ಹಾವೇರಿ: ರಾಜ್ಯದ ಜನತೆಗೆ ನಾನು ಮುಖ್ಯಮಂತ್ರಿ, ಕ್ಷೇತ್ರದ ಒಳಗಡೆ ಬಸವರಾಜ ಬೊಮ್ಮಾಯಿ ಮಾತ್ರ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾವೇರಿಯ ಜನತೆಯಲ್ಲಿ ಹೇಳಿದ್ದಾರೆ. ಹಾವೇರಿ ಜಿಲ್ಲೆಯಲ್ಲಿ ವಿವಿಧ ಕಾಮಗಾರಿಗಳ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಅವರು ನಮ್ಮ ಸಚಿವ ಸಂಪುಟದಲ್ಲಿರುವ ಸಚಿವರು ಪ್ರತಿಭಾವಂತರಿದ್ದಾರೆ. ಕಾರ್ಯಕ್ಷಮತೆಯಿಂದ ಕೆಲಸ ಮಾಡುವ ಸಾಮರ್ಥ್ಯವನ್ನು ಹೊಂದಿದ್ದಾರೆ. ಹೀಗಾಗಿ ರಾಜ್ಯದ ಜನತೆಗೆ ಉತ್ತಮ ಕಾರ್ಯಕ್ರಮಗಳನ್ನು ಕೊಡಲು ಸಾಧ್ಯವಾಗುತ್ತಿದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು. ಶಿಗ್ಗಾವಿ ವಿಧಾನಸಭಾ ಕ್ಷೇತ್ರದ ತಡಸ ಗ್ರಾಮದಲ್ಲಿ …
Read More »ತೂಕದ ಅಡ್ಜೆಸ್ಟ್ಮೆಂಟ್ ನಲ್ಲಿ ವಂಚನೆ : 7 ಅಂಗಡಿಗಳಿಗೆ ನೋಟಿಸ್, ಮೂವರು ಅರೆಸ್ಟ್ !
ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿಗೆ ಹೈಟೆಕ್ ವಂಚನೆ ಎಂಟ್ರಿ ಕೊಟ್ಟಿದ್ದು ಕಣ್ಣಿಗೆ ಕಾಣುವಂತೆ ನಡೆದರೂ ಜನರು ಇದರಿಂದ ಮೋಸ ಹೋಗುತ್ತಿದ್ದಾರೆ. ತೂಕದ ಯಂತ್ರಕ್ಕೆ ಟೆಕ್ನಾಲಜಿ ಬಳಸಿಕೊಂಡು ಸಾರ್ವಜನಿಕರಿಗೆ ಮೋಸ ಮಾಡಲು ಹೊರಟಿದ್ದ ಹಲವು ಅಂಗಡಿಗಳ ಮಾಲೀಕರಿಗೆ ಪೊಲೀಸರು ನೋಟೀಸ್ ನೀಡಿದ್ದಾರೆ. ಹಾಗೂ ಮೂವರನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ರಾಜಗೋಪಾಲನಗರ ಪೊಲೀಸರು ಕಾರ್ಯಾಚರಣೆ ನಡೆಸಿ ಜನರನ್ನು ಮೋಸ ಮಾಡುವ ಅಂಗಡಿಗಳ ಅಸಲಿ ಸತ್ಯ ಬಯಲು ಮಾಡಿದ್ದಾರೆ. ಮಾಂಸ, ತರಾಕಾರಿ ಸೇರಿದಂತೆ ಹಲವು ಅಂಗಡಿಗಳಲ್ಲಿ …
Read More »ಮೈಸೂರು ಅತ್ಯಾಚಾರ ಪ್ರಕರಣ: ಪೊಲೀಸರನ್ನೇ ಇರಿಯಲು ಮುನ್ನುಗ್ಗಿದ್ದ ಆರೋಪಿ!
