Breaking News

Monthly Archives: ಅಕ್ಟೋಬರ್ 2020

ಪ್ರವಾಹವೇನೋ ಇಳಿಮುಖವಾಗಿದೆ. ಆದ್ರೆ ಅತೀವೃಷ್ಠಿಯಿಂದ ಮನೆ ಕಳೆದುಕೊಂಡ ಜನ ಮಾತ್ರ ಇನ್ನೂ ಬೀದಿಯಲ್ಲೇ ಇದ್ದಾರೆ.

ರಾಯಚೂರು: ಜಿಲ್ಲೆಯಲ್ಲಿ ಪ್ರವಾಹವೇನೋ ಇಳಿಮುಖವಾಗಿದೆ. ಆದ್ರೆ ಅತೀವೃಷ್ಠಿಯಿಂದ ಮನೆ ಕಳೆದುಕೊಂಡ ಜನ ಮಾತ್ರ ಇನ್ನೂ ಬೀದಿಯಲ್ಲೇ ಇದ್ದಾರೆ. ಒಂದು ತಿಂಗಳಿನಿಂದ ಅತಿಯಾಗಿ ಸುರಿದ ಮಳೆ ರಾಯಚೂರು ತಾಲೂಕಿನ ಇಡಪನೂರು ಗ್ರಾಮದ ಜನರ ಬದುಕನ್ನ ಕಸಿದುಕೊಂಡಿದೆ. ಆಶ್ರಯ ಸಿಕ್ಕರೂ ಅನ್ನ ಸಿಗದೆ ಸಂತ್ರಸ್ತರು ಪರದಾಡುತ್ತಿದ್ದಾರೆ. ಸರ್ಕಾರಿ ಶಾಲೆ, ಸಮುದಾಯ ಭವನದಲ್ಲಿ ಜಿಲ್ಲಾಡಳಿತ ಆಶ್ರಯ ನೀಡಿದೆ. ಆದ್ರೆ ಯಾವುದೇ ವ್ಯವಸ್ಥೆಗಳನ್ನ ಮಾಡಿಲ್ಲ. ಹೀಗಾಗಿ ಸುಮಾರು 56 ಕುಟುಂಬಗಳು ಊಟವಿಲ್ಲದೆ ಪರದಾಡುತ್ತಿವೆ. ಚಿಕ್ಕಮಕ್ಕಳು, ವೃದ್ದರು, …

Read More »

ಕೊರೊನಾದಿಂದ ಸತ್ತಮೇಲೂ ಮೃತದೇಹದಲ್ಲಿ ಕೊರೊನಾ ಜೀವಂತವಾಗಿರುತ್ತದೆ:ಡಾ. ದಿನೇಶ್ ರಾವ್

ಬೆಂಗಳೂರು: ಕೋವಿಡ್-19 ಕಾರಣದಿಂದ ಸತ್ತವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಕೊರೊನಾ ವೈರಸ್ ಯಾರಿಗೆ ಯಾವ ಸಮಯದಲ್ಲಿ ಹೇಗೆ ಹರಡುತ್ತದೆ ಎಂದು ನಿರ್ಧಿಷ್ಟವಾಗಿ ಹೇಳಲು ಸಾಧ್ಯವಿಲ್ಲ. ಹೀಗಿರುವಾಗ ಕೊರೊನಾದಿಂದ ಸತ್ತಮೇಲೂ ಮೃತದೇಹದಲ್ಲಿ ಕೊರೊನಾ ಜೀವಂತವಾಗಿರುತ್ತದೆ ಎಂದು ಸಂಶೋಧನೆಯ ಮೂಲಕ ತಿಳಿದುಬಂದಿದೆ. ಹೌದು. 16 ಗಂಟೆಗಳ ಕಾಲ ಕೊರೊನಾ ವೈರಸ್ ಸತ್ತ ವ್ಯಕ್ತಿಯ ದೇಹದಲ್ಲಿ ಸಕ್ರಿಯವಾಗಿರುತ್ತದೆ. ಶ್ವಾಸಕೋಶಕ್ಕೆ ಮಾತ್ರವಲ್ಲದೆ ದೇಹದ ಇತರ ಅಂಗಗಳ ಮೇಲೆ ಮಾರಕ ಪರಿಣಾಮವನ್ನು ಬೀರುತ್ತದೆ ಎಂಬ ಮಾಹಿತಿಯನ್ನು …

