Breaking News

ಖಾಲಿ ಜಾಗಗಳೇ ಇವರ ಟಾರ್ಗೆಟ್​; 600 ಕೋಟಿ ರೂ. ಮೌಲ್ಯದ ಆಸ್ತಿ ಕಬಳಿಸಿದ ಭೂಗಳ್ಳರ ಜಾಲ ಭೇದಿಸಿದ ಸಿಐಡಿ

ಬೆಂಗಳೂರು: ರಾಜಧಾನಿ ಅಥವಾ ಸುತ್ತಮುತ್ತ ನಿಮ್ಮ ಖಾಲಿ ಜಾಗ ಇದ್ದು ದೀರ್ಘ ಸಮಯದಿಂದ ಆ ಕಡೆ ಹೋಗಿರದಿದ್ದರೆ ಒಮ್ಮೆ ನೋಡಿಕೊಂಡು ಬನ್ನಿ. ಏಕೆಂದರೆ ವಾರಸುದಾರರು ಸುಳಿಯದ ಖಾಲಿ ಜಾಗಗಳನ್ನು ಗುರುತಿಸಿ ಅವುಗಳನ್ನು ಕಬಳಿಸುವ ಭೂಗಳ್ಳರ ಜಾಲವೊಂದಿದೆ. ಹೀಗೆ ಕೋಟ್ಯಂತರ ರೂಪಾಯಿ ಮೌಲ್ಯದ ಆಸ್ತಿಯನ್ನು ಕಬಳಿಸಿರುವ ಭೂಗಳ್ಳರ ಜಾಲವೊಂದನ್ನು ಸಿಐಡಿ ಪೊಲೀಸರು ಭೇದಿಸಿದ್ದಾರೆ. ಕಂಪನಿಯೊಂದರ ಜಾಗವನ್ನು ಕಬಳಿಸಲು ಯತ್ನಿಸಿದ್ದ ಪ್ರಕರಣವನ್ನು ಭೇದಿಸಿರುವ ಸಿಐಡಿ ಪೊಲೀಸರು, ಭೂಗಳ್ಳರ ಜತೆ ಕೈಜೋಡಿಸಿದ್ದ ನಾಲ್ವರು ವಕೀಲರನ್ನೂ …

Read More »

ಆಸ್ತಿ ಗಳಿಕೆ ವಿಚಾರವಾಗಿ ಐಟಿ ಬದಲು ಇಡಿ ತನಿಖೆ ಆಶ್ಚರ್ಯ ಮೂಡಿಸಿದೆ: ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್

ಬೆಂಗಳೂರು: ‘ಇಡಿ ಅಧಿಕಾರಿಗಳು ಐಎಂಎ ವಿಚಾರಕ್ಕೆ ದಾಳಿ ಮಾಡಿಲ್ಲ, ಆಸ್ತಿ ವಿಚಾರವಾಗಿ ದಾಳಿ ಮಾಡಿದ್ದಾರೆ ಎಂದು ನಮ್ಮ ಶಾಸಕರಾದ ಜಮೀರ್ ಅಹಮದ್ ಹೇಳಿದ್ದಾರೆ. ಆಸ್ತಿ ಗಳಿಕೆ ವಿಚಾರವಾಗಿ ಆದಾಯ ಇಲಾಖೆ (IT) ಬದಲು ಜಾರಿ ನಿರ್ದೇಶನಾಲಯ (ED) ದಾಳಿ ಮಾಡಿರುವುದು ಅಚ್ಚರಿ ಮೂಡಿಸಿದೆ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ (DK Shivakumar) ಹೇಳಿದ್ದಾರೆ. ಸದಾಶಿವನಗರದ ತಮ್ಮ ನಿವಾಸದ ಬಳಿ ಶುಕ್ರವಾರ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ಈ ದಾಳಿಗೂ …

Read More »

