ಬೆಳಗಾವಿ: ವಾಕರಸಾ ಸಂಸ್ಥೆ ವ್ಯಾಪ್ತಿಯ 6 ಕಂದಾಯ ಜಿಲ್ಲೆಗಳ ಒಟ್ಟು 118 ಅಪಘಾತ ಕಪ್ಪು ಸ್ಥಳಗಳ(ಬ್ಲಾೃಕ್‌ಸ್ಪಾಟ್) ಕುರಿತು ಅಲ್ಪಾವಧಿ ಮತ್ತು ದೀರ್ಘಾವಧಿ ಕಾರ್ಯಯೋಜನೆ ರೂಪಿಸಿ ಅವಶ್ಯಕ ಸುಧಾರಣಾ ಕ್ರಮಗಳನ್ನು ಲೋಕೋಪಯೋಗಿ ಇಲಾಖೆಯಿಂದ ಕೈಗೊಳ್ಳುವಂತೆ ಸಚಿವ ಸತೀಶ ಜಾರಕಿಹೊಳಿ ಅಧಿಕಾರಿಗಳಿಗೆ ಸೂಚಿಸಿದರು.
ವಾಕರಸಾ ಸಂಸ್ಥೆಯಿಂದ ಗುರುತಿಸಲಾದ ಅಪಘಾತ ಕಪ್ಪು ಸ್ಥಳ/ವಲಯಗಳ ಕುರಿತು ನಗರದ ಲೋಕೋಪಯೋಗಿ ಇಲಾಖೆಯ ಅಧೀಕ್ಷಕ ಇಂಜಿನಿಯರ್ ಕಚೇರಿಯಲ್ಲಿ ಬುಧವಾರ ಜರುಗಿದ ಸಭೆಯಲ್ಲಿ ಬ್ಲಾೃಕ್ ಸ್ಪಾಟ್ ಕುರಿತಾದ ವರದಿಯನ್ನು ಪರಿಶೀಲಿಸಿದ ಬಳಿಕ ಮಾತನಾಡಿದ ಅವರು, ರಾಷ್ಟ್ರೀಯ ಹೆದ್ದಾರಿಗಳಲ್ಲಿರುವ ಅಪಘಾತ ವಲಯಗಳ ಕುರಿತ ಪ್ರತ್ಯೇಕವಾದ ವರದಿ ಸಿದ್ಧಪಡಿಸಬೇಕು. ಅದನ್ನು ಕೇಂದ್ರ ಹೆದ್ದಾರಿ ಮತ್ತು ಸಾರಿಗೆ ಸಚಿವಾಲಯಕ್ಕೆ ಪತ್ರ ಬರೆದು ಅಗತ್ಯ ಕ್ರಮ ಕೈಗೊಳ್ಳಲು ಕೋರಲಾಗುವುದು ಎಂದರು.
ಚಿಕ್ಕೋಡಿ ಉಪ-ವಿಭಾಗದ ಕಾಗವಾಡದಿಂದ ಗೋಟೂರವರೆಗಿನ ಹೊಸ ಹೆದ್ದಾರಿಯಲ್ಲಿ ಸಾರ್ವಜನಿಕರ ಉಪಯೋಗ ಹಾಗೂ ಸಾರಿಗೆ ಸಂಸ್ಥೆ ಬಸ್‌ಗಳ ಸುರಕ್ಷಿತ ನಿಲುಗಡೆಗಾಗಿ ಅಭಿವೃದ್ದಿ ಕ್ರಮ ಕೈಗೊಳ್ಳುವ ಕುರಿತು ಜಂಟಿ ಪುನರ್ ಸಮೀಕ್ಷೆ ಕಾರ್ಯ ಕೈಗೊಳ್ಳಬೇಕು. ಸಂಸ್ಥೆಯ ವ್ಯಾಪ್ತಿಯಲ್ಲಿ ಲಭ್ಯವಿರುವ ಸ್ಥಳಗಳಲ್ಲಿ ಹೊಸ ಬಸ್-ಬೇ, ಬಸ್ ಶೆಲ್ಟರ್ ಹಾಗೂ ಜಂಕ್ಷನ್ ಮಾಡಲು ಕ್ರಮ ಕೈಗೊಳ್ಳಲಾಗುವುದು. ಹಳ್ಳಿ ವ್ಯಾಪ್ತಿಯ ಕೂಡು ರಸ್ತೆಯ ವೃತ್ತಗಳಲ್ಲಿ ಚಾಲಕರಿಗೆ ಅನುಕೂಲವಾಗುವಂತೆ, ಸೋಲಾರ ಲೈಟ್, ಪ್ಲಾಶ್ ಲೈಟ್ ಗಳನ್ನು ಅಳವಡಿಸುವ ಬಗ್ಗೆ ಪರಿಶೀಲಿಸಿ ಕ್ರಮ ವಹಿಸಬೇಕು ಎಂದು ಸೂಚಿಸಿದರು.
