ಬೆಂಗಳೂರು : ಸಿಲಿಕಾನ್ ಸಿಟಿ ಜನರಿಗೆ ಭರ್ಜರಿ ಸಿಹಿಸುದ್ದಿ ಸಿಕ್ಕಿದ್ದು, ಮೆಜೆಸ್ಟಿಕ್ ನಿಂದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹೋಗಲು ಇನ್ಮುಂದೆ ಕೇವಲ 10-15 ರೂ. ನೀಡಿ ಪ್ರಯಾಣಿಸಬಹುದು. ಇಂದಿನಿಂದ ಮೆಜೆಸ್ಟಿಕ್ ನಿಂದ ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ವಿಶೇಷ ರೈಲು ಸೇವೆ ಲಭ್ಯವಾಗಿದ್ದು, ಕೆಂಪೇಗೌಡ ವಿಮಾನ ನಿಲ್ದಾಣದ ಬಳಿಯಿರುವ ದೇವನಹಳ್ಳಿ ರೈಲ್ವೆ ನಿಲ್ದಾಣವನ್ನು ಅಭಿವೃದ್ಧಿ ಮಾಡಲಾಗಿರುವ ಜೊತೆಗೆ ನಗರದಿಂದ ನಿಲ್ದಾಣಕ್ಕೆ ಓಡಾಡುವ ರೈಲು ಸಂಖ್ಯೆಯನ್ನು ಹೆಚ್ಚಿಸಲಾಗಿದೆ.ಪ್ರಯಾಣ ದರ ಕೇವಲ 10-15 …
Read More »Yearly Archives: 2021
ನವದೆಹಲಿಯಿಂದ ಬೆಂಗಳೂರಿಗೆ ಆಗಮಿಸುತ್ತಿದ್ದ ರಾಜಧಾನಿ ಎಕ್ಸ್‌ಪ್ರೆಸ್ ರೈಲಿನ ಎಂಜಿನ್‌ನಲ್ಲಿ ಬೆಂಕಿ
ಹೈದರಾಬಾದ್: ನವದೆಹಲಿಯಿಂದ ಬೆಂಗಳೂರಿಗೆ ಆಗಮಿಸುತ್ತಿದ್ದ ರಾಜಧಾನಿ ಎಕ್ಸ್‌ಪ್ರೆಸ್ ರೈಲಿನ ಎಂಜಿನ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು ಯಾವುದೇ ಅನಾಹುತ ಸಂಭವಿಸಿಲ್ಲ ಎಂದು ರೈಲ್ವೆ ಇಲಾಖೆ ತಿಳಿಸಿದೆ. ರಾಜಧಾನಿ ಎಕ್ಸ್‌ಪ್ರೆಸ್ ರೈಲು ನವದೆಹಲಿಯಿಂದ ಬೆಂಗಳೂರು ಕಡೆಗೆ ಬರುತ್ತಿತ್ತು. ಭಾನುವಾರ ರಾತ್ರಿ 9 ಗಂಟೆಗೆ ಸುಮಾರಿಗೆ ತೆಲಂಗಾಣದ ವಿಕರಾಬಾದ್ ಜಿಲ್ಲೆ ನವಾಂಡ್ಗಿ ರೈಲು ನಿಲ್ದಾಣದ ಸಮೀಪ ಈ ಘಟನೆ ಸಂಭವಿಸಿದೆ ಎಂದು ದಕ್ಷಿಣ ರೈಲ್ವೆ ವಿಭಾಗದ ಅಧಿಕಾರಿಗಳು ತಿಳಿಸಿದ್ದಾರೆ. ಲೋಕೊ ಪೈಲೆಟ್ ರೈಲು ಎಂಜಿನಲ್ಲಿ ಬೆಂಕಿ …
Read More »ಬೆಳಗಾವಿಯ ರಾಯಭಾಗದ ಹಾರೋಗೇರಿ ಪಟ್ಟಣದಲ್ಲಿ ಖಿಲಾರಿ ತಳಿಯ ಜವಾರಿ ಹೋರಿ ಬರೋಬ್ಬರಿ ಐದೂವರೆ ಲಕ್ಷ ರೂಪಾಯಿಗೆ ಮಾರಾಟವಾಗಿದೆ.
