Breaking News

ನಟ ಪುನೀತ್ ರಾಜ್ ಸಮಾಧಿ ದರ್ಶನ ಪಡೆದ ತಮಿಳು ನಟ ಸೂರ್ಯ: ಅಪ್ಪ ನೆನೆದು ಕಣ್ಣೀರು

ಬೆಂಗಳೂರು: ತಮಿಳಿನ ಖ್ಯಾತ ನಟ ಸೂರ್ಯ ( Tamil Actor Surya ), ಇಂದು ನಟ ಪುನೀತ್ ರಾಜ್ ಕುಮಾರ್ ( Puneet Rajkumar ) ಸಮಾಧಿ ಸ್ಥಳ ಕಂಠೀರವ ಸ್ಟುಡಿಯೋಗೆ ಭೇಟಿ ನೀಡಿದರು. ರಾಜಕುಮಾರನನ್ನು ನೆನೆದು ಸಮಾಧಿ ಬಳಿಯಲ್ಲಿ ಕಣ್ಣೀರಿಟ್ಟರು. ನಟ ಪುನೀತ್ ರಾಜ್ ಕುಮಾರ್ ನಮ್ಮನ್ನು ಅಗಲಿ ಇಂದಿಗೆ ಎಂಟು ದಿನಗಳಾಗುತ್ತಿವೆ. ಅಪ್ಪು ನಮ್ಮನ್ನು ಅಗಲಿದ್ದರೂ, ಅವರ ಅಭಿಮಾನಿಗಳ ಹೃದಯದಲ್ಲಿ ಜೀವಂತವಾಗಿದ್ದಾರೆ. ಇಂತಹ ನಟ ಪುನೀತ್ ರಾಜ್ …

Read More »

ತಿಂಗಳಿಗೆ 80 ಸಾವಿರ ರೂ. ಆದಾಯ ಗಳಿಸುವ ಅವಕಾಶ

ನವದೆಹಲಿ : ನೀವು ಹೊಸ ವ್ಯಾಪಾರವನ್ನು ಪ್ರಾರಂಭಿಸಲು ಯೋಜಿಸುತ್ತಿದ್ದರೆ ಈ ಸುದ್ದಿ ನಿಮಗಾಗಿ ಮಾತ್ರ. ನಾವು ನಿಮಗೆ ಉತ್ತಮ ವ್ಯಾಪಾರ ಐಡಿಯಾ ನೀಡಲಿದ್ದೇವೆ. ಈ ವ್ಯವಹಾರದಿಂದ ನೀವು ಸಾಕಷ್ಟು ಹಣ ಕೂಡ ಗಳಿಸಬಹುದು. ಅತ್ಯಂತ ವಿಸ್ಮಯಕಾರಿ ಸಂಗತಿಯೆಂದರೆ ನೀವು ಭಾರತೀಯ ರೈಲ್ವೆಯೊಂದಿಗೆ ಈ ವ್ಯವಹಾರವನ್ನು ಆರಂಭಿಸಬೇಕು. ಅದರ ಸಂಪೂರ್ಣ ಮಾಹಿತಿ ಇಲ್ಲಿದೆ. ತಿಂಗಳಿಗೆ 80 ಸಾವಿರ ರೂ. ಆದಾಯ ಗಳಿಸುವ ಅವಕಾಶ ಭಾರತೀಯ ರೈಲ್ವೆ ಅಡುಗೆ ಮತ್ತು ಪ್ರವಾಸೋದ್ಯಮ ನಿಗಮ (IRCTC) …

Read More »

