ಬೆಂಗಳೂರು: ‘ಸರ್ಕಾರಿ ಕಾರ್ಯಕ್ರಮಗಳಲ್ಲಿ ಹೂಗುಚ್ಛ ಹಾಗೂ ಹೂವಿನ ಹಾರ ನಿಷೇಧಿಸಿರುವ ಆದೇಶವನ್ನು ಕೂಡಲೇ ವಾಪಸ್ ಪಡೆಯಬೇಕು’ ಎಂದು ಆಗ್ರಹಿಸಿ ದಕ್ಷಿಣ ಭಾರತ ಪುಷ್ಪ ಬೆಳೆಗಾರರ ಸಂಘದ ನೇತೃತ್ವದಲ್ಲಿ ಹೂವಿನ ಬೆಳೆಗಾರರು ಮತ್ತು ಮಾರಾಟಗಾರರು ಹೆಬ್ಬಾಳದ ಬೆಂಗಳೂರು ಅಂತರರಾಷ್ಟ್ರೀಯ ಪುಷ್ಪ ಹರಾಜು ಕೇಂದ್ರದ (ಐಎಫ್‌ಎಬಿ) ಬಳಿ ಗುರುವಾರ ಪ್ರತಿಭಟನೆ ನಡೆಸಿದರು. ಪ್ರತಿಭಟನೆಯಲ್ಲಿ ರಾಜ್ಯದ ಎಲ್ಲ ಪುಷ್ಪ ಬೆಳೆಗಾರರು ಹಾಗೂ ಮಾರಾಟಗಾರರ ಸಂಘಟನೆಗಳ ಸದಸ್ಯರು ಭಾಗವಹಿಸಿದ್ದರು. ಕೈಯಲ್ಲಿ ಹೂಗುಚ್ಚ, ಹಾರ, ಹಣ್ಣಿನ ಬುಟ್ಟಿಯನ್ನು …
Read More »ಬ್ಲಾಕ್‍ಮೇಲ್‍ಗಳಿಗೆ ಜಗ್ಗಬೇಡಿ, ಸಿಎಂಗೆ ಹೈಕಮಾಂಡ್ ಅಭಯ
ಬೆಂಗಳೂರು,ಆ.12- ಸಚಿವರು ಮತ್ತು ಶಾಸಕರ ಬ್ಲಾಕ್‍ಮೇಲ್‍ಗಳಿಗೆ ಯಾವುದೇ ಕಾರಣಕ್ಕೂ ಜಗ್ಗಬಾರದು. ಎಂಥದೇ ಪರಿಸ್ಥಿತಿ ಎದುರಾದರೂ ನಾವು ನೋಡಿಕೊಳ್ಳುತ್ತೇವೆ ಎಂದು ಕೇಂದ್ರ ಬಿಜೆಪಿ ವರಿಷ್ಠರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಅಭಯ ನೀಡಿದ್ದಾರೆ. ಉಳಿದಿರುವ ಅವಧಿಯಲ್ಲಿ ಆಡಳಿತದ ಕಡೆ ಹೆಚ್ಚು ಗಮನಹರಿಸಿ ಜನಪರವಾದ ಕಾರ್ಯಕ್ರಮಗಳನ್ನು ರೂಪಿಸಬೇಕು. 2023ರ ಚುನಾವಣೆಯಲ್ಲಿ ಪಕ್ಷವು ಸ್ವಂತ ಬಲದ ಮೇಲೆ ಅಧಿಕಾರಕ್ಕೆ ಬರಲು ಶ್ರಮಿಸಬೇಕೆಂದು ಸೂಚಿಸಿದ್ದಾರೆ. ನಿರೀಕ್ಷಿತ ಖಾತೆ ಸಿಗದೆ ಅಸಮಾಧಾನಗೊಂಡು ಕ್ಯಾತೆ ತೆಗೆದಿದ್ದ ಆನಂದ್ ಸಿಂಗ್ …
Read More »ಬೆಂಗಳೂರಿನಲ್ಲಿ ಬಿಎಸ್ ಯಡಿಯೂರಪ್ಪರನ್ನು ಭೇಟಿಯಾದ ಆನಂದ್ ಸಿಂಗ್ ಹಾಗೂ ಶಾಸಕ ರಾಜೂಗೌಡ
ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಂಪುಟದಲ್ಲಿ ಹಂಚಿಕೆ ಮಾಡಿರುವ ಖಾತೆಯ ಬದಲಾವಣೆಗೆ ಪಟ್ಟು ಹಿಡಿದಿರುವ ಸಚಿವ ಆನಂದ್ ಸಿಂಗ್ ಇದೀಗ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. ಆದರೆ, ಬಿಎಸ್ವೈ ಭೇಟಿ ನಂತರ ಯಾವುದೇ ಪ್ರತಿಕ್ರಿಯೆ ನೀಡದೆ ಆನಂದ್ ಸಿಂಗ್ ತೆರಳಿದ್ದಾರೆ. ಈ ಮಧ್ಯೆ ಯಡಿಯೂರಪ್ಪ ಆಪ್ತ ರಾಜೂಗೌಡ ಅವರು ಆನಂದ್ ಸಿಂಗ್ ಅವರನ್ನು ಭೇಟಿ ಮಾಡಿ ಅವರನ್ನು ಬೆಂಗಳೂರಿಗೆ ಕರೆತರಲು ಯಶಸ್ವಿ ಆಗಿದ್ದಾರೆ. …