ಚಿಕ್ಕೋಡಿ(ಜ. 03): ಸಾಮಾನ್ಯವಾಗಿ ಒಂದು ಕಟ್ಟುಮಸ್ತಾದ ಹೋರಿ 50 ಸಾವಿರದಿಂದ 1 ಲಕ್ಷದವರೆಗಿನ ಬೆಲೆಗೆ ಮಾರಾಟವಾಗುತ್ತೆ. ಅಬ್ಬಬ್ಬಾ ಅಂದ್ರೆ ಒಂದೂವರೆ ಲಕ್ಷ ರೂಪಾಯಿಗೆ ಸೇಲ್ ಆಗಬಹುದು. ಆದರೆ, ಇಲ್ಲೊಂದು ಹೋರಿ ಬರೋಬ್ಬರಿ 5.51 ಲಕ್ಷ ರೂಪಾಯಿಗೆ ಮಾರಾಟವಾಗುವುದರ ಮೂಲಕ ಎಲ್ಲರ ಗಮನ ಸೆಳೆದಿದೆ. ಇಂತಹದೊಂದು ಅಪರೂಪದ ಹೋರಿ ಮಾರಾಟವಾಗಿದ್ದು ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಹಾರೊಗೇರಿ ಪಟ್ಟಣದಲ್ಲಿ. ಇದು ಜವಾರಿ ಹೋರಿ. ಇಂತಹ ಹೋರಿ ಬೆಳೆಸಿದ್ದು ಹಾರೊಗೇರಿ ಪಟ್ಟಣದ ಕುರಬಗೋಡಿ …
Read More »ಶೀಘ್ರದಲ್ಲಿ ರಾಜ್ಯ ಸಚಿವ ಸಂಪುಟ ವಿಸ್ತರಣೆ:ಅರುಣ್ ಸಿಂಗ್
ಶಿವಮೊಗ್ಗ: ಶೀಘ್ರದಲ್ಲಿ ರಾಜ್ಯ ಸಚಿವ ಸಂಪುಟ ವಿಸ್ತರಣೆ ಮಾಡಲಾಗುತ್ತಿದ್ದು, ಸಂಪುಟ ವಿಸ್ತರಣೆ ಸಿಎಂ ಯಡಿಯೂರಪ್ಪನವರ ಪರಮಾಧಿಕಾರಕ್ಕೆ ಬಿಟ್ಟದ್ದು ಎಂದು ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ತಿಳಿಸಿದ್ದಾರೆ. ಶಿವಮೊಗ್ಗದಲ್ಲಿ ಮಾತನಾಡಿದ ಅರುಣ್ ಸಿಂಗ್, ನಾಯಕತ್ವ ಬದಲಾವಣೆ ಬಗ್ಗೆ ನಾವು ನಿರ್ಧರಿಸುತ್ತೇವೆ. ಈ ಬಗ್ಗೆ ಮಾತನಾಡಲು ಯತ್ನಾಳ್ ಯಾರು? ಏನಾದರೂ ಸಮಸ್ಯೆಯಿದ್ದರೆ ಪಕ್ಷದಲ್ಲಿ ಚರ್ಚಿಸಬೇಕು. ಹಲವು ಬಾರಿ ಹೇಳಿದರೂ ಮತ್ಯಾಕೆ ನಾಯಕತ್ವದ ಬಗ್ಗೆ ಪ್ರಶ್ನೆ ಬರುತ್ತದೆ. ಬಿ.ಎಸ್.ಯಡಿಯೂರಪ್ಪ ನೇತೃತ್ವದಲ್ಲಿ ರಾಜ್ಯದಲ್ಲಿ ಒಳ್ಳೆಯ ಕೆಲಸಗಳಾಗುತ್ತಿವೆ …
Read More »ಇಸ್ಪೀಟ್ ಅಡ್ಡೆ ಮೇಲೆ ಪೊಲೀಸ್ ದಾಳಿ
