Breaking News

ನಡೆದು ನಡೆದು ಸಾವನ್ನಪ್ಪಿದ್ದ ಮಹಿಳೆ-ಕುಟುಂಬಕ್ಕೆ 3 ಲಕ್ಷ ರೂ. ಪರಿಹಾರ

Spread the love

ರಾಯಚೂರು: ಕೊರೊನಾ ಲಾಕ್‍ಡೌನ್ ಹಿನ್ನೆಲೆ ಬಳ್ಳಾರಿಯಲ್ಲಿ ಸಾವನ್ನಪ್ಪಿದ್ದ ರಾಯಚೂರಿನ ಸಿಂಧನೂರಿನ ಕಟ್ಟಡ ಕಾರ್ಮಿಕ ಮಹಿಳೆ ಗಂಗಮ್ಮ ಕುಟುಂಬಕ್ಕೆ ಕೊನೆಗೂ ಕಾರ್ಮಿಕ ಕಲ್ಯಾಣ ಮಂಡಳಿ ಪರಿಹಾರ ನೀಡಿದೆ.

ಗಂಗಮ್ಮನ ಇಬ್ಬರು ಮಕ್ಕಳ ಹೆಸರಲ್ಲಿ ತಲಾ 1 ಲಕ್ಷ 50 ಸಾವಿರದಂತೆ ಮೂರು ಲಕ್ಷ ರೂಪಾಯಿಯ ಎರಡು ಭದ್ರತಾ ಠೇವಣಿಯ ಬಾಂಡ್‍ಗಳನ್ನು ನೀಡಲಾಗಿದೆ. ಎರಡು ವರ್ಷದ ಅವಧಿಯ ಎರಡು ಬಾಂಡ್‍ಗಳನ್ನು ನೀಡುವ ಮೂಲಕ ಮಂಡಳಿ ಮಕ್ಕಳ ಸಹಾಯಕ್ಕೆ ಮುಂದಾಗಿದೆ.

ಗಂಗಮ್ಮ ಮಂಡಳಿಯ ನೋಂದಾಯಿತ ಕಾರ್ಮಿಕಳಲ್ಲವಾಗಿದ್ದರಿಂದ 5 ಲಕ್ಷ ರೂಪಾಯಿ ಬದಲಾಗಿ ಕೇವಲ 3 ಲಕ್ಷ ಮಾತ್ರ ಪರಿಹಾರ ಬಂದಿದೆ. ವಿಶೇಷ ಪ್ರಕರಣವೆಂದು ಪರಿಗಣಿಸಿ ಗಂಗಮ್ಮಳ ಮಕ್ಕಳಾದ ಪ್ರೀತಿ ಹಾಗೂ ಮಂಜುನಾಥ್‍ಗೆ ಪರಿಹಾರ ನೀಡಲಾಗಿದೆ. ಬೆಂಗಳೂರಿನಲ್ಲಿ ಕಟ್ಟಡ ಕೆಲಸದಲ್ಲಿ ತೊಡಗಿದ್ದ ಗಂಗಮ್ಮ ಲಾಕ್‍ಡೌನ್ ನಿಂದ ವಾಪಸ್ ಬರುತ್ತಿದ್ದರು. ಮರಳಿ ಬರಲು ವಾಹನ ವ್ಯವಸ್ಥೆಯಿಲ್ಲದೆ ಕಾಲ್ನಡಿಗೆಯಲ್ಲಿ ಬಂದು ಬಳ್ಳಾರಿಯಲ್ಲಿ ಅನಾರೋಗ್ಯಕ್ಕೆ ತುತ್ತಾಗಿ ವಿಮ್ಸ್ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದರು.

ತಾಯಿಯನ್ನೇ ಅವಲಂಬಿಸಿದ್ದ ಇಬ್ಬರು ಮಕ್ಕಳು ತಬ್ಬಲಿಗಳಾಗಿದ್ದಾರೆ. ಕೊನೆಗೂ ಮಂಡಳಿ ಸಹಾಯಕ್ಕೆ ಮುಂದಾಗಿದ್ದು, ಸಿಂಧನೂರು ತಹಶೀಲ್ದಾರ್ ಇಬ್ಬರು ಮಕ್ಕಳಿಗೆ ತಲಾ ಒಂದೂವರೆ ಲಕ್ಷದ ಬಾಂಡ್ ನೀಡಿದ್ದಾರೆ.


Spread the love

About Laxminews 24x7

Check Also

ಬೆಮುಲ್ ಗೆ ಬಂದ 13 ಕೋಟಿ ರೂಪಾಯಿ ಲಾಭದಲ್ಲಿ ಹೈನುಗಾರ ರೈತರಿಗೆ ವಿವಿಧ ಸೌಲಭ್ಯಗಳಿಗಾಗಿ 10 ಕೋಟಿ ರೂಪಾಯಿ ಮೀಸಲು- ಬೆಮುಲ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ

Spread the loveಬೆಮುಲ್ ಗೆ ಬಂದ 13 ಕೋಟಿ ರೂಪಾಯಿ ಲಾಭದಲ್ಲಿ ಹೈನುಗಾರ ರೈತರಿಗೆ ವಿವಿಧ ಸೌಲಭ್ಯಗಳಿಗಾಗಿ 10 ಕೋಟಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