Read More »‘ಖಾತೆ ಬದಲಾವಣೆಗೆ ಪಟ್ಟು ಹಿಡಿದವರನ್ನು ಸಂಪುಟದಿಂದ ವಜಾ ಮಾಡಿ’
ಬೆಳಗಾವಿ: ತಮಗೆ ನೀಡಲಾದ ಖಾತೆಗಳ ಗೌಪ್ಯತೆ ಕಾಪಾಡದ ಸಚಿವರನ್ನು ಸಂಪುಟದಿಂದ ವಜಾ ಮಾಡುವಂತೆ ಸಿಎಂಗೆ ಮನವಿ ಮಾಡಿದ್ದಾರೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ರಾಜ್ಯಪಾಲರಿಗೆ ಪತ್ರ ಬರೆದಿರುವ ಭೀಮಪ್ಪ ಗಡಾದ ಅವರು, 1992ರಲ್ಲಿ ಸಚಿವರಿಗಾಗಿ ಆಡಳಿತ ಸುಧಾರಣೆ ಸಚಿವಾಲಯದಿಂದ ನೀತಿ ಸಂಹಿತೆ ಜಾರಿ ಮಾಡಲಾಗಿದೆ. ಆದರೆ ಸಚಿವರಾದ ಆನಂದ ಸಿಂಗ್, ಎಂಟಿಬಿ ನಾಗರಾಜ್, ಶ್ರೀರಾಮುಲು, ಶಶಿಕಲಾ ಜೊಲ್ಲೆ ಪ್ರಬಲ ಖಾತೆಗಳಿಗಾಗಿ ಲಾಬಿ ಮಾಡಿ ನೀತಿ ಸಂಹಿತೆಯಲ್ಲಿನ ಕ್ರಮ ಸಂಖ್ಯೆ 13 …
Read More »ಆ.23ರಿಂದ ಶಾಲಾ-ಕಾಲೇಜು ಪ್ರಾರಂಭ : ಶಿಕ್ಷಣ ಸಚಿವ ಬಿ.ಸಿ.ನಾಗೇಶ್
ಬೆಂಗಳೂರು,ಆ.12-ಕೋವಿಡ್ ಸೋಂಕು ಉಲ್ಬಣವಾಗದಿದ್ದರೆ ಈಗಾಗಲೇ ಪ್ರಕಟಿಸಿರುವಂತೆ ಶಾಲಾಕಾಲೇಜುಗಳನ್ನು ಆ.23ರಿಂದ ಪ್ರಾರಂಭಿಸಲಾಗುವುದು ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಬಿ.ಸಿ.ನಾಗೇಶ್ ತಿಳಿಸಿದರು. ಸಾರ್ವಜನಿಕ ಗ್ರಂಥಾಲಯ ಇಲಾಖೆ ಗ್ರಂಥಾಲಯ ದಿನಾಚರಣೆ ಅಂಗವಾಗಿ ಕಬ್ಬನ್ ಉದ್ಯಾನವನದಲ್ಲಿರುವ ರಾಜ್ಯ ಕೇಂದ್ರ ಗ್ರಂಥಾಲಯದಲ್ಲಿ ಏರ್ಪಡಿಸಿದ್ದ ಪುಸ್ತಕ ಪ್ರದರ್ಶನವನ್ನು ಉದ್ಘಾಟಿಸಿ ನಂತರ ಅವರು ಸುದ್ದಿಗಾರರೊಂದಿಗೆ ಮಾತನಾಡಿದದರು. ಮಕ್ಕಳಲ್ಲಿ ಕೋವಿಡ್ ಸೋಂಕು ಹೆಚ್ಚುತ್ತಿರುವ ಬಗ್ಗೆ ಮಾಧ್ಯಮಗಳಲ್ಲಿ ವರದಿಯಾಗಿರುವುದನ್ನು ಗಮನಿಸಿದ್ದೇನೆ. ಯಾವ ವಯಸ್ಸಿನವರಲ್ಲಿ ಸೋಂಕು ಹೆಚ್ಚಾಗುತ್ತಿದೆ ಮತ್ತು ಅದರ ತೀವ್ರತೆ ಬಗ್ಗೆ …
