ವಿಜಯಪುರ: ಸ್ವಾತಂತ್ರ್ಯ ಸಂಭ್ರಮದ 75ನೇ ವರ್ಷಾಚರಣೆ ಸಂದರ್ಭದಲ್ಲಿ ರಾಷ್ಟ್ರ ಧ್ವಜಾರೋಹಣ ಮಾಡಲು ನಗರಕ್ಕೆ ಆಗಮಿಸಿದ ಜಿಲ್ಲಾ ಉಸ್ತುವಾರಿ ಸಚಿವೆ ಶಶಿಕಲಾ ಜೊಲ್ಲೆ ಅವರಿಗೆ ಕಾಂಗ್ರೆಸ್ ಮಹಿಳಾ ಘಟಕದ ಕಾರ್ಯಕರ್ತೆಯರು ಘೇರಾವ್ ಹಾಕಿ ಪ್ರತಿಭಟನೆ ನಡೆಸಿದರು. ಜಿಲ್ಲಾಡಳಿತ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮ ಹಮ್ಮಿಕೊಂಡಿದ್ದ ಕರ್ನಾಟಕ ರಾಜ್ಯ ಅಕ್ಕ ಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ಆವರಣದಲ್ಲಿ ಘಟನೆ ನಡೆದಿದೆ. ಧ್ವಜಾರೋಹಣಕ್ಕೆ ಸಚಿವೆ ಜೊಲ್ಲೆ ಆಗಮಿಸುತ್ತಿದ್ದಂತೆ ಘೇರಾವ್ ಹಾಕಿ, ಕಪ್ಪು ಬಟ್ಟೆ ಪ್ರದರ್ಶನ ಮಾಡಿದರು. ಭ್ರಷ್ಟಾಚಾರ …
Read More »ಸಂಗೊಳ್ಳಿ ರಾಯಣ್ಣ ಜನ್ಮ ದಿನ, ಹುತಾತ್ಮರ ದಿನ ಆಚರಣೆಗೆ ರಾಜ್ಯ ಸರ್ಕಾರದ ಆದೇಶ
ಬೆಂಗಳೂರು: ಸ್ವಾತಂತ್ರ ಹೋರಾಟಗಾರ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಜನ್ಮ ದಿನವಾದ ಆಗಸ್ಟ್ 15 ಹಾಗೂ ಹುತಾತ್ಮ ದಿನ ಜನವರಿ 26ರ ದಿನದಂದು ರಾಜಧಾನಿ ಮತ್ತು ಎಲ್ಲ ಜಿಲ್ಲೆಗಳಲ್ಲಿ ವಿವಿಧ ಕಾರ್ಯಕ್ರಮ ಹಮ್ಮಿಕೊಂಡು ಸರ್ಕಾರಿ ಗೌರವ ಸಲ್ಲಿಸುವಂತೆ ಸರ್ಕಾರದ ಅಧೀನ ಕಾರ್ಯದರ್ಶಿ ಸುತ್ತೋಲೆ ಹೊರಡಿಸಿದ್ದಾರೆ. ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಜನ್ಮ ದಿನವಾದ ಆಗಸ್ಟ್ 15 ಹಾಗೂ ಹುತಾತ್ಮ ದಿನ ಜನವರಿ 26 ದಿನದಂದು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಭಾವಚಿತ್ರಕ್ಕೆ ಸರ್ಕಾರದ ಸಕಲ …