ಬೆಳಗಾವಿ– ಗ್ರಾಮ ಪಂಚಾಯಿತಿಯಿಂದ ಪಟ್ಟಣ ಪಂಚಾಯಿತಿ ಹಂತಕ್ಕೆ ಮೇಲ್ದರ್ಜೆಗೇರುತ್ತಿರುವ ಮಚ್ಚೆಯಲ್ಲಿ ದೊಡ್ಡ ಇಸ್ಪೀಟ್ ಅಡ್ಡೆಯ ಮೇಲೆ ಪೊಲೀಸ್ ದಾಳಿ ನಡೆದಿದೆ. ಭಾನುವಾರ ರಾತ್ರಿ ಸುಮಾರು 15ಕ್ಕೂ ಹೆಚ್ಚು ಜನರು ದುಡ್ಡು ಹಾಕಿ ಇಸ್ಪೀಟ್ ಆಡುತ್ತಿರುವಾಗ ಬೆಳಗಾವಿ ಗ್ರಾಮೀಣ ಪೊಲೀಸ್ ಠಾಣೆ ಪೊಲೀಸರು ದಾಳಿ ನಡೆಸಿದ್ದಾರೆ. ಈ ವೇಳೆ ಕೆಲವರು ಪರಾರಿಯಾಗಿದ್ದು, 12 ಜನರು ಪೊಲೀಸ್ ಬಲೆಗೆ ಬಿದ್ದಿದ್ದಾರೆ. 83 ಸಾವಿರ ರೂ. ನಗದು, 16 ಬೈಕ್, 12 ಮೊಬೈಲ್ …
Read More »ಉತ್ತರ ಕನ್ನಡ: ಗ್ರಾ.ಪಂ.ಚುನಾವಣೆಯಲ್ಲಿ ಬಿಜೆಪಿಗೆ ಅಧಿಕ ಸ್ಥಾನ ಹಿನ್ನೆಲೆ; ಎಂಎಲ್ಸಿ ಟಿಕೆಟ್ಗೆ ಹೆಚ್ಚಿನ ಬೇಡಿಕೆ
ಕಾರವಾರ (ಜ.04): ಗ್ರಾಮ ಪಂಚಾಯತಿ ಚುನಾವಣೆಯ ಫಲಿತಾಂಶ ಪ್ರಕಟವಾಗಿದ್ದು, ಈ ಬಾರಿ ಉತ್ತರ ಕನ್ನಡ ಜಿಲ್ಲೆಯಲ್ಲಿ ಬಿಜೆಪಿ ಬೆಂಬಲಿತರು ಹೆಚ್ಚಿನ ಸ್ಥಾನದಲ್ಲಿ ಗೆಲುವು ಪಡೆದಿದ್ದಾರೆ. ಹೀಗಾಗಿ ಸ್ಥಳೀಯ ಸಂಸ್ಥೆಗಳ ಪ್ರತಿನಿಧಿಯಿಂದ ಆಯ್ಕೆಯಾಗುವ ವಿಧಾನ ಪರಿಷತ್ ಟಿಕೆಟ್ಗೆ ಈ ಬಾರಿ ಬಿಜೆಪಿಯಲ್ಲಿ ಬೇಡಿಕೆ ಹೆಚ್ಚಾಗಲಿದೆ ಎನ್ನುವ ಮಾತು ಕೇಳಿ ಬಂದಿದೆ. ಉತ್ತರ ಕನ್ನಡ ಜಿಲ್ಲೆಯ ಸ್ಥಳೀಯ ಸಂಸ್ಥೆಗಳ ಜನಪ್ರತಿನಿಧಿಗಳಿಂದ ಓರ್ವ ವಿಧಾನ ಪರಿಷತ್ ಸದಸ್ಯನನ್ನು ಆಯ್ಕೆ ಮಾಡಿ ಕಳಿಸಲಾಗುತ್ತದೆ. ನಗರಸಭೆ, ಪುರಸಭೆ, …
Read More »ಕುರುಬ ಸಮಾಜದ ಹೋರಾಟದ ಬಗ್ಗೆ ಶ್ರೀರಾಮುಲು ಹೇಳಿದ್ದೇನು? ರಮೇಶ್ ಜಾರಕಿಹೊಳಿಗೆ ಸೆಡ್ಡು ಹೊಡೆಯುತ್ತಾರಾ ರಾಮುಲು
