Breaking News

ಬಿಎಸ್‌ವೈ ಮುಖ್ಯಮಂತ್ರಿಯಾಗಿ ಬಹಳ ದಿನ ಇರುವುದಿಲ್ಲ, ಉತ್ತರ ಕರ್ನಾಟಕದವರೇ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿಕೆ ನೀಡಿದ್ದಾರೆ.

Spread the love

ವಿಜಯಪುರ: ಬಿಎಸ್‌ವೈ ಮುಖ್ಯಮಂತ್ರಿಯಾಗಿ ಬಹಳ ದಿನ ಇರುವುದಿಲ್ಲ, ಉತ್ತರ ಕರ್ನಾಟಕದವರೇ ಮುಂದಿನ ಸಿಎಂ ಆಗೋದು ಎಂದು ವಿಜಯಪುರದಲ್ಲಿ ನಡೆದ ಸಮಾರಂಭವೊಂದರಲ್ಲಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿಕೆ ನೀಡಿದ್ದಾರೆ.

ಸಮಾರಂಭದಲ್ಲಿ ಮಾತನಾಡಿದ ಯತ್ನಾಳ್ ಸಿಎಂ ವಿರುದ್ಧ ಟೀಕಾ ಪ್ರಹಾರ ನಡೆಸಿದ್ದಾರೆ. ಬಿಎಸ್‌ವೈ ಮುಖ್ಯಮಂತ್ರಿಯಾಗಿ ಬಹಳ ದಿನ ಇರುವುದಿಲ್ಲ, ಕೇಂದ್ರ ಸರ್ಕಾರದವರಿಗೂ ಬಿಎಸ್‌ವೈ ಸಾಕಾಗಿ ಹೋಗಿದ್ದಾರೆ. ಉತ್ತರ ಕರ್ನಾಟಕದವರೇ ಮುಂದಿನ ಸಿಎಂ ಆಗೋದು. ಉತ್ತರ ಕರ್ನಾಟಕದವರು 100 ಶಾಸಕರನ್ನ ಗೆಲ್ಲಿಸಿ ಕಳಿಸುತ್ತಾರೆ.

ಉಳಿದ ಭಾಗದಲ್ಲಿ ಬಿಜೆಪಿಯ 15-20 ಶಾಸಕರು ಗೆಲ್ಲುತ್ತಾರೆ. ಅವರಲ್ಲೇ ಒಬ್ಬರು ಮುಖ್ಯಮಂತ್ರಿ ಆಗುತ್ತಾರೆ. ಪ್ರಧಾನಿ ಮೋದಿ ಈ ಭರವಸೆಯನ್ನು ನೀಡಿದ್ದಾರೆ. ನನ್ನ ಕ್ಷೇತ್ರದ 125 ಕೋಟಿ ಅನುದಾನ ಕಡಿತ ಮಾಡಿದ ಹಿನ್ನೆಲೆಯಲ್ಲಿ ಸಿಎಂ ಬಿಎಸ್‌ವೈ ಹಾಗೂ ನನ್ನ ಮಧ್ಯೆ ಜಗಳ ಶುರುವಾಗಿದೆ.

ಇನ್ನೇನು ಸಿಎಂ ಬಿಎಸ್‌ವೈ ಬಹಳ ದಿನ ಅಧಿಕಾರದಲ್ಲಿ ಇರಲ್ಲ ಎಂದು ಸಭೆಯನ್ನುದ್ದೇಶಿಸಿ ಮಾತನಾಡಿದ್ದಾರೆ.


Spread the love

About Laxminews 24x7

Check Also

ಸಿಎಂ-ಡಿಸಿಎಂ 3-4 ಜನರನ್ನು ದೆಹಲಿಗೆ ಕರೆಸಿ ಮಾತನಾಡುತ್ತೆ; ಖರ್ಗೆ…

Spread the love ಸಿಎಂ-ಡಿಸಿಎಂ 3-4 ಜನರನ್ನು ದೆಹಲಿಗೆ ಕರೆಸಿ ಮಾತನಾಡುತ್ತೆ; ಖರ್ಗೆ… ಹೈಕಮಾಂಡ್ ಕರೆದರೇ ಖಂಡಿತವಾಗಿಯೂ ದೆಹಲಿ ಪ್ರವಾಸ; …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