Breaking News

ಕೋಲಾರ: ಆಕ್ರೋಶದ ಕಿಡಿ ಹೊತ್ತಿಸಿದ ಸರ್ಕಾರದ ನಡೆ

ಕೋಲಾರ: ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ (ಕೋಚಿಮುಲ್‌) ವಿಭಜನೆಗೆ ಸರ್ಕಾರ ಹಸಿರು ನಿಶಾನೆ ತೋರಿರುವುದು ಜಿಲ್ಲೆಯಲ್ಲಿ ಆಕ್ರೋಶದ ಕಿಡಿ ಹೊತ್ತಿಸಿದೆ. ಹೈನುಗಾರಿಕೆಯು ಜಿಲ್ಲೆಯ ರೈತರ ಜೀವನಾಡಿಯಾಗಿದ್ದು, ಬಹುಪಾಲು ರೈತರು ಕೃಷಿಯ ಜತೆಗೆ ರಾಸುಗಳನ್ನು ಸಾಕಿ ಜೀವನ ನಿರ್ವಹಣೆ ಮಾಡುತ್ತಿದ್ದಾರೆ. ಕೃಷಿಗೆ ಪರ್ಯಾಯವಾಗಿ ಹೈನುಗಾರಿಕೆಯು ರೈತರ ಪ್ರಮುಖ ಆದಾಯ ಮೂಲವಾಗಿದ್ದು, ಕೋವಿಡ್‌ ಸಂಕಷ್ಟದಲ್ಲೂ ಅನ್ನದಾತರ ಕೈ ಹಿಡಿದಿದೆ. ಜಿಲ್ಲೆಯಲ್ಲಿ ಕ್ಷೀರ ಕ್ರಾಂತಿಯ ಹರಿಕಾರ ಮಾಜಿ ಸಚಿವ ಎಂ.ವಿ.ಕೃಷ್ಣಪ್ಪರ ಹೆಸರಿನಲ್ಲಿ …

Read More »

ಇವತ್ತಿನ ಪೆಟ್ರೋಲ್‌, ಡೀಸೆಲ್‌ ದರ: ಹಲವು ಜಿಲ್ಲೆಗಳಲ್ಲಿ ಏರಿಳಿತ

ಕೇಂದ್ರ ಹಾಗೂ ರಾಜ್ಯ ಸರ್ಕಾರದ ದೀಪಾವಳಿ ಕೊಡುಗೆಯಾಗಿ ಪೆಟ್ರೋಲ್‌, ಡೀಸೆಲ್ (Petrol And Diesel Price)‌ ಮೇಲಿನ ಸುಂಕವನ್ನು ಕಡಿತಗೊಳಿಸಿದ್ದವು. ಇದರ ಪರಿಣಾಮವಾಗಿ ಪೆಟ್ರೋಲ್‌, ಡೀಸೆಲ್‌ ಬೆಲೆಯಲ್ಲಿ ಕೊಂಚ ಇಳಿಕೆಯಾಗಿದೆ.ಎಲ್​ಪಿಜಿ ಬೆಲೆ (LPG) ಏರಿಕೆಯಿಂದ ಕಂಗಾಲಾಗಿದ್ದ ಜನ ದಿನನಿತ್ಯ ಏರುತ್ತಿದ್ದ ಪೆಟ್ರೋಲ್-ಡೀಸೆಲ್ ಬೆಲೆಯಿಂದಾಗಿ ಮತ್ತಷ್ಟು ಸಂಕಷ್ಟಕ್ಕೆ ಒಳಗಾಗಿದ್ದರು. ಈ ಹಿನ್ನೆಲೆ ಜನ ಸಾಮಾನ್ಯರಿಗೆ ತೈಲ ದರದ (Oil Price)ಹೊರೆ ಸ್ವಲ್ಪ ಕಡಿಮೆಯಾಗಿದೆ. ಇಂದು ಬೆಂಗಳೂರಿನಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ …

Read More »

3 ವರ್ಷದಿಂದ ಮಹಿಳೆಯರ ಸ್ನಾನದ ದೃಶ್ಯ ಸೆರೆಹಿಡಿಯುತ್ತಿದ್ದ ಖತರ್ನಾಕ್ ಪ್ಲಂಬರ್ ಕೊನೆಗೂ ಅಂದರ್!

