Breaking News

Yearly Archives: 2021

ನಟ ಸಲ್ಮಾನ್‍ಖಾನ್ ಸೋದರರ ಮೇಲೆ ಎಫ್‍ಐಆರ್

ಮುಂಬೈ, ಜ.5- ಬಾಲಿವುಡ್‍ನ ಖ್ಯಾತ ನಟ  ಸಲ್ಮಾನ್‍ಖಾನ್ ಸಹೋದರರ ಮೇಲೆ ಮುಂಬೈ ಪಾಲಿಕೆ ವತಿಯಿಂದ ಎಫ್‍ಐಆರ್ ದಾಖಲು ಮಾಡಲಾಗಿದೆ. ರೂಪಾಂತರ ಕೊರೊನಾದ ಹಿನ್ನೆಲೆಯಲ್ಲಿ ಮುಂಬೈನಲ್ಲಿ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಲಾಗಿದ್ದು ಸಲ್ಲು ಸಹೋದರರು ದುಬೈನಿಂದ ಬಂದಿದ್ದರಿಂದ ಅವರನ್ನು ಕ್ವಾರಂಟೈನ್‍ಗೆ ಒಳಪಡಿಸಲಾಗಿತ್ತು. ಸಲ್ಲು ಸಹೋದರರಾದ ಸೊಹೈಲ್‍ಖಾನ್, ಅರ್ಬಾಜ್‍ಖಾನ್ ಹಾಗೂ ಅರ್ಬಾಜ್ ಪುತ್ರ ಅಬ್ರಹಾಂ ಅವರನ್ನು ಮುಂಬೈನ ಹೊಟೇಲ್ ಒಂದರಲ್ಲಿ ಕ್ವಾರಂಟೈನ್ ಮಾಡಲು ಮುಂಬೈ ಪಾಲಿಕೆ ಸೂಚಿಸಿತ್ತು. ಆದರೆ ಡಿಸೆಂಬರ್ 25 ರಂದು ಅವರು …

Read More »

ಸಚಿವ ಭೈರತಿ ಬಸವರಾಜ ಬೆಳಗಾವಿಗೆ

ಬೆಂಗಳೂರು – ನಗರಾಭಿವೃದ್ಧಿ ಸಚಿವ ಬಿ.ಎ.ಬಸವರಾಜ ಬೆಳಗಾವಿ ಸೇರಿದಂತೆ ರಾಜ್ಯದ ವಿವಿಧ ಮಹಾನಗರಗಳ ಯೋಜನೆಗಳ ಪ್ರಗತಿ ಪರಿಶೀಲನೆ ನಡೆಸಲಿದ್ದಾರೆ. ಬುಧವಾರ, ಗುರುವಾರ ಮತ್ತು ಶುಕ್ರವಾರ ಅವರು ತುಮಕೂರು, ಹುಬ್ಬಳ್ಳಿ -ಧಾರವಾಡ ಹಾಗೂ ಬೆಳಗಾವಿ ಮಹಾನಗರದ ಸ್ಮಾರ್ಟ್ ಸಿಟಿ ಕಾಮಗಾರಿ, ಮಹಾನಗರ ಪಾಲಿಕೆ ಅಭಿವೃದ್ಧಿ ಯೋಜನೆಗಳು ಹಾಗೂ ನಗರಾಭಿವೃದ್ಧಿ ಪ್ರಾಧಿಕಾರದ ಯೋಜನೆಗಳ ಪರಿಶೀಲನೆ ನಡೆಸುವರು. ಬುಧವಾರ ಬೆಳಗ್ಗೆ 10.30ರಿಂದ 2 ಗಂಟೆಯವರೆಗೆ ತುಮಕೂರು ನಗರದ ವಿವಿಧ ಕಾಮಗಾರಿಗಳನ್ನು ವೀಕ್ಷಣೆ ಮಾಡಿ ನಂತರ ಮಗರಾಭಿವೃದ್ಧಿ …

Read More »

