Breaking News

ಬೊಮ್ಮಾಯಿ ಅವರ ಸಂಪುಟದಲ್ಲಿ ಕಚ್ಚಾಟ ಬಿಜೆಪಿ ಸರ್ಕಾರವು ಪೂರ್ಣಾವಧಿ ಅಧಿಕಾರ ನಡೆಸಲಾರದು: ಧ್ರುವನಾರಾಯಣ

ರಾಯಚೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ನೂತನ ಸಚಿವ ಸಂಪುಟದಲ್ಲಿ ಪ್ರಾದೇಶಿಕ ಅಸಮತೋಲನ, ಹಲವು ಗೊಂದಲ, ಅಸಮಾಧಾನ, ಆಂತರಿಕ ಕಚ್ಚಾಟ ನಡೆಯುತ್ತಿರುದರಿಂದ ಬಿಜೆಪಿ ಸರ್ಕಾರವು ಪೂರ್ಣಾವಧಿ ಅಧಿಕಾರ ನಡೆಸಲಾರದು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಧ್ರುವನಾರಾಯಣ ಹೇಳಿದರು. ಸೋಮವಾರ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನೂತನ ಸಚಿವ ಸಂಪುಟದಲ್ಲಿ ರಾಯಚೂರು ಜಿಲ್ಲೆ ಹಾಗೂ ಕಲ್ಯಾಣ ಕರ್ನಾಟಕ, ಹಳೆ ಮೈಸೂರು ಭಾಗಕ್ಕೆ ಹೆಚ್ಚಿನ ಸಚಿವ ಸ್ಥಾನ ನೀಡಿಲ್ಲ. ಭ್ರಷ್ಟಾಚಾರ ಆರೋಪ …

Read More »

ಬಿಜೆಪಿ ಸರಕಾರ ಎಂದರೆ ಜುಮಲಾ ಸರಕಾರ: ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್

ಬೆಳಗಾವಿ: ಕಳೆದ ಬಾರಿಯ ಪ್ರವಾಹದ ಅನುದಾನವೇ ಬಿಡುಗಡೆಯಾಗಿಲ್ಲ. ಈಗಿನ 2000 ಕೋಟಿ‌ ರೂ. ಹಾನಿಯಾಗಿದೆ ಎಂದು ಹೇಳುತ್ತಿದ್ದಾರೆ. ಜನರಿಗೆ ಬಿಜೆಪಿ ಸರಕಾರ ಎಂದರೆ ಜುಮಲಾ ಸರಕಾರ ಎಂದು ಭಾಸವಾಗುತ್ತಿದೆ ಎಂದು ಬೆಳಗಾವಿ ಗ್ರಾಮೀಣ ಕ್ಷೇತ್ರದ ಕಾಂಗ್ರೆಸ್ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಅಸಮಾಧಾನ ವ್ಯಕ್ತಪಡಿಸಿದರು. ಸೋಮವಾರ ಕಾಂಗ್ರೆಸ್ ಭವನದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರು. ಬಸವರಾಜ ಬೊಮ್ಮಾಯಿ ಅವರು ನೂತನವಾಗಿ ಮುಖ್ಯಮಂತ್ರಿಯಾಗಿದ್ದಾರೆ. ಅವರು ನೆರೆ ಹಾನಿ ವೀಕ್ಷಣೆ ಮಾಡಿ ಪರಿಹಾರ ಘೋಷಣೆ ಮಾಡುತ್ತಾರೆ ಮಾಡುತ್ತಾರೆ …

Read More »

ಸಾರಿಗೆ ನಿಗಮಗಳ ಬಸ್ ಪ್ರಯಾಣ ದರವನ್ನು ಶೇ 18ರಿಂದ 20ರಷ್ಟು ಹೆಚ್ಚಿಸುವ ಪ್ರಸ್ತಾವ?: ಶ್ರೀರಾಮುಲು