ಮೂರು ವರ್ಷಗಳಿಂದ ಸಾನ್ನದ ಗೃಹದಲ್ಲಿ ಯುವತಿಯರು ಸ್ನಾನಮಾಡುತ್ತಿರುವ ದೃಶ್ಯವನ್ನು ಹಿಡನ್ ಕ್ಯಾಮೆರಾದ ಮೂಲಕ ಚಿತ್ರೀಕರಿಸಿದ ಪ್ಲಂಬರ್ ಅನ್ನು ಬಂಧಿಸಲಾಗಿದೆ. ಬಾತ್ ರೂಮಿನ ಪ್ರತಿಯೊಂದು ಚಲನವಲನವನ್ನೂ ಕ್ಯಾಮೆರಾದಲ್ಲಿ ಸೆರೆಯಾಗುತ್ತಿದ್ದು, ಒಂದು ದಿನ ಮಹಿಳೆಯೊಬ್ಬಳಿಗೆ ಅಲ್ಲಿ ಹಿಡನ್ ಕ್ಯಾಮೆರಾ ಇಟ್ಟಿರುವುದು ಗೊತ್ತಾಗಿದೆ. ನಂತರ ಆಕೆ ಪೊಲೀಸರಿಗೆ ಮಾಹಿತಿ ನೀಡಿದ್ದಾಳೆ. ಮಾಹಿತಿ ಆಧಾರದಲ್ಲಿ ಪ್ಲಂಬರ್ ಸಿಕ್ಕಿಬಿದ್ದಿದ್ದು, ಆತನ ಮನೆಯಲ್ಲಿ ಸಿಕ್ಕ ವಸ್ತುಗಳನ್ನು ಕಂಡು ಪೊಲೀಸರು ಬೆಚ್ಚಿಬಿದ್ದಿದ್ದಾರೆ. ಬ್ರಿಟನ್ ನಲ್ಲಿ ಮಹಿಳೆಯೊಬ್ಬರ ಬಾತ್ ರೂಂ ರಿಪೇರಿ …

Read More »

b.j.p.ಕೊಳಕು ಮನಸ್ಸಿನವರು ನನ್ನ ವಿರುದ್ಧ ಆರೋಪ ಮಾಡ್ತಾರೆ: ಸಿದ್ದರಾಮಯ್ಯ

ಮಂಡ್ಯ: ಹೊಟ್ಟೆಪಾಡಿಗಾಗಿ ದಲಿತ ನಾಯಕರು(Dalit Leader) ಬಿಜೆಪಿಯಲ್ಲಿದ್ದಾರೆ (BJP) ಎನ್ನುವ ಮೂಲಕ ದಲಿತರಿಗೆ ವಿಪಕ್ಷ ನಾಯಕ ಸಿದ್ದರಾಮಯ್ಯ (Siddaramaiah) ಅವಮಾನ ಮಾಡಿದ್ದಾರೆ ಎಂದು ಕಳೆದ ಮೂರ್ನಾಲ್ಕು ದಿನಗಳಿಂದ ಬಿಜೆಪಿ ನಾಯಕರು ಕಿಡಿಕಾರುತ್ತಿದ್ದಾರೆ. ಸಿದ್ದರಾಮಯ್ಯ ದಲಿತರ ಕ್ಷಮೆ (apology to dalits) ಕೇಳಬೇಕು ಎಂದು ಹಲವು ಕಡೆ ಬಿಜೆಪಿಗರು ಪ್ರತಿಭಟನೆ (Protest) ನಡೆಸಿ, ಪ್ರತಿಕೃತಿ ದಹಿಸಿದರು. ಇಡೀ ಬೆಳವಣಿಗೆ ಬಗ್ಗೆ ಇಂದು ಇಲ್ಲಿ ಮಾತನಾಡಿದ ಸಿದ್ದರಾಮಯ್ಯ, ಬಿಜೆಪಿಗರಿಗೆ ತಿರುಗೇಟು ನೀಡಿದರು. ಬಿಜೆಪಿಯವರಂತ …

