Breaking News

ಬಿಜೆಪಿ ಹೈಕಮಾಂಡ್ ಒತ್ತಡಕ್ಕೆ, ಲಾಭಿಗೆ ಮಣಿದು ಮಂತ್ರಿಗಿರಿ ನೀಡಲ್ಲ.?: ಲಕ್ಷ್ಮಣ ಸವದಿ

ಬೆಳಗಾವಿ: ನಾನು ಅಧಿಕಾರಕ್ಕಾಗಿ ಅಥವಾ ಯಾವಾಗಲೂ ಮಂತ್ರಿಗಿರಿ ಬೇಕೆಂದು ದುಂಬಾಲು ಬಿದ್ದವನಲ್ಲ. ಅಧಿಕಾರ ಇಲ್ಲದ ಸಂದರ್ಭದಲ್ಲಿ ನಾನು ವಿಚಲಿತನಾಗಿಯೂ ಇಲ್ಲ ಎಂದು ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಹೇಳಿದ್ದಾರೆ. ಅಥಣಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಹೈಕಮಾಂಡ್ ಒತ್ತಡಕ್ಕೆ, ಲಾಭಿಗೆ ಮಣಿದು ಮಂತ್ರಿಗಿರಿ ನೀಡಲ್ಲ. ಬಿಜೆಪಿ ಪಕ್ಷದಲ್ಲಿ ಲಾಭಿ ಮಾಡಿದ್ರೆ ಮಂತ್ರಿ ಆಗ್ತಿವಿ ಎಂಬ ಭ್ರಮೆಯಲ್ಲಿ ಬಹಳಷ್ಟು ಜನರು ಇದ್ದಾರೆ. ಆದರೆ ನಮ್ಮ ಬಿಜೆಪಿ ರಾಷ್ಟ್ರೀಯ ನಾಯಕರು, ಹೈಕಮಾಂಡ್ ಲಾಭಿಗೆ …

Read More »

