ಕೆ ಸೂರ್ಯಕಿರಣಗಳು ಹೊಸ್ತಿಲಿನ ಒಳಗೆ ತಲುಪಿತು ಮತ್ತು ೫ ಗಂಟೆ ೪೬ ನಿಮಿಷಕ್ಕೆ ಸೂರ್ಯಕಿರಣಗಳು ದೇವಿಯ ಚರಣಗಳನ್ನು ಸ್ಪರ್ಶಿಸಿತು. ಈ ಸಂದರ್ಭದಲ್ಲಿ ಹೆಚ್ಚು ಮಾಹಿತಿ ನೀಡಿದ ಪಶ್ಚಿಮ …

Read More »

ಕಳೆದ ಎರಡು ವರ್ಷಗಳ ಕಬ್ಬಿನ ಬಾಕಿ ಬಿಲ್ ಸೇರಿದಂತೆ, ಪ್ರಸಕ್ತ ಸಾಲಿನ ದರ ಘೋಷಿಸದಿದ್ದಕ್ಕೆ ರೈತರು ಆಕ್ರೋಶ ವ್ಯಕ್ತಪಡಿಸಿದರು.

ಬಾಗಲಕೋಟೆ: ಬಾಕಿ ಹಣ ಮತ್ತು ದರ ನಿಗದಿ ಮಾಡದ ಹಿನ್ನೆಲೆಯಲ್ಲಿ ನಿರಾಣಿ ಸಕ್ಕರೆ ಕಾರ್ಖಾನೆಯ ವಿರುದ್ಧ ರೈತರು ಆಕ್ರೋಶ ವ್ಯಕ್ತಪಡಿಸಿ, ಕಾರ್ಖಾನೆ ಆವರಣದಿಂದ ಕಬ್ಬಿನ ಟ್ರ್ಯಾಕ್ಟರ್​ಗಳನ್ನು ಹೊರ ತರಲು ಮುಂದಾದ ಘಟನೆ ಬಾಗಲಕೋಟೆ ಜಿಲ್ಲೆ ಮುಧೋಳ ಬಳಿ ಇರುವ ಸಕ್ಕರೆ ಕಾರ್ಖಾನೆಯಲ್ಲಿ ಬುಧವಾರ ನಡೆದಿದೆ. ಕಳೆದ ಎರಡು ವರ್ಷಗಳ ಕಬ್ಬಿನ ಬಾಕಿ ಬಿಲ್ ಸೇರಿದಂತೆ, ಪ್ರಸಕ್ತ ಸಾಲಿನ ದರ ಘೋಷಿಸದಿದ್ದಕ್ಕೆ ರೈತರು ಆಕ್ರೋಶ ವ್ಯಕ್ತಪಡಿಸಿದರು. ಕಳೆದ ಸಾಲಿನ ಬಾಕಿ ಹಣ …

Read More »

ಸಿದ್ದರಾಮಯ್ಯ ಅವರ ಕಾಲನ್ನ ಗಟ್ಟಿಯಾಗಿ ಹಿಡಿದು, ಮಗಳಿಗೆ ಕೆಲಸ ಕೊಡಿಸಿ ಅಂದಿದ್ದಾಳೆ ಮಹಿಳೆ.

ಬೆಂಗಳೂರು: ರಾಜಕಾರಣಿಗಳು ಹೋಗಿದ ಕಡೆ ಕೆಲವೊಬ್ಬರು ತಮ್ಮ ಮನವಿ ಸಲ್ಲಿಸೋದು ಸಹಜ. ನಮಸ್ಕರಿಸಿನೋ, ಪತ್ರದ ಮೂಲಕವೋ ಮನವಿ ಸಲ್ಲಿಸುತ್ತಾರೆ. ಆದ್ರೆ ಇಲ್ಲೊಬ್ಬಳು ಮಹಿಳೆ ಮಾತ್ರ ವಿಭಿನ್ನ. ಸಿದ್ದರಾಮಯ್ಯ ಅವರ ಕಾಲನ್ನ ಗಟ್ಟಿಯಾಗಿ ಹಿಡಿದು, ಮಗಳಿಗೆ ಕೆಲಸ ಕೊಡಿಸಿ ಅಂದಿದ್ದಾಳೆ. ನನ್ನ ಗಂಡ ನಿಮ್ಮ ಸಪೋರ್ಟರ್. ಈಗ ಅವರಿಲ್ಲ. ನಿಧನರಾಗಿದ್ದಾರೆ. ಮನೆ ನಡೆಯೋದು ಕಷ್ಟವಾಗಿದೆ. ದಯವಿಟ್ಟು ನನ್ನ ಮಗಳಿಗೆ ಕೆಲಸ ಕೊಡಿಸಿ ಎಂದು ಸಿದ್ದರಾಮಯ್ಯ ಅವರ ಕಾಲನ್ನ ಹಿಡಿದು ಆ ಮಹಿಳೆ ಗೋಗರೆದಿದ್ದಾಳೆ. …

Read More »

