Breaking News

ಬಾಲಕಿ ಬಾಣಲೆಯಿಂದ ಬೆಂಕಿಗೆ. ಕಣ್ಣೀರುಕ್ಕಿಸುವ ಕತೆ ಇದು

Spread the love

ಗುಂಟೂರು: ಅತ್ಯಾಚಾರಕ್ಕೊಳಗಾದ ಅಪ್ರಾಪ್ತ ಬಾಲಕಿ, ಆಘಾತಗೊಂಡು ತಾಯಿಯ ಮನೆಗೆ ಹೋಗದೆ ಗೆಳತಿಯ ಮನೆಗೆ ಹೊರಟಾಗ ಮಾರ್ಗ ಮಧ್ಯೆ ದುರುಳನ ಕೈಗೆ ಸಿಕ್ಕು ಮತ್ತೆ ಮತ್ತೆ ಅತ್ಯಾಚಾರಕ್ಕೀಡಾದ ಘಟನೆ ಗುಂಟೂರು ಜಿಲ್ಲೆಯಿಂದ ವರದಿಯಾಗಿದೆ.
ಆಕೆ 14 ವರ್ಷದ ಬಾಲಕಿ. ಆಕೆಗೆ ಅಪ್ರಾಪ್ತ ವಯಸ್ಸಿನಲ್ಲೇ ಮದುವೆ ಮಾಡಲಾಗಿದೆ. ಪತಿ ಬೇರೆ ಕಡೆ ವಾಸಿಸುತ್ತಿದ್ದಾನೆ. ಈಕೆ ತಾಯಿಯ ಮನೆಯಲ್ಲಿದ್ದಾಳೆ. ಪತಿಗೆ ಪರಿಚಿತನಾದ ತನ್ನ ನೆರೆಮನೆಯಾತನಿಂದಾಗಿ ಅತ್ಯಾಚಾರಕ್ಕೊಳಗಾದ ಆಕೆ ತನಗೇನಾಯಿತು ಎಂದು ಆಘಾತಕ್ಕೊಳಗಾಗಿ ತಾಯಿಯ ಮನೆಗೆ ಹೋಗುವ ಬದಲು ಹತ್ತಿರದ ಹಳ್ಳಿಯಲ್ಲಿರುವ ತನ್ನ ಗೆಳತಿಯ ಮನೆಗೆ ಹೋಗಲು ನಿರ್ಧರಿಸಿದಳು.
ರಾತ್ರಿ ತನ್ನ ಗೆಳತಿಯ ಮನೆಗೆ ಹೋಗುವಾಗ ದಾರಿಯಲ್ಲಿ ಮೋಟಾರ್​ ಸೈಕಲ್​ನಲ್ಲಿ ಬರುತ್ತಿದ್ದ ಗೃಹ ರಕ್ಷಕನೊಬ್ಬ ರಸ್ತೆಯಲ್ಲಿ ಆಕೆಯನ್ನು ನೋಡಿ ಗುರುತಿನ ಚೀಟಿ ತೋರಿಸಿ ತನ್ನ ಹೆಸರು ಅಶೋಕ್ ಚಕ್ರವರ್ತಿ ಎಂದು, ತಾನು ಪೊಲೀಸ್ ಅಧಿಕಾರಿ ಎಂದು ತಿಳಿಸಿದ್ದಾನೆ.

ಮದುವೆ ಉಡುಗೊರೆಯಿಂದ ಸಿಕ್ಕಿಬಿದ್ಲು ಜರ್ಮನ್‌ ಭಯೋತ್ಪಾದಕಿ!