ಜಿಲ್ಲೆಯಲ್ಲಿ ಪ್ರವಾಹದಿಂದ 7,800 ಕೋಟಿ ರೂಪಾಯಿ ಹಾನಿ: ವಿವರ ನೀಡಿದ ಗೋವಿಂದ ಕಾರಜೋಳ

ಬೆಳಗಾವಿ: ಜಿಲ್ಲೆಯಲ್ಲಿ ಪ್ರಸಕ್ತ ವರ್ಷ ಪ್ರವಾಹದಿಂದ 7800 ಕೋಟಿ ರೂಪಾಯಿ ಹಾನಿ ಆಗಿದೆ ಎಂದು ನೆರೆಪರಿಹಾರ ಕಾಮಗಾರಿ, ಕೊವಿಡ್ ನಿರ್ವಹಣೆ ಪರಿಶೀಲನೆ ಸಭೆ ಬಳಿಕ ಇಂದು (ಆಗಸ್ಟ್ 6) ಸಚಿವ ಗೋವಿಂದ ಕಾರಜೋಳ ಹೇಳಿಕೆ ನೀಡಿದ್ದಾರೆ. ಈ ಬಾರಿ 51 ಕಾಳಜಿ ಕೇಂದ್ರಗಳಲ್ಲಿ 38 ಸಾವಿರ ಜನ ಆಶ್ರಯ ಪಡೆದಿದ್ದಾರೆ. ನೆರೆ ಸಂತ್ರಸ್ತರಿಗೆ ಕಾಳಜಿ ಕೇಂದ್ರದಲ್ಲಿ ಜನರು, ಜಾನುವಾರುಗಳಿಗೆ ಎಲ್ಲಾ ರೀತಿಯ ವ್ಯವಸ್ಥೆ ಮಾಡಲಾಗಿದೆ. ಇನ್ನೂ ಎಂಟು ಹತ್ತು ದಿನ …

Read More »

ಸಿಸಿಬಿ ಪೊಲೀಸರ ಭರ್ಜರಿ ಕಾರ್ಯಾಚರಣೆ; ವಿದೇಶಿ ಪ್ರಜೆ ಸೇರಿ ನಾಲ್ವರು ಬಂಧನ, ₹6 ಕೋಟಿ ಮೌಲ್ಯದ ಡ್ರಗ್ಸ್​ ವಶ

ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಸಿಸಿಬಿ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದಾರೆ. ಪೊಲೀಸರು ಭರ್ಜರಿ ಕಾರ್ಯಾಚರಣೆಯಲ್ಲಿ ಸುಮಾರು 6 ಕೋಟಿ ರೂಪಾಯಿ ಮೌಲ್ಯದ ಡ್ರಗ್ಸ್​ ವಶಕ್ಕೆ ಪಡೆದಿದ್ದಾರೆ. ಇನ್ನು, ಪ್ರಕರಣ ಸಂಬಂಧ ಸಿಸಿಬಿ ಪೊಲೀಸರು ವಿದೇಶಿ ಪ್ರಜೆ ಸೇರಿ ನಾಲ್ವರನ್ನು ಬಂಧಿಸಿದ್ದಾರೆ. 15 ಕೆಜಿ ಹಶೀಶ್ ಎಣ್ಣೆ, 10 ಕೆಜಿ ಗಾಂಜಾ, ಎಕ್ಸ್​​ಟಸಿ ಮಾತ್ರೆ ಜಪ್ತಿ ಮಾಡಲಾಗಿದೆ. ಸುಮಾರು 2 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಕಿಂಗ್​​ ಪಿನ್​ ಈಗ ಸಿಸಿಬಿ ಪೊಲೀಸರ …

Read More »

ಕರ್ನಾಟಕ-ಮಹಾರಾಷ್ಟ್ರ ಜಲ ವಿವಾದ: ಮಾತುಕತೆ ಮೂಲಕ ಪರಿಹರಿಸಿಕೊಳ್ಳಲು ಪವಾರ್-ಬೊಮ್ಮಾಯಿ ಚರ್ಚೆ

ಬೆಂಗಳೂರು, ಆ. 6: ಮಹತ್ವದ ಬೆಳವಣಿಗೆಯೊಂದರಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಹಿರಿಯ ರಾಜಕೀಯ ಮುತ್ಸದ್ದಿ, ಮಹಾರಾಷ್ಟ್ರ ಮಾಜಿ ಮುಖ್ಯಮಂತ್ರಿ ಶರದ್ ಪವಾರ್ ಅವರು ಭೇಟಿ ಮಾಡಿ ಸಮಾಲೋಚನೆ ನಡೆಸಿರುವುದು ರಾಜಕೀಯ ಕುತೂಹಲಕ್ಕೆ ಕಾರಣವಾಗಿದೆ. ಶುಕ್ರವಾರ ಇಲ್ಲಿನ ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಉಭಯ ನಾಯಕರು ಭೇಟಿ ಮಾಡಿ ಸಮಾಲೋಚನೆ ನಡೆಸಿದ್ದಾರೆ. `ಕರ್ನಾಟಕ ರಾಜ್ಯ ಹಾಗೂ ಮಹಾರಾಷ್ಟ್ರ ರಾಜ್ಯಗಳ ನಡುವಿನ ನೀರು ಹಂಚಿಕೆ ವಿಷಯದ ಕುರಿತು ಇಬ್ಬರು ಮುಖಂಡರು ಸಮಾಲೋಚನೆ …

Read More »

