ಹಾವೇರಿ: ಜಿಲ್ಲೆ ಬ್ಯಾಡಗಿ ತಾಲೂಕಿನ ಬುಡಪನಹಳ್ಳಿ ಗ್ರಾಮದಲ್ಲಿ ತಮ್ಮನೇ ಅಣ್ಣನನ್ನು ಕೊಡಲಿಯಿಂದ ಕೊಚ್ಚಿ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ನಡೆದಿದೆ. 22 ವರ್ಷ ನಾಗರಾಜ ಗೊರವರ ಹತ್ಯೆಯಾದ ಅಣ್ಣ. ದಿಳ್ಳೆಪ್ಪ ಗೊರವರ (20) ಹತ್ಯೆ ಮಾಡಿದ ಸೋದರ. ಕಾರಣ ಏನು?: ಅಣ್ಣ ನಾಗರಾಜ ನಿತ್ಯ ಕುಡಿದು ಬಂದು ತಂದೆ ತಾಯಿ ಜೊತೆ ಜಗಳವಾಡ್ತಿದ್ದ. ತಂದೆ ತಾಯಿಗೆ ಅಣ್ಣ ನೀಡ್ತಿದ್ದ ಕಿರಿಕಿರಿಯಿಂದ ಬೇಸತ್ತು ತಮ್ಮ ಹತ್ಯೆ ಮಾಡಿದ್ದಾನೆ ಎನ್ನಲಾಗಿದೆ. ಅಣ್ಣನ ಹತ್ಯೆ ಮಾಡಿದ …
Read More »Monthly Archives: ಅಕ್ಟೋಬರ್ 2020
ನಗರದಲ್ಲಿ ವಿದೇಶಿ ಘಾಟು, 8 ಬಾಕ್ಸ್‌ಗಳಲ್ಲಿದ್ದ 1,59,800 ವಿದೇಶಿ ಸಿಗರೇಟು ವಶ
ಬೆಂಗಳೂರು: ನಗರದಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ಲಕ್ಷಾಂತರ ಮೌಲ್ಯದ ವಿದೇಶಿ ಸಿಗರೇಟುಗಳನ್ನು ಕಸ್ಟಮ್ಸ್ ಅಧಿಕಾರಿಗಳು ವಶಕ್ಕೆ ಪಡೆದಿರುವ ಘಟನೆ ನಡೆದಿದೆ. ಖಚಿತ ಮಾಹಿತಿ ಆಧರಿಸಿ ಪರಿಶೀಲನೆ ನಡೆಸಿದ ಬೆಂಗಳೂರು ಕಸ್ಟಮ್ಸ್ ಅಧಿಕಾರಿಗಳ ತಂಡ ಶಾರ್ಜಾನಿಂದ ವಿಮಾನದಲ್ಲಿ ಬಂದ 8 ಬಾಕ್ಸ್ಗಳು ಪತ್ತೆಯಾಗಿವೆ. ಆರಂಭಿಕ ಅಂತದ ಪರಿಶೀಲನೆ ವೇಳೆ ಸಿಕ್ಕ ಬಾಕ್ಸ್ಗಳನ್ನು X-ray scan ಗೆ ಒಳಪಡಿಸಿದಾಗ ಅದರಲ್ಲಿ ಲಕ್ಷಾಂತರ ಮೌಲ್ಯದ ಸಿಗರೇಟ್ ಇರುವುದು ಗೊತ್ತಾಗಿದೆ.ಬಾಕ್ಸ್ನಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ಸಿಗರೇಟ್ ಬಂಡಲ್ಗಳು ಪತ್ತೆಯಾಗಿವೆ. …
Read More »ಅಬ್ಬಾ! ಇದೆಷ್ಟು ದೊಡ್ಡ ಕುಂಬಳಕಾಯಿ ಗೊತ್ತಾ?
