ನವದೆಹಲಿ: ದೇಶದಲ್ಲಿರುವ ನಿರುದ್ಯೋಗದ ಸಮಸ್ಯೆಯ ಬಗ್ಗೆ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ವಿರುದ್ದ ವಾಗ್ದಾಳಿ ನಡೆಸುತ್ತಿರುತ್ತಾರೆ. ಈ ಬಾರಿಯೂ ಇದೇ ವಿಚಾರಕ್ಕೆ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ ರಾಹುಲ್ ಗಾಂಧಿ, ಹೇಟ್-ಇನ್-ಇಂಡಿಯಾ ಮತ್ತು ಮೇಕ್-ಇನ್-ಇಂಡಿಯಾ ಒಟ್ಟಿಗಿರಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
ನಿರುದ್ಯೋಗದ ಬಗ್ಗೆ ಧ್ವನಿ ಎತ್ತಿ ಅಪಾಯಕಾರಿ ನಿರುದ್ಯೋಗದ ಬಿಕ್ಕಟ್ಟನ್ನು ಪರಿಹರಿಸುವಂತೆ ಪ್ರಧಾನಿ ನರೇಂದ್ರ ಮೋದಿಯವರಿಗೆ ಟ್ವೀಟ್ ಮೂಲಕ ಮನವಿ ಮಾಡಿಕೊಂಡಿದ್ದಾರೆ.
“”ಭಾರತದಿಂದ ವ್ಯಾಪಾರವನ್ನು ನಾಶಪಡಿಸುವುದು ಸುಲಭ. 7 ಜಾಗತಿಕ ಬ್ರ್ಯಾಂಡ್ ಗಳು. 9 ಕಾರ್ಖಾನೆಗಳು. 649 ಡೀಲರ್‌ಶಿಪ್‌ಗಳು. 84,000 ಉದ್ಯೋಗಗಳು. ಮೋದಿ ಜಿ, ಹೇಟ್-ಇನ್-ಇಂಡಿಯಾ ಮತ್ತು ಮೇಕ್-ಇನ್-ಇಂಡಿಯಾ ಸಹಬಾಳ್ವೆ ನಡೆಸಲು ಸಾಧ್ಯವಿಲ್ಲ ! ಬದಲಿಗೆ ಭಾರತದ ವಿನಾಶಕಾರಿ ನಿರುದ್ಯೋಗ ಬಿಕ್ಕಟ್ಟಿನ ಮೇಲೆ ಕೇಂದ್ರೀಕರಿಸುವ ಸಮಯ” ಎಂದು ರಾಹುಲ್ ಹೇಳಿದ್ದಾರೆ.
2017ರಲ್ಲಿ ಷೆವರ್ಲೆ, 2018 ರಲ್ಲಿ ಮ್ಯಾನ್ ಟ್ರಕ್ಸ್, 2019 ರಲ್ಲಿ ಫಿಯೆಟ್ ಮತ್ತು ಯುನೈಟೆಡ್ ಮೋಟಾರ್ಸ್, 2020 ರಲ್ಲಿ ಹಾರ್ಲೆ ಡೇವಿಡ್ಸನ್, 2021 ರಲ್ಲಿ ಫೋರ್ಡ್ ಮತ್ತು 2022 ರಲ್ಲಿ ಡಾಟ್ಸನ್ ದೇಶದಿಂದ ನಿರ್ಗಮಿಸಿದ ಏಳು ಜಾಗತಿಕ ಬ್ರ್ಯಾಂಡ್ ಗಳನ್ನು ತೋರಿಸುವ ಮೂಲಕ ಟ್ವಿಟರ್ ನಲ್ಲಿ ನಿರುದ್ಯೋಗಕ್ಕೆ ಪರಿಹಾರ ಕಂಡುಕೊಳ್ಳುವಂತೆ ಒತ್ತಾಯಿಸಿದ್ದಾರೆ.