ಬಾಲಕಿಗೆ ಸಹಾಯ ಮಾಡುವ ಬದಲು ಆರೋಪಿ ಅವಳನ್ನು ತನ್ನ ಸ್ನೇಹಿತ ದುರ್ಗಾ ರಾವ್ ಮನೆಗೆ ಕರೆದೊಯ್ದು ಸುಮಾರು 20 ದಿನಗಳ ಕಾಲ ಬಂಧಿಸಿ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ.
ಬಾಲಕಿ ಕಾಣೆಯಾದ ಕುರಿತು ಆಕೆಯ ತಾಯಿ ದೂರು ದಾಖಲಿಸಿದ ನಂತರ ಬಾಲಕಿಯನ್ನು ದುರ್ಗಾ ರಾವ್ ಮನೆಯಲ್ಲಿ ಗುರುವಾರ ಪತ್ತೆ ಮಾಡಲಾಗಿದೆ.
ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ್ದಕ್ಕಾಗಿ ತೆನಾಲಿ ಪೊಲೀಸರು ಆಕೆಯ ನೆರೆಹೊರೆಯ ನವೀನ್ ಮತ್ತು ಹೋಮ್ ಗಾರ್ಡ್ ಅಶೋಕ್ ಸೇರಿದಂತೆ ಮೂವರನ್ನು ಬಂಧಿಸಿದ್ದಾರೆ.
ಆಗಿದ್ದಿಷ್ಟು: ಕಳೆದ ವರ್ಷ ಅಪ್ರಾಪ್ತ ಬಾಲಕಿ ಮದುವೆಯಾಗಿದ್ದಳು. ಅವಳು ತನ್ನ ತಾಯಿಯೊಂದಿಗೆ ತೆನಾಲಿ ಮಂಡಲದ ಮುಟ್ಟೆಮ್​ಶೆಟ್ಟಿ ಪಾಲೆಮ್ ಗ್ರಾಮದಲ್ಲಿ ವಾಸಿಸುತ್ತಿದ್ದಳು. ಆಕೆಯ ಗಂಡ ಬಾಪಟ್ಲಾದಲ್ಲಿ ವಾಸಿಸುತ್ತಿದ್ದ. ಆತನ ಸ್ನೇಹಿತ ಕಾರ್ಲಪಾಲೆಮ್ ನವೀನ್ ಕುಮಾರ್ ಬಾಲಕಿಗೆ ಪರಿಚಯವಾಗಿದ್ದ.

ಇಲಿ ಇಟ್ಟ ಬೆಂಕಿಗೆ ಸುಟ್ಟು ಕರಕಲಾದ ಕಚೇರಿ: 1 ಕೋಟಿ ಆಸ್ತಿ ನಷ್ಟ, ಸಿಸಿಟಿವಿಯಲ್ಲಿ ಇಲಿ ಕೃತ್ಯ ಬಯಲು!

ಜುಲೈ 26 ರಂದು ನವೀನ್ ಬಾಲಕಿಯನ್ನು ತನ್ನ ಬೈಕ್‌ನಲ್ಲಿ ಮೊಪರು ಗ್ರಾಮದ ಬಳಿ ಹೊಲಕ್ಕೆ ಕರೆದೊಯ್ದು ಅತ್ಯಾಚಾರವೆಸಗಿ ರಾತ್ರಿ 11 ಗಂಟೆಗೆ ತೆನಾಲಿಯ ವೈಕುಂಟಪುರಂ ದೇವಸ್ಥಾನದಲ್ಲಿ ಅಕೆಯನ್ನು ಬಿಟ್ಟು ಹೋದ. ತನ್ನ ತಾಯಿಯ ಮನೆಗೆ ಹೋಗಲು ಹೆದರಿಗೆ ಆಕೆ ಪೆರೆಚೆರ್ಲಾ ಗ್ರಾಮದಲ್ಲಿರುವ ತನ್ನ ಗೆಳತಿಯ ಮನೆಗೆ ಹೋಗಲು ನಿರ್ಧರಿಸಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ.
ಮಾರ್ಗ ಮಧ್ಯೆ ಸಿಕ್ಕ ಹುಡುಗಿಯನ್ನು ಗೃಹರಕ್ಷಕ ಮತ್ತು ಅವನ ಸ್ನೇಹಿತ ಬಾಲಕಿಯನ್ನು ಬೇರೆ ಸ್ಥಳಕ್ಕೆ ಕರೆದೊಯ್ದು ಆಕೆಯ ಮೇಲೆ ಅತ್ಯಾಚಾರವನ್ನು ಮುಂದುವರೆಸಿದರು. ಪೊಲೀಸರು ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.


Spread the love

About Laxminews 24x7

Check Also

ಸಚಿವ ತಿಮ್ಮಾಪುರ ವಜಾ ಮಾಡದಿದ್ದರೆ ಸಿಎಂಗೆ 85% ಕಮಿಷನ್ ಹೋಗಿದೆ ಎಂದರ್ಥ: ಆರ್. ಅಶೋಕ್

Spread the loveಬೆಂಗಳೂರು: ಸಿದ್ದರಾಮಯ್ಯನವರ ನಿದ್ದೆ ಸರ್ಕಾರ ಇದು. ಭ್ರಷ್ಟಾಚಾರದ ಹೊಳೆಯಲ್ಲಿ ಮಿಂದು ಮೇಯುತ್ತಿದೆ. ಅಬಕಾರಿ ಸಚಿವ ತಿಮ್ಮಾಪುರ ಅವರನ್ನು ವಜಾ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