ಕ್ಯಾಲಿಫೋರ್ನಿಯಾ: ವಿಶ್ವದಾದ್ಯಂತ ಆವರಿಸಿರುವ ಮಹಾಮಾರಿ ಕೊರೊನಾದಿಂದ ಜನ ಸಾಕಷ್ಟು ಕಷ್ಟು ನೋವುಗಳನ್ನು ಅನುಭವಿಸುತ್ತಿದ್ದಾರೆ. ಈ ನಡುವೆ ಲಾಕ್ಡೌನ್ ಸಮಯವನ್ನು ಬಳಸಿಕೊಂಡು ಅದರ ಪ್ರಯೋಜನ ಪಡೆದವರೂ ಸಹ ಸಾಕಷ್ಟು ಮಂದಿ. ಇದೇ ರೀತಿ ಇಲೊಬ್ಬ ವ್ಯಕ್ತಿ ತನ್ನ ಸಮಯ ಪರಿಶ್ರಮದಿಂದ 2,350 ಪೌಂಡ್ ತೂಕದ ಕುಂಬಳಕಾಯಿಯನ್ನು ಬೆಳೆಸಿದ್ದಾನೆ. ಸದ್ಯ ಇದು ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿ ನಡೆದ ಹಾಫ್ ಮೂನ್ ಬೇ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ತಂದುಕೊಟ್ಟಿದೆ. ತೋಟಗಾರಿಕಾ ಶಿಕ್ಷಕನಾಗಿರುವ 40 ರ ಹರೆಯದ …
Read More »ಪ್ರೀತಿಸಿದವಳನ್ನೇ ಕೊಲ್ಲಲು ಯತ್ನಿಸಿ.. ಜೈಲು ಸೇರಿದ ಪ್ರಿಯಕರ
ದೇವನಹಳ್ಳಿ: ಪ್ರೀತಿ ಮಧುರ, ತ್ಯಾಗ ಅಮರ ಅನ್ನೋ ಮಾತಿದೆ. ಆದರೆ ಇತ್ತೀಚಿನ ಯುವಕರು ಪ್ರೀತಿಗಾಗಿ ಪ್ರಾಣ ತೆಗೆಯಲೂ ಸಹ ಹಿಂದೆ ಮುಂದೆ ನೋಡಲ್ಲ. ತಮ್ಮ ಪ್ರೀತಿ ಸಿಗದಿದ್ದರೇ ಸಾಯಿಸಲೂ ಸಿದ್ದ, ಸಾಯಲೂ ಸಿದ್ದ ಅನ್ನುವಂತಿದ್ದಾರೆ. ನಿನ್ನೆ ಹೈದರಾಬಾದ್ನಲ್ಲೂ ಪಾಗಲ್ ಪ್ರೇಮಿಯೊಬ್ಬ ಯುವತಿ ಪ್ರೀತಿ ನಿರಾಕರಿಸಿದಕ್ಕೆ ಆಕೆಯನ್ನು ಸುಟ್ಟು ಚಿಕಿತ್ಸೆ ಫಲಿಸದೇ ಆತನೂ ಸತ್ತ ಘಟನೆ ನಡೆದಿತ್ತು. ಅದೇ ಮಾದರಿಯಲ್ಲಿ ಇಲ್ಲೊಬ್ಬ ಪ್ರೇಮಿ ತಾನು ಪ್ರೀತಿಸಿದ ನವವಿವಾಹಿತೆಯನ್ನು ಪಾಳು ಬಿದ್ದ ಬಾವಿಗೆ …
Read More »ನದಿ ತೀರದಲ್ಲಿ ಸಿಕ್ಕಿದ್ದ 28 -30 ವರ್ಷದ ಯುವಕನ ಶವ ದೊಡ್ಡ ಕಥೆಯೊಂದನ್ನು ಬಿಚ್ಚಿಟ್ಟಿದೆ.
