ಉಡುಪಿ: ದೆಹಲಿ ಮತ್ತು ಮಹಾರಾಷ್ಟ್ರದಿಂದ ಇಡೀ ದೇಶಕ್ಕೆ ಕೊರೊನಾ ಹಬ್ಬಿದೆ. ಬೆಂಗಳೂರು ಸ್ಲಂಗಳಿಗೆ ತಬ್ಲಿಘಿಗಳು ಉದ್ದೇಶ ಪೂರ್ವಕವಾಗಿ ಸೋಂಕು ಪಸರಿಸಿದರು ಎಂದು ಸಂಸದೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ.
ಶೋಭಾ ಕರಂದ್ಲಾಜೆ ಮೋದಿ ಸರ್ಕಾರ ಆರು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸರ್ಕಾರದ ಸಾಧನೆಗಳನ್ನು ಹೇಳಿದರು. ಈ ಸಂದರ್ಭದಲ್ಲಿ ಕೊರೊನಾ ಬಗ್ಗೆ ಮಾತನಾಡಿ, ಪಾದರಾಯಣಪುರ, ಸಿದ್ಧಿಕ್ ಲೇಔಟ್‍ನಲ್ಲಿ ಉದ್ದೇಶ ಪೂರ್ವಕವಾಗಿ ಸೋಂಕು ಹಂಚಿದರು. ತಬ್ಲಿಘಿ ನಡತೆ ನೋಡಿದರೆ ಉದ್ದೇಶ ಪೂರ್ವಕವಾಗಿ ಕೊಟ್ಟಂತೆ ಕಾಣಿಸುತ್ತದೆ. ಅವರು ಉಡಾಫೆಯಿಂದ ಹಂಚಿದರೋ ನನಗೆ ಗೊತ್ತಿಲ್ಲ ಎಂದರು.

ದೇಶದಲ್ಲಿ ಕೊರೊನಾ ಹಂಚಲು ತಬ್ಲಿಘಿಗಳಿಂದ ವ್ಯವಸ್ಥಿತ ಷಡ್ಯಂತ್ರ ನಡೆದಂತಿದೆ. ಈ ಬಗ್ಗೆ ಸೂಕ್ತ ತನಿಖೆ ಆಗಬೇಕು. ರಾಜ್ಯ ಮತ್ತು ಕೇಂದ್ರ ಸರಕಾರವನ್ನು ನಾನೇ ಆಗ್ರಹಿಸುತ್ತೇನೆ. ಇಲ್ಲಿನ ಅನ್ನ ತಿಂದವರು ರೋಗ ಹಬ್ಬಿಸಿದರೆ, ನಿಮಗೆ ಕ್ಷಮೆ ಇಲ್ಲ. ಕುಮ್ಮಕ್ಕು ಕೊಡುವ ಜನಪ್ರತಿನಿಧಿ, ಅಧಿಕಾರಿಗಳ ಮೇಲೆ ಕೂಡ ಕ್ರಮ ಆಗಲಿ ಎಂದರು.
Laxmi News 24×7