ಶ್ರೀಕಿ ಅಲಿಯಾಸ್ ಶ್ರೀಕೃಷ್ಣ ಸೆಂಟ್ರಲ್ ಜೈಲ್ ಪರಪ್ಪನ ಅಗ್ರಹಾರದಿಂದ ಜಾಮೀನಿನ ಮೇಲೆ ಬಿಡುಗಡೆ

ಬೆಂಗಳೂರು: ರಾಜಕೀಯ ನಾಯಕರ ಕೆಸರೆರಚಾಟಕ್ಕೆ ಕಾರಣವಾಗಿರುವ ಬಿಟ್ ಕಾಯಿನ್ ದಂಧೆ ಆರೋಪಿ, ಹ್ಯಾಕರ್ ಶ್ರೀಕಿ ಅಲಿಯಾಸ್ ಶ್ರೀಕೃಷ್ಣ ಸೆಂಟ್ರಲ್ ಜೈಲ್ ಪರಪ್ಪನ ಅಗ್ರಹಾರದಿಂದ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾನೆ. ಹೋಟೆಲ್ ನಲ್ಲಿ ನದೆದ ಗಲಾಟೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶನಿವಾರ ಬಂಧನಕ್ಕೀಡಾಗಿದ್ದ ಶ್ರೀಕಿಯನ್ನುನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿತ್ತು. ಆದರೆ ಈಗ ಆದರೀಗ ಎರಡೇ ದಿನದಲ್ಲಿ ಪರಪ್ಪನ ಅಗ್ರಹಾರ ಜೈಲಿನಿಂದ ಬಿಡುಗಡೆಯಾಗಿದ್ದಾನೆ. ಬಿಡುಗಡೆ ಬೆನ್ನಲ್ಲೇ ಸುದ್ದಿಗಾರರೊಂದಿಗೆ ಮಾತನಾಡಿದ ಶ್ರೀಕಿ, ಬಿಟ್ ಕಾಯಿನ್ ಪ್ರಕರಣದ ಬಗ್ಗೆ ನನಗೆ ಏನೂ …

Read More »

ಟಾಯ್ಲೆಟ್​ ನೀರನ್ನು ಕುಡಿಯಲು ಬಳಸುತ್ತಿದ್ದ ಆಸ್ಪತ್ರೆ: 30 ವರ್ಷಗಳ ಬಳಿಕ ಗುಟ್ಟು ರಟ್ಟು!

ಸಾರ್ವಜನಿಕರು ತಾವು ಅನಾರೋಗ್ಯ(Illness)ದಿಂದ ಬಳಲುತ್ತಿರುವಾಗ ಆಸ್ಪತ್ರೆ(Hospitals)ಗಳನ್ನೇ ಹುಡುಕಿಕೊಂಡು ಬರುತ್ತಾರೆ. ಈ ನಿಟ್ಟಿನಲ್ಲಿ ಆಸ್ಪತ್ರೆಗೆ ಬಂದಂತಹ ರೋಗಿ(Patients )ಗಳಿಗೆ ಮೂಲಭೂತ ಸೌಕರ್ಯಗಳನ್ನು ಸರಿಯಾಗಿ ಒದಗಿಸುವುದು ಇವರ ಆದ್ಯ ಕರ್ತವ್ಯವಾಗಿರುತ್ತದೆ. ದೇವಸ್ಥಾನ(Temples)ಗಳಿಂದ ಹೆಚ್ಚು ಪ್ರಾರ್ಥನೆ(Prayer) ಆಸ್ಪತ್ರೆಯಲ್ಲಿ ಮಾಡುತ್ತಾರೆ. ಆಸ್ಪತ್ರೆಗೆ ಬರುವ ಪ್ರತಿಯೊಬ್ಬರು ಹುಷಾರಾಗಿ ಇಲ್ಲಿಂದ ಹೋಗಬೇಕೆಂದು ಬಂದಿರುತ್ತಾರೆ. ರೋಗಿಗಳಿಗೆ ಅವರ ರೋಗವು ಬೇಗನೆ ವಾಸಿಯಾಗಲು ಈ ಆಸ್ಪತ್ರೆಗಳಲ್ಲಿರುವ ಮೂಲಭೂತ ಸೌಕರ್ಯಗಳು ಸಹ ಪ್ರಮುಖವಾದ ಪಾತ್ರ ವಹಿಸುತ್ತವೆ ಎಂದರೆ ತಪ್ಪಾಗುವುದಿಲ್ಲ. ಆದರೆ ಇಲ್ಲೊಂದು ಆಸ್ಪತ್ರೆ ಇದೆ, …

Read More »

ಬೀದರ: ಶಿಕ್ಷಕನ ಮರ್ಮಾಂಗ ಕತ್ತರಿಸಿ ಭೀಕರ ಹತ್ಯೆ

ಬೀದರ: ಪ್ರಾಥಮಿಕ ಶಾಲೆಯೊಂದರ ಶಿಕ್ಷಕನ ಮರ್ಮಾಂಗವನ್ನು ಕತ್ತರಿಸಿ ಭೀಕರವಾಗಿ ಹತ್ಯೆ ಮಾಡಿರುವ ಘಟನೆ ಜಿಲ್ಲೆಯ ಔರಾದ್ ಪಟ್ಟಣದಲ್ಲಿ ನಡೆದಿದ್ದು, ಸ್ಥಳೀಯ ನಿವಾಸಿಗರನ್ನು ಬೆಚ್ಚಿ ಬಿಳಿಸಿದೆ. ಔರಾದ ತಾಲೂಕಿನ ಕರಂಜಿ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕ ವಿಜಯಕುಮಾರ ಟಿಳೇಕರ್ (45) ಹತ್ಯೆಗೀಡಾದ ಶಿಕ್ಷಕ ಎಂದು ಗುರುತಿಸಲಾಗಿದೆ. ಮೂಲತ ಭಾಲ್ಕಿ ತಾಲೂಕಿನ ಹಲಬರ್ಗಾ ಗ್ರಾಮದವರಾಗಿರುವ ಶಿಕ್ಷಕ ಟಿಳೇಕರ್ ಸಧ್ಯ ಔರಾದನ ಲೀಡ್ಕರ್ ಕಾಲೋನಿಯ ಬಾಡಿಗೆ ಮನೆಯೊಂದರಲ್ಲಿ ವಾಸಿಸುತ್ತಿದ್ದರು. ಬೀದರ ನಾಂದೇಡ್ ರಸ್ತೆಯ ರೈತ …

Read More »