ಬಾಗಲಕೋಟೆ): ಜನಸಂಖ್ಯಾಧಾರಿತವಾಗಿ ವಾಲ್ಮೀಕಿ ಸಮಾಜಕ್ಕೆ ಮೀಸಲಾತಿ ಸಿಗಬೇಕು ಎಂಬ ಕೂಗು ಮೊದಲಿನಿಂದಲೂ ಇದೆ. ಕೇಂದ್ರ ಸರ್ಕಾರ ಕೊಟ್ಟರೂ ರಾಜ್ಯ ಸರ್ಕಾರ ಕೊಟ್ಟಿಲ್ಲ. ನಮ್ಮ ಸರ್ಕಾರ ಬಂದ ಬಳಿಕ ಈಗ ಪ್ರಸ್ತಾವನೆ ಸಲ್ಲಿಸಲಾಗಿದೆ. ಈಗ ಕುರುಬರು ಎಸ್ಟಿ ಸೇರ್ಪಡೆಗಾಗಿ ಹೋರಾಟ ಮಾಡ್ತಿದ್ದಾರೆ. ಅಂತಿಮ ತೀರ್ಮಾನ ಏನು ತೆಗೆದುಕೊಳ್ತಾರೆ ನೋಡೋಣ. ವಾಲ್ಮೀಕಿ ಸಮಾಜಕ್ಕೆ ಜನಸಂಖ್ಯಾಧಾರಿತ ಮೀಸಲಾತಿ ಕೊಡಬೇಕೆನ್ನುವುದು ನನ್ನ ಒತ್ತಾಯ ಎಂದು ಸಮಾಜ ಕಲ್ಯಾಣ ಸಚಿವ ಶ್ರೀರಾಮುಲು ಹೇಳಿದರು. ಇಲ್ಲಿ ಮಾಧ್ಯಮಗಳೊಂದಿಗೆ ಮಾತನಾಡುವ …
Read More »ಗ್ರಾ.ಪಂ. ಚುನಾವಣೆಯಲ್ಲಿ ಗೆದ್ದ ಅಭ್ಯರ್ಥಿಯಿಂದ ಯಡವಟ್ಟು; ಪೋಸ್ಟ್ ಡಿಲೀಟ್ ಮಾಡಿದರೂ ವೈರಲ್ ಆಯ್ತು ಚಿತ್ರ
ವಿಜಯಪುರ: ಈ ಪ್ರಕರಣ ಯುವ ರಾಜಕಾರಣಿಗಳು ಮತ್ತು ಪೊಲೀಸರಿಗೆ ಒಂದು ಪಾಠ. ಯಾರು ಏನೆಲ್ಲ ಮಾಡಬಾರದು ಎಂಬುದಕ್ಕೆ ಹೇಳಿ ಮಾಡಿಸಿದಂತಿದೆ. ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಗೆದ್ದ ಅಭ್ಯರ್ಥಿ ತನ್ನ ಬೆಂಬಲಿಗರೊಂದಿಗೆ ಅತೀ ಹುರುಪಿನಿಂದ ಮಾಡಿದ ಯಡವಟ್ಟು ಈಗ ಪೊಲೀಸ್ ಠಾಣೆಯ ಮಹಿಳಾ ಪಿಎಸ್ಐ ಮತ್ತು ಪೊಲೀಸ್ ಕಾನ್ಸ್ಟೆಬಲ್ ಇಕ್ಕಟ್ಟಿಗೆ ಸಿಲುಕುವಂತೆ ಮಾಡಿದೆ. ಇದಕ್ಕೂ ಮಿಗಿಲಾಗಿ ತಮ್ಮ ಕೃತ್ಯವನ್ನು ಫೇಸ್ ಬುಕ್ ಮೂಲಕ ಜಗಜ್ಜಾಹಿರು ಮಾಡಿ ನಂತರ ಪೋಸ್ಟ್ ನ್ನು ಡಿಲೀಟ್ ಮಾಡಿದರೂ …
Read More »25 ಕೋಟಿ ರೂ ಗಳಿಗೆ ಮಂಜೂರಾಗಿರುವ ವಿವಿಧ ಕಾಮಗಾರಿಗಳಿಗೆ ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಶಂಕು ಸ್ಥಾಪನೆ