ಚಿತ್ರದುರ್ಗ: ಸಾರಿಗೆ ನಿಗಮಗಳ ಬಸ್ ಪ್ರಯಾಣ ದರವನ್ನು ಶೇ 18ರಿಂದ 20ರಷ್ಟು ಹೆಚ್ಚಿಸುವ ಪ್ರಸ್ತಾವವನ್ನು ಪರಿಶೀಲಿಸುತ್ತಿದ್ದೇನೆ. ಈ ಸಂಬಂಧ ಮಂಗಳವಾರ ಅಧಿಕಾರಿಗಳ ಸಭೆ ಕರೆದಿದ್ದು, ಚರ್ಚಿಸಿ ಸೂಕ್ತ ನಿರ್ಧಾರ ತೆಗೆದುಕೊಳ್ಳುತ್ತೇನೆ. ಜನರಿಗೆ ಹೊರೆಯಾಗಲು ಬಿಡುವುದಿಲ್ಲ ಎಂದು ಸಾರಿಗೆ ಸಚಿವ ಬಿ.ಶ್ರೀರಾಮುಲು ಹೇಳಿದರು. ನಗರದಲ್ಲಿ ಕೊವಿಡ್ 3ನೇ ಅಲೆ ತಡೆ ಮತ್ತು ಮಳೆ ಹಾನಿ ಪರಿಹಾರ ಬಗ್ಗೆ ಸೋಮವಾರ ನಡೆದ ಸಭೆಯಲ್ಲಿ ಪಾಲ್ಗೊಂಡಿದ್ದ ಅವರು, ಸಭೆಯ ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು. …

Read More »

ಮುಖಚಂಡಿಯ ಎಸ್​ಎಸ್​ಎಲ್​ಸಿ ಸಾಧಕಿಗೆ ಹೃದಯ ಕಾಯಿಲೆ: ಸಚಿವ ಗೋವಿಂದ ಕಾರಜೋಳ ಸ್ಪಂದನೆ

ಬಾಗಲಕೋಟೆ: ಎಸ್​ಎಸ್​ಎಲ್​ಸಿ ಪರೀಕ್ಷೆಯಲ್ಲಿ 625ಕ್ಕೆ 625 ಅಂಕಗಳಿಸಿದ ತಾಲ್ಲೂಕಿನ ಮುಖಚಂಡಿ ತಾಂಡಾದ ದುರ್ಗಾದೇವಿ ಪ್ರೌಢಶಾಲೆಯ ವಿದ್ಯಾರ್ಥಿನಿ ಗಂಗಮ್ಮ ಬಸಪ್ಪ ಹುಡೇದ ಅವರಿಗೆ ಹೃದಯ ಸಂಬಂಧಿ ಇರುವ ಕಾಯಿಲೆ ದೃಢಪಟ್ಟ ಹಿನ್ನೆಲೆಯಲ್ಲಿ ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಚಿಕಿತ್ಸೆಗೆ ವ್ಯವಸ್ಥೆ ಮಾಡಿ ಮಾನವೀಯತೆ ಮೆರೆದರು. ವಿದ್ಯಾರ್ಥಿನಿಯು 625ಕ್ಕೆ 625 ಅಂಕ ಪಡೆದುಕೊಂಡ ಹಿನ್ನೆಲೆಯಲ್ಲಿ ಸಂತಸದಿಂದ ಅಭಿನಂದಿಸಿದರು. ಆ ಬಾಲಕಿಗೆ ಹೃದಯ ಸಂಬಂಧಿ ರೋಗವಿರುವ ಬಗ್ಗೆ ತಿಳಿದ ಕೂಡಲೇ ಬಾಲಕಿಯ ಪೋಷಕರೊಂದಿಗೆ ಮಾತನಾಡಿದರು. …

Read More »

