ಹುಬ್ಬಳ್ಳಿ: ದೇಶದ ವಿವಿಧ ರಾಜ್ಯಗಳಲ್ಲಿ ಉಂಟಾಗಿರುವ ಕೊರೊನಾ ಲಸಿಕೆ ಅಭಾವದ ಕುರಿತಂತೆ ಮಾತನಾಡಿದ ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಇದಕ್ಕೆ ವಿರೋಧಿಗಳೇ ಕಾರಣ ಎಂದು ಆರೋಪಿಸಿದ್ದಾರೆ.
ಹುಬ್ಬಳ್ಳಿಯಲ್ಲಿ ಮಾತನಾಡಿದ ಅವ್ರು ಭಾರತದಲ್ಲಿ ಲಸಿಕೆಗಳನ್ನ ತಯಾರು ಮಾಡಲಾಗುತ್ತಿತ್ತು. ಆದರೆ ಎಷ್ಟೋ ಮಂದಿ ಲಸಿಕೆಯ ಬಗ್ಗೆ ಇಲ್ಲಸಲ್ಲದ ಮಾತುಗಳನ್ನಾಡಿದರು.
ನಕಾರಾತ್ಮಕ ಅಭಿಪ್ರಾಯ ಹೆಚ್ಚಾಗಿ ಬಂದಿದ್ದರಿಂದ ಕಂಪನಿಗಳು ಲಸಿಕೆ ಉತ್ಪಾದನೆಯನ್ನ ಕಡಿಮೆ ಮಾಡಿದವು. ಲಸಿಕೆ ಕುರಿತಾದ ತಪ್ಪು ತಿಳುವಳಿಕೆಯಿಂದಾಗಿ ಉತ್ಪಾದನೆ ಕುಂಠಿತವಾಯ್ತು ಎಂದು ಹೇಳಿದರು.
ರಾಜ್ಯದಲ್ಲಿ ಈಗಾಗಲೇ 1.9 ಕೋಟಿ ಜನರಿಗೆ ಲಸಿಕೆಯನ್ನ ನೀಡಲಾಗಿದೆ. ಕೋರ್ಟ್ ನಿರ್ದೇಶನ ನೀಡುವ ಮುನ್ನವೇ ಮೋದಿ ಸರ್ಕಾರ ಸೂಕ್ತ ಕ್ರಮಗಳನ್ನ ಕೈಗೊಳ್ಳುತ್ತಿದೆ. ನಾವೆಲ್ಲ ಸೇರಿ ಯುದ್ಧೋಪಾದಿಯಲ್ಲಿ ಕೆಲಸ ಮಾಡುತ್ತಿದ್ದೇವೆ.
ಜುಲೈ ತಿಂಗಳಲ್ಲಿ ಎಲ್ಲರಿಗೂ ಲಸಿಕೆ ಸಿಗಲಿದೆ. ಕೋವಿಡ್ ನಿಯಂತ್ರಿಸಲು ಎಲ್ಲಾ ರೀತಿಯ ಪ್ರಯತ್ನ ಮಾಡಿದ್ದೇವೆ. ವೈದ್ಯಕೀಯ ಆಮ್ಲಜನಕ ಕೊರತೆಯಾಗದಂತೆ ಕ್ರಮ ಕೈಗೊಂಡಿದ್ದೇವೆ. ಆಮ್ಲಜನಕಕ್ಕೂ ಅಭಾವ ಉಂಟಾಗಬಹುದು ಎಂಬ ಸುಳಿವು ನಮಗೆ ಇರಲಿಲ್ಲ ಎಂದು ಹೇಳಿದರು.
Laxmi News 24×7