ಗ್ರಾಮೀಣ ಕ್ಷೇತ್ರದ ಸಮಗ್ರ ಅಭಿವೃದ್ಧಿ ನನ್ನ ಬದ್ಧತೆ

ಬೆಳಗಾವಿ – ​ರಸ್ತೆ ಸೇರಿದಂತೆ ಯಾವುದೇ ಕಾಮಗಾರಿಗಳ ಗುಣಮಟ್ಟದಲ್ಲಿ ರಾಜಿಯ ಪ್ರಶ್ನೆಯೇ ಇಲ್ಲ. ಎಲ್ಲ ಕಾಮಗಾರಿಗಳೂ ಸಮರ್ಪಕವಾಗಿ ನಡೆಯಬೇಕು ಎಂದು ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಗುತ್ತಿಗೆದಾರರಿಗೆ ಸೂಚನೆ ನೀಡಿದ್ದಾರೆ. ​ ಬೆಳಗಾವಿ ಗ್ರಾಮೀಣ ಕ್ಷೇತ್ರದ ಮಣ್ಣೂರ, ಉಚಗಾಂವ ಹಾಗೂ ಗೋಜಗಾ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ಮುಖ್ಯ ಹೆದ್ದಾರಿ ನಿರ್ಮಾಣದ ಕಾಮಗಾರಿಗಳನ್ನು ಖುದ್ದಾಗಿ ಪರಿಶೀ​ಲಿ​​ಸಿ​ದ ಅವರು, ಕಾಮಗಾರಿಯ ಗುಣಮಟ್ಟ​ದ ಬಗ್ಗೆ​ ಚರ್ಚಿಸಿ​,​ ನಿಗದಿತ ಸಮಯದಲ್ಲಿ ಪೂರ್ಣಗೊಳಿಸು​ವಂ​​ತೆ ಸೂಚನೆಯನ್ನು ನೀಡಿ​ದರು.   ​ಗ್ರಾಮೀಣ ಕ್ಷೇತ್ರದ ಸಮಗ್ರ ಅಭಿವೃದ್ಧಿ ನನ್ನ ಬದ್ಧತೆ. ನಿಗದಿತ ಗುರಿ …

Read More »

ಬೆಳಗಾವಿ ಜಿಲ್ಲೆ ಮತ್ತು ಇಡೀ ರಾಜ್ಯದಲ್ಲಿ ಈಗ ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿಯೇ ಬಿಜೆಪಿಯಲ್ಲಿ ಪವರ್ ಫುಲ್ ಲೀಡರ್.

ಬೆಳಗಾವಿ – ಬೆಳಗಾವಿ ಜಿಲ್ಲೆ ಮತ್ತು ಇಡೀ ರಾಜ್ಯದಲ್ಲಿ ಈಗ ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿಯೇ ಬಿಜೆಪಿಯಲ್ಲಿ ಪವರ್ ಫುಲ್ ಲೀಡರ್. ಬೆಳಗಾವಿ ಜಿಲ್ಲೆಯ ಎರಡು ಕಡೆ ಸೇರಿದಂತೆ ರಾಜ್ಯಾದ್ಯಂತ ತಾಲೂಕು ಪಂಚಾಯಿತಿ ಮತ್ತು ಜಿಲ್ಲಾ ಪಂಚಾಯಿತಿ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ಹಮ್ಮಿಕೊಂಡಿರುವ ಜನಸೇವಕ ಸಮಾವೇಶವೂ ಸೇರಿದಂತೆ ಇತ್ತೀಚಿನ ಹಲವು ಬೆಳವಣಿಗೆಗಳು ಇದಕ್ಕೆ ಪುಷ್ಠಿ ನೀಡುತ್ತವೆ. ರಮೇಶ್ ಜಾರಕಿಹೊಳಿ ಮುಂದೆ ಬಿಜೆಪಿಯ ಇತರ ನಾಯಕರೆಲ್ಲ ಈಗ ಗೌಣರಾಗುತ್ತಿದ್ದಾರೆ. ರಾಜ್ಯದಲ್ಲಿ ಸಮ್ಮಿಶ್ರ ಸರಕಾರ …

Read More »

ಶಾಲಾ ಮಕ್ಕಳಿಗೆ ಉಚಿತ ಕನ್ನಡಕ ನೀಡಲು ರಾಜ್ಯ ಸರ್ಕಾರ ಮುಂದಾಗಿದೆ.

ಬೆಂಗಳೂರು: ಶಾಲಾ ಮಕ್ಕಳಿಗೆ ಉಚಿತ ಕನ್ನಡಕ ನೀಡಲು ರಾಜ್ಯ ಸರ್ಕಾರ ಮುಂದಾಗಿದ್ದು, ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಆರೋಗ್ಯ ಇಲಾಖೆ ನೇತೃತ್ವದಲ್ಲಿ ಜ.20ರ ನಂತರ ಉಚಿತ ನೇತ್ರ ತಪಾಸಣೆ ಮತ್ತು ಕನ್ನಡ ವಿತರಣೆ ನಡೆಯಲಿದೆ. ರಾಷ್ಟ್ರೀಯ ಅಂಧತ್ವ ಮತ್ತು ದೃಷ್ಟಿದೋಷ ನಿಯಂತ್ರಣ ಕಾರ್ಯಕ್ರಮದಡಿಯಲ್ಲಿ ಈ ಯೋಜನೆ ಜಾರಿಗೆ ತರಲು ರಾಜ್ಯ ಸರ್ಕಾರ ಮುಂದಾಗಿದೆ. ಮೊದಲ ಹಂತದಲ್ಲಿ ಎಸ್.ಎಸ್.ಎಲ್.ಸಿ ಹಾಗೂ ವಿದ್ಯಾಗಮ ತರಗತಿಗಳಿಗೆ ಆಗಮಿಸುತ್ತಿರುವ ವಿದ್ಯಾರ್ಥಿಗಳಿಗೆ ನೀಡಲಾಗುತ್ತಿದೆ. 6-10ನೇ ತರಗತಿ ಮಕ್ಕಳು ವಯೋಸಹಜ …