ಅಯ್ಯೋ ಮಗನೇ ಬೇಡ ಬೇಡ ಅಂದ್ರೂ ಸಿನಿಮಾ ಫೀಲ್ಡ್​ಗೆ ಹೋಗಿ ಅಲ್ಲೇ ಕೊನೆಯುಸಿರೆದು ಬಿಟ್ಟಲ್ಲೋ

ರಾಮನಗರ: ಬಿಡದಿ ಬಳಿ ಹೋಬಳಿಯ ಜೋಗರಪಾಳ್ಯದಲ್ಲಿ ‘ಲವ್​ ಯೂ ರಚ್ಚು’ ಸಿನಿಮಾ ಶೂಟಿಂಗ್​ ವೇಳೆ ಹೈಟೆನ್ಷನ್​ ವಿದ್ಯುತ್​ ತಂತಿ ತಗುಲಿ ಸೋಮವಾರ ಫೈಟರ್​ ವಿವೇಕ್​(35) ಮೃತಪಟ್ಟಿದ್ದಾನೆ. ಈತ ಹೆತ್ತಮ್ಮನ ಮಾತು ಕೇಳಿದ್ದರೆ ಇಷ್ಟು ಬೇಗ ಸಾಯುತ್ತಿರಲಿಲ್ಲವೇನೋ… ಮಗನ ಸಾವಿನ ಸುದ್ದಿ ಕೇಳಿ ವಿವೇಕ್​ರ ತಾಯಿ ಕೆಂಗೇರಿಯ ರಾಜರಾಜೇಶ್ವರಿ ಆಸ್ಪತ್ರೆ ಬಳಿ ಆಕ್ರಂದಿಸುತ್ತಿದ್ದ ದೃಶ್ಯ ನೋಡಿದ್ರೆ ಎಂಥವರ ಮನದಲ್ಲೂ ಈ ಪ್ರಶ್ನೆ ಮೂಡುತ್ತಿತ್ತು. ‘ನಾನು ನಿನ್ನೆ ದೇವಸ್ಥಾನಕ್ಕೆ ಹೋಗಿ ರಾತ್ರಿ ಮನೆಗೆ …

Read More »

ಚಿತ್ರತಂಡದ ಮೇಲೆ ನಾಯಕ ಅಜಯ್ ರಾವ್ ಗಂಭೀರ ಆರೋಪ: ನ್ಯಾಯ ಸಿಗುವವರೆಗೂ ಶೂಟಿಂಗ್‌ಗೆ ಹೋಗದಿರಲು ನಿರ್ಧಾರ

ಸ್ಯಾಂಡಲ್‌ವುಡ್ ಕೃಷ್ಣ ಅಜಯ್ ರಾವ್ ನಾಯಕನಾಗಿ ಹಾಗೂ ಡಿಂಪಲ್ ಕ್ವೀನ್ ರಚಿತಾ ರಾಮ್ ನಾಯಕಿಯಾಗಿ ನಟಿಸುತ್ತಿರುವ ಸಿನಿಮಾ ಲವ್ ಯೂ ರಚ್ಚು. ಇಂದು ಬಿಡದಿಯಲ್ಲಿ ಸಾಹಸ ದೃಶ್ಯಗಳ ಚಿತ್ರೀಕರಣದ ವೇಳೆ ಅಪಘಾತ ಸಂಭವಿಸಿ ವಿವೇಕ್ ಎಂಬ ಸಾಹಸ ಕಲಾವಿದ ಬಲಿಯಾಗಿದ್ದಾರೆ. ಈ ಹಿನ್ನೆಲೆಯಲ್ಲಿ ನಾಯಕ ಕೃಷ್ಣ ಅಜಯ್ ರಾವ್, ವಿವೇಕ್ ಸಾವಿಗೆ ನ್ಯಾಯ ಸಿಗುವವರೆಗೂ ಯಾವುದೇ ಕಾರಣಕ್ಕೂ ಚಿತ್ರೀಕರಣಕ್ಕೆ ಹೋಗುವುದಿಲ್ಲ ಎಂದು ನಿರ್ಧಾರ ಮಾಡಿದ್ದಾರೆ. 2017ರ ನವೆಂಬರ್ ತಿಂಗಳಲ್ಲಿ ಮಾಸ್ತಿಗುಡಿ …