ಕೋಲಾರ: ‘ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಲು ಪ್ರಮುಖ ಕಾರಣಕರ್ತರಾದ ರಮೇಶ ಜಾರಕಿಹೊಳಿ ಅವರಿಗೆ ಮುಂದೆ ಖಂಡಿತ ಸಚಿವ ಸ್ಥಾನ ಸಿಗುತ್ತದೆ. ಅವರಿಗೆ ಸಚಿವಗಾದಿ ಸಿಗಬೇಕು ಎನ್ನುವವರಲ್ಲಿ ನಾನು ಮೊದಲಿಗ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎನ್‌.ಮುನಿರತ್ನ ಹೇಳಿದರು. ನಗರದ ಕೋಲಾರಮ್ಮ ದೇವಾಲಯದಲ್ಲಿ ಶನಿವಾರ ವಿಶೇಷ ಪೂಜೆ ಸಲ್ಲಿಸಿ ಸುದ್ದಿಗಾರರೊಂದಿಗೆ ಮಾತನಾಡಿ, ‘ರಮೇಶ ಜಾರಕಿಹೊಳಿ ನನಗೆ ಆತ್ಮೀಯರು. ಸದ್ಯಕ್ಕೆ ಅವರಿಗೆ ಸಚಿವ ಸ್ಥಾನ ಸಿಕ್ಕಿಲ್ಲ. ಆದರೆ, ಮುಂದೆ ಒಳ್ಳೆಯದಾಗುತ್ತದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು. ‘ಸಿ.ಪಿ.ಯೋಗೇಶ್ವರ್‌, ಬಸನಗೌಡ ಪಾಟೀಲ ಯತ್ನಾಳ್ ಅವರಿಗೆ ಸಚಿವ ಸ್ಥಾನ ಕೈತಪ್ಪಿರುವುದು ಹೈಕಮಾಂಡ್‌ಗೆ ಬಿಟ್ಟ ವಿಚಾರ. ನಮ್ಮದು ಬಿಜೆಪಿ ಟೀಂ ಮಾತ್ರ, ಬೇರೆ ಟೀಂ ಇಲ್ಲ. ಮುಖ್ಯಮಂತ್ರಿಗಳು ನನ್ನನ್ನು ಕೋಲಾರ ಜಿಲ್ಲಾ ಉಸ್ತುವಾರಿ ಸಚಿವನಾಗಿ ನೇಮಿಸಿದ್ದಾರೆ. ತೋಟಗಾರಿಕೆ ಇಲಾಖೆ ಖಾತೆ ನೀಡಿರುವುದಕ್ಕೆ ಸಂತಸವಾಗಿದೆ’ ಎಂದು ತಿಳಿಸಿದರು. ‘ಮುಖ್ಯಮಂತ್ರಿಗಳ ಜತೆ ಕೆಲಸ ಮಾಡಲು ಒಳ್ಳೆಯ ಅವಕಾಶ ಸಿಕ್ಕಿದೆ. ಪ್ರಾಮಾಣಿಕವಾಗಿ ನನ್ನ ಜವಾಬ್ದಾರಿ ನಿರ್ವಹಿಸುತ್ತೇನೆ. ಹಿರಿಯರ ಸಲಹೆ ಪಡೆದು ಜವಾಬ್ದಾರಿ ನಿಭಾಯಿಸುತ್ತೇನೆ. ಮುಂದಿನ ವಿಧಾನಸಭಾ ಚುನಾವಣೆಯಲ್ಲೂ ಬಿಜೆಪಿಯೇ ಅಧಿಕಾರಕ್ಕೆ ಬರುವಂತೆ ಕೆಲಸ ಮಾಡುತ್ತೇನೆ’ ಎಂದರು. ಆರೋಪ ಸಹಜ: ಕಾಂಗ್ರೆಸ್‌ ಶಾಸಕ ಜಮೀರ್‌ ಅಹ್ಮದ್‌ ಖಾನ್‌ ಮನೆ ಮೇಲೆ ನಡೆದ ಜಾರಿ ನಿರ್ದೇಶನಾಲಯದ (ಇ.ಡಿ) ದಾಳಿ ಕುರಿತು ಪ್ರತಿಕ್ರಿಯಿಸಿದ ಸಚಿವರು, ’ಪ್ರತಿ ಬಾರಿ ಇ.ಡಿ ದಾಳಿ ನಡೆದಾಗ ವಿಪಕ್ಷಗಳು ರಾಜಕೀಯ ಪ್ರೇರಿತ ದಾಳಿ ಎಂದು ಆರೋಪಿಸುವುದು ಸಹಜ. ಇ.ಡಿ ಅಧಿಕಾರಿಗಳು ಕೇಳಿದ ಪ್ರಶ್ನೆಗಳಿಗೆ ಸೂಕ್ತ ದಾಖಲೆಪತ್ರ ನೀಡುವುದು ಪ್ರತಿ ಭಾರತೀಯನ ಕರ್ತವ್ಯ. ಕಾನೂನಿನ ಚೌಕಟ್ಟಿನಲ್ಲಿ ಎಲ್ಲರೂ ಒಂದೇ. ಇ.ಡಿ ದಾಳಿಗೂ ಸರ್ಕಾರಕ್ಕೂ ಯಾವುದೇ ಸಂಬಂಧವಿಲ್ಲ’ ಎಂದು ಸ್ಪಷ್ಟಪಡಿಸಿದರು.

ಕೋಲಾರ: ‘ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಲು ಪ್ರಮುಖ ಕಾರಣಕರ್ತರಾದ ರಮೇಶ ಜಾರಕಿಹೊಳಿ ಅವರಿಗೆ ಮುಂದೆ ಖಂಡಿತ ಸಚಿವ ಸ್ಥಾನ ಸಿಗುತ್ತದೆ. ಅವರಿಗೆ ಸಚಿವಗಾದಿ ಸಿಗಬೇಕು ಎನ್ನುವವರಲ್ಲಿ ನಾನು ಮೊದಲಿಗ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎನ್‌.ಮುನಿರತ್ನ ಹೇಳಿದರು. ನಗರದ ಕೋಲಾರಮ್ಮ ದೇವಾಲಯದಲ್ಲಿ ಶನಿವಾರ ವಿಶೇಷ ಪೂಜೆ ಸಲ್ಲಿಸಿ ಸುದ್ದಿಗಾರರೊಂದಿಗೆ ಮಾತನಾಡಿ, ‘ರಮೇಶ ಜಾರಕಿಹೊಳಿ ನನಗೆ ಆತ್ಮೀಯರು. ಸದ್ಯಕ್ಕೆ ಅವರಿಗೆ ಸಚಿವ ಸ್ಥಾನ ಸಿಕ್ಕಿಲ್ಲ. ಆದರೆ, ಮುಂದೆ ಒಳ್ಳೆಯದಾಗುತ್ತದೆ’ ಎಂದು ವಿಶ್ವಾಸ …