ಅಥಣಿ – ಅಕ್ಟೋಬರ್ 5ರಂದು ಅಥಣಿ ತಾಲೂಕಿನ ಕೃಷ್ಣಾ ನದಿ ತೀರದಲ್ಲಿ ಸಿಕ್ಕಿದ್ದ 28 -30 ವರ್ಷದ ಯುವಕನ ಶವ ದೊಡ್ಡ ಕಥೆಯೊಂದನ್ನು ಬಿಚ್ಚಿಟ್ಟಿದೆ. ಶವವೊಂದೇ ಸಿಕ್ಕಿದ್ದರೆ ಅಷ್ಟೊಂದು ಕುತೂಹಲ ಹುಟ್ಟಿಸುತ್ತಿರಲಿಲ್ಲವೇನೋ… ಶವದ ಪ್ಯಾಂಟ್ ಕಿಸೆಯಲ್ಲಿ ಇತ್ತು 77 ಲಕ್ಷ ರೂ. ಮೌಲ್ಯದ ಬಂಗಾರದ ಗಟ್ಟಿಗಳು. ಶವ ಪತ್ತೆಯಾದ ತಕ್ಷಣ ಅದರ ಜೊತೆಯಲ್ಲಿದ್ದ ಬ್ಯಾಂಕ್ ಅಕೌಂಟ್ ಮಾಹಿತಿ ಅಧರಿಸಿ, ಆದಾರ ಕಾರ್ಡ್ ಪತ್ತೆ ಮಾಡಿದ ಅಥಣಿ ಪೊಲೀಸರು ನೇರವಾಗಿ ಮಹಾರಾಷ್ಟ್ರದ …
Read More »50 ವರ್ಷಗಳಿಂದ ತಿರುಗಿ ನೋಡದ ಸರ್ಕಾರ, ಸ್ವತಃ ಖರ್ಚಿನಲ್ಲಿಯೇ ರಸ್ತೆ ನಿರ್ಮಿಸಿಕೊಂಡ ಗ್ರಾಮಸ್ಥರು..!
ತಿಪಟೂರು , – ಕಳೆದ 50 ವರ್ಷಗಳಿಂದಲೂ ಸರ್ಕಾರದಿಂದ ಅಭಿವೃದ್ಧಿಪಡಿಸದ ರಸ್ತೆಯನ್ನು ಗ್ರಾಮಸ್ಥರೆಲ್ಲರೂ ಸೇರಿ ಅಭಿವೃದ್ಧಿಪಡಿಸಿ ಮಾದರಿ ರಸ್ತೆಯನ್ನು ನಿರ್ಮಾಣ ಮಾಡಿ ಜನಪ್ರತಿನಿಗಳ ನಿರ್ಲಕ್ಷ್ಯವನ್ನು ಎತ್ತಿ ಹಿಡಿದಿದ್ದಾರೆ. ತಾಲ್ಲೂಕಿನ ಮತ್ತಿಹಳ್ಳಿ ಗ್ರಾಮ ಪಂಚಾಯತಿಯ ವ್ಯಾಪ್ತಿಯ ಮತ್ತಿಹಳ್ಳಿ ಗ್ರಾಮದ ಕೆರೆಯ ಹಿಂಭಾಗದಿಂದ ಚಿಕ್ಕಬಿದರೆ ಗ್ರಾಮಕ್ಕೆ ಸಂಪರ್ಕಿಸುವ ಸುಮಾರು 1.5 ಕಿ.ಮೀ.ರಸ್ತೆಯನ್ನು ಒಂದು ಲಕ್ಷ ರೂಗಳ ಸ್ವತಃ ಖರ್ಚಿನಲ್ಲಿಯೇ ಗ್ರಾಮಸ್ಥರು ಅಭಿವೃದ್ಧಿಪಡಿಸಿದ್ದಾರೆ. ರಸ್ತೆಯೂ ಹಿಂದೆ ಕಾಲುದಾರಿಯಲ್ಲಿ ಸಂಚರಿಸಲು ಸಾಧ್ಯವಾಗದಂತಹ ಸ್ಥಿತಿಯಲ್ಲಿತ್ತು. ಈ ರಸ್ತೆಯೂ …
Read More »ಇಂದು ಇಬ್ಬರೂ ತಮ್ಮ ತಮ್ಮ ಕ್ಷೇತ್ರಗಳಲ್ಲಿ ನಾಮಪತ್ರ ಸಲ್ಲಿಕೆ ಮಾಡಲಿದ್ದಾರೆ.