Read More »

ಅಪ್ಪು ಪುಣ್ಯ ಸ್ಮರಣೆ ಇಂದು ಅನ್ನಸಂತರ್ಪಣೆ: ವೆಜ್, ನಾನ್ ವೆಜ್ ಅಡುಗೆ ಸಿದ್ಧ

ಇಂದು ಬೆಳಗ್ಗೆ 11 ಗಂಟೆಗೆ ಅನ್ನಸಂತರ್ಪಣೆ ಅರಂಭವಾಗಲಿದೆ. ಒಂದು ಬಾರಿಗೆ ಐದು ಸಾವಿರ ಜನರು ಊಟಕ್ಕೆ ಕುಳಿತುಕೊಳ್ಳುವ ವ್ಯವಸ್ಥೆ ಮಾಡಲಾಗಿದೆ. ಒಟ್ಟು ಎರಡು ಗೇಟ್ ಗಳಲ್ಲಿ 24 ರೂಮಿನೊಳಗೆ ಐದು ಸಾವಿರ ಕುರ್ಚಿ ಹಾಗೂ ಟೇಬಲ್ ಗಳನ್ನು ಹಾಕಲಾಗಿದೆ. ಆಗಮಿಸುವ ಅಭಿಮಾನಿಗಳಿಗೆ ಮಾಂಸಾಹಾರ ಮತ್ತು ಸಸ್ಯಹಾರ ಸಹ ಸಿದ್ಧಪಡಿಸಲಾಗಿದೆ. 1/ 5 ನಾನ್ ವೆಜ್ ಅಡುಗೆ ಮಾಹಿತಿ:  ಗೀ ರೈಸ್,  ಚಿಕನ್ ಚಾಪ್ಸ್, ಚಿಕನ್ ಕಬಾಬ್, ಕೋಳಿ ಮೊಟ್ಟೆ, ಅಕ್ಕಿಪೇಣಿ ಪಾಯಸ …

Read More »

ಪುನೀತ್ ರಾಜಕುಮಾರ್ ನಿಧನದ ನಂತರ ನೂರಾರು ಜನರು ನೇತ್ರದಾನಕ್ಕೆ ನೋಂದಣಿ

ಹುಬ್ಬಳ್ಳಿ: ಪವರ್​​ ಸ್ಟಾರ್​​ ಪುನೀತ್ ರಾಜ್​ಕುಮಾರ್​​ (Power Star Puneeth Rajkumar) ಸಾವಿನ ನಂತರ ನೇತ್ರದಾನ (eye donation) ಮಾಡುವವರ ಸಂಖ್ಯೆಯಲ್ಲಿ ದಿಢೀರ್ ಏರಿಕೆಯಾಗಿದೆ. ಹುಬ್ಬಳ್ಳಿಯ ಎಂಎಂ ಜೋಶಿ ನೇತ್ರ ಚಿಕಿತ್ಸಾಲಯದಲ್ಲಿ (M M Joshi Eye Hospital) ಒಂದೇ ವಾರದಲ್ಲಿ 500 ಜನರಿಂದ ನೇತ್ರದಾನಕ್ಕೆ ನೊಂದಣಿಯಾಗಿದೆ. ನಿತ್ಯ ಕರೆ ಮಾಡಿ ನೂರಾರು ದಾನಿಗಳು ತಮ್ಮ ಹೆಸರು ನೋಂದಣಿ ಮಾಡಿಕೊಳ್ಳುತ್ತಿದ್ದಾರೆ. ಪುನೀತ್ ನಿಧನದ ನಂತರವೂ ಸಮಾಜದಲ್ಲಿ  ಜನರಿಗೆ ದಾರಿದೀಪವಾಗ್ತಿದ್ದಾರೆ. ಪವರ್ ಸ್ಟಾರ್ …

Read More »