ಆಗಸ್ಟ್ 23ರಿಂದ ಶಾಲಾ -ಕಾಲೇಜು ಆರಂಭ

ಬೆಂಗಳೂರು: ರಾಜ್ಯದಲ್ಲಿ ಶಾಲೆಗಳನ್ನು ಆರಂಭಿಸಲು ನಿರ್ಧರಿಸಲಾಗಿದ್ದು, ಆಗಸ್ಟ್ 23ರಿಂದ 9, 10 ಹಾಗೂ ಪಿಯುಸಿ ತರಗತಿಗಳನ್ನು ಪ್ರಾರಂಭಿಸಲು ತೀರ್ಮಾನಿಸಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಎಸ್. ಬೊಮ್ಮಾಯಿ ತಿಳಿಸಿದರು. ಸಿಎಂ ಅಧ್ಯಕ್ಷತೆಯಲ್ಲಿ ರಾಜ್ಯದಲ್ಲಿ ಕೋವಿಡ್‌ ನಿರ್ವಹಣೆ ಮತ್ತು ಶಾಲೆ ಕಾಲೇಜುಗಳನ್ನು ಪುನರಾರಂಭಿಸುವ ಕುರಿತು ಇಂದು ನಡೆದ ಉನ್ನತ ಮಟ್ಟದ ಸಭೆಯಲ್ಲಿ ತೀರ್ಮಾನಿಸಲಾಯಿತು. ಪ್ರಾಥಮಿಕ ಮತ್ತು ಪ್ರೌಢಶಾಲೆಗಳನ್ನು ಪುನರಾರಂಭಿಸುವ ಕುರಿತು ಮುಖ್ಯಮಂತ್ರಿ ಬಸವರಾಜ ಎಸ್. ಬೊಮ್ಮಾಯಿ ಅವರು ಸರ್ಕಾರದ ಹಿರಿಯ ಅಧಿಕಾರಿಗಳು ಹಾಗೂ …

Read More »

ಕೆಲಸ ಮಾಡುತ್ತಿದ್ದ ಅಂಗಡಿಯಿಂದಲೇ ಚಿನ್ನ ಕದ್ದು ಅಡವಿಟ್ಟ ಖದೀಮ ಈಗ ಪೊಲೀಸರ ಅತಿಥಿ

ಹುಣಸೂರು: ಐಷಾರಾಮಿ ಜೀವನಕ್ಕೆ ಮಾರು ಹೋಗಿದ್ದ ಯುವಕನೊರ್ವ ಕೆಲಸ ಮಾಡತ್ತಿದ್ದ ಚಿನ್ನಾಭರಣದ ಅಂಗಡಿಯಲ್ಲೇ ಚಿನ್ನಾಭರಣ ಕದ್ದು,ಅಡವಿಟ್ಟಿದ್ದ ಘಟನೆಯನ್ನು ಹುಣಸೂರು ನಗರ ಠಾಣೆ ಪೊಲೀಸರು ಭೇದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಹುಣಸೂರು ನಗರದ ಜೆಎಲ್‌ ಬಿ ರಸ್ತೆಯ ಪೃಥ್ವಿ ಜ್ಯುವಲರ್‍ಸ್ ಅಂಗಡಿಯಲ್ಲಿ ನಡೆದಿದ್ದು, ತಾಲೂಕಿನ ರತ್ನಪುರಿಯ ಶಿವರಾಮ್ ಎಂಬಾತನೇ ಅನ್ನ ಹಾಕಿದ ಮನೆಗೆ ಕನ್ನ ಹಾಕಿ ಬಂಧನಕ್ಕೊಳಗಾದಾತ. ಈತನಿಂದ ಸುಮಾರು 25 ಲಕ್ಷರೂ ಬೆಲೆ ಬಾಳುವ 503 ಗ್ರಾಂ.ಚಿನ್ನಾಭರಣ ವಶಪಡಿಸಿಕೊಳ್ಳಲಾಗಿದೆ. ಹುಣಸೂರು ತಾಲೂಕಿನ ರತ್ನಪುರಿ …

Read More »