Read More »75th Independence Day 2021 Live Updates: ಮೂಲ ಸೌಕರ್ಯ ಅಭಿವೃದ್ಧಿಗೆ ಪ್ರಧಾನಮಂತ್ರಿ ಗತಿ ಶಕ್ತಿ ಯೋಜನೆ
ನವದೆಹಲಿ, ಆಗಸ್ಟ್ 15: ಭಾರತದ 75ನೇ ವರ್ಷದ ಸ್ವಾತಂತ್ರ್ಯೋತ್ಸವಕ್ಕೆ ದೇಶಪ್ರೇಮಿಗಳು ಸಜ್ಜಾಗಿದ್ದಾರೆ. ಅಮೃತ ಮಹೋತ್ಸವದ ಘಳಿಗೆಯನ್ನು ಇನ್ನಷ್ಟು ಚಂದವಾಗಿಲಸು ಸರ್ಕಾರ ಹಾಗೂ ಸರ್ಕಾರೇತರ ಸಂಸ್ಥೆಗಳಿಂದ ದೇಶಾದ್ಯಂತ ಸಾಕಷ್ಟು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಆದರೆ, ಕೊರೊನಾ ಆತಂಕದಿಂದ ಈ ಸ್ವಾತಂತ್ರ್ಯೋತ್ಸವದ ಉತ್ಸಾಹಕ್ಕೆ ಅಲ್ಪ ಮಟ್ಟಿನ ಉತ್ಸಾಹ ಕಡಿಮೆಯಾಗಿದೆ. 74 ನೇ ಸ್ವಾತಂತ್ರ್ಯ ದಿನವನ್ನು ಕೂಡ ಕೊರೊನಾ ನಿಯಮಗಳನ್ನು ಪಾಲಿಸಿಯೇ ಆಚರಿಸಲಾಗಿತ್ತು. ಧ್ವಜಾರೋಹಣವಾದ ಬಳಿಕ ಪ್ರಧಾನಿ ಮೋದಿ ಸ್ವಾತಂತ್ರ್ಯ ದಿನದ ಭಾಷಣ ಬೆಳಗ್ಗೆ 7.30ಕ್ಕೆ …
Read More »ರಾಜ್ಯದ ಜನರಿಗೆ ಸಿಎಂ ಬೊಮ್ಮಾಯಿ ಭರ್ಜರಿ ಗುಡ್ ನ್ಯೂಸ್: ‘ಅಮೃತ’ ಹೊಸ ಯೋಜನೆಗಳ ಘೋಷಣೆ
ಬೆಂಗಳೂರು: ಬೆಂಗಳೂರಿನಲ್ಲಿ 75 ನೇ ಸ್ವಾತಂತ್ರೋತ್ಸವದ ಅಂಗವಾಗಿ ಮಾಣಿಕ್ ಷಾ ಪರೇಡ್ ಮೈದಾನದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಧ್ವಜಾರೋಹಣ ನೆರವೇರಿಸಿದ್ದಾರೆ. ನಂತರ ಮಾತನಾಡಿದ ಅವರು, ಕೃಷಿ, ರೈತರ ಬದುಕಿನಲ್ಲಿ ಸಂಕಷ್ಟದ ಸಮಯವಾಗಿದೆ. ರೈತರನ್ನು ಕೃಷಿಯನ್ನು ಕೇಂದ್ರವಾಗಿಟ್ಟುಕೊಂಡು ಅಭಿವೃದ್ಧಿ ಕಾರ್ಯ ಕೈಗೊಳ್ಳಲಾಗಿದೆ. ರೈತ ಏಕಿಷ್ಟು ಪ್ರಾಮುಖ್ಯವೆಂಬುದಕ್ಕೆ ಒಂದು ಮಾತಿದೆ. ರವೀಂದ್ರನಾಥ ಠಾಗೋರ್ ಅವರಿಗೆ ದೇವರು ಎಲ್ಲಿದ್ದಾನೆ ಎಂದು ಒಬ್ಬನು ಪ್ರಶ್ನಿಸಿದ. ರೈತರ ಶ್ರಮದಲ್ಲಿ ಕೂಲಿಕಾರ ಬೆವರಲ್ಲಿ ದೇವರಿದ್ದಾನೆ ಎಂದು ಅವರು ಹೇಳಿದ್ದರು. …
