Breaking News

ಹಾನಗಲ್​​ನಲ್ಲಿ ಕಾಂಗ್ರೆಸ್​ಗೆ ಲಭಿಸಿದ ಜಯ 2023ರ ಮಹಾಚುನಾವಣೆಯ ಗೆಲುವಿನ ಪ್ರಾರಂಭ :

ಹಾವೇರಿ: ಹಾನಗಲ್​ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಗೆದ್ದ ಕಾಂಗ್ರೆಸ್​ ಶಾಸಕ ಶ್ರೀನಿವಾಸ ಮಾನೆ ಅವರಿಗೆ ಇಂದು ಶಿಗ್ಗಾವಿ ಬ್ಲಾಕ್​ ಕಾಂಗ್ರೆಸ್​ ಸಮಿತಿ ಅಭಿನಂದನಾ ಕಾರ್ಯಕ್ರಮ ಹಮ್ಮಿಕೊಂಡಿತ್ತು. ಈ ಸಮಾರಂಭದಲ್ಲಿ ಭಾಗವಹಿಸಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್​ ಹಾನಗಲ್​​ನಲ್ಲಿ ಕಾಂಗ್ರೆಸ್​ಗೆ ಲಭಿಸಿದ ಜಯ 2023ರ ಮಹಾಚುನಾವಣೆಯ ಗೆಲುವಿನ ಪ್ರಾರಂಭವಾಗಿದೆ ಎಂದಿದ್ದಾರೆ. ‘ಕತ್ತಲೆಯಿಂದ ಬೆಳಕಿನಡೆಗೆ ಸಾಗೋಣ. ಇಷ್ಟು ದಿನ ರಾಜ್ಯ ಕತ್ತಲೆಯಲ್ಲಿ ಇತ್ತು. ಮಾನೆಗೆ ಆಶೀರ್ವಾದ ಮಾಡಿದ್ದೀರಿ. ಬೆಳಕು ಬಂದಿದೆ. ಅದಕ್ಕಾಗಿ ನಿಮಗೆ ಅಭಿನಂದನೆ ಸಲ್ಲಿಸೋಕೆ …

Read More »

ಅಣ್ಣ-ತಮ್ಮ ಸೇರಿ ಕೆಲಸ ಕೊಟ್ಟಿದ್ದಾತನ ಮಗನನ್ನೇ ಕೊಂದು ಮೂಟೆ ಕಟ್ಟಿದ್ದರು!;

ಬೆಂಗಳೂರು: ಎರಡು ದಿನಗಳ ಹಿಂದೆ ರಾಜಧಾನಿಯ ರಾಜರಾಜೇಶ್ವರಿ ನಗರದಲ್ಲಿ ಮೂಟೆಯಲ್ಲಿ ಕಂಡುಬಂದಿದ್ದ ವಿದ್ಯಾರ್ಥಿ ತರುಣ್‌ ಶವ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ತರುಣ್‌ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜರಾಜೇಶ್ವರಿನಗರ ಪೊಲೀಸರು ನಾಸಿರ್‌ ಹಾಗೂ ಸೈಯದ್‌ ತಜ್ಮುಲ್‌ ಎಂಬವರನ್ನು ಬಂಧಿಸಿದ್ದಾರೆ. ಬಂಧಿತ ಆರೋಪಿಗಳಿಬ್ಬರೂ ಸಹೋದರರು, ತರುಣ್‌ಗೆ ಗೆಳೆಯರಾಗಿದ್ದವರು. ಭಾರತೀನಗರ ಮುರುಗಪಿಳ್ಳೈ ನಿವಾಸಿ ತರುಣ್‌ (20) ತಂದೆ ಮಣಿಯವರಿಂದ 2 ಸಾವಿರ ರೂಪಾಯಿ ಪಡೆದುಕೊಂಡು ಪಟಾಕಿ ತರುವುದಾಗಿ ಹೇಳಿ ನ. 1ರಂದು …

Read More »