ದೀಪಾವಳಿಯ ಸಂದರ್ಭದಲ್ಲಿ ಚಂದನವನದ ನಂದಾದೀಪ ಆರಿ ಹೋದ ಭಾವ,ಹೊಸಬರ ಕನಸುಗಳು ಅರ್ಧಕ್ಕೆ

ಪುನೀತ್‌ ಸರ್‌ಗೊಂದು ಸಿನೆಮಾ ನಿರ್ಮಾಣ ಮಾಡ್ಬೇಕು… ಅಪ್ಪು ಸರ್‌ ಚಿತ್ರಕ್ಕೆ ಹೀರೋಯಿನ್‌ ಆಗಬೇಕು… ಪುನೀತ್‌ ಸರ್‌ ಸಿನೆಮಾಕ್ಕೆ ಡೈರೆಕ್ಷನ್‌ ಮಾಡಬೇಕು… ಪುನೀತ್‌ ಅವ್ರ ಚಿತ್ರಕ್ಕೆ ಸಂಗೀತ ನೀಡಬೇಕು… ಹೀಗೆ ಪುನೀತ್‌ ರಾಜಕುಮಾರ್‌ ಅವರ ಸುತ್ತ ಅದೆಷ್ಟು ಬೇಕುಗಳಿತ್ತೆಂದರೆ, ಲೆಕ್ಕ ಹಾಕುತ್ತಾ ಹೋದರೆ ಪಟ್ಟಿ ಬೆಳೆಯುತ್ತಾ ಹೋಗುತ್ತದೆ. ಅದಕ್ಕೆ ಕಾರಣ ಪುನೀತ್‌ ರಾಜಕುಮಾರ್‌ ಅವರ ವ್ಯಕ್ತಿತ್ವ. ಆದರೆ ಈಗ ಕನಸುಗಳು ಬತ್ತಿವೆ, ಮನಸಿನ ತುಂಬಾ ಶೂನ್ಯ. ಒಂದು ಸಾವು ಒಂದು ಕುಟುಂಬವನ್ನು …

Read More »

ಪತ್ನಿಗೆ ವಿಡಿಯೋ ಕರೆ ಮಾಡಿ ಆಕೆಯ ಕಣ್ಣೇದುರೇ ನೇಣುಬಿಗಿದುಕೊಂಡ ಜೈಲು ವಾರ್ಡನ್‌

ಶಿವಮೊಗ್ಗ: ಕೇಂದ್ರ ಕಾರಾಗೃಹದಿಂದಲೇ ಪತ್ನಿಗೆ ವಿಡಿಯೋ ಕರೆ ಮಾಡಿದ ಜೈಲು ವಾರ್ಡನ್‌ವೊಬ್ಬರು ಆಕೆಯ ಕಣ್ಣೇದುರೇ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಶಿವಮೊಗ್ಗದಲ್ಲಿ ಸಂಭವಿಸಿದೆ. ಹುಕ್ಕೇರಿ ತಾಲೂಕು ಹೊಸೂರಿನ ಬಾಬು ದಸ್ತಗಿರ್ ತಗರಿ ಎಂಬುವರ ಪುತ್ರ ಅಸ್ಪಾಕ್ ತಗಡಿ(24) ಆತ್ಮಹತ್ಯೆ ಮಾಡಿಕೊಂಡ ಜೈಲ್ ವಾರ್ಡನ್. ಈ ಹಿಂದೆ ಬೆಂಗಳೂರಿನ ಕೆಎಸ್‌ಆರ್‌ಪಿಯಲ್ಲಿ ಪೇದೆಯಾಗಿದ್ದ ಅಸ್ಪಾಕ್, ಕಳೆದ ಎರಡು ವರ್ಷದಿಂದ ಜೈಲು ವಾರ್ಡನ್ ಆಗಿ ಶಿವಮೊಗ್ಗ ಕೇಂದ್ರ ಕಾರಾಗೃಹದಲ್ಲಿ ಕೆಲಸ ಮಾಡುತ್ತಿದ್ದರು. ಕಳೆದ ವರ್ಷವಷ್ಟೇ ಹುಕ್ಕೇರಿ …

Read More »