Read More »

ಬೆಳಗಾವಿ, ಚಿಕ್ಕೋಡಿಯಲ್ಲಿ 20ಕ್ಕೂ ಹೆಚ್ಚು ಶಿಕ್ಷಕರಿಗೆ ಕೊರೊನಾ ಸೋಂಕು ದೃಢ

ಬೆಳಗಾವಿ: ಶಾಲೆ-ಕಾಲೇಜು ಪುನರಾರಂಭದ ಬೆನ್ನಲ್ಲೇ ಬೆಳಗಾವಿ ಜಿಲ್ಲೆಯಲ್ಲಿ ಕೊರೊನಾ ಸೋಂಕು ಹೆಚ್ಚುತ್ತಿದ್ದು, ಬೆಳಗಾವಿ, ಚಿಕ್ಕೋಡಿಯಲ್ಲಿ 20ಕ್ಕೂ ಹೆಚ್ಚು ಶಿಕ್ಷಕರಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಬೆಳಗಾವಿ ಗ್ರಾಮೀಣ ಭಾಗದ 9, ಬೆಳಗಾವಿ ನಗರ ವಲಯದ 4 , ಕಿತ್ತೂರು 1, ರಾಮದುರ್ಗದಲ್ಲಿ 3 ಶಿಕ್ಷಕರಿಗೆ  ಸೇರಿದಂತೆ ಒಟ್ಟು 18 ಶಿಕ್ಷಕರಿಗೆ ಕೋವೀಡ್ ಸೊಂಕು  ದೃಢವಾಗಿದೆ. ಹುಕ್ಕೇರಿಯ 2 , ರಾಯಬಾಗದ 2 ಶಿಕ್ಷಕರಿಗೆ ಸೊಂಕು ತಗುಲಿದ್ದು ಒಟ್ಟಾರೆ ಬೆಳಗಾವಿ ಜಿಲ್ಲೆಯಲ್ಲಿ 20ಕ್ಕೂ ಹೆಚ್ಚು …

Read More »

ಕರ್ನಾಟಕದಲ್ಲಿ ಜ. 8ರವರೆಗೆ ಮಳೆ; ಶಿವಮೊಗ್ಗ, ಚಿಕ್ಕಮಗಳೂರು, ಹಾಸನ, ಕೊಡಗಿನಲ್ಲಿ ಹಳದಿ ಅಲರ್ಟ್​

ಬೆಂಗಳೂರು (ಜ. 5): ಮಳೆಗಾಲ ಮುಗಿದು ಚಳಿಗಾಲ ಆರಂಭವಾಗಿದೆ. ಇನ್ನೇನು 2 ತಿಂಗಳು ಕಳೆದರೆ ಬೇಸಿಗೆಯೂ ಶುರುವಾಗಲಿದೆ. ಆದರೂ ಕರ್ನಾಟಕದಲ್ಲಿ ಮಳೆ ಮಾತ್ರ ನಿಂತಿಲ್ಲ. ಬೆಂಗಳೂರು ಸೇರಿದಂತೆ ಕರಾವಳಿ, ಮಲೆನಾಡಿನಲ್ಲಿ 2 ದಿನಗಳ ಹಿಂದೆ ಭಾರೀ ಮಳೆಯಾಗಿ, ಅವಾಂತರಗಳನ್ನು ಸೃಷ್ಟಿಸಿತ್ತು. ಇದೀಗ ಮತ್ತೆ ರಾಜ್ಯಾದ್ಯಂತ 3 ದಿನಗಳ ಕಾಲ ಮಳೆ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಮಳೆಯ ಹಿನ್ನೆಲೆಯಲ್ಲಿ ಜ. 8ರವರೆಗೆ ಕರ್ನಾಟಕದ ನಾಲ್ಕು ಜಿಲ್ಲೆಗಳಲ್ಲಿ ಹಳದಿ …

Read More »

