Breaking News

ಮಕ್ಕಳ ಆಟದ ಪಾರ್ಕ್ ಮಳೆ ನೀರು ನಿಂತು ಚಿಕ್ಕ ಕೆರೆಯಂತಾಗಿದೆ.

Spread the love

ಗುಡಿಬಂಡೆ: ಪಟ್ಟಣದ ಹನ್ನೊಂದನೇ ವಾರ್ಡ್‌ನ ಮಕ್ಕಳ ಆಟದ ಪಾರ್ಕ್ ಮಳೆ ನೀರು ನಿಂತು ಚಿಕ್ಕ ಕೆರೆಯಂತಾಗಿದೆ.

ಪಟ್ಟಣದಲ್ಲಿ ಒಟ್ಟು 7 ಪಾರ್ಕ್‌ಗಳಿದ್ದು, ಅವುಗಳಲ್ಲಿ ನಾರೆಪ್ಪ ಬಡಾವಣೆಯ ಪಾರ್ಕ್‌ನ ಅಭಿವೃದ್ಧಿಗಾಗಿ ಒಂದಷ್ಟು ಹಣವನ್ನು ವ್ಯಯ ಮಾಡಿ ಅಭಿವೃದ್ಧಿ ಮಾಡಿದ್ದರು, ನಂತರ ಇನ್ನು ಹೆಚ್ಚಿನ ಅಭಿವೃದ್ಧಿಗಾಗಿ 2016-17ನೇ ಸಾಲಿನಲ್ಲಿ 14ನೇ ಹಣಕಾಸು ಯೋಜನೆಯಲ್ಲಿ ಸುಮಾರು 7.82 ಲಕ್ಷ ವೆಚ್ಚ ಮಾಡಿ ಪಾರ್ಕ್‌ಗೆ ಗೇಟ್ ಹಾಗೂ ಉಳಿಕೆ ಭಾಗದ ಕಾಂಪೌಂಡ್ ನಿರ್ಮಾಣಕ್ಕೆ ಖರ್ಚು ಮಾಡಿ ಅಭಿವೃದ್ದಿ ಮಾಡಲಾಗಿತ್ತು.

ಈಗ ಇದೇ ಪಾರ್ಕ್‌ನಲ್ಲಿ ಮಕ್ಕಳ ಆಟಿಕೆಗಾಗಿ ಸುಮಾರು 16.00 ಲಕ್ಷಕ್ಕೂ ಹೆಚ್ಚು ಹಣವನ್ನು ಖರ್ಚು ಮಾಡಿ ಆಟಿಕೆ ಪರಿಕರಗಳನ್ನು ಹಾಕಿ, ರ್‍ಯಾಂಪ್ ವಾಕ್ ನಿರ್ಮಾಣ ಮಾಡಿ, ಕುರ್ಚಿಗಳನ್ನು ಹಾಕಿ, ಪಾರ್ಕ್‌ನ್ನು ಅಭಿವೃದ್ಧಿ ಮಾಡಿರುತ್ತಾರೆ.

ಮಳೆಯಿಂದ ಈ ಪಾರ್ಕ್‌ನಲ್ಲಿ ಮಳೆ ನೀರು ಹೊರಗೆ ಹೋಗಲು ದಾರಿಯಿಲ್ಲದೆ ಅಲ್ಲೆ ನಿಂತು ಕೆರೆಯಾಗಿ ಮಾರ್ಪಾಟಾಗಿದೆ.

ಅವೈಜ್ಞಾನಿಕವಾಗಿ ನಿರ್ಮಾಣ

ನಾರೆಪ್ಪ ಬಡಾವಣೆಯ ಪಾರ್ಕ್‌ನ್ನು ಅವೈಜ್ಞಾನಿಕವಾಗಿ ನಿರ್ಮಾಣ ಮಾಡಲಾಗಿದ್ದು, ಪಾರ್ಕ್‌ನಲ್ಲಿ ಈ ಹಿಂದೆ ಸುಮಾರು ಹಣವನ್ನು ವ್ಯಯ ಮಾಡಿ ಎರಡು ಇಂಗು ಗುಂಡಿಯನ್ನು ಸಹ ನಿರ್ಮಾಣ ಮಾಡಿದ್ದರು, ಅದರೆ ಇದನ್ನು ಪಾರ್ಕ್‌ನ ಅಭಿವೃದ್ಧಿಯ ದೃಷ್ಟಿಯಿಂದ ಮುಚ್ಚಿ ಹಾಕಿದ್ದು, ಇದ್ದ ಒಂದು ಗುಂಡಿಯು ಸರಿಯಾಗಿ ನಿರ್ಮಾಣ ಮಾಡದೆ ಇರುವುದರಿಂದ ಮಳೆ ನೀರು ಅಲ್ಲಿ ಇಂಗುತ್ತಿಲ್ಲ, ಹಾಗೂ ಮಳೆ ನೀರು ಹೊರಗೆ ಹೋಗದೆ ಕೆರೆಯಂತಾಗಿದೆ ಎಂದು ಸ್ಥಳಿಯರು ದೂರುತ್ತಿದ್ದಾರೆ.


Spread the love

About Laxminews 24x7

Check Also

ರಾಜ್ಯದ ಹಲವೆಡೆ ವರುಣನ ಅಬ್ಬರ – ಬಿಸಿಲ ಬೇಗೆಗೆ ಬೆಂದಿದ್ದ ಭೂಮಿಗೆ ತಂಪೆರೆದ ಆಲಿಕಲ್ಲು ಮಳೆ

Spread the loveಬೆಂಗಳೂರು: ರಾಜ್ಯದ ಹಲವೆಡೆ ವರುಣನ ಅಬ್ಬರ ಜೋರಾಗಿದ್ದು, ಕೊಡಗು, ಹಾಸನ ಸೇರಿದಂತೆ ಹಲವೆಡೆ ಕೆಲ ಜಿಲ್ಲೆಗಳಲ್ಲಿ ಮಳೆರಾಯ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