Read More »ಪ್ರಧಾನಿ ಮೋದಿ ಸ್ವಾತಂತ್ರ್ಯೋತ್ಸವ ಭಾಷಣದ ಪ್ರಮುಖಾಂಶಗಳು
ನವದೆಹಲಿ: ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ದೇಶದ 75ನೇ ಸ್ವಾತಂತ್ರ್ಯೋತ್ಸವದ ಹಿನ್ನೆಲೆಯಲ್ಲಿ ಕೆಂಪುಕೋಟೆಯಲ್ಲಿ ಭಾನುವಾರ ಧ್ವಜಾರೋಹಣ ನೆರವೇರಿಸಿದರು. ನಂತರ ಅವರು ದೇಶವನ್ನುದ್ದೇಶಿಸಿ ಭಾಷಣ ಮಾಡಿದರು. ಭಾಷಣದ ವೇಳೆ ಅವರು ಹಲವು ವಿಚಾರಗಳನ್ನು ಪ್ರಸ್ತಾಪಿಸಿದ್ದಾರೆ. ಭಾಷಣದ ಪ್ರಮುಖಾಂಶಗಳು ಇಲ್ಲಿವೆ -ದೇಶದ ಎಲ್ಲ ಯೋಜನೆಗಳು ಶೇ 100ರಷ್ಟು ಜನರಿಗೆ ಸಂಪೂರ್ಣ ತಲುಪಬೇಕು. -ಕಠಿಣ ಸಮಯದಲ್ಲಿ ದೇಶದ ಅಸಾಮಾನ್ಯ ಹೋರಾಟ ನಡೆಸಿದೆ. ಕರ್ತವ್ಯದ ಮೂಲಕ ಕೋವಿಡ್ ಎದುರು ಸಮರವನ್ನು ನಡೆಸಿದೆ. ಸಾಕಷ್ಟು ತಾಳ್ಮೆಯಿಂದ …
Read More »ಗಣೇಶ ಮೂರ್ತಿ ತಯಾರಿಕೆಯಿಂದ ಬದುಕು ಕಟ್ಟಿಕೊಂಡಿದ್ದವರು ಬೀದಿ ಪಾಲು
ರಾಯಚೂರು: ಕೊರೊನಾ ಮೂರನೇ ಅಲೆಯ ಆತಂಕ ಹಿನ್ನೆಲೆ ಸರ್ಕಾರ ಸಾಮೂಹಿಕ ಗಣೇಶೋತ್ಸವಕ್ಕೆ ನಿಷೇಧ ಹೇರಿದೆ. ಪ್ಲಾಸ್ಟರ್ ಆಫ್ ಪ್ಯಾರಿಸ್ ಗಣೇಶ ತಯಾರಿಕೆ , ಮಾರಾಟಕ್ಕಂತೂ ಸಂಪೂರ್ಣ ಬ್ರೇಕ್ ಬಿದ್ದಿದೆ. ಗಣೇಶ ಮೂರ್ತಿಗಳನ್ನು ತಯಾರಿಸಿ, ಮಾರಾಟ ಮಾಡಿ ಜೀವನ ನಡೆಸುತ್ತಿದ್ದ ರಾಯಚೂರಿನ ಕೆಲ ಕುಟುಂಬಗಳು ಈಗ ಅಕ್ಷರಶಃ ಬೀದಿಗೆ ಬಂದಿವೆ. ನಗರದ ಲಿಂಗಸುಗೂರು ರಸ್ತೆ ಬಳಿ ಸುಮಾರು ವರ್ಷಗಳಿಂದ ಗಣೇಶ ಮೂರ್ತಿ, ಬೊಂಬೆಗಳನ್ನ ಮಾರಾಟ ಮಾಡಿ ಬದುಕು ಕಟ್ಟಿಕೊಂಡಿರುವ ರಾಜಸ್ಥಾನ ಮೂಲದ …
Read More »ಲಸಿಕೆ ಜೊತೆಗೆ ಆಹಾರ, ಜೀವನ ಪದ್ಧತಿ ಬದಲಿಸಿಕೊಳ್ಳಿ: ಲಕ್ಷ್ಮಿ ಹೆಬ್ಬಾಳ್ಕರ್