ಪೆಟ್ರೋಲ್‌, ಡಿಸೇಲ್‌ ಬಳಿಕ ಅಡುಗೆ ಎಣ್ಣೆ ಬೆಲೆಯಲ್ಲಿ ಗಣನೀಯವಾಗಿ ಇಳಿಕೆ

ದೇಶದ ಜನತೆಗೆ ಕೇಂದ್ರ ಸರ್ಕಾರ ದೀಪಾವಳಿ ಉಡುಗೊರೆ ನೀಡಿದ್ದು, ಪೆಟ್ರೋಲ್‌, ಡಿಸೇಲ್‌ ಬಳಿಕ ಅಡುಗೆ ಎಣ್ಣೆ ಬೆಲೆಯಲ್ಲಿ ಗಣನೀಯವಾಗಿ ಇಳಿಕೆ ಮಾಡಿದೆ. ಹೌದು, ಅಡುಗೆ ಎಣ್ಣೆ ದರ ಗಣನೀಯವಾಗಿ ಇಳಿಕೆ ಕಂಡಿದ್ದು, ಪಾಮ್‌ ಆಯಿಲ್‌, ಶೇಂಗಾ ಎಣ್ಣೆ, ಸೋಯಾಬಿನ್‌ ಎಣ್ಣೆ, ಸೂರ್ಯಕಾಂತಿ ಸೇರಿ ಬಹುತೇಕ ಅಡುಗೆ ಎಣ್ಣೆ ದರ ಇಳಿಕೆ ಮಾಡಿದೆ.   ಅದ್ರಂತೆ ಅಡುಗೆ ಎಣ್ಣೆ ದರ 7 ರೂಪಾಯಿಯಿಂದ 20 ರೂಪಾಯಿವರೆಗೆ ಇಳಿಕೆ ಮಾಡಲಾಗಿದ್ದು, ಪ್ರತಿ ಕೆ.ಜಿಗೆ …

Read More »

ಕಡಿಮೆ ಬೆಲೆಗೆ ಸ್ಮಾರ್ಟ್ ಫೋನ್ ಖರೀದಿಸುವವರಿಗೆ ಗುಡ್ ನ್ಯೂಸ್,

ಮುಂಬೈ: ರಿಲಯನ್ಸ್ ಜಿಯೋ ಕಂಪನಿ ಮತ್ತು ಗೂಗಲ್ ಸಹಯೋಗದಲ್ಲಿ ಅಭಿವೃದ್ಧಿಪಡಿಸಲಾದ ಕಡಿಮೆ ಬೆಲೆಯ ಜಿಯೋ ಫೋನ್ ನೆಕ್ಸ್ಟ್ ಸ್ಮಾರ್ಟ್ಫೋನ್ ಖರೀದಿಗೆ ನೋಂದಣಿ ಕಡ್ಡಾಯವಾಗಿದೆ. ಈ ಮೊದಲೇ ತಿಳಿಸಿದಂತೆ ದೇಶಾದ್ಯಂತ ಜಿಯೋಫೋನ್ ನೆಕ್ಸ್ಟ್ ಮಾರಾಟಕ್ಕೆ ಲಭ್ಯವಿದೆ. ಗ್ರಾಹಕರು ಖರೀದಿಸುವ ಮೊದಲು ನೋಂದಾಯಿಸಬೇಕು. 70182 70182 ಸಂಖ್ಯೆಗೆ ಗ್ರಾಹಕರು ಹಾಯ್ ಎಂದು ಸಂದೇಶ ಕಳುಹಿಸಿ ತಮ್ಮ ಹೆಸರುಗಳನ್ನು ನೋಂದಾಯಿಸಬೇಕು ಎಂದು ರಿಲಯನ್ಸ್ ಕಂಪನಿಯಿಂದ ಗ್ರಾಹಕರಿಗೆ ಮಾಹಿತಿ ನೀಡಲಾಗಿದೆ.

Read More »

ದೀಪಾವಳಿ ಹಬ್ಬದ ದಿನ ಚಿನ್ನ, ಬೆಳ್ಳಿ ಖರೀದಿಸುವ ಪ್ಲ್ಯಾನ್​ ಇದ್ದರೆ ಇಂದು ರೇಟ್​ ಎಷ್ಟಿದೆ ತಿಳಿಯಿರಿ

ಬೆಂಗಳೂರು: ದೀಪಾವಳಿ ಹಬ್ಬನ್ನು ಎಲ್ಲೆಡೆ ಸಂಭ್ರಮದಿಂದ ಆಚರಿಸಲಾಗುತ್ತಿದೆ. ಹಬ್ಬಕ್ಕೆ ಹೊಸ ಉಡುಗೆ ತೊಟ್ಟು ಅಲಂಕಾರಗೊಂಡು ವಿಶೇಷವಾಗಿ ಆಚರಿಸಲಾಗುತ್ತಿದೆ. ಹೀಗಿರುವಾಗ ಹಬ್ಬದ ದಿನ ಚಿನ್ನಾಭರಣ ಖರೀದಿಸಬೇಕು ಅಂದುಕೊಂಡಿದ್ದರೆ ಇಂದು ಶುಕ್ರವಾರ (ನವೆಂಬರ್ 5) ಪ್ರಮುಖ ನಗರಗಳಲ್ಲಿ ಚಿನ್ನ (Gold Price), ಬೆಳ್ಳಿ ದರ (Silver Price) ಎಷ್ಟಿದೆ ಎಂಬ ಮಾಹಿತಿ ಈ ಕೆಳಗಿನಂತಿದೆ ಪರಿಶೀಲಿಸಿ. ಹಬ್ಬಕ್ಕೆ ಹೊಸ ಉಡುಗೆ ತೊಟ್ಟು ಅಲಂಕಾರಗೊಂಡು ವಿಶೇಷವಾಗಿ ಆಚರಿಸಲಾಗುತ್ತಿದೆ. ಹೀಗಿರುವಾಗ ಹಬ್ಬದ ದಿನ ಚಿನ್ನಾಭರಣ ಖರೀದಿಸಬೇಕು …

