ಬಾಗಲಕೋಟೆ: ಮತಕ್ಷೇತ್ರದ ಹಳ್ಳಿಗಳಲ್ಲಿ ಬಿಜೆಪಿ ಅಭ್ಯರ್ಥಿ ಡಾ.ವೀರಣ್ಣ ಚರಂತಿಮಠ ಅವರಿಂದ ಭರ್ಜರಿ ಪ್ರಚಾರ ಮಾಡಿ ಮತಯಾಚನೆ ಮಾಡಿದರು.
ಮತಕ್ಷೆತ್ರದ ಸುತಗುಂಡಾರ, ನಾಯನೇಗಲಿ, ನಾಯನೇಗಲಿ ಎಲ್.ಟ, ಮದುವಿನಕೊಪ್ಪ, ಚಿಟಗಿನಕೊಪ್ಪ, ದೇವಲಾಪುರ ಗ್ರಾಮದಲ್ಲಿ ಬಿಜೆಪಿ ಕಾರ್ಯಕರ್ತರೊಂದಿಗೆ ಸಭೆ ಸೇರಿ ಮಾತನಾಡಿದ ಅವರಿ ಗ್ರಾಮೀಣ ಭಾಗದಲ್ಲಿ ತಮ್ಮ ಅವಧಿಯಲ್ಲಿ ಆದಂತಹ ನೂತನ ಶಾಲೆಗೆಳು, ಪ್ರಾಥಮಿಕ ಆರೋಗ್ಯ ಕೇಂದ್ರಗಳು, ವಿದ್ಯುತ್ ಕೇಂದ್ರಗಳು, ಡಿಜಿಟಲ್ ಗ್ರಂಥಾಲಯ, ಜಲಜೀವನ ಮೀಷನ ಅಡಿಯಲ್ಲಿ ಕುಡಿಯುವ ನೀರು, ಕಾಂಕ್ರೆಟ್ ರಸ್ತೆ ಸಮುದಾಯಭವನಳು ನೂತನ ಅಂಗನವಾಡಿ ಕಟ್ಟಡಗಳ ನಿರ್ಮಾಣ ಸೇರಿದಂತೆ ಅನೇಕ ಅಭಿವೃದ್ಧಿ ಕಾರ್ಯಗಳನ್ನು ತಿಳಿಸದ ಅವರು ಕಳೆದ 3 ವರ್ಷಗಳಲ್ಲಿ ಕಾಂಗ್ರೆಸ್ಸ ಸರಕಾರ ಒಂದೆ ಇಂದು ಅಭಿವೃದ್ಧಿ ಕೆಲಸ ಮಾಡಿಲ್ಲಾ, ಕ್ಷೇತ್ರದ ಅಭಿವೃದ್ಧಿಗಾಗಿ ಬಿಜೆಪಿ ಮತ ನೀಡಿ ಎಂದರು.
ಸಭೆಯಲ್ಲಿ ಜಿ.ಎನ್.ಪಾಟೀಲ.ದುಂಡಪ್ಪ ಏಳಮ್ಮಿ, ಗ್ರಾಮೀಣ ಅಧ್ಯಕ್ಷ ಸುರೇಶ ಕೋಣ್ಣುರ, ಮಲ್ಲಪ್ಪ ಹೆಬ್ಬಾಳ, ಹನಮಂತ ಚಿತ್ತರಗಿ, ಸುರೇಶ ಪೂಜಾರಿ, ವಿಠ್ಠಲ್ ಕೋಟಿ, ಮಹಾಂತೇಶ ಕೋಲ್ಕಾರ, ವಿಜಯ ರಾಠೋಡ, ಶಿವಾಜಿ ರಾಠೋಡ, ಪರಶುರಾಮ ಮಾದರ, ಮುತ್ತಪ್ಪ ಪೂಜಾರ, ಗ್ರಾಪಂ ಅಧ್ಯಕ್ಷ ಮುತ್ತಪ್ಪ ಬಡಿಗೇರ, ಚಂದ್ರಶೇಖರ ದಾಸರ, ಸಂತೋಷ, ಸಂಗಪ್ಪ ಚಲುವಾದಿ, ಕೃಷ್ಣಾ ದಾಸರ,ಅಣ್ಣಪ್ಪ ಕೆಂಚೋಡಿ, ಸಂತೋಷ ಕರೂರ, ಯಲ್ಲಪ್ಪ ಅಮಾತೆಪ್ಪನ್ನವರ, ಶಿವಣಪ್ಪ ಕೋಳಾರ, ಯಲ್ಲಪ್ಪ ಮುತ್ತಗಿ,ಆನಂದ ಅಂಬಿಗೇರ ಸೇರಿದಂತೆ ಗ್ರಾಮದ ಮುಖಂಡರು, ಪದಾಧಿಕಾರಿಗಳು, ಕಾರ್ಯಕರ್ತರು ಭಾಗವಹಿಸಿದ್ದರು,