ಬೆಂಗಳೂರು : ತೀವ್ರ ಕುತೂಹಲ ಕೆರಳಿಸಿದ್ದ ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ನಿರೀಕ್ಷೆಯಂತೆ ಮಾಜಿ ಶಾಸಕ ಮುನಿರತ್ನ ನಾಯ್ಡುಗೆ ಬಿಜೆಪಿ ಟಿಕೆಟ್ ಘೋಷಣೆ ಮಾಡಿದೆ. ಇನ್ನು ಶಿರಾದಿಂದ ಮಾಜಿ ಸಂಸದ ಮೂಡಲಗಿರಿಯಪ್ಪ ಪುತ್ರ ಡಾ.ರಾಜೇಶ್ ಗೌಡಗೂ ಟಿಕೆಟ್ ನೀಡಲಾಗಿದೆ. ಇಬ್ಬರೂ ತಮ್ಮ ತಮ್ಮ ಕ್ಷೇತ್ರಗಳಲ್ಲಿ ನಾಮಪತ್ರ ಸಲ್ಲಿಕೆ ಮಾಡಲಿದ್ದಾರೆ. ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ಪಕ್ಷದ ಕಚೇರಿಯಲ್ಲಿ ರಾಜ್ಯಧ್ಯಕ್ಷ ನಳೀನ್ ಕುಮಾರ್ ಕಟೀಲ್ ಬಿ ಫಾರಂ ನೀಡಲಿದ್ದಾರೆ. ಇಂದು ಸುಪ್ರೀಂಕೋಟ್9 ನಲ್ಲಿ …
Read More »ವರ್ಷಗಳ ಬಳಿಕ ತುಂಬಿದ ಕೆರೆ- ರೈತರ ಮೊಗದಲ್ಲಿ ಮಂದಹಾಸ
ಚಿಕ್ಕಮಗಳೂರು: ಕಳೆದ 15 ವರ್ಷಗಳಿಂದ ನೀರೇ ಇಲ್ಲದ ಮಕ್ಕಳ ಆಟದ ಮೈದಾನವಾಗಿದ್ದ ಬೃಹತ್ ಕೆರೆಗೆ ನೀರು ಹರಿದು ಬರುತ್ತಿದ್ದು ಚಿಕ್ಕಮಗಳೂರು ತಾಲೂಕಿನ ಬೆಳವಾಡಿ, ಕಳಸಾಪುರ ಸೇರಿದಂತೆ ಸುತ್ತಮುತ್ತಲಿನ ಹತ್ತಾರು ಹಳ್ಳಿಯ ರೈತರ ಮೊಗದಲ್ಲಿ ಮಂದಹಾಸ ಮೂಡಿದೆ. ತಾಲೂಕಿಣ ಬೆಳವಾಡಿಯ ಬೃಹತ್ ಕೆರೆಗೆ ನೀರು ಬಂದಿದ್ದು, ರೈತರಿಗೆ ಮರುಳುಗಾಡಲ್ಲಿ ಓಯಾಸಿಸ್ ಸಿಕ್ಕಂತಾಗಿದ್ದು, ಸ್ಥಳೀಯರ ಪಾಲಿಗೆ ಈ ಕೆರೆ ಪ್ರವಾಸಿ ತಾಣವಾಗಿದೆ. ತಾಲೂಕಿನ ಬೆಳವಾಡಿ, ಕಳಸಾಪುರ ಸೇರಿದಂತೆ ಈ ಭಾಗದ ಹತ್ತಾರು ಹಳ್ಳಿಗಳು …
Read More »14 ತಿಂಗಳ ಬಳಿಕ ಮೆಹಬೂಬಾ ಮುಫ್ತಿ ಬಿಡುಗಡೆ,ಕೇಂದ್ರದ ನಿರ್ಧಾರ ಕ್ರೂರ ಎಂದು ಕಿಡಿ