Read More »

ಆ ಮಳೆ ರಾಜ್ಯದ ದಕ್ಷಿಣ ಭಾಗಕ್ಕೆ ಮಾತ್ರ ಸೀಮಿತ: ಹವಾಮಾನ ತಜ್ಞ ಡಾ.ಆರ್.ಎಚ್.ಪಾಟೀಲ

ಧಾರವಾಡ: ಮತ್ತೆ ಮಳೆ ರಾಜ್ಯಾದ್ಯಂತ ಆವರಿಸಿಕೊಂಡಿದ್ದು, ಜನರ ಆತಂಕಕ್ಕೆ ಕಾರಣವಾಗಿದೆ. ಆದರೆ ಉತ್ತರ ಕರ್ನಾಟಕದಲ್ಲಿ ಮಾತ್ರ ಮಳೆ ಕಡಿಮೆ ಎಂದು ಹೇಳಲಾಗುತ್ತಿದೆ. ಉತ್ತರ ಕರ್ನಾಟಕದಲ್ಲಿ ನವೆಂಬರ್ 5, 6, 7ಕ್ಕೆ ಮಳೆಯಾಗುವ ಮುನ್ಸೂಚನೆ ಇತ್ತು. ಆದರೆ ಆ ಮಳೆ ರಾಜ್ಯದ ದಕ್ಷಿಣ ಭಾಗಕ್ಕೆ ಮಾತ್ರ ಸೀಮಿತ. ಧಾರವಾಡ: ಮತ್ತೆ ಮಳೆ ರಾಜ್ಯಾದ್ಯಂತ ಆವರಿಸಿಕೊಂಡಿದ್ದು, ಜನರ ಆತಂಕಕ್ಕೆ ಕಾರಣವಾಗಿದೆ. ಆದರೆ ಉತ್ತರ ಕರ್ನಾಟಕದಲ್ಲಿ ಮಾತ್ರ ಮಳೆ ಕಡಿಮೆ ಎಂದು ಹೇಳಲಾಗುತ್ತಿದೆ. ಉತ್ತರ …

Read More »

cyber ಮೋಸಜಾಲದಿಂದ ಕಳೆದುಕೊಂಡಿದ್ದ ಹಣ ವಾಪಾಸ್ ಪಡೆದ ಮಾಜಿ ಡಿಜಿ-ಐಜಿಪಿ ಶಂಕರ್ ಬಿದರಿ

ಬೆಂಗಳೂರು:ಕರ್ನಾಟಕದ ಮಾಜಿ ಡಿಜಿ-ಐಜಿಪಿ ಶಂಕರ್ ಎಂ ಬಿದರಿ ಅವರು ಸೈಬರ್ ವಂಚನೆಯಿಂದ ಕಳೆದುಕೊಂಡ ಹಣವನ್ನು ಅಕ್ಟೋಬರ್ ಎರಡನೇ ವಾರದಲ್ಲಿ ವಾಪಸ್ ಪಡೆದಿದ್ದಾರೆ. ಮಾಜಿ ಉನ್ನತ ಪೋಲೀಸ್ ಅಧಿಕಾರಿ ಆನ್ಲೈನ್ ಹಗರಣಕ್ಕೆ ಬಲಿಯಾದರು ಮತ್ತು ವಂಚಕರೊಂದಿಗೆ ತಮ್ಮ ಬ್ಯಾಂಕ್ ಖಾತೆಯ ವಿವರಗಳನ್ನು ಹಂಚಿಕೊಂಡ ನಂತರ ರೂ 89,000 ಕಳೆದುಕೊಂಡರು.ಶಂಕರ್ ಎಂ ಬಿದರಿ ಅವರು ಅಕ್ಟೋಬರ್ 11 ರಂದು ಆಗ್ನೇಯ ಸೈಬರ್ ಕ್ರೈಂ ಪೊಲೀಸರಿಗೆ ಸಲ್ಲಿಸಿದ ದೂರಿನ ಪ್ರಕಾರ, ಅವರ ಫೋನ್‌ಗೆ ತಮ್ಮ …

Read More »