ಮಾತು ಕೊಟ್ಟ 15 ದಿನದಲ್ಲಿ ಬೇಡಿಕೆ ಈಡೇರಿಸಿದ್ದಾರೆ:

ಬೆಳಗಾವಿ, : ಉತ್ತರ ಕರ್ನಾಟಕದ ಜನರ ಬಹು ದಿನಗಳ ಬೇಡಿಕೆಯನ್ನ ರಾಜ್ಯ ಸರ್ಕಾರ ಇಂದು ಈಡೇರಿಸಿದೆ. ಬೆಳಗಾವಿ ‌ವಿಭಾಗವನ್ನು ಮುಂಬಯಿ ಕರ್ನಾಟಕ (Mumbai Karnataka) ಎಂದು ಕರೆಯಲಾಗುತ್ತಿತ್ತು. ಇದು ದಾಸ್ಯದ ಸಂಕೇತವಾಗಿದ್ದು ಬದಲಾವಣೆ ಮಾಡಿ ಕಿತ್ತೂರು ಕರ್ನಾಟಕ (Kittur Karnataka) ಎಂದು ಘೋಷಣೆ ಮಾಡಬೇಕು ಎಂಬ ಬೇಡಿಕೆ ಇತ್ತು. ಕಳೆದ ಅನೇಕ ವರ್ಷಗಳಿಂದ ಈ ಬಗ್ಗೆ ಸರ್ಕಾರ ಗಮನವನ್ನು ಕನ್ನಡಪರ ಹೋರಾಟಗಾರರು ಸೆಳೆದಿದ್ದರು. ಆದರೆ ಈ ವರೆಗೆ ಸರ್ಕಾರಗಳು ಗಮನ ಹರಿಸಿರಲಿಲ್ಲ. …

Read More »

ಮುನ್ಯಾಳ -ರಂಗಾಪೂರ ಸಮುದಾಯ ಭವನ ನಿರ್ಮಾಣಕ್ಕೆ ಕೋಟಿ ರೂ. ಅನುದಾನ : ಶಾಸಕ ಬಾಲಚಂದ್ರ ಜಾರಕಿಹೊಳಿ ಭರವಸೆ

ಮೂಡಲಗಿ: ಕೆಎಂಎಫ್ ಅಧ್ಯಕ್ಷ ಮತ್ತು ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ದಾನ ಮತ್ತು ಧರ್ಮಗಳಿಂದ ನಡೆಯುವ ’ಸಾಹುಕಾರ್’ ಎಂದು ಈ ನಾಡಿನಲ್ಲಿ ಗುರುತಿಸಿಕೊಂಡಿರುವ ಅಪರೂಪದ ರಾಜಕಾರಣಿಯಾಗಿದ್ದಾರೆ ಎಂದು ಶ್ರೀಶೈಲ್ ಮಹಾಪೀಠದ ಡಾ. ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಭಗವತ್ಪಾದರು ಶ್ಲಾಘನೆ ವ್ಯಕ್ತಪಡಿಸಿದರು. ಭಾನುವಾರ ಸಂಜೆ ಮೂಡಲಗಿ ತಾಲ್ಲೂಕಿನ ಮುನ್ಯಾಳ-ರಂಗಾಪುರದ ಸದಾಶಿವಯೋಗೀಶ್ವರ ಮಠದ ಹಣಮಂತ ದೇವರ ಮಂದಿರ ಉದ್ಘಾಟನೆ, ಮೂರ್ತಿ ಪ್ರತಿಷ್ಠಾಪನೆ ಮತ್ತು ಅಶ್ವಾರೂಢ ಗುರುಬಸವರಾಜ ಅಜ್ಜನವರ ಸರ್ಕಲ್‌ದ ಉದ್ಘಾಟನಾ ಸಮಾರಂಭ ಹಾಗೂ ಧರ್ಮಸಭೆಯ …

Read More »