Read More »

ಯಡಿಯೂರಪ್ಪ ಜತೆ ನಾನೂ ರಾಜ್ಯ ಪ್ರವಾಸ ಮಾಡುವೆ: ನಳಿನ್‌

ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಸಂಪುಟ ರಚನೆಯಾಗಿದ್ದು, ನೂತನ ನಾಯಕತ್ವ, ಹೊಸ ಸಂಪುಟ ಸಚಿವರು, ಪಕ್ಷ ಹಾಗೂ ಸರ್ಕಾರದ ಮುಂದಿನ ಚಟುವಟಿಕೆಗಳು, ಯಡಿಯೂರಪ್ಪ ಅವರ ನಾಯಕತ್ವದ ಕುರಿತು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲು “ಉದಯವಾಣಿ’ ಜತೆ ಮಾತನಾಡಿದ್ದಾರೆ. ಹೊಸ ನಾಯಕತ್ವದಿಂದ ಏನು ನಿರೀಕ್ಷೆ ಇಟ್ಟುಕೊಂಡಿದ್ದೀರಿ? ಬಸವರಾಜ ಬೊಮ್ಮಾಯಿ ಅನುಭವಿ, ಹಿರಿಯ ರಾಜಕಾರಣಿ, ಅತಿ ಹೆಚ್ಚು ಇಲಾಖೆಗಳನ್ನು ನಿರ್ವಹಿಸಿದ್ದಾರೆ. ಅವರ ತಂದೆ ಎಸ್‌.ಆರ್‌. ಬೊಮ್ಮಾಯ ಸಿಎಂ ಆಗಿದ್ದರು. ದೇವೇಗೌಡರು, ರಾಮಕೃಷ್ಣ ಹೆಗಡೆ, …

Read More »

ಕಳಸಾ-ಬಂಡೂರಿ ಅನುಷ್ಠಾನಕ್ಕೆ ಪ್ರಾಮಾಣಿಕ ಯತ್ನ: ಸಚಿವ ಶಂಕರ ಪಾಟೀಲ ಮುನೇನಕೊಪ್ಪ

ಹುಬ್ಬಳ್ಳಿ: ಕಳಸಾ-ಬಂಡೂರಿ ಯೋಜನೆ ಜಾರಿಗಾಗಿ ನೆರೆ ರಾಜ್ಯಗಳೊಂದಿಗೆ ಸೌಹಾರ್ದಯುತ ಮಾತುಕತೆ ನಡೆಸಿ ಆದಷ್ಟು ಬೇಗ ಅನುಷ್ಠಾನಕ್ಕೆ ಯತ್ನಿಸುವುದಾಗಿ ಜವಳಿ ಮತ್ತು ಕೈಮಗ್ಗ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ತಿಳಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳಸಾ-ಬಂಡೂರಿಯಿಂದ 4 ಟಿಎಂಸಿ ಅಡಿ ನೀರು ಬಳಕೆಗೆ ಮಹದಾಯಿ ನ್ಯಾಯಾಧೀಕರಣ ಒಪ್ಪಿಗೆ ಸೂಚಿಸಿದೆ. ಇದರ ಅನುಷ್ಠಾನಕ್ಕಾಗಿ ಈಗಾಗಲೇ ಕೇಂದ್ರ ಜಲ ಆಯೋಗದ ಅನುಮೋದನೆ ಪಡೆದು ಡಿಪಿಆರ್‌ಗೆ ಯೋಜಿಸಲಾಗಿದೆ. ನ್ಯಾಯಾಧೀಕರಣದಲ್ಲಿ ಆದ ಆದೇಶದಂತೆ ನೀರು ಪಡೆಯುವುದು ನಮ್ಮ …