ACB ಬಲೆಗೆ ಬೀಳುತ್ತಲೇ ಕಾಲಿಗೆ ಬುದ್ಧಿ ಹೇಳಿದ್ದ PSI ವಶಕ್ಕೆ

ತುಮಕೂರು: ಲಂಚ ಪಡೆಯುತ್ತಿರುವ ವೇಳೆ ಎಸಿಬಿ (Anti Corruption Bureau) ಬಲೆಗೆ ಬೀಳುತ್ತಲೇ ಓಡಿ ಹೋಗಿದ್ದ PSIನ್ನು ಕೊನೆಗೂ ವಶಕ್ಕೆ ಪಡೆಯಲಾಗಿದೆ. ಬುಧವಾರ ಗುಬ್ಬಿ ತಾಲೂಕಿನ ಚಂದ್ರಶೇಖರಪುರ (ಸಿ.ಎಸ್.ಪುರ) ಪೊಲೀಸ್ ಠಾಣೆಯ ಮೇಲೆ ಎಸಿಬಿ ದಾಳಿ ನಡೆಸಿತ್ತು, ಈ ವೇಳೆ ಪಿಎಸ್‌ಐ ಸೋಮಶೇಖರ್ ಮತ್ತು ಹೆಡ್ ಕಾನ್ ಸ್ಟೇಬಲ್ ನಯಾಜ್ ಅಹಮದ್ ಅಧಿಕಾರಿಗಳ ಬಲೆಗೆ ಬಿದ್ದಿದ್ದರು. ಆದ್ರೆ ಮಧ್ಯಾಹ್ನ 1 ಗಂಟೆಗೆ ಎಸಿಬಿ ಅಧಿಕಾರಿಗಳು ಊಟ ಮಾಡುತ್ತಿರುವ ವೇಳೆ ಪಿಎಸ್‌ಐ …

Read More »

ನೋಟ್‌ ಬ್ಯಾನ್‌ ಆಗಿ ಐದು ವರ್ಷ: ಜನರಲ್ಲಿ ಇರುವ ನಗದು ಪ್ರಮಾಣ ಸಾರ್ವಕಾಲಿಕ ಹೆಚ್ಚಳ

ನೋಟು ಅಮಾನೀಕರಣ ನಡೆದು ಐದು ವರ್ಷಗಳು ಕಳೆದಿದೆ. ಆದರೆ ಈಗಲೂ ಕೂಡಾ ಸಾರ್ವಜನಿಕರಲ್ಲಿ ಅಂದರೆ ಜನರಲ್ಲಿ ಇರುವ ನಗದು ಪ್ರಮಾಣ (Cash with public) ಏರಿಕೆ ಆಗುತ್ತಲೇ ಇದೆ. 2016 ರ ನವೆಂಬರ್‌ 8 ರಂದು ದೇಶದಲ್ಲಿ ನೋಟು ಅಮಾನೀಕರಣವಾದ ಬಳಿಕ ಏರಿಕೆ ಆಗುತ್ತಿರುವ ಜನರಲ್ಲಿ ಇರುವ ನಗದು ಪ್ರಮಾಣ ಈಗ ಸಾರ್ವಕಾಲಿಕ ಹೆಚ್ಚಳವಾಗಿದೆ. ಅಕ್ಟೋಬರ್ 8, 2021 ರಂದು ಕೊನೆಗೊಳ್ಳುವ ಹದಿನೈದು ದಿನಗಳ ಅವಧಿಯಲ್ಲಿ ಜನರಲ್ಲಿ ಇರುವ ನಗದು …

Read More »

ರಾಜ್ಯದ 9 ಜಿಲ್ಲೆಗಳಲ್ಲಿ ಭಾರಿ ಮಳೆ ಸಾಧ್ಯತೆ

ಬೆಂಗಳೂರು, ನವೆಂಬರ್ 05: ಬೆಂಗಳೂರು ಸೇರಿದಂತೆ ರಾಜ್ಯದ 9 ಜಿಲ್ಲೆಗಳಲ್ಲಿ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಗುರುವಾರ ಸಂಜೆ ಸುರಿದ ಮಳೆಗೆ ಬೆಂಗಳೂರು ತೊಯ್ದು ತೊಪ್ಪೆಯಾಗಿದೆ, ಮಳೆ ನಿಂತು ಅರ್ಧ ದಿನ ಕಳೆದಿದ್ದರೂ ರಸ್ತೆಯಲ್ಲಿ ನಿಂತಿರುವ ನೀರಿನ್ನೂ ಆರಿಲ್ಲ.   ಬೆಳಗಾವಿ, ಧಾರವಾಡ, ಗದಗ, ಹಾವೇರಿ, ಚಿಕ್ಕಮಗಳೂರು, ಹಾಸನ, ಕೊಡಗು, ಶಿವಮೊಗ್ಗ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಗುರುವಾರ ರಾತ್ರಿ ಎರಡು ಗಂಟೆಗೂ ಅಧಿಕ ಕಾಲ …

Read More »