ತುಮಕೂರು : ನನಗೂ ಮುಖ್ಯಮಂತ್ರಿಯಾಗುವ ಆಸೆ ಇದೆ. ಶಾಸಕ ಬಸವರಾಜ ಪಾಟೀಲ್ ಯತ್ನಾಳ್ ಸೀನಿಯರ್ ಇದಾರೆ. ಅವರಿಗಿಂತ ನಾನು ಸೀನಿಯರ್ ಇದ್ದೇನಿ. ಸಿಎಂ ಸ್ಥಾನಕ್ಕೆ ಯತ್ನಾಳ ಹಾಗೂ ನನಗೆ ಪೈಪೋಟಿ ನಡೆಯಲಿ ಎಂದು ನೂತನ ಸಚಿವ ಉಮೇಶ ಕತ್ತಿ ಹಾಸ್ಯವಾಗಿ ಹೇಳಿದರು.
ತುಮಕೂರು ಸಿದ್ದಗಂಗಾ ಮಠಕ್ಕೆ ಶುಕ್ರವಾರ ಭೇಟಿ ನೀಡಿದ ಬಳಿ ಮಾತನಾಡಿ, ರಾಜ್ಯದಲ್ಲಿ ಮುಖ್ಯಮಂತ್ರಿ ಹುದ್ದೆ ಈಗ ಖಾಲಿ ಇಲ್ಲ. ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದಾರೆ. ಬಿಜೆಪಿಯಲ್ಲಿ 75 ವರ್ಷದವರೆಗೂ ಸಿಎಂ ಆಗೋಕೆ ಅವಕಾಶ ಇದೆ. ಜೀವನದಲ್ಲಿ ಸಿಎಂ ಆಗೋ ಆಸೆ ಇರಬೇಕು. ನನಗೂ ಇದೆ. ಯತ್ನಾಳ ಸೇರಿ ಎಲ್ಲರಿಗೂ ಇರುತ್ತೆ ಎಂದರು.
ಯತ್ನಾಳ್ ಮತ್ತು ನನಗೆ ಇನ್ನೂ 60 ವರ್ಷ. ನನಗೆ ಶ್ರೀಗಳ ಆಶೀರ್ವಾದ ಇದೆ. ಮುಂದಿನ ದಿನಗಳಲ್ಲಿ ಯಾವ ಸ್ಥಾನ ಸಿಕ್ಕರೂ ಸಹ ನಿಭಾಯಿಸುತ್ತೇನೆ. ಈಗ ಆಹಾರ ಮತ್ತು ನಾಗರೀಕ ಪೂರೈಕೆ ಖಾತೆ ನೀಡಿದ್ದಾರೆ. ಸರ್ಕಾರಕ್ಕೆ ಒಳ್ಳೆ ಹೆಸರು ತರುವ ನಿಟ್ಟಿನಲ್ಲಿ ಕೆಲಸ ಮಾಡೋಣ ಎಂದು ಹೇಳಿದರು.
ಇನ್ನೂ ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯದ ಕೂಗಿನ ಬಗ್ಗೆ ಪ್ರತಿಕ್ರಿಯಿಸಿ, ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯದ ಕೂಗು ಹಿಂದೆ ಇತ್ತು, ಈಗಲೂ ಇದೆ. ಮುಂದಕ್ಕೂ ಇರಲಿದೆ ಅಂತಾ ಮುಗಿಯದ ಕಗ್ಗಂಟು ಎಂಬ ಅರ್ಥದಲ್ಲಿ ಹೇಳಿ ನಡೆದರು.