ಪೊದೆಯಲ್ಲಿ ಬಚ್ಚಿಟ್ಟಿದ್ದ 146 ಚೀಲ ಅನ್ನಭಾಗ್ಯ ಅಕ್ಕಿ ವಶ

ಚಿತ್ರದುರ್ಗ: ರಾಂಪುರ ಪೊಲೀಸರು ಕಾರ್ಯಾಚರಣೆ ನಡೆಸಿ ಪೊದೆಯಲ್ಲಿ ಬಚ್ಚಿಟ್ಟಿದ್ದ 146 ಚೀಲ ಅನ್ನಭಾಗ್ಯದ ಅಕ್ಕಿಯನ್ನು ಜಪ್ತಿ ಮಾಡಿದ್ದಾರೆ. ಚಿತ್ರದುರ್ಗ ಜಿಲ್ಲೆ ಮೊಳಕಾಲ್ಮೂರು ತಾಲೂಕಿನ ರಾಂಪುರ ಗ್ರಾಮದ ಬಳಿ ಅಕ್ಕಿ ಜಪ್ತಿ ಮಾಡಲಾಗಿದ್ದು, ಆರೋಪಿ ರಾಮು ಎಂಬುವವರನ್ನು ಅರೆಸ್ಟ್ ಮಾಡಲಾಗಿದೆ. ರಾಂಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ರಾಂಪುರ ಪಿಎಸ್‌ಐ ಗಾದಿಲಿಂಗಪ್ಪ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿದೆ. ಲಕ್ಷಾಂತರ ಬೆಲೆ ಬಾಳುವ ಚಿನ್ನ, ನಗದು ಕಳವು ಇನ್ನು ಬೆಂಗಳೂರಿನ ಬಾಗಲಗುಂಟೆ ಬಳಿಯ ಕಲ್ಯಾಣನಗರದಲ್ಲಿ …

Read More »

ವಿಜಯಪುರ: ಕರ್ನಾಟಕ ವಿಕಾಸ ಬ್ಯಾಂಕ್ ನಲ್ಲಿ ಕಳ್ಳತನಕ್ಕೆ ವಿಫಲ‌ ಯತ್ನ

ವಿಜಯಪುರ: ಜಿಲ್ಲೆಯಲ್ಲಿ ಕಳ್ಳರು ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್ ನಲ್ಲಿ ಕಳ್ಳತನಕ್ಕೆ ವಿಫಲ ಯತ್ನ‌ನಡೆಸಿದ ಘಟನೆ ಜರುಗಿದೆ. ವಿಜಯಪುರ ಜಿಲ್ಲೆಯ ಕೊಲ್ಹಾರ ಪಟ್ಟಣದಲ್ಲಿ ಶುಕ್ರವಾರ ಕೆವಿಜಿ ಬ್ಯಾಂಕ್ ಶಾಖೆ ಕಟ್ಟಡದ ಹಿಂಬದಿಯಿಂದ ಕಿಟಕಿ ಮುರಿದು ಕಳ್ಳರು ಒಳ ನುಗ್ಗಿದ್ದಾರೆ. ಬ್ಯಾಂಕ್ ಒಳಗೆ ಜಾಲಾಡಿ ಹಣ ಹಾಗೂ ಚಿನ್ನಕ್ಕಾಗಿ ತಡಕಾಡಿದರೂ ಏನೂ ಸಿಗದೇ ಕಳ್ಳರು ಕಾಲ್ಕಿತ್ತಿದ್ದಾರೆ. ಕಳ್ಳತನ ಮಾಡುವ ತಮ್ಮ‌ ಕೃತ್ಯದ ಕುರಿತು ಯಾವ ದಾಖಲೆಯೂ ಸಿಗದಂತೆ ಬ್ಯಾಂಕ್ ಗೆ ಅಳವಡಿಸಿದ್ದ …

Read More »

ಮೊಬೈಲ್ ಫೋನ್ ಸಾಗಿಸುತ್ತಿದ್ದ ಲಾರಿ ದರೋಡೆ; 6 ಕೋಟಿ ಮೌಲ್ಯದ ಎಂಐ ಫೋನ್ ಕಳ್ಳತನ

ಕೋಲಾರ: ಮೊಬೈಲ್ ಫೋನ್ ಸಾಗಿಸುತ್ತಿದ್ದ ಲಾರಿ ದರೋಡೆ ಮಾಡಿದ ಘಟನೆ ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನ ಗ್ರಾಮ ದೇವರಾಯಸಮುದ್ರ ಬಳಿಯ ರಾಷ್ಟ್ರೀಯ ಹೆದ್ದಾರೆ 75 ರಲ್ಲಿ ನಡೆದಿದೆ. ಸುಮಾರು 6 ಕೋಟಿ ರೂಪಾಯಿ ಮೌಲ್ಯದ ಮೊಬೈಲ್ ದರೋಡೆ ಆಗಿದೆ ಎಂದು ತಿಳಿದುಬಂದಿದೆ. ಎಂಐ ಕಂಪನಿಗೆ ಸೇರಿದ ಮೊಬೈಲ್ ಫೋನ್‌ಗಳ ದರೋಡೆ ಮಾಡಲಾಗಿದ್ದು, ಮೊಬೈಲ್​ನ್ನು ತಮಿಳುನಾಡಿನಿಂದ ಬೆಂಗಳೂರಿಗೆ ಸಾಗಿಸಲಾಗುತ್ತಿತ್ತು. ಈ ವೇಳೆ ಕೃತ್ಯ ನಡೆದಿದೆ. ಮುಳಬಾಗಿಲು ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ …

Read More »