Read More »ಗೊಂದಲಗಳನ್ನು ನಿಭಾಯಿಸಲು ಸಿಎಂ ಬೊಮ್ಮಾಯಿ ಸಮರ್ಥರಿದ್ದಾರೆ : ದೇವೇಗೌಡರು
ನವದೆಹಲಿ,ಆ.12-ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಮಾರ್ಗದರ್ಶನದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಗೊಂದಲಗಳನ್ನು ನಿಭಾಯಿಸಲು ಸಮರ್ಥರಿದ್ದಾರೆ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿಯಲ್ಲಿ ನಡೆಯುವ ವಿದ್ಯಮಾನಗಳ ಬಗ್ಗೆ ಚರ್ಚೆ ಮಾಡುವುದಿಲ್ಲ. ಆದರೆ ಗೊಂದಲಗಳನ್ನು ನಿಭಾಯಿಸಲು ಮುಖ್ಯಮಂತ್ರಿ ಸಮರ್ಥರಿದ್ದಾರೆ ಎಂದುಕೊಂಡಿದ್ದೇನೆ. ಬೊಮ್ಮಾಯಿ ಅವರು ಮತ್ತು ನಾನು ಉತ್ತಮ ಗೆಳೆಯರು. ಮುಖ್ಯಮಂತ್ರಿಯಾದ ಬಳಿಕ ನನ್ನ ಮನೆಗೆ ಬಂದಿದ್ದರು. ಆಗ ರಾಜ್ಯ ಸರ್ಕಾರಕ್ಕೆ ನಮ್ಮಿಂದ ಏನೂ ತೊಂದರೆಯಾಗುವುದಿಲ್ಲ. ನೆಲ-ಜಲ …
Read More »ಡಾ.ರಾಜ್ ಸಮಾಧಿಗೆ ಸಚಿವ ಸುನಿಲ್ ಕುಮಾರ್ ಪುಷ್ಪ ನಮನ
ಬೆಂಗಳೂರು : ಕನ್ನಡ ಮತ್ತು ಸಂಸ್ಕೃತಿ ಹಾಗೂ ಇಂಧನ ಖಾತೆ ಸಚಿವ ವಿ ಸುನಿಲ್ ಕುಮಾರ್ ಅವರು ಇಂದು ಕನ್ನಡದ ಮೇರುನಟ ಡಾ. ರಾಜಕುಮಾರ್ ಅವರ ಸಮಾಧಿ ಸ್ಥಳಕ್ಕೆ ಭೇಟಿ ನೀಡಿ ಸಮಾಧಿಗೆ ಪುಷ್ಪ ನಮನ ಸಲ್ಲಿಸಿದರು.ನಂತರ ಶ್ರೀಮತಿ ಪಾರ್ವತಮ್ಮ ರಾಜಕುಮಾರ್ ಅವರ ಸಮಾಧಿಗೂ ಗೌರವಾರ್ಪಣೆ ಮಾಡಿದರು.ಇದೇ ಸಂದರ್ಭದಲ್ಲಿ ಡಾ. ಅಂಬರೀಶ್ ಅವರ ಸಮಾಧಿ ಸ್ಥಳಕ್ಕೆಕೂಡ ಭೇಟಿ ನೀಡಿದ ಸಚಿವ ವಿ ಸುನಿಲ್ ಕುಮಾರ್ ಅಂಬರೀಶ್ ಸಮಾಧಿಗೆ ಪುಷ್ಪ ನಮನ …
Read More »ಕೋವಿಡ್ ಲಸಿಕೆಯ ಎರಡು ಡೋಸ್ ಪಡೆದವರಿಗೆ ಮಾತ್ರ ಮಾಲ್ ಪ್ರವೇಶಕ್ಕೆ ಅನುಮತಿ