ಪುನೀತ್ ರಾಜಕುಮಾರ್ ಅವರ ಹಠಾತ್ ಸಾವಿನ ಕುರಿತು ಸಿಬಿಐ ತನಿಖೆ ನಡೆಸಬೇಕು ಎಂದು ವ್ಯಕ್ತವಾಗಿರುವ ಆಗ್ರಹ

ಬೆಂಗಳೂರು: ಪುನೀತ್ ರಾಜಕುಮಾರ್ ಅವರ ಹಠಾತ್ ಸಾವಿನ ಕುರಿತು ಸಿಬಿಐ ತನಿಖೆ ನಡೆಸಬೇಕು ಎಂದು ವ್ಯಕ್ತವಾಗಿರುವ ಆಗ್ರಹದ ಬೆನ್ನಿಗೇ ಅವರ ಸಾವಿಗೆ ಸಂಬಂಧಿಸಿ ಮತ್ತೊಂದು ಅನುಮಾನ ಮೂಡಿದ್ದು, ಆ ಕುರಿತು ಪೊಲೀಸರಿಗೆ ದೂರು ಕೂಡ ನೀಡಲಾಗಿದೆ.   ಪುನೀತ್ ಅವರ ಸಾವಿನ ಕುರಿತು ಅನುಮಾನ ವ್ಯಕ್ತಪಡಿಸಿ, ಡಾ.ರಾಜ್​ ಕುಟುಂಬದ ವೈದ್ಯ ಡಾ. ರಮಣ ರಾವ್ ಕ್ಲಿನಿಕ್ ವಿರುದ್ಧ ತನಿಖೆ ನಡೆಸುವಂತೆ ಸದಾಶಿವನಗರ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ. ಪುನೀತ್ ಅವರ ಅಭಿಮಾನಿ …

Read More »

ಅಭಿಮಾನಿಗಳ ಸಾವಿನಿಂದ ನೊಂದಿರುವ ಅಪ್ಪು ಪತ್ನಿ ಅಶ್ವಿನಿ ತುಂಬ ನೊಂದಿದ್ದಾರೆ ಎಂದ ರಾಘವೆಂದ್ರ ರಾಜ್​ಕುಮಾರ್​

ಬೆಂಗಳೂರು: ಪುನೀತ್​ ಅಕಾಲಿಕ ನಿಧನದಿಂದ ಅಪ್ಪು ಅಭಿಮಾನಿಗಳ ಸರಣಿ ಆತ್ಮಹತ್ಯೆ ಮುಂದುವರೆದಿದೆ. ಇದು ದೊಡ್ಮನೆ ಕುಟುಂಬಕ್ಕೆ ಭಾರೀ ನೋವು ತಂದಿದೆ. ಅಭಿಮಾನಿಗಳ ಸಾವಿನಿಂದ ನೊಂದಿರುವ ಅಪ್ಪು ಪತ್ನಿ ಅಶ್ವಿನಿ ತುಂಬ ನೊಂದಿದ್ದಾರೆ ಎಂದು ರಾಘವೆಂದ್ರ ರಾಜ್​ಕುಮಾರ್​ ತಿಳಿಸಿದ್ದಾರೆ ಅಪ್ಪು ಅಭಿಮಾನಿಗಳ ಸರಣಿ ಆತ್ಮಹತ್ಯೆ ಕುರಿತು ಬೇಸರ ವ್ಯಕ್ತಪಡಿಸಿದ ರಾಘಣ್ಣ ನಿಮ್ಮ ಮನೆಯಲ್ಲಿ ಯಾರಾದರು ಸತ್ತರೆ ನೀವು ಸಾಯಬೇಕೆಂದು ಹೇಳಿ ಕೊಡ್ತಾರಾ? ನಾಳೆ ನಿಮ್ಮ ಮನೆಯವರು ಅಪ್ಪು ಸಾವಿನಿಂದ ಹೀಗಾಯ್ತು ಅಂತ …

Read More »