Read More »

ಕೆಐಎಡಿಬಿ ಕಾರ್ಯದರ್ಶಿಯ ಆಸ್ತಿ ನೋಡಿ ದಂಗಾದ ಎಸಿಬಿ

ಹುಬ್ಬಳ್ಳಿ: ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ(ಕೆಐಎಡಿಬಿ) ಕಾರ್ಯದರ್ಶಿ ಹರೀಶ್ ಹಳಪೇಟ ಆಸ್ತಿ ನೋಡಿ ಎಸಿಬಿ ಅಧಿಕಾರಿಗಳೇ ದಂಗಾಗಿ ಹೋಗಿದ್ದಾರೆ. ಹುಬ್ಬಳ್ಳಿ, ಧಾರವಾಡ ಹಾಗೂ ಬೆಂಗಳೂರಿನಲ್ಲಿ ಏಕಕಾಲಕ್ಕೆ ದಾಳಿ ನಡೆಸಿದ್ದ ಧಾರವಾಡದ ಎಸಿಬಿ ಅಧಿಕಾರಿಗಳು ಕೆಐಎಡಿಬಿ ಕಾರ್ಯದರ್ಶಿಯ ಅಪಾರ ಪ್ರಮಾಣದ ಆಸ್ತಿಯನ್ನ ಪತ್ತೆ ಮಾಡುವಲ್ಲಿ ಯಶ್ವಸಿಯಾಗಿದ್ದಾರೆ. ಬೆಂಗಳೂರಿನಲ್ಲಿ ಕೆಐಎಡಿಬಿ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿದ್ದ ಹರೀಶ್ ಹಳಪೇಟ ಮನೆಯ ಮೇಲೆ ದಾಳಿ ನಡೆಸಿದ್ದ ಎಸಿಬಿ ಅಧಿಕಾರಿಗಳು ಪತ್ತೆಯಾದ ಸ್ಥಿರಾಸ್ತಿ ಹಾಗೂ ಚರಾಸ್ತಿಗಳ ಪಟ್ಟಿಯನ್ನ …

Read More »

ಜೇಮ್ಸ್ ಶೂಟಿಂಗ್ ವೇಳೆ ಪೊಲೀಸರ ಜೊತೆ ಕೊರೊನಾ ಜಾಗೃತಿ ಮೂಡಿಸಿದ ಅಪ್ಪು

ಕೊಪ್ಪಳ: ಜೇಮ್ಸ್ ಚಿತ್ರದ ಶೂಟಿಂಗ್ ಭರದಿಂದ ಸಾಗಿದ್ದು, ನಟ ಪುನೀತ್ ರಾಜ್‍ಕುಮಾರ್ ಸಹ ಚಿತ್ರೀಕರಣದಲ್ಲಿ ತೊಡಗಿದ್ದಾರೆ. ಇದೇ ಗ್ಯಾಪ್‍ನಲ್ಲಿ ಕೊರೊನಾ ಜಾಗೃತಿಯನ್ನು ಸಹ ಮೂಡಿಸಿದ್ದಾರೆ. ಜಿಲ್ಲೆಯ ಗಂಗಾವತಿ ತಾಲೂಕಿನ ಮಲ್ಲಾಪುರ ಗ್ರಾಮದ ಬಳಿ ಜೇಮ್ಸ್ ಶೂಟಿಂಗ್ ಭರದಿಂದ ಸಾಗಿದ್ದು, ಬೃಹತ್ ಸೆಟ್‍ನಲ್ಲಿ ಚಿತ್ರೀಕರಣ ನಡೆಯುತ್ತಿದೆ. ಹೀಗಾಗಿ ಇನ್ನೂ ಕೆಲ ದಿನಗಳ ಕಾಲ ಚಿತ್ರ ತಂಡ ಗಂಗಾವತಿಯಲ್ಲಿಯೇ ಬೀಡು ಬಿಡಲಿದೆ. ಇದೇ ಗ್ಯಾಪ್‍ನಲ್ಲಿ ಬಿಡುವು ಮಾಡಿಕೊಂಡ ಅಪ್ಪು ಗಂಗಾವತಿ ಗ್ರಾಮೀಣ ಪೊಲೀಸ್ …