Read More »

ಚಿನ್ನದ ಹುಡುಗ ನೀರಜ್‌ ಚೋಪ್ರಾಗೆ ತರಬೇತಿ ನೀಡಿದ್ದ ಕನ್ನಡಿಗ ಕಾಶೀನಾಥ್‌

ಕಾರವಾರ ; ಟೋಕಿಯೋದಲ್ಲಿ ನಡೆಯುತ್ತಿರುವ ಒಲಿಂಪಿಕ್ಸ್‌ ನಲ್ಲಿ ಜಾವೆಲಿನ್‌ ಎಸೆತ ಸ್ಪರ್ಧೆಯಲ್ಲಿ ಚಿನ್ನದ ಪದಕಕ್ಕೆ ಕೊರಳೊಡ್ಡಿದ ನೀರಜ್ ಚೋಪ್ರಾ ಅವರ ಸಾಧನೆಗೆ ಜಿಲ್ಲೆಯ ಶಿರಸಿ ತಾಲ್ಲೂಕಿನ ಬೆಂಗಳೆ ಗ್ರಾಮದ ಅಥ್ಲೆಟಿಕ್‌ ಕೋಚ್‌ ಕಾಶೀನಾಥ ನಾಯ್ಕ ಅವರ ಶ್ರಮ ಅಪಾರವಾದುದು. ಕಾಶೀನಾಥ ಅವರು ಭಾರತೀಯ ಅಥ್ಲೆಟಿಕ್ಸ್ ತಂಡದ ತರಬೇತುದಾರರಾಗಿದ್ದರು. ಈ ವೇಳೆ ಎರಡು ವರ್ಷಗಳ ಕಾಲ ನೀರಜ್‍ಗೆ ತರಬೇತಿ ನೀಡಿದ್ದ ಅವರು ಜಾವೆಲಿನ್‌ ಎಸೆತದ ಉತ್ಕೃಷ್ಟ ಕೌಶಲಗಳನ್ನು ಹೇಳಿಕೊಟ್ಟಿದ್ದರು.ಭಾರತೀಯ ಸೈನ್ಯದಲ್ಲಿರುವ ನೀರಜ್ …

Read More »

ಬೇಕಾದ್ರೆ ಅರೆಸ್ಟ್ ಮಾಡಿ.. ಅಂಗಡಿ ಬಂದ್ ಮಾಡೋದಿಲ್ಲ : ರಾಜ್ಯ ಸರ್ಕಾರದ ‘ರೂಲ್ಸ್’ಗೆ ವ್ಯಾಪಾರಿಗಳ ಸೆಡ್ಡು.!

ಮೈಸೂರು : ಜಿಲ್ಲೆಯಲ್ಲಿ ಅವೈಜ್ಞಾನಿಕವಾಗಿ ಕೊರೋನಾ ವೀಕ್ ಎಂಡ್ ರೂಲ್ಸ್ ಅನ್ನು ಜಾರಿಗೊಳಿಸಲಾಗಿದೆ. ಮೈಸೂರು ಪ್ರವಾಸಿಗರ ನಗರ, ಗಡಿ ಭಾಗದಿಂದ ನಗರ ದೂರವೇ ಇದೆ. ಹೀಗಿದ್ದೂ ಕೊರೋನಾ ವೀಕೆಂಡ್ ರೂಲ್ಸ್ ಅನ್ನು ಸರ್ಕಾರ ಜಾರಿಗೊಳಿಸಿದೆ. ಇದಕ್ಕೆ ನಮ್ಮ ವಿರೋಧವಿದೆ. ಬೇಕಾದ್ರೆ.. ನೀವು ನಮ್ಮನ್ನು ಅರೆಸ್ಟ್ ಮಾಡಿ.. ಅಂಗಡಿ ಬಂದ್ ಮಾಡೋದಿಲ್ಲ ಎಂಬುದಾಗಿ ಮೈಸೂರಿನಲ್ಲಿ ರಾಜ್ಯ ಸರ್ಕಾರದ ವಿರುದ್ಧವೇ ವ್ಯಾಪಾರಿಗಳು ಸೆಡ್ಡು ಹೊಡೆದಿದ್ದಾರೆ.     ಇಂದು ಮೈಸೂರಿನ ಸಂಘ ಸಂಸ್ಥೆಗಳ …