ರಾಜ್ಯದ ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ 18,000 ಅತಿಥಿ ಶಿಕ್ಷಕರ ನೇಮಕಕ್ಕೆ ರಾಜ್ಯ ಸರ್ಕಾರ ಆದೇಶ

ಬೆಂಗಳೂರು : ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಅತಿಥಿ ಶಿಕ್ಷಕರ ನೇಮಕಕ್ಕೆ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಈ ಕುರಿತು ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತ ಡಾ. ವಿಶಾಲ್ ಆರ್ ಆದೇಶ ಹೊರಡಿಸಿದ್ದು, 2021-22 ನೇ ಸಾಲಿನಲ್ಲಿ ರಾಜ್ಯದ ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಖಾಲಿ ಇರುವ ಶಿಕ್ಷಕರ ಹುದ್ದೆಗಳಿಗೆ ವಿದ್ಯಾರ್ಥಿಗಳ ಶೈಕ್ಷಣಿಕ ಹಿತದೃಷ್ಟಿಯಿಂದ ತಾತ್ಕಾಲಿಕವಾಗಿ 18,000 ಅತಿಥಿ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲು ಅನುಮತಿ ನೀಡಿದ್ದಾರೆ.   ವರ್ಗಾವಣೆ ಪ್ರಕ್ರಿಯೆ ಜಾರಿಯಲ್ಲಿರುವುದರಿಂದ ಖಾಲಿ …

Read More »

ರಾಜ್ಯ ಸರ್ಕಾರದಿಂದ ರೈತರ ಮಕ್ಕಳಿಗೆ ಸಿಹಿಸುದ್ದಿ : 2021-22 ನೇ ಸಾಲಿನ ‘ಶಿಷ್ಯ ವೇತನ’ಕ್ಕಾಗಿ ಅರ್ಜಿ ಆಹ್ವಾನ

ಬೆಂಗಳೂರು : ರೈತರ ಮಕ್ಕಳ ಉನ್ನತ ಶಿಕ್ಷಣವನ್ನು ಪ್ರೋತ್ಸಾಹಿಸಲು ಹೊಸ ಶಿಷ್ಯ ವೇತನವನ್ನು ರಾಜ್ಯ ಸರ್ಕಾರ ಜಾರಿಗೆ ತಂದಿದ್ದು, ವಿದ್ಯಾರ್ಥಿಗಳು ಆನ್ ಲೈನ್ ನಲ್ಲಿ ಅರ್ಜಿ ಸಲ್ಲಿಸಲು ಉನ್ನತ ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ.   ಈ ಕುರಿತು ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಜಿ ಕುಮಾರ್ ನಾಯಕ್ ಆದೇಶ ಹೊರಡಿಸಿದ್ದು, 10 ನೇ ತರಗತಿ ಪೂರ್ಣಗೊಳಿಸಿದ ನಂತರ ರಾಜ್ಯದ ಶಿಕ್ಷಣ ಸಂಸ್ಥೆಗಳು/ ವಿಶ್ವವಿದ್ಯಾಲಯಗಳು, ಸ್ವಾಯತ್ತ ಕಾಲೇಜುಗಳು, ಪದವಿ ಮತ್ತು …

Read More »