ಯತ್ನಾಳ ಒಂಟಿ ಸಲಗದಂತೆ; ಬಸನಗೌಡ ಪಾಟೀಲ ಪರ ಕೂಡಲ ಸಂಗಮ ಸ್ವಾಮೀಜಿ ಬ್ಯಾಟಿಂಗ್

ವಿಜಯಪುರ (ಜ. 05): ಬಸನಗೌಡ ಪಾಟೀಲ ಯತ್ನಾಳ ಎಂದೂ ಸ್ವಾರ್ಥದ ಬಗ್ಗೆ ಮಾತನಾಡಿದವರಲ್ಲ.  ಉತ್ತರ ಕರ್ನಾಟಕದ ಅಭಿವೃದ್ಧಿ ಕುರಿತು ಎಷ್ಟೋ ಸಂದರ್ಭದಲ್ಲಿ ದೆಹಲಿ ನಾಯಕರ ಬಗ್ಗೆಯೂ ನೇರವಾಗಿ ಮಾತನಾಡಿರುವ ಉದಾಹರಣೆಗಳಿವೆ. ಹಿಂದೆ ವಾಜಪೇಯಿ ಪ್ರಧಾನಿಯಾಗಿದ್ದಾಗ ಕೃಷ್ಣಾ ಮೇಲ್ದಂಡೆ ಯೋಜನೆಯ ಬಗ್ಗೆ ಧ್ವನಿ ಎತ್ತಿದ್ದರು.  ಉತ್ತರ ಕರ್ನಾಟಕದ ಜನರೆಂದರೆ ಲಿಂಗಾಯಿತ ಶಾಸಕರಿಗೆ ರಾಜ್ಯ ಮಟ್ಟದ ಯಾರೂ ಗಾಡ್ ಫಾದರ್ ಗಳಿಲ್ಲ. ಹೀಗಾಗಿ ಒಬ್ಬೊಬ್ಬ ನಾಯಕರನ್ನು ಬೆನ್ನು ಹತ್ತಿಕೊಂಡು ಹೋಗಿದ್ದಾರೆ.  ಆದರೆ, ಯತ್ನಾಳ ಗೌಡರು …

Read More »

ಹುಲಕುಂದ ಪಂಚಾಯ್ತಿ 13 ಸದಸ್ಯರು, 30ಕ್ಕೂ ಹೆಚ್ಚು ಬಿಜೆಪಿ ಮುಖಂಡರು ಕಾಂಗ್ರೆಸ್ ಸೇರ್ಪಡೆ

  ರಾಮದುರ್ಗ ತಾಲೂಕಿನ ಹುಲಕುಂದ ಗ್ರಾಮ ಪಂಚಾಯತಿಯ 14 ಸದಸ್ಯರ ಪೈಕಿ 13 ಸದಸ್ಯರು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ನೇತೃತ್ವದಲ್ಲಿ ಅಧಿಕೃತವಾಗಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು. ಹೌದು ಮಂಗಳವಾರ ಬೆಳಗಾವಿಯ ಕಾಂಗ್ರೆಸ್ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ರಾಮದುರ್ಗ ತಾಲೂಕಿನ ಹುಲಕುಂದ ಗ್ರಾಮ ಪಂಚಾಯತಿಯ 13 ಸದಸ್ಯರು ಹಾಗೂ 30ಕ್ಕೂ ಹೆಚ್ಚು ಬಿಜೆಪಿ ಮುಖಂಡರು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಅವರ ಸಮ್ಮುಖದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು. ಈ ವೇಳೆ …

Read More »

ಮಾಜಿ ಶಾಸಕ ಬಸವಂತರೆಡ್ಡಿ ನಿಧನ: ಸಂತಾಪ ವ್ಯಕ್ತಪಡಿಸಿದ ಸಚಿವ ರಮೇಶ್ ಜಾರಕಿಹೊಳಿ

  ಭಾರತೀಯ ಜನತಾ ಪಾರ್ಟಿಯ ಹಿರಿಯ ನಾಯಕರೂ, ಮಾಜಿ ಶಾಸಕರೂ ಆದ ಬಸವಂತ ರೆಡ್ಡಿ ಪಾಟೀಲ್ ಮೋತಕದಲ್ಲಿ ಅವರ ನಿಧನಕ್ಕೆ ಜಲಸಂಪನ್ಮೂಲ ಸಚಿವರಾದ ಶ್ರೀ ರಮೇಶ್ ಜಾರಕಿಹೊಳಿ ಅವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. 1989 ಮತ್ತು 1994 ರಲ್ಲಿ ಕಲಬುರಗಿ ಜಿಲ್ಲೆಯ ಸೇಡಂ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾಗಿ ಜನಾನುರಾಗಿ ಕೆಲಸಗಳನ್ನು ಮಾಡಿದ್ದ ಬಸವಂತರೆಡ್ಡಿ ಅವರು ಪ್ರಗತಿಪರ ಶಾಸಕರಾಗಿ ನಮಗೆಲ್ಲಾ ಮಾದರಿಯಾಗಿದ್ದರು ಎಂದು ಸ್ಮರಿಸುವ ಸಚಿವ ಜಾರಿಕಿಹೊಳಿ, ಯಾದಗೀರ್ ಮತ್ತು ಕಲಬುರಗಿ …

Read More »