ಮೈಸೂರು: ಸಾಮೂಹಿಕ ಅತ್ಯಾಚಾರದ ಆರೋಪಿಯು ಚಾಕುವಿನಿಂದ ಪೊಲೀಸರನ್ನೇ ಇರಿಯಲು ಮುನ್ನುಗ್ಗಿದ್ದ! ತಮಿಳುನಾಡಿನ ತಿರ್‌ಪೂರ್ ಜಿಲ್ಲೆಯ ಮನೆಯಲ್ಲಿದ್ದ ಆತನನ್ನು ಬಂಧಿಸಲು ತೆರಳಿದ್ದ ಪೊಲೀಸರು ಸ್ವಲ್ಪ ಯಾಮಾರಿದ್ದರೂ ಮಾರಣಾಂತಿಕ ಹಲ್ಲೆಗೆ ಗುರಿಯಾಗುತ್ತಿದ್ದ ಅಪಾಯಕಾರಿ ಸನ್ನಿವೇಶವೂ ನಿರ್ಮಾಣವಾಗಿತ್ತು. ‘ಖಚಿತ ಮಾಹಿತಿ ಮೇರೆಗೆ ಆ.28ರಂದು ರಾತ್ರಿ 1 ಗಂಟೆಯಲ್ಲಿ ಕೇವೂರು ಗ್ರಾಮದ ತೋಟವೊಂದರಲ್ಲಿ ಆರೋಪಿಯ ಮನೆ ಸೇರಿದಂತೆ ಅಲ್ಲಿದ್ದ 10ರಿಂದ 12 ಮನೆಗಳ ಶೋಧ ಕಾರ್ಯ ನಡೆದಿತ್ತು. ಆ ವೇಳೆಯಲ್ಲೇ ಆರೋಪಿ ಕುಟುಂಬದವರ ಜತೆ ಇರದೆ …
Read More »ಪಿಡಿಒನನ್ನು ಹೊರದಬ್ಬಿ ಪಂಚಾಯಿತಿ ಕಚೇರಿಗೆ ಬೀಗ ಜಡಿದ ಗ್ರಾಪಂ ಸದಸ್ಯರು!
ಚಿಕ್ಕಬಳ್ಳಾಪುರ: ಪಿಡಿಒ ಅವರನ್ನು ಹೊರಗೆ ಹಾಕಿ ಗ್ರಾಮ ಪಂಚಾಯಿತಿ ಕಚೇರಿಗೆ ಸದಸ್ಯರು ಬೀಗ ಜಡಿದ ಘಟನೆ ಗುಡಿಬಂಡೆ ತಾಲೂಕು ವರ್ಲಕೊಂಡ ಗ್ರಾಮದಲ್ಲಿ ಸಂಭವಿಸಿದೆ. ಪಂಚಾಯಿತಿ ಕಾರ್ಯಾಲಯಕ್ಕೆ ಪಿಡಿಒ ಶ್ರೀನಿವಾಸ್ ಸರಿಯಾಗಿ ಬರುತ್ತಿಲ್ಲ, ಅಭಿವೃದ್ಧಿಗೆ ಸರಿಯಾಗಿ ಸ್ಪಂದಿಸುತ್ತಿಲ್ಲ. ಅಕ್ರಮ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದಾರೆ ಎಂದು ಆರೋಪಿಸಿ ಗ್ರಾಪಂ ಸದಸ್ಯರು ಅಧ್ಯಕ್ಷೆ ಆನಂದಮ್ಮ ನಾರಾಯಣಸ್ವಾಮಿ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದರು. ಪಿಡಿಒ ಶ್ರೀನಿವಾಸ್ ಅವರನ್ನ ವರ್ಗಾವಣೆ ಮಾಡುವಂತೆ ಜಿಪಂ ಸಿಇಒ ಸೇರಿದಂತೆ ಮೇಲಧಿಕಾರಿಗಳಿಗೆ ಜನಪತ್ರಿನಿಧಿಗಳು ದೂರು ನೀಡಿದ್ದರು. ಆದರೂ …
Read More »JDS ಜೊತೆಗೆ ಚುನಾವಣಾ ಮೈತ್ರಿ; ನಿಲುವು ಪ್ರಕಟಿಸಿದ BJP ಹೈಕಮಾಂಡ್!