Read More »

ಫ್ಲೈ ಓವರ್‌ನಿಂದ ನೆಲಕ್ಕೆ ಉರುಳಿದ ಕ್ಯಾಂಟರ್ : ಡ್ರೈವರ್ ಮತ್ತು ಕ್ಲಿನರ್ ಪ್ರಾಣಾಪಾಯದಿಂದ ಪಾರು MORNING TOP NEWS

ಚಾಲಕನ ನಿಯಂತ್ರಣ ತಪ್ಪಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಟಮೋಟ ಸಾಗಣೆ ಮಾಡುತ್ತ ಲಾರಿ ಪಲ್ಟಿ ಹೊಡೆದ ಘಟನೆ ಗುಡಿಬಂಡೆಯಲ್ಲಿ ನಡೆದಿದೆ. ಆಂದ್ರಪ್ರದೇಶದ ಅನಂತಪುರ ಜಿಲ್ಲೆಯ ಕಮ್ ದೂರ್ ನಿಂದ ಕೋಲಾರಕ್ಕೆ ಹೊರಟಿದ್ದ ಟೊಮೆಟೊ ಹೊತ್ತ ಐಚರ್ ಕ್ಯಾಂಟರ್ ನಿಯಂತ್ರಣ ತಪ್ಪಿ‌ ಮೇಲ್ಸೇತುವೆ ತಡೆಗೋಡೆಗೆ ಡಿಕ್ಕಿ ಹೊಡೆದು ಸುಮಾರು 10 ಅಡಿಯಿಂದ ಸರ್ವಿಸ್ ರಸ್ತೆಯ ಕೆಳಗೆ ಬಿದ್ದಿದೆ.ಅದೃಷ್ಟವಶ್ ಚಾಲಕ ಮತ್ತು ಕ್ಲೀನರ್ ಗೆ ಸಣ್ಣ ಪುಟ್ಟ ಗಾಯಗಳಾಗಿದ್ದು ಪ್ರಾಣಪಾಯದಿಂದ ಪಾರಗಿದ್ದಾರೆ. ರಾಷ್ಟ್ರೀಯ ಹೆದ್ದಾರಿ …

Read More »

ಮದ್ವೆಯಾದ 23 ದಿನಕ್ಕೇ ನವದಂಪತಿ ದುರಂತ ಸಾವು! ಅತ್ತಿಗೆಯ ಪ್ರಾಣವೂ ಹೋಯ್ತು.

ಬಾಗಲಕೋಟೆ: ಮದುವೆ ಸಂಭ್ರಮದಲ್ಲಿದ್ದ ಕುಟುಂಬದ ಮೇಲೆ ಜವರಾಯ ಅಟ್ಟಹಾಸ ಮೆರೆದಿದ್ದು, ನವ ದಂಪತಿ ಮತ್ತು ಅತ್ತಿಗೆ ಮೂವರೂ ದುರಂತ ಅಂತ್ಯ ಕಂಡಿದ್ದಾರೆ. ಮದುವೆ ಮನೆಯಲ್ಲೀಗ ಸೂತಕ ಆವರಿಸಿದ್ದು, ಮೂವರ ಸಾವಿನ ಸುದ್ದಿ ಕೇಳಿದ ಸಂಬಂಧಿಕರು, ಗ್ರಾಮಸ್ಥರು, ‘ಅಯ್ಯೋ ದೇವರೇ, ನೀನೆಂಥಾ ಕ್ರೂರಿ?’ ಎಂದು ಹಿಡಿಶಾಪ ಹಾಕುತ್ತಿದ್ದಾರೆ. ಬಾಗಲಕೋಟೆ ಜಿಲ್ಲೆ ಮುಧೋಳ ತಾಲೂಕಿನ ಮುಗಳಖೋಡ ಗ್ರಾಮದ ಸದ್ದಾಂ ರಾಜೇಸಾಬ ಸೊನ್ನದ ಜಾತಗಾರ(27) ಮತ್ತು ಇವರ ಪತ್ನಿ ಸಲೀಮಾ ಸದ್ದಾಂ(25) ಹಾಗೂ ಸದ್ದಾಂ …