ಬೆಳಗಾವಿ: ಲಸಿಕೆ ಜೊತೆಗೆ ಆಹಾರ ಮತ್ತು ಜೀವನ ಪದ್ಧತಿ ಬದಲಿಸಿಕೊಳ್ಳಿ ಎಂದು ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಕರೆ ನೀಡಿದ್ದಾರೆ. ಮಣ್ಣೂರು ಗ್ರಾಮದಲ್ಲಿ ಕೋವಿಡ್ ಲಸಿಕೆ ವಿತರಣೆ ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡಿ ಮಾತನಾಡಿದ ಅವರು, ಕೊರೊನಾ ಹೊಡೆದೋಡಿಸಲು ಲಸಿಕೆ ಹಾಕಿಸಿಕೊಳ್ಳುವ ಜೊತೆಗೆ ಮುಂದಿನ ದಿನಗಳಲ್ಲಿ ನಾವು ನಮ್ಮ ಆಹಾರ ಮತ್ತು ಜೀವನ ಪದ್ಧತಿಯಲ್ಲಿ ಬದಲಾವಣೆ ಮಾಡಿಕೊಳ್ಳುಬೇಕು. ನಿರಂತರವಾಗಿ ರೋಗಗಳ ವಿರುದ್ಧ ಹೋರಾಡುವಂತೆ ನಮ್ಮ ದೇಹವನ್ನು ಸಿದ್ಧಪಡಿಸಿಕೊಳ್ಳಬೇಕು ಎಂದಿದ್ದಾರೆ. ಕೋವಿಡ್ ಲಸಿಕೆ …
Read More »ಪಾಪದ ಪ್ರಾಯಶ್ಚಿತಕ್ಕೆ ಶಶಿಕಲಾ ಜೊಲ್ಲೆಗೆ ಮೊಟ್ಟೆ ಖಾತೆ ಬಿಟ್ಟು, ದೇವರ ಖಾತೆ: ಸತೀಶ್ ಜಾರಕಿಹೊಳಿ ಲೇವಡಿ
ಬೆಳಗಾವಿ: ಶಶಿಕಲಾ ಜೊಲ್ಲೆ ಅವರಿಗೆ ಮೊಟ್ಟೆ ಖಾತೆ ಬಿಟ್ಟು ಜಪ ಮಾಡುವಂತೆ ದೇವರ ಖಾತೆ ಕೊಟ್ಟಿದ್ದಾರೆ. ಅವರು ಮಾಡಿದ ಪಾಪಕ್ಕೆ ಪ್ರಾಯಶ್ಚಿತ ಮಾಡಿಕೊಳ್ಳಲು ಈ ಖಾತೆ ಕೊಟ್ಟಿದ್ದಾರೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ವ್ಯಂಗ್ಯವಾಡಿದರು. ನಗರದಲ್ಲಿ ಶನಿವಾರ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಮೊಟ್ಟೆ ಖಾತೆ ನೀಡದೇ ಇರುವುದು ಒಳ್ಳೆಯ ಸಂಗತಿ, ಬೇರೆ ಖಾತೆ ಕೊಟ್ಟಿದ್ದಾರೆ. ದೇವರ ಜಪ ಮಾಡಲಿ, ಅಲ್ಲಿ ಮಾಡಿದ ತಪ್ಪನ್ನು ಪ್ರಾಯಶ್ಚಿತ ಮಾಡಿಕೊಳ್ಳಲು, ಪೂಜೆ …