ಬೆಳಗಾವಿ: ಎಸ್.ಎಫ್.ಸಿ ವಿಶೇಷ ಅನುದಾನದಡಿಯಲ್ಲಿ ಅಂದಾಜು ಮೊತ್ತ 25 ಕೋಟಿ ರೂ ಗಳಿಗೆ ಮಂಜೂರಾಗಿರುವ ವಿವಿಧ ಕಾಮಗಾರಿಗಳಿಗೆ ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಶಂಕು ಸ್ಥಾಪನೆ ನೆರವೇರಿಸಿದರು. ಗೋಕಾಕ್ ನಗರದ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ನಡೆದ ಕಾರ್ಯಕ್ರಮದಲ್ಲಿ ರಸ್ತೆ ಅಭಿವೃದ್ಧಿ, ಚರಂಡಿ ಕಾಮಗಾರಿಗಳು, ವಿದ್ಯುತ್ ಕಾಮಗಾರಿಗಳು, ಉದ್ಯಾನವನ ಅಭಿವೃದ್ಧಿ ಕಾಮಗಾರಿಗಳು,ನೀರು ಸರಬರಾಜು ಕಾಮಗಾರಿಗಳೂ ಸೇರಿದಂತೆ ಎಸ್.ಎಫ್.ಸಿ ವಿಶೇಷ ಅನುದಾನದಡಿಯ ಕಾಮಗಾರಿಗಳಿಗೆ ಜಲಸಂಪನ್ಮೂಲ ಸಚಿವರಾದ ರಮೇಶ್ ಜಾರಕಿಹೊಳಿ ಅವರು ಚಾಲನೆ ನೀಡಿದರು. ಈ …
Read More »ಪಕ್ಷ ಸಂಘಟನೆ: ಜನವರಿ 6 ರಿಂದ ‘ಕೈ’ ನಾಯಕರ ಸಭೆ
ಬೆಂಗಳೂರು: ತಳಮಟ್ಟದಲ್ಲಿ ಪಕ್ಷ ಸಂಘಟನೆಗೆ ಒತ್ತು ನೀಡುವ ಜೊತೆಗೆ ಮುಂಬರುವ ಚುನಾವಣೆಗಳನ್ನು ದೃಷ್ಟಿಯಲ್ಲಿಟ್ಟು ಪಂಚಾಯಿತಿ, ವಾರ್ಡ್, ಬೂತ್ ಸಮಿತಿಗಳ ರಚನೆ ಕುರಿತು ಸ್ಥಳೀಯಮಟ್ಟದಲ್ಲಿ ಪಕ್ಷದ ನಾಯಕರ ಜೊತೆ ಸಮಾಲೋಚನೆ ನಡೆಸಲು ರಾಜ್ಯದ ನಾಲ್ಕು ವಿಭಾಗಗಳಲ್ಲಿ (ಮೈಸೂರು, ಬೆಂಗಳೂರು, ಬೆಳಗಾವಿ, ಕಲಬುರ್ಗಿ) ಜ. 6ರಿಂದ ಸಭೆಗಳನ್ನು ಆಯೋಜಿಸಲು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ನಿರ್ಧರಿಸಿದ್ದಾರೆ. ಜ 6ರಂದು ದಕ್ಷಿಣ ಕನ್ನಡ ಜಿಲ್ಲೆ ಬಂಟ್ವಾಳದಲ್ಲಿರುವ ಸಾಗರ ಆಡಿಟೋರಿಯಂನಲ್ಲಿ ಶಿವಮೊಗ್ಗ ಜಿಲ್ಲೆಯೂ ಸೇರಿದಂತೆ ಮೈಸೂರು ವಿಭಾಗ, …
Read More »
Laxmi News 24×7