Read More »

ಶೂಟಿಂಗ್‌ ವೇಳೆ ವಿದ್ಯುತ್‌ ಸ್ಪರ್ಶ ; ಸಾಹಸ ಕಲಾವಿದನ ಸಾವು

ರಾಮನಗರ: ತಾಲ್ಲೂಕಿನ ಜೋಗನದೊಡ್ಡಿ ಬಳಿ ʻಲವ್‌ ಯೂ ರಚ್ಚುʼ ಸಿನಿಮಾ ಶೂಟಿಂಗ್‌ ವೇಳೆ ಫೈಟರ್‌ವೊಬ್ಬರು ಸಾವಿಗೀಡಾಗಿರುವ ಘಟನೆ ಸೋಮವಾರ ನಡೆದಿದೆ. ಮೃತರನ್ನು ತಮಿಳುನಾಡು ಮೂಲದ ವಿವೇಕ್‌ ಎಂದು ಗುರುತಿಸಲಾಗಿದೆ. ಸಾಹಸ ದೃಶ್ಯ ಚಿತ್ರೀಕರಣ ವೇಳೆ ಫೈಟರ್​ ವಿವೇಕ್‌ಗೆ​ ವಿದ್ಯುತ್​ ತಂತಿ ಸ್ಪರ್ಶಿಸಿ ಮೃತಪಟ್ಟಿದ್ದಾರೆ. ವಿದ್ಯುತ್‌ ತಂತಿಗೆ ರೋಪ್‌ ಸ್ಪರ್ಷಿಸಿದ್ದೇ ಈ ದುರ್ಘಟನೆಗೆ ಕಾರಣ ಎನ್ನಲಾಗಿದೆ. ಘಟನೆಗೆ ಸಂಬಂಧಿಸಿದಂತೆ ರಾಮನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ‘ಲವ್​ ಯೂ ರಚ್ಚು’ ಸಿನಿಮಾದಲ್ಲಿ …

Read More »

ಕಿಸಾನ್ ಸಮ್ಮಾನ್ ಯೋಜನೆಯಡಿ 51. 19 ಲಕ್ಷ ರೈತರಿಗೆ ₹ 1,023 ಕೋಟಿ ರೈತರ ಖಾತೆಗಳಿಗೆ ನೇರವಾಗಿ ವರ್ಗಾಯಿಸಲಾಗಿದೆ : ಬಿ.ಸಿ. ಪಾಟೀಲ್

ಬೆಂಗಳೂರು: ಕಿಸಾನ್ ಸಮ್ಮಾನ್ ಯೋಜನೆಯಡಿ ಎರಡನೇ ಕಂತಿಯಲ್ಲಿ ರಾಜ್ಯದ 51. 19 ಲಕ್ಷ ರೈತರಿಗೆ ₹ 1,023 ಕೋಟಿ ಬಿಡುಗಡೆಯಾಗಿದ್ದು, ರೈತರ ಖಾತೆಗಳಿಗೆ ನೇರವಾಗಿ ವರ್ಗಾಯಿಸಲಾಗಿದೆ ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ್ ತಿಳಿಸಿದ್ದಾರೆ. ರಾಜ್ಯದಲ್ಲಿ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯನ್ನು ಫೆಬ್ರವರಿ 1, 2019ರಿಂದ ಅನುಷ್ಠಾನಗೊಳಿಸಲಾಗುತ್ತಿದ್ದು, ಸಾಗುವಳಿ ಭೂಮಿ ಹೊಂದಿರುವ ಅರ್ಹ ರೈತ ಕುಟುಂಬಕ್ಕೆ ಕೇಂದ್ರ ಸರ್ಕಾರ ವಾರ್ಷಿಕವಾಗಿ ₹ 6 ಸಾವಿರ ಆರ್ಥಿಕ ನೆರವನ್ನು …