ಶ್ರೀನಗರ: ಜಮ್ಮು ಕಾಶ್ಮೀರದ ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿ(ಪಿಡಿಪಿ) ಮುಖ್ಯಸ್ಥೆ, ಮಾಜಿ ಸಿಎಂ ಮೆಹಬೂಬಾ ಮುಫ್ತಿಯರನ್ನು ಗೃಹಬಂಧನದಿಂದ ಬಿಡುಗಡೆ ಮಾಡಲಾಗಿದೆ. ಆಗಸ್ಟ್ 5ರಂದು 370ನೇ ವಿಧಿ ರದ್ದುಪಡಿಸಿದ ಬಳಿಕ ಮುಫ್ತಿ ಅವರನ್ನು ಗೃಹ ಬಂಧನದಲ್ಲಿರಿಸಲಾಗಿತ್ತು.ಬಿಡುಗಡೆಯಾಗುತ್ತಿದ್ದಂತೆ ಟ್ವೀಟ್ ಮಾಡುವ ಮೂಲಕ ಕೇಂದ್ರ ಸರ್ಕಾರದ ನಿರ್ಧಾರದ ಕುರಿತು ಮೆಹಬೂಬಾ ಮುಫ್ತಿ ಕಿಡಿ ಕಾರಿದ್ದಾರೆ. ಪೂರ್ತಿ ಕಪ್ಪು ಬಣ್ಣದ ವಿಡಿಯೋವನ್ನು ಹಂಚಿಕೊಂಡಿರುವ ಅವರು, ಆಡಿಯೋ ಮೆಸೇಜ್ ಮೂಲಕ ಕಿಡಿಕಾರಿದ್ದಾರೆ. ಒಂದೂ ವರ್ಷಕ್ಕೂ ಹೆಚ್ಚು ಕಾಲ ಅಂದರೆ …
Read More »ಮಳೆರಾಯ ರುದ್ರನರ್ತನಕ್ಕೆ ಉತ್ತರ ಕರ್ನಾಟಕ ಅಕ್ಷರಶಃ ತತ್ತರಿಸಿ ಹೋಗಿದೆ.
ಬೆಂಗಳೂರು: ಕೊರೊನಾ ಮಧ್ಯೆ ವರುಣ ಅಬ್ಬರಿಸಿ ಬೊಬ್ಬಿರಿಯುತ್ತಿದ್ದಾನೆ. ಅಲ್ಲದೇ ಸಾಕಷ್ಟು ಅವಾಂತರ ಸೃಷ್ಟಿಸಿದ್ದಾನೆ. ಮಳೆರಾಯ ರುದ್ರನರ್ತನಕ್ಕೆ ಉತ್ತರ ಕರ್ನಾಟಕ ಅಕ್ಷರಶಃ ತತ್ತರಿಸಿ ಹೋಗಿದೆ. ರಾಜ್ಯದಲ್ಲಿ ಮಹಾ ಮಳೆ ಮುಂದುವರಿದಿದ್ದು, ಇದು ಇಲ್ಲಿಗೆ ನಿಲ್ಲೋ ಲಕ್ಷಣಗಳು ಕಾಣುತ್ತಿಲ್ಲ. ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತ ಉಂಟಾಗಿರುವ ಕಾರಣ ರಾಜ್ಯದ ಬಹುತೇಕ ಕಡೆ ಧಾರಾಕಾರ ಮಳೆಯಾಗುತ್ತಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ಅದರಲ್ಲೂ ಉತ್ತರ ಕರ್ನಾಟಕದಲ್ಲಿ ಪ್ರವಾಹ ಸ್ಥಿತಿ ಏರ್ಪಟ್ಟಿದ್ದು ಜನ ತತ್ತರಿಸಿ ಹೋಗಿದ್ದಾರೆ.ಕೊರೊನಾದಿಂದ ಈಗಾಗಲೇ ಜನ …
Read More »