ಮುಂಬೈ: ಕೋವಿಡ್ ಲಸಿಕೆಯ ಎರಡು ಡೋಸ್ ಗಳನ್ನು ಪಡೆದವರಿಗೆ ಮಾತ್ರ ಮುಂಬೈ ಹಾಗೂ ಮಹಾರಾಷ್ಟ್ರದ ಇತರ ನಗರಗಳಲ್ಲಿನ ಮಾಲ್‌ಗಳಿಗೆ ಪ್ರವೇಶಿಸಲು ಅನುಮತಿ ನೀಡಲು ರಾಜ್ಯ ಸರಕಾರ ನಿರ್ಧರಿಸಿದೆ. ಇಂದು ಸಂಪುಟ ಸಭೆಯ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ರಾಜ್ಯ ಆರೋಗ್ಯ ಸಚಿವ ರಾಜೇಶ್ ಟೋಪೆ, ಆಗಸ್ಟ್ 15 ರಿಂದ ಸರಕಾರವು ಕೋವಿಡ್ ನಿರ್ಬಂಧಗಳನ್ನು ಮತ್ತಷ್ಟು ಸಡಿಲಗೊಳಿಸಲಿದೆ ಎಂದು ಹೇಳಿದರು. “ಡಬಲ್ ಡೋಸ್ ಪಡೆದಿರುವ ಜನರು ಸ್ಥಳೀಯ ರೈಲುಗಳನ್ನು ಹತ್ತಬಹುದು. ರಾಜ್ಯ ಸರಕಾರವು …
Read More »ವಾಹನ ಸವಾರರೇ ಎಚ್ಚರ! ಇನ್ಮುಂದೆ ಹೈವೇನಲ್ಲಿ ಸ್ಪೀಡ್ ಆಗಿ ಓಡಿಸಿದ್ರೆ ಬೀಳುತ್ತೇ ಭಾರೀ ದಂಡ
ಬೆಂಗಳೂರು: ರಾಜ್ಯ ಮತ್ತು ರಾಷ್ಟ್ರೀಯ ಹೆದ್ದಾರಿಗಳಲ್ಲಿ ಸೂಕ್ತ ಕ್ಯಾಮರಾಗಳ ಅಳವಡಿಕೆಗೆ ಕೇಂದ್ರ ಸಾರಿಗೆ ಇಲಾಖೆ ಮುಂದಾಗಿದೆ. ಹೀಗಾಗಿ ಕರ್ನಾಟಕದ ಎಲ್ಲಾ ಹೆದ್ದಾರಿಗಳಲ್ಲೂ ಸಾರಿಗೆ ಇಲಾಖೆ ಕ್ಯಾಮರಾ ಅಳವಡಿಕೆ ಅಗತ್ಯ ತಯಾರಿ ನಡೆಸಿಕೊಂಡಿದೆ. ಇನ್ಮುಂದೆ ಒಂದು ವೇಳೆ ಸವಾರರು ಅಗತ್ಯಕ್ಕಿಂತ ವೇಗವಾಗಿ ವಾಹನ ಚಲಾಯಿಸಿದರೆ ದಂಡ ತೆರಲೇಬೇಕಾಗುತ್ತದೆ. ಹೌದು, ವಾಹನ ಸವಾರರು ಇನ್ಮುಂದೆ ಎಚ್ಚರಿಕೆಯಿಂದ ಇರಲೇಬೇಕು. ರಾಜ್ಯ ಮತ್ತು ರಾಷ್ಟ್ರೀಯ ಹೆದ್ದಾರಿಗಳಲ್ಲಿ ಸ್ಪೀಡ್ ಆಗಿ ವಾಹನ ಓಡಿಸುವ ಮುನ್ನ ಎರಡು ಬಾರಿ …
Read More »ಶಾಸಕ ಸತೀಶ್ ರೆಡ್ಡಿ ಮನೆಯಂಗಳದಲ್ಲಿ ನಿಲ್ಲಿಸಿದ್ದ ಕಾರುಗಳಿಗೆ ಬೆಂಕಿ ಹಚ್ಚಿದ ದುಷ್ಕರ್ಮಿಗಳು!
ಬೆಂಗಳೂರು: ಬೊಮ್ಮನಹಳ್ಳಿ ಕ್ಷೇತ್ರದ ಬಿಜೆಪಿ ಶಾಸಕ ಸತೀಶ್ ರೆಡ್ಡಿ ಅವರ ಮನೆಯಂಗಳದಲ್ಲಿ ನಿಲ್ಲಿಸಿದ್ದ ಎರಡು ಕಾರುಗಳಿಗೆ ಬೆಂಕಿ ಹಚ್ಚಿರುವ ದುಷ್ಕರ್ಮಿಗಳು, ಸುಟ್ಟು ಹಾಕಿದ ಘಟನೆ ಬುಧವರಾ ತಡರಾತ್ರಿ ನಡೆದಿದೆ. ತಡರಾತ್ರಿ ಒಂದೂವರೆ ಗಂಟೆ ಸುಮಾರಿಗೆ ಘಟನೆ ನಡೆದಿದೆ. ಸತೀಶ್ ರೆಡ್ಡಿ ಅವರ ಫಾರ್ಚೂನರ್ ಕಾರು ಹಾಗೂ ಮಹೀಂದ್ರ ಥಾರ್ ಜೀಪ್ ಸುಟ್ಟು ಹೋಗಿದೆ. ಸಿಸಿಟಿವಿಯಲ್ಲಿ ಈ ದೃಶ್ಯ ದಾಖಲಾಗಿದ್ದು, ನಾಲ್ಕು ಮಂದಿ ದುಷ್ಕರ್ಮಿಗಳು ಪೆಟ್ರೋಲ್ ಕ್ಯಾನ್ ಗಳನ್ನ ತಂದು ಬೆಂಕಿ …
Read More »