Read More »

ಪೈಪ್​ಗೆ ಬಳಸುವ ಸಲ್ಯೂಷನ್ ಇಟ್ಟಿದ್ದ ಮನೆಯಲ್ಲಿ ಬೆಂಕಿ; ಓರ್ವನ ಸ್ಥಿತಿ ಗಂಭೀರ

ಬೆಂಗಳೂರು: ಪಿವಿಸಿ ಪೈಪ್​ಗೆ ಬಳಸುವ ಸಲ್ಯೂಷನ್ ಇಟ್ಟಿದ್ದ ಮನೆಯಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಒಬ್ಬ ವ್ಯಕ್ತಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಬೆಂಗಳೂರಿನ ಲಗ್ಗೆರೆ ಬಳಿಯ ಮನೆಯಲ್ಲಿ ಪೈಪ್​ಗಳನ್ನು ಇಟ್ಟು ರೀಫಿಲಿಂಗ್ ಮಾಡಲಾಗುತ್ತಿತ್ತು. ಈ ವೇಳೆ ಅಗ್ನಿ ಅವಘಡ ಸಂಭವಿಸಿದೆ. ಸದ್ಯ ಅಗ್ನಿಶಾಮಕ ಸಿಬ್ಬಂದಿಗಳು ಬೆಂಕಿ (Fire) ನಂದಿಸಿದ್ದು, ಈ ಸಂಬಂಧ ರಾಜಗೋಪಾಲ ನಗರ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ. ನೊಯ್ಡಾ: ಹೊತ್ತಿ ಉರಿದ ಬ್ಯಾಗ್​ ತಯಾರಿಕಾ ಕಾರ್ಖಾನೆ ನೊಯ್ಡಾದ ಸೆಕ್ಟರ್​ 63 ಪ್ರದೇಶದಲ್ಲಿ …

Read More »

ಗೋಕರ್ಣ: ಸಮುದ್ರದಲ್ಲಿ ಈಜಲು ಹೋದ ಯುವಕ ನಾಪತ್ತೆ

ಕಾರವಾರ: ಜಿಲ್ಲೆಯ ಕುಮಟಾ ತಾಲೂಕಿನ ಗೋಕರ್ಣದ ಸಮುದ್ರದಲ್ಲಿ ಈಜಲು ಹೋಗಿದ್ದ ಯುವಕ ನಾಪತ್ತೆಯಾಗಿದ್ದಾನೆ. ಬೆಂಗಳೂರು ನಗರದ ಬಿಟಿಎಂ ಲೇಔಟ್ ನಿವಾಸಿ ಅರುಣ ಲಕ್ಕಪ್ಪ (22) ನೀರಿನಲ್ಲಿ ಮುಳಗಿ ನಾಪತ್ತೆಯಾದ ಯುವಕ. ಒಟ್ಟು ಎಂಟು ಜನ ಸ್ನೇಹಿತರೊಂದಿಗೆ ಈತ ಪ್ರವಾಸಕ್ಕಾಗಿ ಬೆಂಗಳೂರಿನಿಂದ ಗೋಕರ್ಣಕ್ಕೆ ಬಂದಿದ್ದ. ಸ್ಥಳೀಯ ಜನರ ಎಚ್ಚರಿಕೆ ನಡುವೆಯೂ ಎಂಟು ಜನ ಈಜಲು ಸಮುದ್ರಕ್ಕೆ ಇಳಿದಿದ್ದರು.ಅಲೆಯ ಅಬ್ಬರಕ್ಕೆ ಇಬ್ಬರು ಕೊಚ್ಚಿಹೋಗಿದ್ದರು. ಈ ವೇಳೆ ಓರ್ವನನ್ನು ಲೈಫ್ ಗಾರ್ಡ ಹಾಗೂ ಸ್ಥಳೀಯರ …

Read More »