ನವನಗರದಲ್ಲಿ ರಾಜೇಶ್ವರಿ ವೀರಣ್ಣ ಚರಂತಿಮಠರಿಂದ ಮತಯಾಚನೆ
ಬಿಜೆಪಿಯತ್ತ ಮಹಿಳೆಯರು ಒಲವು : ರಾಜೇಶ್ವರಿ ಚರಂತಿಮಠ
ಬಾಗಲಕೋಟೆ: ಪ್ರಧಾನಿ ನರೇಂದ್ರ ಮೋದಿಯವರ ದೂರದೃಷ್ಟೀ ಹಾಗೂ ಬಾಗಲಕೋಟೆ ಮತಕ್ಷೇತ್ರದ ಅಭಿವೃದ್ಧಿಗಾಗಿ ಡಾ.ವೀರಣ್ಣ ಚರಂತಿಮಠ ಅವರ ಅಭಿವೃದ್ದಪರ ಕಾರ್ಯಗಳನ್ನು ಮೆಚ್ಚಿಕೊಂಡ ಮಹಿಳಾ ಶಕ್ತಿ ಬಿಜೆಪಿಯತ್ತ ವಾಲುತ್ತಿದೆ ಎಂದು ಬಿಜೆಪಿ ಅಭ್ಯರ್ಥಿ ಡಾ,ವೀರಣ್ಣ ಚರಂತಿಮಠ ಅವರ ಧರ್ಮಪತ್ನಿ ರಾಜೇಶ್ವರಿ ಚರಂತಿಮಠ ಅವರು ಹೇಳಿದರು.
ಅವರು ನವನಗರದ 14.15 ನೇ ಸೇಕ್ಟರ್ ನಲ್ಲಿ ಬಿಜೆಪಿ ಅಭ್ಯರ್ಥಿ ಡಾ.ವೀರಣ್ಣ ಚರಂತಿಮಠ ಅವರ ಪರವಾಗಿ ಪಾದಯಾತ್ರೆ ಮೂಲಕ ಮನೆ ಮನೆ ತೆರಳಿ ಮತಯಾಚನೆ ಮಾಡಿ ಮಾತನಾಡಿದ ಅವರು ಪ್ರದಾನಿ ನರೇಂದ್ರ ಮೋದಿಯವರಿಂದಾಗಿ ದೇಶ ಅಭಿವೃದ್ಧಿ ಹೊಂದಿದ ದೇಶವಾಗಿದೆ, ಅದರಂತೆ ಡಾ.ವೀರಣ್ಣ ಚರಂತಿಮಠ ಅವರ ಶಾಸಕರಾಗಿದ್ದ ಅವದಿಂಯಲ್ಲಿ ಬಾಗಲಕೋಟೆ ಎಲ್ಲರೀತಿಯಲ್ಲೂ ಅಭಿವೃದ್ಧಿ ಹೊಂದಿದೆ,ಮತ್ತೆ ಚುನಾವಣೆ ಬಂದಿದ್ದರಿಂದ ಬಾಗಲಕೋಟೆ ಜನರ ಕ್ಷೇತ್ರದ ಮಹಿಳೆಯರು ಅಭಿವೃದ್ದಿ ಪರವಾದ ಬಿಜೆಪಿಯ ಪರವಾಗಿದ್ದಾರೆ, ಮತ ನೀಡಿ ಗೆಲ್ಲಿಸುತ್ತಾರೆ ಎಂಬ ವಿಶ್ವಾಸವಿದೆ ಎಂದರು.
ಮತಯಾಚನೆಯಲ್ಲಿ ಸವಿತಾ ಲಂಕೆನ್ನವರ. ಜಯಾ ಭದ್ರಶೇಟ್ಟಿ, ಸುಮಾ ಅಂಗಡಿ, ಲೀಲಾ ಬಾಗೆವಾಡಿ, ಗೀತಾ ಬಂಡಿವಡ್ಡರ, ಕಳ್ಳೀಗುಡ್ಡ ಸರ, ಸಚಿನ ಜೋಷಿ, ಮಾಗಿನಹಳ್ಳಿ. ದೇವಿಕಾ ಪಾತ್ರೋಟಿ, ಚಿತ್ತವಾಗಿ, ಕಲ್ಲಪ್ಪ ತೂರತ, ವಿಜಯ ಚಟ್ಟರಕಿ, ಕುಷಗಲ್ ಸಂಗಯ್ಯ ಸರಗಣಾಚಾರಿ,ಬಸವರಾಜ ಹುರಕಡ್ಲಿ ಸೇರಿದಂತೆ ಅನೇಕರು ಭಾಗವಹಿಸಿದ್ದರು.
ಪೋಟೋ 05 ನವನಗರದಲ್ಲಿ ರಾಜೇಶ್ವರಿ ವೀರಣ್ಣ ಚರಂತಿಮಠರಿಂದ ಮತಯಾಚನೆ
Laxmi News 24×7