Read More »

ಅಂಬೇಡ್ಕರ್ ಭವನ ನಿರ್ಮಾಣ ಕಾಮಗಾರಿಗೆ ಇಂದು ಚಾಲನೆ ನೀಡಿದರು.:ಲಕ್ಷ್ಮೀ ಹೆಬ್ಬಾಳ್ಕರ್

ಬೆಳಗಾವಿ: ಗ್ರಾಮೀಣ ಕ್ಷೇತ್ರದ ಹಂಗರಗಾ ಗ್ರಾಮದಲ್ಲಿ ಡಾ.ಬಾಬಾಸಾಹೇಬ್ ಅಂಬೇಡ್ಕರ್ ಭವನ ನಿರ್ಮಾಣ ಕಾಮಗಾರಿಗೆ ಇಂದು ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಚಾಲನೆ ನೀಡಿದರು.:ಲಕ್ಷ್ಮೀ ಹೆಬ್ಬಾಳ್ಕರ್ ಸಮಾಜ ಕಲ್ಯಾಣ ಇಲಾಖೆ ಹಾಗೂ ಪಂಚಾಯತ್ ರಾಜ್ ಇಂಜಿನಿಯರಿಂಗ್ ಇಲಾಖೆ ಒಟ್ಟು 12 ಲಕ್ಷ ರೂ. ವೆಚ್ಚದಲ್ಲಿ ” ಅಂಬೇಡ್ಕರ್ ಭವನ ” ಕಟ್ಟಡ ನಿರ್ಮಾಣದ ಕಾಮಗಾರಿಗೆ ಗ್ರಾಮಸ್ಥರ ಹಾಗೂ ಸ್ಥಳೀಯ ಜನ ಪ್ರತಿನಿಧಿಗಳ ಸಮ್ಮುಖದಲ್ಲಿ ಭೂಮಿ ಪೂಜೆಯನ್ನು ನೆರವೇರಿಸಿದರು. ಈ ಸಂದರ್ಭದಲ್ಲಿ ಗ್ರಾಮದ …

Read More »

15 ಕೋಟಿ ರೂ. ಮೊಬೈಲ್ ಗಳನ್ನು ಹೊತ್ತು ಸಾಗುತ್ತಿದ್ದ ಟ್ರಕ್‍ಅನ್ನು 10 ಮಂದಿ ಇದ್ದ ದರೋಡೆಕೋರರ ಗುಂಪು ಹೈಜಾಕ್

ಚೆನ್ನೈ: 15 ಕೋಟಿ ರೂ. ಮೊಬೈಲ್ ಗಳನ್ನು ಹೊತ್ತು ಸಾಗುತ್ತಿದ್ದ ಟ್ರಕ್‍ಅನ್ನು 10 ಮಂದಿ ಇದ್ದ ದರೋಡೆಕೋರರ ಗುಂಪು ಹೈಜಾಕ್ ಮಾಡಿರುವ ಘಟನೆ ತಮಿಳುನಾಡಿನ ಕೃಷ್ಣಗಿರಿ ಸಮೀಪ ನಡೆದಿದೆ. ಸುಮಾರು 14 ಸಾವಿರ ಮೊಬೈಲ್ ಗಳು ಕಂಟೈನರ್ ನಲ್ಲಿತ್ತು ಎಂಬ ಮಾಹಿತಿ ಲಭಿಸಿದ್ದು, ಇವುಗಳ ಒಟ್ಟು ಮೌಲ್ಯ 15 ಕೋಟಿ ರೂ. ಆಗಲಿದೆ ಎನ್ನಲಾಗಿದೆ. ಘಟನೆ ಮಾಹಿತಿ ನೀಡಿರುವ ಹೊಸೂರು ಡಿಎಸ್‍ಪಿ ಮುರಳಿ ಅವರು, ಚೆನ್ನೈನ ಪೂನಮಲ್ಲಿ ಮೊಬೈಲ್ ಘಟಕದಿಂದ …

