ವಿಜಯಪುರ: ಮಾಜಿ ಸಿಎಂ ಯಡಿಯೂರಪ್ಪ ಹಾಗು ಅವರ ಪುತ್ರ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ವಿರುದ್ಧ ವಿಜಯಪುರದ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ವಾಗ್ದಾಳಿ ಮುಂದುವರೆಸಿದ್ದಾರೆ. ಲೋಕಸಭೆ ಚುನಾವಣೆ ಬಳಿಕ ರಾಜ್ಯಾಧ್ಯಕ್ಷನ ಸ್ಥಾನ ಬದಲಾಗಬಹುದು ಎನ್ನುವ ಸುಳಿವು ನೀಡಿದ್ದಾರೆ.
ವಿಜಯೇಂದ್ರನ ಆಪ್ತರನ್ನು ಪದಾಧಿಕಾರಿಗಳನ್ನಾಗಿ ಮಾಡಿರುವ ವಿಚಾರಕ್ಕೆ ಮಾಧ್ಯಮಗಳಿಗೆ ಮಾತನಾಡಿರುವ ಅವರು, ಯಡಿಯೂರಪ್ಪ ಕೇಂದ್ರದವರನ್ನ ಅಂಜಿಸಿದ್ದಾರೆ. ನನ್ನ ಮಗನ ಉದ್ಧಾರ ಮಾಡದೇ ಇದ್ದರೆ ಲೋಕಸಭೆಯಲ್ಲಿ ಕೆಲಸ ಮಾಡಲ್ಲ ಎಂದು ಬೆದರಿಕೆ ಹಾಕಿದ್ದಾರೆ. ಹಾಳಾಗಿ ಹೋಗಲಿ ಎಂದು ಹೈಕಮಾಂಡ್ ವಿಜಯೇಂದ್ರನಿಗೆ ರಾಜ್ಯಾಧ್ಯಕ್ಷ ಮಾಡಿದ್ದಾರೆ. ಹೈಕಮಾಂಡ್ ಕಳ್ಳರ ಕೈಯ್ಯಲ್ಲಿ ಪಕ್ಷದ ಕೀಲಿ ಕೊಟ್ಟಿದ್ದಾರೆ. ಈ ಕೀಲಿ 2024ರ ಲೋಕಸಭೆ ಚುನಾವಣೆ ವರೆಗೆ ಮಾತ್ರ ಇರುತ್ತದೆ. ವಿಜಯೇಂದ್ರ 28 ಸೀಟುಗಳನ್ನು ಗೆಲ್ಲಿಸಿಕೊಂಡು ಬರದಿದ್ದರೆ ಕೀಲಿ ವಾಪಾಸ್ ಕಸಿದುಕೊಳ್ಳುತ್ತಾರೆ ಎಂದು ಯತ್ನಾಳ ಲೇವಡಿ ಮಾಡಿದ್ದಾರೆ.