ಬೆಂಗಳೂರು, ಸೆ. 01: ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಉದ್ದೇಶಿತ ರಾಜ್ಯ ಪ್ರವಾಸ ಬಿಜೆಪಿಯಲ್ಲಿ ಚರ್ಚೆ ಹುಟ್ಟುಹಾಕಿದೆ. ಅವರು ಮಾಡುವ ಪ್ರವಾಸದಿಂದ ಪಕ್ಷದ ಮೇಲೆ ಯಾವ ರೀತಿ ಪ್ರಭಾವ ಆಗಬಹುದು ಎಂಬುದನ್ನು ಹೈಕಮಾಂಡ್ ಗಮನಿಸುತ್ತಿದೆ ಎನ್ನಲಾಗಿದೆ. ಇದೇ ವಿಚಾರಕ್ಕೆ ಸಂಬಂಧಿಸಿದಂತೆ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಮೈಸೂರಿನಲ್ಲಿ ಮಹತ್ವದ ಪ್ರತಿಕ್ರಿಯೆ ಕೊಟ್ಟಿದ್ದಾರೆ. ನಾಲ್ಕು ದಿನಗಳ ರಾಜ್ಯ ಪ್ರವಚಾಸದಲ್ಲಿರುವ ಅರುಣ್ ಸಿಂಗ್ ಇನ್ನೂ ಮಾಜಿ ಸಿಎಂ ಯಡಿಯೂರಪ್ಪ ಅವರನ್ನು ಭೇಟಿ …
Read More »ಅರಣ್‌ಸಿಂಗ್ ರಾಜ್ಯಕ್ಕೆ ಬರೋದೇ ದುಡ್ಡು ವಸೂಲಿ ಮಾಡೋದಕ್ಕೆ : ಹೆಚ್.ಡಿ.ಕೆ ವಾಗ್ದಾಳಿ
ಮೈಸೂರು : ರಾಜ್ಯ ಬಿಜೆಪಿ ಉಸ್ತುವಾರಿ ಸಚಿವ ಅರುಣ್ ಸಿಂಗ್ ರಾಜ್ಯಕ್ಕೆ ಬರುವುದು ಕೇವಲ ದುಡ್ಡು ವಸೂಲಿ ಮಾಡುವುದಕ್ಕಾಗಿ ಅದು ಬಿಟ್ಟರೆ ಅವರಿಗೆ ಬೇರೇನೂ ಗೊತ್ತಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅರುಣ್ ಸಿಂಗ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಮೈಸೂರಿನಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು ಜೆಡಿಎಸ್ ಮುಳುಗುತ್ತಿರುವ ಹಡಗು ಎಂದು ಹೇಳಿಕೆ ನೀಡಿದ ಅರುಣ್ ಸಿಂಗ್ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು ಕರ್ನಾಟಕ ಹಾಗೂ ಇಲ್ಲಿನ ಸ್ಥಳೀಯ ಪಕ್ಷದ ಬಗ್ಗೆ ಆತನಿಗೆ …
Read More »ಮಹಾನ್ ನಾಯಕರ ಪುತ್ಥಳಿಗಳನ್ನು ತೆರವು ಮಾಡಲು BBMPಯಿಂದ ತಯಾರಿ