ಬೆಳಗಾವಿ, ಉತ್ತರ ಕನ್ನಡ, ವಿಜಯಪುರ, ಗದಗ, ಧಾರವಾಡ ಸೇರಿದಂತೆ 7 ಜಿಲ್ಲೆಗಳಿಗೆ ಕಿತ್ತೂರು ಕರ್ನಾಟಕ ಎಂದು ನಾಮಕರಣ ಮಾಡಲು ಸಚಿವ ಸಪುಟ ಸಭೆಯಲ್ಲಿ ಮಹತ್ವದ ನಿರ್ಧಾರ

ಬೆಂಗಳೂರು: ಕಿತ್ತೂರು ಉತ್ಸವವನ್ನು ರಾಜ್ಯ ಮಟ್ಟದ ಉತ್ಸವವಾಗಿ ಸರ್ಕಾರ ಘೋಷಿಸಿದ ಬೆನ್ನಲ್ಲೇ ಇದೀಗ ಮುಂಬೈ ಕರ್ನಾಟಕಕ್ಕೆ ಕಿತ್ತೂರು ಕರ್ನಾಟಕ ಎಂದು ನಾಮಕರಣ ಮಾಡಲು ಸಿಎಂ ಬೊಮ್ಮಾಯಿ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಸಮ್ಮತಿ ಸೂಚಿಸಲಾಗಿದೆ.   ಬೆಳಗಾವಿ, ಉತ್ತರ ಕನ್ನಡ, ವಿಜಯಪುರ, ಗದಗ, ಧಾರವಾಡ ಸೇರಿದಂತೆ 7 ಜಿಲ್ಲೆಗಳಿಗೆ ಕಿತ್ತೂರು ಕರ್ನಾಟಕ ಎಂದು ನಾಮಕರಣ ಮಾಡಲು ಸಚಿವ ಸಪುಟ ಸಭೆಯಲ್ಲಿ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ. ಸಂಪುಟ ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ …

Read More »

ನವದೆಹಲಿ : ಅಕ್ಷರ ಸಂತ ಹರೇಕಳ ಹಾಜಬ್ಬ ಅವ್ರಿಗೆ ದೇಶದ ನಾಲ್ಕನೇ ಅತೀ ದೊಡ್ಡ ನಾಗರಿಕ ಪುರಸ್ಕಾರವಾದ ‘ಪದ್ಮಶ್ರೀ’ ಪ್ರಶಸ್ತಿ ಪ್ರಧಾನ ಮಾಡಿ ಗೌರವಿಸಲಾಯ್ತು.

ನವದೆಹಲಿ : ಅಕ್ಷರ ಸಂತ ಹರೇಕಳ ಹಾಜಬ್ಬ ಅವ್ರಿಗೆ ದೇಶದ ನಾಲ್ಕನೇ ಅತೀ ದೊಡ್ಡ ನಾಗರಿಕ ಪುರಸ್ಕಾರವಾದ ‘ಪದ್ಮಶ್ರೀ’ ಪ್ರಶಸ್ತಿ ಪ್ರಧಾನ ಮಾಡಿ ಗೌರವಿಸಲಾಯ್ತು. ರಾಷ್ಟ್ರಪತಿ ಭವನದಲ್ಲಿ ಇಂದು ನಡೆದ ಸಮಾರಂಭದಲ್ಲಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವ್ರು ಹರೇಕಳ ಹಾಜಬ್ಬರಿಗೆ ಪ್ರಶಸ್ತಿ ಪ್ರಧಾನ ಮಾಡಿದ್ರು. ಈ ಸಮಾರಂಭದಲ್ಲಿ ಎಂದಿನಂತೆ ಸರಳ ಉಡುಗೆಯಲ್ಲಿಯೇ ಗಮನ ಸೆಳೆದ ಹಾಜಬ್ಬ, ಬರೀಗಾಲಿನಲ್ಲಿ ಬಂದು ಪ್ರತಿಷ್ಠಿತ ಪ್ರಶಸ್ತಿ ಸ್ವೀಕರಿಸಿ ಗಮನ ಸೇಳೆದ್ರು. ಇನ್ನಿವ್ರ ಸರಳ, ಸಜ್ಜನಿಕೆಗೆ …

Read More »