Read More »ಎಂ.ಟಿ.ಬಿ, ನಿರಾಣಿ ಸೇರಿ ಬಿಜೆಪಿಯ ಅನೇಕ ಶಾಸಕರು ನಮ್ಮ ಸಂಪರ್ಕದಲ್ಲಿದ್ದಾರೆ: ಈಶ್ವರ್ ಖಂಡ್ರೆ
ರಾಯಚೂರು: ಎಂ.ಟಿ.ಬಿ ನಾಗರಾಜ್, ನಿರಾಣಿ ಸೇರಿದಂತೆ ಬಿಜೆಪಿಯ ಅನೇಕ ಶಾಸಕರು ಕಾಗ್ರೆಸ್ ಸಂಪರ್ಕದಲ್ಲಿದ್ದಾರೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ತಿಳಿಸಿದರು. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಎಂ.ಟಿ.ಬಿ.ನಾಗರಾಜ್ ಅವರು ಸಿದ್ದರಾಮಯ್ಯರನ್ನು ಭೇಟಿ ಮಾಡಿದ್ದಾರೆ. ಹಾಗೆ ನಿರಾಣಿ ಕೂಡ ಭೇಟಿಯಾಗಿದ್ದಾರೆ. ಇನ್ನೂ ಅನೇಕರು ಪಕ್ಷದ ಸಂಪರ್ಕದಲ್ಲಿದ್ದಾರೆ. ಆದರೆ, ಎಷ್ಟು ಶಾಸಕರು ಎಂದು ಈಗಲೇ ಹೇಳಲಿಕ್ಕಾಗದು ಎಂದರು. ರಾಜ್ಯದಲ್ಲಿ ಸರ್ಕಾರ ಅವಧಿ ಮುಗಿಸುವುದಿಲ್ಲ. ಮಧ್ಯಂತರ ಚುನಾಚಣೆ ಬರುವುದು ನಿಶ್ಚಿತ. ಆದರೆ, ಸರ್ಕಾರ …
Read More »ಸಾರಿಗೆ ನಿಗಮದ ನಿದ್ದೆಗೆಡಿಸಿದ ಗಾಂಜಾ ಸಾಗಣೆ! ಸದ್ಯದ ವ್ಯವಸ್ಥೆಯಲ್ಲಿ ಜಾಡು ಪತ್ತೆ ಅಸಾಧ್ಯ!
ಬೆಂಗಳೂರು: ಗಾಂಜಾ ಸಾಗಣೆಗೆ ಸರ್ಕಾರಿಬಸ್‌ಗಳನ್ನು ಸ್ವತಃ ಸಿಬ್ಬಂದಿ ಇಬ್ಬರು ಬಳಸಿಕೊಳ್ಳುತ್ತಿದ್ದ ಅಂಶ ಈಗ ರಾಜ್ಯ ರಸ್ತೆ ಸಾರಿಗೆ ನಿಗಮಗಳ ಅಧಿಕಾರಿಗಳ ನಿದ್ದೆಗೆಡಿಸಿದ್ದು, ಬರುವ ದಿನಗಳಲ್ಲಿ ಇದರ ಜಾಡು ಪತ್ತೆ ಹಾಗೂ ಕಡಿವಾಣವೇ ದೊಡ್ಡ ಸವಾಲಾಗಿದೆ. ಬಸ್‌ಗಳಲ್ಲಿ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ಕಿರಿಯ ಸಹಾಯಕ ವಿಠಲ್ ಭಜಂತ್ರಿ ಹಾಗೂ ಚಾಲಕ ಕಂ ನಿರ್ವಾಹಕ ಶರಣ ಬಸಪ್ಪ ಕ್ಷತ್ರೀಯ ಎಂಬುವರು ಲಗೇಜುಗಳ ರೂಪದಲ್ಲಿ ಗಾಂಜಾವನ್ನು ವಿಜಯಪುರ ಮತ್ತು ಕಲಬುರಗಿಯಿಂದ ಬೆಂಗಳೂರಿಗೆ …
Read More »