Read More »

ಇಬ್ಬರು ಭ್ರಷ್ಟ ಅಧಿಕಾರಿಗಳು ಎಸಿಬಿ ಬಲೆಗೆ

ಬೆಂಗಳೂರು, ಅ.22- ಅಕ್ರಮ ಆಸ್ತಿ ಗಳಿಕೆ ಆರೋಪದ ಹಿನ್ನೆಲೆಯಲ್ಲಿ ಇಬ್ಬರು ಭ್ರಷ್ಟ ಅಧಿಕಾರಿಗಳ ಮೇಲೆ ಎಸಿಬಿ ಪೊಲೀಸರು ದಾಳಿ ನಡೆಸಿ ಭಾರೀ ಪ್ರಮಾಣದ ಅಕ್ರಮ ಪತ್ತೆಹಚ್ಚಿದ್ದಾರೆ. ಬಾಗಲಕೋಟೆ ಜಿ.ಪಂ. ಕುಡಿಯುವ ನೀರು ಪೂರೈಕೆ ಹಾಗೂ ನೈರ್ಮಲ್ಯ ವಿಭಾಗದ ಸಹಾಯಕ ಎಂಜಿನಿಯರ್ ಅಶೋಕ್ ತೋಪಲಕಟ್ಟಿ ಅವರ ಮನೆ, ಕಚೇರಿ, ಗ್ಯಾಸ್ ಏಜೆನ್ಸಿ ಮೇಲೆ ಇಂದು ಮುಂಜಾನೆ ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳು ದಾಳಿ ನಡೆಸಿ ಭಾರೀ ಪ್ರಮಾಣದ ಅಕ್ರಮ ಆಸ್ತಿ ಪತ್ತೆ …

Read More »

ಈ ಉಪ ಚುನಾವಣೆಯನ್ನು ಸವಾಲಾಗಿ ಸ್ವೀಕರಿಸುತ್ತೆನೆ ಇಲ್ಲಿ ಹಣ ಬಲವೊ ಜನ ಬಲವೊ ನೋಡಿಯೇ ಬಿಡೋಣ:H,D.D.

ತುಮಕೂರು/ಶಿರಾ, ಅ.22- ಶಿರಾ ಉಪ ಚುನಾವಣೆ ಮುಗಿಯುವವರೆಗೂ ನಾನು ಇಲ್ಲೇ ಇದ್ದು ಹೋರಾಟ ಮಾಡುತ್ತೇನೆ. ಕೆ.ಆರ್.ಪೇಟೆ ಮಾದರಿಯಲ್ಲಿ ಏನಾದರೂ ಚುನಾವಣೆ ನಡೆಸಲು ಹೋದರೆ ನಾನು ರಸ್ತೆಗೆ ಇಳಿದು ಉಗ್ರ ಪ್ರತಿಭಟನೆ ನಡೆಸಲು ಹಿಂದೆ ಮುಂದೆ ನೋಡುವುದಿಲ್ಲ ಎಂದು ಜೆಡಿಎಸ್ ವರಿಷ್ಠ ಮಾಜಿ ಪ್ರಧಾನಿಗಳಾದ ಎಚ್.ಡಿ.ದೇವೇಗೌಡರು ಗುಡುಗಿದ್ದಾರೆ.ಏನಾದರೂ ನನ್ನ ಕಾರ್ಯಕರ್ತರ ಮೇಲೆ ದೌರ್ಜನ್ಯ ನಡೆದರೆ ಸಿಡಿದೇಳುತ್ತೇನೆ. ಈ ಉಪ ಚುನಾವಣೆಯನ್ನು ಸವಾಲಾಗಿ ಸ್ವೀಕರಿಸುತ್ತೆನೆ ಇಲ್ಲಿ ಹಣ ಬಲವೊ ಜನ ಬಲವೊ ನೋಡಿಯೇ …

Read More »

ಬಿಜೆಪಿ ಅಭ್ಯರ್ಥಿ ಮುನಿರತ್ನ ಪರ ಮತ ಹಾಕುವಂತೆ ಮತದಾರರಿಗೆ ಎಲ್​ಇಡಿ ಟಿ.ವಿಗಳನ್ನ ಹಂಚಲಾಗ್ತಿದೆ ಎಂಬ ಆರೋಪ ಕೇಳಿಬಂದಿದೆ.!

