Breaking News

ಬೆಳಗಾವಿಯಲ್ಲಿ ಕ್ರಾಂತಿಸೂರ್ಯ ಮಹಾತ್ಮ ಫುಲೆ ಅವರ 200ನೇ ಜಯಂತಿ ಸಂಭ್ರಮ: ಸಮಾನತೆಯ ಸಂದೇಶ ಸಾರಿದ ಗಣ್ಯರು

Spread the love

ಬೆಳಗಾವಿಯ ಡಾ. ಬಾಬಾಸಾಹೇಬ್ ಅಂಬೇಡ್ಕರ್ ಉದ್ಯಾನವನದಲ್ಲಿ ಇಂದು ಮಹಾತ್ಮ ಜ್ಯೋತಿರಾವ್ ಫುಲೆ ಅವರ 200ನೇ ಜಯಂತಿಯನ್ನು ಅತ್ಯಂತ ಸಡಗರದಿಂದ ಆಚರಿಸಲಾಯಿತು. ಸಾಮಾಜಿಕ ಸಮಾನತೆ ಮತ್ತು ಸ್ತ್ರೀ ಶಿಕ್ಷಣದ ಹರಿಕಾರನಿಗೆ ನಗರದ ಗಣ್ಯರು ಪುಷ್ಪ ನಮನ ಸಲ್ಲಿಸಿ, ಅವರ ವಿಚಾರಧಾರೆಗಳನ್ನು ಸ್ಮರಿಸಿದರು.
ಕಾರ್ಯಕ್ರಮದಲ್ಲಿ ಮಹಾನಗರ ಪಾಲಿಕೆಯ ಉಪಾಯುಕ್ತರಾದ ಉದಯಕುಮಾರ್ ತಳವಾರ್ ಅವರು ಮಹಾತ್ಮ ಫುಲೆ ಅವರ ಭಾವಚಿತ್ರಕ್ಕೆ ಹಾರಾರ್ಪಣೆ ಮಾಡಿ ಗೌರವ ಸಲ್ಲಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಅಂದು ಸಾವಿತ್ರಿಬಾಯಿ ಫುಲೆ ಮತ್ತು ಮಹಾತ್ಮ ಫುಲೆ ಅವರು ಹಾಕಿಕೊಟ್ಟ ಶಿಕ್ಷಣದ ಬುನಾದಿಯಿಂದಾಗಿ ಇಂದು ಮಹಿಳೆಯರು ಎಲ್ಲಾ ಕ್ಷೇತ್ರಗಳಲ್ಲಿ ಅಭಿವೃದ್ಧಿ ಹೊಂದಲು ಸಾಧ್ಯವಾಗಿದೆ. ಅವರ ತ್ಯಾಗ ಮತ್ತು ದೂರದೃಷ್ಟಿ ಇಂದಿನ ಸಮಾಜಕ್ಕೆ ದಾರಿದೀಪ ಎಂದು ಬಣ್ಣಿಸಿದರು.
ದಲಿತ ಮುಖಂಡ ಮಲ್ಲೇಶ್ ಚೌಗುಲೆ ಮಾತನಾಡಿ, ಸತ್ಯಶೋಧಕ ಸಮಾಜದ ಮೂಲಕ ಫುಲೆ ಅವರು ಮೂಢನಂಬಿಕೆಗಳ ವಿರುದ್ಧ ಹೋರಾಡಿ ಸಾಮಾಜಿಕ ನ್ಯಾಯಕ್ಕಾಗಿ ಶ್ರಮಿಸಿದರು ಎಂದರು.
ಕಾರ್ಯಕ್ರಮದಲ್ಲಿ ರಾಜು ಕಲ್ಲೇಕಣ್ಣವರ, ಸಂತೋಷ್ ಕಾಂಬಳೆ, ಮನೋಜ್ ಹಿತಲಮಣಿ, ಆನಂದ್ ಕೋಲ್ಕಾರ್, ಯಲ್ಲಪ್ಪ ಗಾಡಿನಾಯಕ್, ದೀಪಕ್ ಮೈತ್ರಿ, ಸುಧೀರ್ ಚೌಗುಲೆ, ಜೀವನ್ ಕುರಣೆ, ಗಜಾನನ ಕಾಂಬಳೆ, ರಾಮ ಚೌಹಾಣ್, ಸುಬ್ರಮಣ್ಯಂ ಕಾಂಬಳೆ, ಸಂದೀಪ್ ಕೋಳ್ಕರ್, ಅಮರೇಶ್ ಜಿ.ಸಿ. (ಆಂಬಿ), ಮತ್ತು ಸಾಗರ್ ಚೌಗುಲೆ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದು ಫುಲೆ ದಂಪತಿಗಳ ಹೋರಾಟವನ್ನು ಸ್ಮರಿಸಿದರು.


Spread the love

About Laxminews 24x7

Check Also

ಹೃದಯ ಸ್ತಂಭನದಿಂದ ಖ್ಯಾತ ಗಾಯಕಿ ಆಶಾ ಭೋಸ್ಲೆ ನಿಧನ

Spread the loveಮುಂಬೈ: ಖ್ಯಾತ ಗಾಯಕಿ ಆಶಾ ಭೋಸ್ಲೆ (92) ಅವರು ಮುಂಬೈನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಆಶಾ ಭೋಸ್ಲೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