ಇಡೀ ದೇಶದಲ್ಲೇ ಬೆಳಗಾವಿ ಜಿಲ್ಲೆ ಒಟ್ಟು ಅಪಘಾತಗಳ ಸಂಖ್ಯೆಯಲ್ಲಿ ಉನ್ನತ ಸ್ಥಾನದಲ್ಲಿರುವುದು ಖೇದಕರ ಸಂಗತಿ. ಪ್ರಸ್ತುತ ವಾಕರಸಾ ಸಂಸ್ಥೆಯಿಂದ ಸಲ್ಲಿಕೆಯಾಗಿರುವ ಅಲ್ಪಾವಧಿಯ ಹಾಗೂ ದೀರ್ಘಾವಧಿಯ ಶಿಫಾರಸ್ಸುಗಳನ್ವಯ ಅಗತ್ಯ ಪರಿಹಾರ ಕ್ರಮಗಳನ್ನು ಕೈಗೊಂಡಲ್ಲಿ ಘಟಿಸುತ್ತಿರುವ ಹೆಚ್ಚಿನ ಅಪಘಾತಗಳನ್ನು ಕಡಿಮೆಗೊಳಿಸಲು ಸಹಕಾರಿಯಾಗುತ್ತದೆ. ಇದೇ ರೀತಿ ಪರಿಶೀಲನಾ ಸಭೆಯನ್ನು ಜಿಲ್ಲಾವಾರು ಆಯೋಜಿಸಿ ಎರಡು ಇಲಾಖೆಗಳ ಮಾಹಿತಿಯನ್ನು ಹಂಚಿಕೊಳ್ಳಲು ಹಾಗೂ ಪರಿಹಾರ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಸಂಸ್ಥೆ ಅಧ್ಯಕ್ಷ ಸುನೀಲ್ ಹಣಮನ್ನವರ, ವ್ಯವಸ್ಥಾಪಕ ನಿರ್ದೇಶಕಿ ಪ್ರಿಯಾಂಗಾ ಎಂ, ಮುಖ್ಯ ಭದ್ರತಾ ಮತ್ತು ಜಾಗೃತಾಧಿಕಾರಿ ಗಣೇಶ ರಾಥೋಡ, ಲೋಕೋಪಯೋಗಿ ಇಲಾಖೆಯ ಉತ್ತರ ವಲಯದ ಮುಖ್ಯ ಇಂಜಿನಿಯರ್ ಶಿವಾನಂದ ಆರ್. ನಾಯ್ಕ , ಜಿಲ್ಲಾ ವ್ಯಾಪ್ತಿಯ ಪಿಡಬ್ಲುೃಡಿ ಅಧೀಕ್ಷಕ ಇಂಜಿನಿಯರ್, ಕಾರ್ಯ ಪಾಲಕ ಇಂಜಿನಿಯರ್‌ಗಳಿದ್ದರು.
Laxmi News 24×7