ಬೆಂಗಳೂರು:  ರಾಜರಾಜೇಶ್ವರಿ ನಗರದ ಉಪ ಚುನಾವಣಾ ಕಣ ರಂಗೇರುತ್ತಿದ್ದು, ಬಿಜೆಪಿ ಅಭ್ಯರ್ಥಿ ಮುನಿರತ್ನ ಪರ ಮತ ಹಾಕುವಂತೆ ಮತದಾರರಿಗೆ ಎಲ್​ಇಡಿ ಟಿ.ವಿಗಳನ್ನ ಹಂಚಲಾಗ್ತಿದೆ ಎಂಬ ಆರೋಪ ಕೇಳಿಬಂದಿದೆ. ಮುನಿರತ್ನ ಅವರ ಬೆಂಬಲಿಗ, ಮಾಜಿ ಬಿಬಿಎಂಪಿ ಸದಸ್ಯ ಜಿ.ಕೆ ವೆಂಕಟೇಶ್ ವಾರ್ಡ್ ನಂಬರ್ 37ರ ವಿ.ಆರ್. ಗಾರ್ಡನ್​​ನ ಖಾಸಿಂ ಸಾಬ್ ಎನ್ನುವವರಿಗೆ, ಎಲ್.ಜಿ. ಕಂಪನಿಯ ಎಲ್‌ಇಡಿ ಟಿವಿ ಕೊಟ್ಟಿದ್ದಾರೆ. ಟಿ.ವಿ. ಮೇಲೆ ಮುನಿರತ್ನ ಫೋಟೋ ಅಂಟಿಸಲಾಗಿದೆ. ರಾಜರಾಜೇಶ್ವರಿ ‌ನಗರ ಕ್ಷೇತ್ರದ ಮತದಾರರಿಗೆ …

Read More »

ಹತ್ರಾಸ್ ಗ್ಯಾಂಗ್ ರೇಪ್ ಪ್ರಕರಣ ಮಾಸುವ  ಮುನ್ನವೇ    ಇದೀಗ ಅಂತಹುದೇ  ಮತ್ತೊಂದು ಘಟನೆ ಉತ್ತರ ಪ್ರದೇಶದಲ್ಲಿ  15 ವರ್ಷದ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ

ಉತ್ತರ ಪ್ರದೇಶ:  ದೇಶವನ್ನೇ ಬೆಚ್ಚಿ ಬೀಳಿಸಿದ್ದ  ಉತ್ತರಪ್ರದೇಶದ ಹತ್ರಾಸ್ ನಲ್ಲಿ ಗ್ಯಾಂಗ್ ರೇಪ್ ಪ್ರಕರಣ ಮಾಸುವ  ಮುನ್ನವೇ    ಇದೀಗ ಅಂತಹುದೇ  ಮತ್ತೊಂದು ಘಟನೆ ಉತ್ತರ ಪ್ರದೇಶದಲ್ಲಿ  ಸಂಭವಿಸಿದೆ. 15 ವರ್ಷದ ಬಾಲಕಿಯ ಮೇಲೆ ಇಬ್ಬರು ಕಾಮುಕರು ಸಾಮೂಹಿಕ ಅತ್ಯಾಚಾರ ಮಾಡಿದ್ದಾರೆ. ಉತ್ತರಪ್ರದೇಶದ ರಾಂಪುರ ಜಿಲ್ಲೆಯ ಕೆಮ್ರಿ ಪೊಲೀಸ್ ಠಾಣಾ ವ್ಯಾಪ್ತಿಯ ಗ್ರಾಮವೊಂದರಲ್ಲಿ ಈ ಭೀಕರ ಘಟನೆ ನಡೆದಿದ್ದು, ಬಾಲಕಿಯ ಮನೆಯಲ್ಲಿಯೇ ಮನೆ ನಿರ್ಮಾಣದ ಕೆಲಸ ಮಾಡುತ್ತಿದ್ದ ಇಬ್ಬರು ಕಟ್ಟಡ …

Read More »