Read More »

ಕೃಷಿ ಹೊಂಡಕ್ಕೆ ಎರಡು ಜೀವ ಬಲಿ; 4 ಮತ್ತು 6ನೇ ತರಗತಿ ವಿದ್ಯಾರ್ಥಿಗಳಿಬ್ಬರ ಸಾವು

ಚಿತ್ರದುರ್ಗ: ರಜೆಯಲ್ಲಿ ಮಕ್ಕಳು ನೀರಿಗಿಳಿದು ಅನಾಹುತ ಮಾಡಿಕೊಳ್ಳುತ್ತಿರುವ ಪ್ರಕರಣಗಳು ಮುಂದುವರಿದಿದ್ದು, ಜಮೀನೊಂದರಲ್ಲಿದ್ದ ಕೃಷಿಹೊಂಡಕ್ಕೆ ಎರಡು ಜೀವಗಳು ಬಲಿಯಾಗಿವೆ. ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲೂಕು ಐಮಂಗಲ ಹೋಬಳಿಯ ವದ್ದಿಕೆರೆ ಗ್ರಾಮದಲ್ಲಿ ಈ ಅವಘಡ ಸಂಭವಿಸಿದೆ. ಜಮೀನಿನ ಕೃಷಿಹೊಂಡಕ್ಕೆ ಬಿದ್ದ ಇಬ್ಬರು ಬಾಲಕರು ಮೃತಪಟ್ಟಿದ್ದಾರೆ. ಆರನೇ ತರಗತಿಯ ರಘು (12), ನಾಲ್ಕನೇ ತರಗತಿ ಸಿದ್ಧೇಶ್​ (10) ಮೃತಪಟ್ಟವರು.

Read More »

ಸಾರ್ವಜನಿಕ ಪ್ರದೇಶಗಳಲ್ಲಿ ಎಲ್ಲೆಂದರಲ್ಲಿ ಉಗುಳಿದ್ದಾರೆ ದಂಡ!

ಬೆಂಗಳೂರು: ಸಾರ್ವಜನಿಕ ಪ್ರದೇಶಗಳಲ್ಲಿ ಎಲ್ಲೆಂದರಲ್ಲಿ ಉಗುಳುವುದರಿಂದ ಸಾಂಕ್ರಾಮಿಕ ರೋಗಗಳು ಹರುಡುವುದಲ್ಲದೆ, ಶುಚಿತ್ವಕೂ ಭಂಗ ಉಂಟಾಗಿ ಜನಸಾಮಾನ್ಯರಿಗೆ ಅನಾನುಕೂಲವಾಗುತ್ತದೆ. ನಿಗಮದ ಸಾರ್ವಜನಿಕ ಸ್ಥಳಗಳಲ್ಲಿ ಉಗುಳುವವರಿಗೆ ದಂಡ ವಿಧಿಸುವ ಕ್ರಮ ಜೂನ್ 2020 ರಿಂದ ಜಾರಿಗೆ ತರಲಾಗಿರುತ್ತದೆ. ಜನ ಸಾಮಾನ್ಯರಿಗೆ ಈ ಕುರಿತು ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಬ್ಯುಟಿಫುಲ್ ಬೆಂಗಳೂರು ಹಾಗೂ ಸಾರಾ ಜಹಾನ್ ಸೆ ಅಚ್ಚಾ ಫುಣೆ ತಂಡಗಳು “ಉಗುಳುವ ನಿಷೇಧದ ಅಭಿಯಾನ” ನಿಗಮದೊಂದಿಗೆ ಸೇರಿ ಹಮ್ಮಿಕೊಂಡಿರುತ್ತಾರೆ. ಕೊರೋನಾ ಮಹಾಮಾರಿಯು ಪ್ರಪಂಚವನ್ನೇ …

Read More »