ದೊಡ್ಡ ರಾಜ್ಯಗಳ ಪೈಕಿ ಉ.ಪ್ರ.ದಲ್ಲಿ ಅತ್ಯಂತ ಕಳಪೆ ಆಡಳಿತ, ಉತ್ತಮ ಆಡಳಿತದಲ್ಲಿ ಕೇರಳ ನಂ.1

ಹೊಸದಿಲ್ಲಿ, ನ.4: ಉತ್ತರಪ್ರದೇಶದ ವಿಧಾನಸಭಾ ಚುನಾವಣೆಗೆ ಆರು ತಿಂಗಳಿಗೂ ಕಡಿಮೆ ಸಮಯ ಬಾಕಿಯಿರುವಂತೆಯೇ ಆದಿತ್ಯನಾಥ ಸರಕಾರಕ್ಕೆ ಇರಿಸುಮುರಿಸು ಉಂಟು ಮಾಡುವ ಸಮೀಕ್ಷೆಯೊಂದು ಪ್ರಕಟವಾಗಿದೆ. ಅತ್ಯಂತ ಕಳಪೆ ಆಡಳಿತವಿರುವ ದೊಡ್ಡ ರಾಜ್ಯವೆಂಬ ಅಪಖ್ಯಾತಿ ಉತ್ತರಪ್ರದೇಶಕ್ಕೆ ದೊರೆತಿದೆ.   ರಾಜ್ಯಗಳ ಆಡಳಿತವನ್ನು ಮೌಲ್ಯಮಾಪನ ಮಾಡುವ ಬೆಂಗಳೂರು ಮೂಲದ ‘ಥಿಂಕ್ ಟ್ಯಾಂಕ್ ಪಬ್ಲಿಕ್ ಎಫೇರ್ಸ್ ಸೆಂಟರ್’ ಸಿದ್ಧಪಡಿಸಿರುವ ಸೂಚ್ಯಂಕದಲ್ಲಿ ಆಡಳಿತ ಗುಣಮಟ್ಟದಲ್ಲಿ ಉತ್ತರ ಪ್ರದೇಶವು ಕೊನೆಯ ರ‍್ಯಾಂಕ್ ಪಡೆದಿದ್ದು, 18ನೇ ಸ್ಥಾನದಲ್ಲಿದೆ. ಬೆಳವಣಿಗೆ,ನೀತಿ ಹಾಗೂ …

Read More »

ಶಾಸಕರ ಪುತ್ರನ ಸಕ್ಕರೆ ಕಾರ್ಖಾನೆಯಲ್ಲಿ ದುರ್ಘಟನೆ; ಸೆಂಟ್ರಿಂಗ್ ಕುಸಿತಕ್ಕೆ ಬಲಿಯಾದವರ ಸಂಖ್ಯೆ ಮೂರಕ್ಕೆ ಏರಿಕೆ!

ದಾವಣಗೆರೆ: ಶಾಸಕ ಶಾಮನೂರು ಶಿವಶಂಕರಪ್ಪ ಅವರ ಪುತ್ರ ಎಸ್.ಎಸ್​. ಗಣೇಶ್ ಮಾಲೀಕತ್ವದ ಸಕ್ಕರೆ ಕಾರ್ಖಾನೆಯಲ್ಲಿ ನಿರ್ಮಾಣ ಹಂತದಲ್ಲಿರುವ ಎಥನಾಲ್ ಘಟಕದ ಸೆಂಟ್ರಿಂಗ್ ಕುಸಿತದಿಂದ ಸತ್ತವರ ಸಂಖ್ಯೆ ಇದೀಗ ಮೂರಕ್ಕೆ ಏರಿದೆ. ತಾಲೂಕಿನ ಕುಕ್ಕುವಾಡದ ದಾವಣಗೆರೆ ಸಕ್ಕರೆ ಕಾರ್ಖಾನೆಯ ಎಥೆನಾಲ್ ಘಟಕ ನಿರ್ಮಾಣದ ವೇಳೆ ಇಂದು ಮಧ್ಯಾಹ್ನ ಆರ್​ಸಿಸಿ ಕುಸಿದು ಬಿದ್ದು ಮೂವರು ಕಟ್ಟಡ ಕಾರ್ಮಿಕರು ಮೃತಪಟ್ಟಿದ್ದು, ಆರು ಮಂದಿ ಕಾರ್ಮಿಕರು ಗಾಯಗೊಂಡಿದ್ದಾರೆ.   ರಾಯಚೂರು ಜಿಲ್ಲೆ ಲಿಂಗಸೂಗೂರು ತಾಲೂಕಿನ ಕುಮಾರಕಡೆ ಗ್ರಾಮ …

Read More »