ಬೆಂಗಳೂರು :ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಬಿಬಿಎಂಪಿಯಿಂದ ಅನುಮತಿ ಪಡೆಯದೇ ಅಭಿಮಾನಿಗಳು ನಿರ್ಮಿಸಿದ ರಾಜ್ ಕುಮಾರ್, ಶಂಕರ್ ನಾಗ್, ವಿಷ್ಣುವರ್ಧನ್, ಬಸವಣ್ಣ ಸೇರಿದಂತೆ ಮಹಾನ್ ನಾಯಕರ ಪುತ್ಥಳಿಗಳನ್ನು ಶೀಘ್ರದಲ್ಲೇ ತೆರವು ಮಾಡಲು ಬಿಬಿಎಂಪಿ ನಿರ್ಧರಿಸಿದೆ. ಸಿನಿ ಪ್ರೇಮಿಗಳು ತಮಗೆ ಇಷ್ಟವಾದ ನೆಚ್ಚಿನ ನಟರ ಸಂಘಗಳನ್ನು, ಬಳಗಗಳನ್ನು ಮಾಡಿಕೊಂಡು ಏರಿಯಾದಲ್ಲಿ ಪುತ್ಥಳಿಗಳನ್ನು ನಿರ್ಮಿಸಿರುತ್ತಾರೆ. ಅಂತವರ ಕನಸಿನ ಪುತ್ಥಳಿಯ ತೆರವು ಕಾರ್ಯಾಚರಣೆಗೆ ಬಿಬಿಎಂಪಿ ಮುಂದಾಗಿದೆ. ಅಭಿಮಾನಿಗಳು ಅನಧಿಕೃತವಾಗಿ ನಗರದಲ್ಲಿ ಪುತ್ಥಳಿ ಸ್ಥಾಪನೆ ಮಾಡಿದ್ದಾರೆ. ಅವರು ಬಿಬಿಎಂಪಿಯಿಂದ …
Read More »ನ.1ರಿಂದ ಆಡಳಿತ ಸುಧಾರಣೆ ಜಾರಿ: ಬಸವರಾಜ ಬೊಮ್ಮಾಯಿ
ಬೆಂಗಳೂರು: ಟಿ.ಎಂ. ವಿಜಯ ಭಾಸ್ಕರ್ ನೇತೃತ್ವದ ಆಡಳಿತ ಸುಧಾರಣಾ ಆಯೋಗದ ಮೊದಲ ವರದಿಯಲ್ಲಿನ ಶಿಫಾರಸುಗಳನ್ನು ನವೆಂಬರ್ 1ರಿಂದ ಅನುಷ್ಠಾನಕ್ಕೆ ತರಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ಕೆಡಿಪಿ ಪ್ರಗತಿ ಪರಿಶೀಲನಾ ಸಭೆಯ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಅವರು, ‘ಆಡಳಿತ ಸುಧಾರಣಾ ಆಯೋಗದ ಶಿಫಾರಸುಗಳ ಅನುಷ್ಠಾನಕ್ಕಾಗಿ ಸಲಹಾ ಸಮಿತಿ ರಚಿಸಲಾಗುವುದು. ಸಮಿತಿಯ ಸಲಹೆಗಳ ಆಧಾರದಲ್ಲಿ ನ.1ರಿಂದಲೇ ಅನುಷ್ಠಾನಕ್ಕೆ ಚಾಲನೆ ನೀಡಲಾಗುವುದು’ ಎಂದರು. ವಿವಿಧ ಇಲಾಖೆಗಳಿಗೆ ಸಂಬಂಧಿಸಿದಂತೆ ನ್ಯಾಯಾಲಯಗಳಲ್ಲಿ ಬಾಕಿ ಇರುವ ಪ್ರಕರಣಗಳ …
Read More »ಮಹಾನಗರ ಪಾಲಿಕೆ, ಸ್ಥಳೀಯ ಸಂಸ್ಥೆ ಚುನಾವಣೆ; ಎಲ್ಲೆಲ್ಲಿ ರಜೆ?
ಬೆಂಗಳೂರು, ಆಗಸ್ಟ್ 31; ಕರ್ನಾಟಕ ರಾಜ್ಯ ಚುನಾವಣಾ ಆಯೋಗ ಮಹಾನಗರ ಪಾಲಿಕೆ, ನಗರ ಸ್ಥಳೀಯ ಸಂಸ್ಥೆ ಹಾಗೂ ಪಟ್ಟಣ ಪಂಚಾಯಿತಿಗಳ ಚುನಾವಣೆ ಘೋಷಣೆ ಮಾಡಿದೆ. ಸೆಪ್ಟೆಂಬರ್ 3ರ ಶುಕ್ರವಾರ ಮತದಾನ ನಡೆಯಲಿದೆ. ಮತದಾನ ನಡೆಯುವ ಪ್ರದೇಶಗಳಲ್ಲಿ ಮತದಾನ ಮಾಡಲು ಅನುಕೂಲವಾಗುವಂತೆ ಎಲ್ಲಾ ಸರ್ಕಾರಿ ಕಚೇರಿಗಳು, ಶಾಲಾ-ಕಾಲೇಜುಗಳು, ಅನುದಾನಿತ ಶಿಕ್ಷಣ ಸಂಸ್ಥೆಗಳು, ಸರ್ಕಾರಿ ಸ್ವಾಮ್ಯದ ಸಂಸ್ಥೆಗಳಿಗೆ ಸೆಪ್ಟೆಂಬರ್ 3ರಂದು ಸಾರ್ವತ್ರಿಕ ರಜೆ ಘೋಷಣೆ ಮಾಡಲಾಗಿದೆ. ಚುನಾವಣೆ ನಡೆಯುವ ವಾರ್ಡ್‌ನ ವ್ಯಾಪ್ತಿಯಲ್ಲಿರುವ ಎಲ್ಲಾ ಸಾರ್ವಜನಿಕ …
Read More »ವ್ಯಾಕ್ಸಿನ್ ಪಡೆಯದಿದ್ದರೆ ರೇಷನ್ ಕೊಡಲ್ಲ ಅನ್ನೋದು ತಪ್ಪು : ಸಿಎಂ ಬಸವರಾಜ ಬೊಮ್ಮಾಯಿ
ಹಾವೇರಿ : ರಾಜ್ಯದಲ್ಲಿ ಕೊರೊನಾ ಲಸಿಕೆ ಪಡೆಯದವರಿಗೆ ರೇಷನ್ ಕೊಡಲ್ಲ ಎಂಬುದರ ಕುರಿತಂತೆ ಸಿಎಂ ಬಸವರಾಜ ಬೊಮ್ಮಾಯಿ ಪ್ರತಿಕ್ರಿಯೆ ನೀಡಿದ್ದು, ವ್ಯಾಕ್ಸಿನ್ ಪಡೆಯದಿದ್ದರೆ ರೇಷನ್ ಕೊಡಲ್ಲ ಅನ್ನೋದು ತಪ್ಪು ಎಂದು ಹೇಳಿದ್ದಾರೆ. ಹಾವೇರಿ ಜಿಲ್ಲೆಯ ಶಿಗ್ಗಾಂವಿ ತಾಲೂಕಿನ ಬಾಡ ಗ್ರಾಮದಲ್ಲಿ ಮಾತನಾಡಿದ ಸಿಎಂ ಬೊಮ್ಮಾಯಿ, ಕೊರೊನಾ ಲಸಿಕೆ ಪಡೆಯದಿದ್ದರೆ ರೇಷನ್ ಕೊಡಲ್ಲ ಅನ್ನೋದು ತಪ್ಪು, ಜನರ ಮನವೊಲಿಸಿ ಕೋವಿಡ್ ವ್ಯಾಕ್ಸಿನ್ ಹಾಕಿಸಬೇಕು ಎಂದು ಹೇಳಿದ್ದಾರೆ. ಇನ್ನು ಚಾಮರಾಜನಗರ ಜಿಲ್ಲೆಯಲ್ಲಿ ಕೊರೊನಾ …
Read More »
Laxmi News 24×7